ಬಿಯರ್ ಆಸೆಗೆ ಬಿದ್ದು ಆನ್‌ಲೈನ್‌ನಲ್ಲಿ ಕಳೆದುಕೊಂಡಿದ್ದು 87,000 ರೂಪಾಯಿ

By Gizbot Bureau
|
ಬಿಯರ್ ಆಸೆಗೆ ಬಿದ್ದು ಆನ್ ಲೈನ್ ಪೇಮೆಂಟ್ ನಲ್ಲಿ ಕಳೆದುಕೊಂಡಿದ್ದು 87,000 ರುಪಾಯಿ!!

ಛೇ!ಛೇ! ಛೇ! ಹೀಗಾಗಬಾರದಿತ್ತು! ಈ ಸ್ಟೋರಿ ಓದಿದ ಮೇಲೆ ಕುಡುಕರು ಒಮ್ಮೆ ಹೀಗೆ ಹೇಳಿಯೇ ಹೇಳುತ್ತಾರೆ. ಒಂದಲ್ಲ,ಎರಡಲ್ಲ, ಬರೋಬ್ಬರಿ 87,000 ರುಪಾಯಿ ಅಂದ್ರೆ ಸುಮ್ನೆನಾ?ಆನ್ ಲೈನ್ ನಲ್ಲಿ ಬಿಯರ್ ಖರೀದಿಸುವಾಗ ಯುಪಿಐ ಪೇಮೆಂಟ್ ಮಾಡಲು ಹೋಗಿ ಈ ವ್ಯಕ್ತಿ 87,000 ರುಪಾಯಿ ಕಳೆದುಕೊಂಡಿದ್ದಾರೆ.

ಘಟನೆ ನಡೆದದ್ದು ಎಲ್ಲಿ?

ಘಟನೆ ನಡೆದದ್ದು ಎಲ್ಲಿ?

ಹೌದು ಮುಂಬೈ ಮೂಲಕ ಹೂಡಿಕೆಯ ಬ್ಯಾಂಕಿಂಗ್ ವಿಶ್ಲೇಷಕರೊಬ್ಬರು ಬಿಯರ್ ಖರೀದಿಸುವುದಕ್ಕಾಗಿ ಆನ್ ಲೈನ್ ಪಾವತಿ ಮಾಡಲು ಹೋಗಿ ಬರೋಬ್ಬರಿ 87,000 ರುಪಾಯಿ ಕಳೆದುಕೊಂಡಿದ್ದಾರೆ. ಯುಪಿಐ ಅಂದರೆ ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್. ಇದು ಡಿಜಿಟಲ್ ಪೇಮೆಂಟ್ ಫ್ಲ್ಯಾಟ್ ಫಾರ್ಮ್. ಹಾಗಾದ್ರೆ ಈ ಘಟನೆ ನಡೆದಿರುವುದಾದರೂ ಹೇಗೆ? ವಂಚನೆಗೆ ಒಳಗಾಗಿದ್ದಾದರೂ ಹೇಗೆ? ಇಷ್ಟೊಂದು ಮೊತ್ತ ಅದ್ಹೇಗೆ ಕಳೆದುಕೊಂಡರು ಎಂಬ ಬಗೆಗಿನ ಘಟನೆಯ ವಿವರ ಇಲ್ಲಿದೆ ನೋಡಿ.

ನಡೆದಿದ್ದಾದರೂ ಏನು?

ನಡೆದಿದ್ದಾದರೂ ಏನು?

ರಾಧಿಕಾ ಪರೇಖ್ ಎಂಬುವವರು ಗೂಗಲ್ ಮೂಲಕ ಪುವಾಯಿಯಲ್ಲಿರುವ ಆಲ್ಕೋಹಾಲ್ ಅಂಗಡಿಗಾಗಿ ಹುಡುಕಾಡಿದ್ದಾರೆ. ಗೂಗಲ್ ನ ಪಟ್ಟಿಯಲ್ಲಿ ಲಭ್ಯವಾದ ಸ್ಟಾರ್ ವೈನ್ ಶಾಪ್ ನಂಬರಿಗೆ ಡಯಲ್ ಮಾಡಿದ್ದಾರೆ.ಆಕೆಯ ಬಳಿ ವೈನ್ ಶಾಪಿನ ಕಾರ್ಮಿಕನೊಬ್ಬ ರುಪಾಯಿ 420 ನ್ನು ಗೂಗಲ್ ಪೇ ಮೂಲಕ ಪಾವತಿ ಮಾಡಲು ತಿಳಿಸಿದ್ದಾರೆ. ಆ ವ್ಯಕ್ತಿ ಫೋನಿನಲ್ಲಿ ಆಕೆಯ ಬಳಿ ತನ್ನ ಯುಪಿಐ ಐಡಿಯನ್ನು ಹಂಚಿಕೊಳ್ಳುವುದಕ್ಕೆ ಕೇಳಿದ್ದಾನೆ.

ಯುಪಿಐ ವಂಚನೆಯ ವಿವರ:

ಯುಪಿಐ ವಂಚನೆಯ ವಿವರ:

ಒಮ್ಮೆ ಪರೇಖ್ ತನ್ನ ಐಡಿಯನ್ನು ಹಂಚಿಕೊಂಡ ಕೂಡಲೇ ಆಕೆ ಪಾವತಿ ಮನವಿಯನ್ನು ಗೂಗಲ್ ಪೇನಲ್ಲಿ ಸ್ವೀಕರಿಸಿದ್ದಾರೆ. ಆಕೆ ಮನವಿಯನ್ನು ಸ್ವೀಕರಿಸಿ ಒಪ್ಪಿಗೆ ನೀಡುತ್ತಿದ್ದ ಹಾಗೆ ಆಕೆಯ ಅಕೌಂಟಿನಿಂದ 29,001 ರುಪಾಯಿ ಡೆಬಿಟ್ ಆಗಿದೆ. ಆಕೆ ಶಾಪಿಗೆ ಕರೆ ಮಾಡಿದ್ದಾರೆ ಮತ್ತು ಪುನಃ ವಿಚಾರಿಸಿದ್ದಾರೆ. ಅಲ್ಲಿನ ಕಾರ್ಮಿಕ ಕ್ಷಮೆ ಕೇಳಿದ್ದಾನೆ ಮತ್ತು ಈ ಹಣವು ತಪ್ಪಿನಿಂದಾಗಿ ಡೆಬಿಟ್ ಮಾಡಲಾಗಿದೆ ಎಂದಿದ್ದಾನೆ. ಆಕೆ ಕರೆಯನ್ನು ಕಟ್ ಮಾಡಿದ ನಂತರ 58,000 ರುಪಾಯಿ ಮತ್ತೊಂದು ಟ್ರಾನ್ಸ್ಯಾಕ್ಷನ್ ನ್ನು ಆಕೆಯ ಅಕೌಂಟ್ ನಲ್ಲಿ ಮಾಡಲಾಗಿದೆ.

ಪ್ರಕರಣ ದಾಖಲು:

ಪ್ರಕರಣ ದಾಖಲು:

ಅಂಗಡಿಗೆ ಖುದ್ಧು ತೆರಳಿ ವಿಚಾರಿಸುವುದಕ್ಕಾಗಿ ಹೋದಾಗ ಅಂಗಡಿಯ ಮಾಲೀಕ ಪರೇಖ್ ಅವರಿಗೆ ವಿಚಾರಣೆಗಾಗಿ ಅವರು ಕರೆ ಮಾಡಿದ ಸಂಖ್ಯೆ ತಮ್ಮ ಅಂಗಡಿಗೆ ಸೇರಿದ್ದಲ್ಲ ಅಂದು ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಇದೀಗ ಪೋಲೀಸರು ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಪುನರಾವರ್ತನೆಯಾದ ಘಟನೆ:

ಪುನರಾವರ್ತನೆಯಾದ ಘಟನೆ:

ಮೇ ತಿಂಗಳ ಆರಂಭದಲ್ಲಿ ಅನಿಲ್ ಪದಂ ಸಿಂಗ್ ಇದೇ ರೀತಿ ಡಿಜಿಟಲ್ ವ್ಯಾಲೆಟ್ ಅಕೌಂಟ್ ನಿಂದ 1 ಲಕ್ಷ ರುಪಾಯಿಯನ್ನು ಕಳೆದುಕೊಂಡಿದ್ದರು. ತನ್ನ ಹೊಸ ಮೊಬೈಲ್ ಸಂಖ್ಯೆಯಿಂದ ಅವರು ಫೈನಾನ್ಸ್ ಫರ್ಮ್ ಗೆ ಕರೆ ಮಾಡಿ ಇಎಂಐ ಬಗ್ಗೆ ವಿಚಾರಣೆ ನಡೆಸುವಾಗ ಈ ವಂಚನೆ ನಡೆದಿತ್ತು.

ಮೇ ತಿಂಗಳಲ್ಲಿ ನಡೆದ ವಂಚನೆಯ ನಂತರ ಗೂಗಲ್ ಪೇ ಎಸ್ಎಂಎಸ್ ಮೆಸೇಜ್ ಮತ್ತು ಆಪ್ ನೋಟಿಫಿಕೇಷನ್ ನ್ನು ಬಳಕೆದಾರರಿಗೆ ಕಳುಹಿಸುವುದಕ್ಕೆ ಮುಂದಾಗಿದೆ. ಕಲೆಕ್ಟ್ ರಿಕ್ವೆಸ್ಟ್ ಅಥವಾ ಪಾವತಿಗಾಗಿ ಯಾವುದೇ ಮನವಿ ಇದ್ದಾಗ ಎಸ್ಎಂಎಸ್ ಮೂಲಕ ಮತ್ತು ಆಪ್ ನೋಟಿಫಿಕೇಷನ್ ಮೂಲಕ ಬಳಕೆದಾರರ ಬಳಿ ಒಪ್ಪಿಗೆಯನ್ನು ಕೇಳಲಾಗುತ್ತದೆ. ಇದನ್ನು ಅಪ್ರೂ ಮಾಡಿದರೆ ಮಾತ್ರವೇ ಹಣವು ನಿಮ್ಮ ಬ್ಯಾಂಕ್ ಖಾತೆಯಿಂದ ಡೆಬಿಟ್ ಆಗುತ್ತದೆ.

ಜಾಗೃತಿ ಮುಖ್ಯ:

ಜಾಗೃತಿ ಮುಖ್ಯ:

ಆನ್ ಲೈನ್ ಫ್ರಾಡ್ ಗಳು ಇತ್ತೀಚೆಗ ಅಧಿಕವಾಗುತ್ತಿದೆ ಮತ್ತು ಆನ್ ಲೈನ್ ಪಾವತಿಗಳು ಕೂಡ ಅಧಿಕವಾಗುತ್ತಿರುವ ಈ ಸಂದರ್ಬದಲ್ಲಿ ಸೈಬರ್ ಫ್ರಾಡ್ ಮತ್ತು ಯುಐಪಿ ಟ್ರಾನ್ಸ್ಯಾಕ್ಷನ್ ನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬ ಬಗೆಗಿನ ಜಾಗೃತಿ ಬಹಳ ಮುಖ್ಯವಾಗುತ್ತದೆ.

ವಂಚನೆ ತಡೆಯುವ ಮಾರ್ಗಗಳು:

ವಂಚನೆ ತಡೆಯುವ ಮಾರ್ಗಗಳು:

ಆಪ್ ನಲ್ಲಿ ಪಡೆಯುವ ಪ್ರತಿಯೊಂದು ನೋಟಿಫಿಕೇಷನ್ ನ್ನು ಕೂಡ ಸ್ಪಷ್ಟವಾಗಿ ಗಮನಿಸಿ. ನೀವು ಈ ನೋಟಿಫಿಕೇಷನ್ ನ್ನು ಪರಿಶೀಲಿಸುವುದಕ್ಕಾಗಿ ಎಷ್ಟು ಸಮಯವನ್ನು ಬೇಕಿದ್ದರೂ ತೆಗೆದುಕೊಳ್ಳಬಹುದು.ಯಾವುದೇ ಟ್ರಾನ್ಸ್ಯಾಕ್ಷನ್ ನಲ್ಲಿ ಸಮಸ್ಯೆ ಇದ್ದರೆ ಕಾನೂನು ಮತ್ತು ಅಧಿಕೃತ ನಂಬರ್ ಗಳಿಗೆ ಕರೆ ಮಾಡಿ ವಿಚಾರಿಸಿ.

ಬ್ಯಾಂಕ್ ನ್ನು ಸಂಪರ್ಕಿಸಿ:

ಬ್ಯಾಂಕ್ ನ್ನು ಸಂಪರ್ಕಿಸಿ:

ಯಾವುದೇ ವಂಚನೆ ನಡೆದರೆ ಕೂಡಲೇ ನಿಮ್ಮ ಬ್ಯಾಂಕ್ ನ್ನು ಸಂಪರ್ಕಿಸುವುದನ್ನು ಮರೆಯಬೇಡಿ ಮತ್ತು ಅವರಿಗೆ ವಂಚನೆಯ ವಿವರವನ್ನು ಒದಗಿಸಿ.ನೀವು ಆರ್ ಬಿಐ ಯನ್ನು ಕೂಡ ಸಂಪರ್ಕಿಸಬೇಕು. ಇದೆಲ್ಲದಕ್ಕಿಂತ ಮುಖ್ಯವಾಗಿ ಸಾಮಾನ್ಯ ಸೈಬರ್ ಸೆಕ್ಯುರಿಟಿಯ ವಿವರವನ್ನು ತಿಳಿದುಕೊಂಡಿರಿ. ನಿಮ್ಮ ಖಾತೆಯನ್ನು ಸುರಕ್ಷಿತವಾಗಿ ಇಟ್ಟುಕೊಂಡಿರುವುದು ಹೇಗೆ ಎಂಬ ಬಗ್ಗೆ ಶಿಕ್ಷಿತರಾಗಿರಿ. ಇಂತಹ ಪ್ರತಿಯೊಂದು ಆಪ್ ಗಳು ಕೂಡ ಸೂಕ್ಷ್ಮವಾಗಿರುವ ಪಾಸ್ ವರ್ಡ್ ಮಾಹಿತಿಯನ್ನು ಹೊಂದಿರುತ್ತದೆ. ಯಾವುದೇ ಕಾರಣಕ್ಕೂ ಈ ಪಾಸ್ ವರ್ಡ್ ಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.

Best Mobiles in India

Read more about:
English summary
This woman paid Rs. 87,000 for just 3 beer!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X