'ಪೇಟಿಎಂ' ಬಳಕೆದಾರರಿಗೆ ಬಿಗ್‌ಶಾಕ್!

  |

  ಇತ್ತೀಚಿಗಷ್ಟೇ ಪೆಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರನ್ನು 20 ಕೋಟಿ ರೂ. ಹಣಕ್ಕೆ ಬ್ಲಾಕ್‌ಮೇಲ್ ಮಾಡಿದ್ದ ಶಾಕಿಂಗ್ ಸುದ್ದಿ ನಿಮಗೆಲ್ಲಾ ತಿಳಿದಿರಬಹುದು. ಆದರೆ, ಅದಕ್ಕಿಂತಲೂ ದೊಡ್ಡ ಶಾಕಿಂಗ್ ಸುದ್ದಿ ಈಗ ಹೊರಬಿದ್ದಿದೆ. ಪೇಟಿಎಂ ಬಳಕೆದಾರರ ಅತಿ ಸೂಕ್ಷ್ಮ ಮಾಹಿತಿಗಳೆಲ್ಲವೂ ಮತ್ತೊಬ್ಬರಿಗೆ ರವಾನೆಯಾಗಿದೆ ಎಂದು ತಿಳಿದುಬಂದಿದೆ.

  ಹೌದು, ವಿಜಯ್ ಶೇಖರ್‌ ಶರ್ಮಾ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಪೊಲೀಸರು ಈಗ ಮೂವರನ್ನು ಬಂಧಿಸಿದ ನಂತರ ಪೊಲೀಸರಿಗೆ ಈ ಆಘಾತಕಾರಿ ಸಂಗತಿ ತಿಳಿದುಬಂದಿದೆ. ಶರ್ಮಾ ಅವ ಲ್ಯಾಪ್‌ಟಾಪ್‌ನಿಂದ ಅವರ ಖಾಸಾಗಿ ಮಾಹಿತಿಗಳು ಸೇರಿದಂತೆ ಪೇಟಿಎಂ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

   'ಪೇಟಿಎಂ' ಬಳಕೆದಾರರಿಗೆ ಬಿಗ್‌ಶಾಕ್!

  ಪೇಟಿಎಂ ಕಂಪನಿ 2010ರಲ್ಲಿ ಸ್ಥಾಪನೆಯಾಗಿದ್ದು, ವಿಜಯ್ ಶೇಖರ್ ಶರ್ಮಾ ಅವರ ಸಹಾಯಕಿಯಾಗಿ ಅಂದಿನಿಂದಲೂ ಜತೆಗೆ ಕೆಲಸ ಮಾಡುತ್ತಿದ್ದ ಸೋನಿಯಾ ಶರ್ಮಾ ಎಂಬ ಮಹಿಳಾ ಉದ್ಯೊಗಿಯೇ ಇಂತಹ ಕೆಲಸಕ್ಕೆ ಕೈಹಾಕಿದ್ದಾರೆ. ಹಾಗಾದರೆ, ಏನಿದು ಶಾಕಿಂಗ್ ಸುದ್ದಿ? ಈಗ ಪೇಟಿಎಂ ಬಳಕೆದಾರರ ಕಥೆ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  20 ಕೋಟಿ ರೂ.ಗೆ ಬೇಡಿಕೆ!

  ಇತ್ತೀಚಿಗಷ್ಟೇ ಪೇಟಿಎಂ ಬಳಕೆದಾರರ ದತ್ತಾಂಶವನ್ನು ಕಳವು ಮಾಡಿದ್ದು, 20 ಕೋಟಿ ರೂ. ಕೊಡದಿದ್ದರೆ ಅದನ್ನು ಸೋರಿಕೆ ಮಾಡುವುದಾಗಿ ಬೆದರಿದ್ದಾಗಿ ಶರ್ಮಾ ದೂರು ದಾಖಲಿಸಿದ್ದರು. ಅವರ ದೂರಿನ ಅನ್ವಯ,ಸೆಪ್ಟೆಂಬರ್ 20 ರಂದು ವಿಜಯ್ ಮತ್ತು ಅಜಯ್ ಇಬ್ಬರಿಗೂ ಕರೆ ಮಾಡಿದ್ದ ವ್ಯಕ್ತಿಯೋರ್ವ, ಪೇಟಿಎಂ ಗ್ರಾಹಕರ ವೈಯಕ್ತಿಕ ಮಾಹಿತಿ ನನ್ನಲ್ಲಿದ್ದು, ಮಾಹಿತಿ ಸೋರಿಕೆ ಮಾಡಿ ಕಂಪನಿಯ ಹೆಸರಿಗೆ ಮಸಿ ಬಳಿಯುವುದಾಗಿ ಬೆದರಿಸಿದ್ದ.

  2 ಲಕ್ಷ ಪಾವತಿಸಿದ್ದರು ಶರ್ಮಾ!

  ಪೇಟಿಎಂ ಗ್ರಾಹಕರ ವೈಯಕ್ತಿಕ ಮಾಹಿತಿ ಹಾಗೂ ಹಣಕಾಸು ಮಾಹಿತಿಗಳನ್ನು ಸೋರಿಕೆ ಮಾಡುವ ಬಗ್ಗೆ ಅನಾಮಿಕ ವ್ಯಕ್ತಿ ಹೆದರಿಸಿದ ನಂತರ ಆತನ ಖಾತೆಗೆ ಶರ್ಮಾ 2 ಲಕ್ಷ ರೂ. ಪಾವತಿಸಿದ್ದಾರೆ. ಇದಾದ ನಂತರ ಇನ್ನೂ 10 ಕೋಟಿ ಹಣವನ್ನು ವರ್ಗಾಯಿಸಲು ತಯಾರಿರುವಂತೆ ಎಚ್ಚರಿಕೆ ನೀಡಿದ್ದ. ಈ ಬಗ್ಗೆ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದ ಶರ್ಮಾ ಆತನಿಂದ ಕೆಲವು ವಿಷಯಗಳನ್ನು ತಿಳಿದುಕೊಂಡು ಪೊಲೀಸರಿಗೆ ತಿಳಿಸಿದ್ದರು.

  ಮಾಹಿತಿಯನ್ನು ಅವನೇ ನೀಡಿದ!

  ತನ್ನ ಹೆದರಿಸಿದ ಅನಾಮಿಕನನ್ನು ಮತ್ತೆ ಸಂಪರ್ಕಿಸಿದ ಶರ್ಮಾ ಅವರು, ಯಾವ ರೀತಿಯ ಮಾಹಿತಿ ಇದೆ ಹಾಗೂ ಅದು ದಕ್ಕಿದ್ದು ಹೇಗೆ ಎಂಬುದನ್ನು ಕೇಳಿಕೊಂಡಿದ್ದಾರೆ. ಶರ್ಮಾ ಅವರನ್ನು ನಂಬಿಸುವ ಸಲುವಾಗಿ ಆತ ನಿಮ್ಮ ಕಂಪೆನಿಯ ಮಹಿಳಾ ಉದ್ಯೋಗಿ ಹಾಗೂ ಆಕೆಯ ಜೊತೆ ಇನ್ನಿಬ್ಬರು ಸೇರಿ ವೈಯಕ್ತಿಕ ಮಾಹಿತಿ ಕದ್ದಿರುವ ಬಗ್ಗೆ ಬಾಯ್ಬಿಟ್ಟಿದ್ದ. ಇದಾದ ನಂತರ ಶರ್ಮಾ ಅವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.

  ಕಳ್ಳತನ ಮಾಡಿದ್ದು ಯಾರು?

  ಕಳೆದ 10 ವರ್ಷಗಳಿಂದಲೂ ವಿಜಯ್ ಶೇಖರ್ ಶರ್ಮಾ ಅವರ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೋನಿಯಾ ಧವನ್ ಎಂಬ ಮಹಿಳೆ ತನ್ನ ಪತಿಯೊಂದಿಗೆ ಯೋಜನೆ ರೂಪಿಸಿ ವಿಜಯ್ ಅವರ ಖಾಸಾಗಿ ಹಾಗೂ ಹಣಕಾಸು ವಿಚಾರಗಳ ಮಾಹಿತಿಯನ್ನು ಕಲೆಹಾಕಿದ್ದಾಳೆ ಎಂದು ಹೇಳಲಾಗಿದೆ. ವಿಜಯ್ ಅವರ ಲ್ಯಾಪ್‌ಟಾಪ್ ನೋಡುವ ಅವಕಾಶವನ್ನು ದುರುಪಯೋಗ ಪಡಿಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

  ಬೇರೆ ಉದ್ಯೋಗಿಗಳು ಸಹ ಸಾಥ್!

  ಸೋನಿಯಾ ಧವನ್ ಒಬ್ಬಳೇ ಇಂತಹ ಕೆಲಸ ಮಾಡಲು ಸಾಧ್ಯವಿರಲಿಲ್ಲ. ಹಾಗಾಗಿ, ಕಳೆದ 7 ವರ್ಷಗಳಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದೇವೇಂದರ್ ಕುಮಾರ್ ಹಾಗೂ ಸೋನಿಯಾ ಧವನ್ ಇಬ್ಬರೂ ಪ್ಲಾನ್ ಮಾಡಿ, ಕೆಲ ಸಹೋಸ್ಯೋಗಿಗಳನ್ನು ತಮ್ಮೊಂದಿಗೆ ಸೇರಿಸಿಕೊಂಡು ವೈಯಕ್ತಿಕ ಮಾಹಿತಿಯನ್ನು ಕದಿಯಲು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಈಗ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

  ಮಾಹಿತಿ ಸಂಪೂರ್ಣ ಸೋರಿಕೆಯಾಗಿದೆ!

  ಸದ್ಯ ಪೊಲೀಸರು ಹೇಳುವ ಪ್ರಕಾರ, ಪೇಟಿಎಂ ಉದ್ಯೋಗಿಗಳು ಬಳಕೆದಾರರ ಸೂಕ್ಷ್ಮ ಮಾಹಿತಿಗಳನ್ನು ಕದ್ದು ಇನ್ನೊಬ್ಬರಿಗೆ ರವಾನಿಸಿದ್ದಾರೆ. ವಶಕ್ಕೆ ಪಡೆದಿರುವ ಲ್ಯಾಪ್‌ಟಾಪ್‌ಗಳಲ್ಲಿ ಈ ಮಾಹಿತಿ ಲಭ್ಯವಾಗಿದೆ. ಅಂದರೆ, ಈಗಾಗಲೇ ಪೇಟಿಎಂ ಮಾಹಿತಿ ಸೋರಿಕೆಯಾಗಿದ್ದು, ಅದು ಸಾರ್ವಜನಿಕಗೊಳ್ಳದಂತೆ ತಡೆಯುವುದು ಮುಂದಿರುವ ಸವಾಲಾಗಿದೆ ಎನ್ನಲಾಗಿದೆ.. ಏನಕ್ಕೂ ನೀವು ಪೇಟಿಎಂ ಬಳಸುತ್ತಿದ್ದರೆ, ನೀವು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸೂಕ್ತ.

  ಅಷ್ಟಕ್ಕೂ ಮಾಹಿತಿ ಸೋರಿಕೆ ಎಂದರೇನು?

  ಇಂದಿಗೆ 70 ಲಕ್ಷ ಮಾರಾಟಗಾರರು ತಮ್ಮ ಬ್ಯಾಂಕ್‌ ಖಾತೆಗಳನ್ನು ಪೇಟಿಎಂಗೆ ನೇರವಾಗಿ ವಿಲೀನ ಮಾಡಿದ್ದಾರೆ. ಅವರ ನಿತ್ಯ ವ್ಯವಹಾರ ನಡೆಸುವ ಖಾತೆಗಳು ಇವಾಗಿರುವುದರಿಂದ, ಅವು ಹೊಂದಿರುವ ಮಾಹಿತಿ ಮಾರಾಟಗಾರರ ಬದುಕಿನ ಜತೆ ನೇರ ಸಂಬಂಧ ಹೊಂದಿದೆ. ಇದೇ ರೀತಿ ಕೋಟ್ಯಾಂತರ ಗ್ರಾಹಕರು ಪೇಟಿಎಂ ಸೇವೆ ಬಳಸುತ್ತಿದ್ದಾರೆ. ಈ ಮಾಹಿತಿ ಕೂಡ ಆರ್ಥಿಕ ನೆಲೆಯಲ್ಲಿ ಸೂಕ್ಷ್ಮವಾದದ್ದು. ಇದನ್ನು ಸೋರಿಕೆ ಮಾಡಿದರೆ ಮಾರಾಟಗಾರರ ಹಾಗೂ ಗ್ರಾಹಕರ ಖಾಸಗಿ ವ್ಯವಹಾರಗಳಿಗೆ ಹೊಡೆತ ಬೀಳುತ್ತದೆ.

  ನೀವು ಮಾಡಬೇಕಿರುವುದು ಏನು?

  ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನೇ ತಮ್ಮ ಕಂಪನಿಯ ಪ್ರಚಾರಕ್ಕೆ ಅಕ್ರಮವಾಗಿ ಬಳಸಿಕೊಂಡಿದ್ದ ಪೇಟಿಎಂ ಕಂಪನಿಯ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಇಂದು ಮತ್ತೊಂದು ದೊಡ್ಡ ತಪ್ಪನ್ನು ಮಾಡಿದ್ದಾರೆ. ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವುದಾಗಿ ಹೇಳಿಕೊಂಡಿದ್ದ ಕಂಪನಿ ಈಗ ಗ್ರಾಹಕರ ಸುರಕ್ಷತೆಯನ್ನು ಸಹ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ. ಹಾಗಾಗಿ, ನೀವು ಪೇಟಿಎಂ ಬಳಸದೇ ಇರುವುದು ಒಳ್ಳೆಯದು. ನಂಬಿಕೆ ಉಳಿಸಿಕೊಳ್ಳಲಾಗದ ಈ ಆಪ್ ನಿಮಗೆ ಮತ್ತೇನು ಸಹಾಯಮಾಡಬಲ್ಲದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Three Paytm employees were arrested for allegedly trying to extort Rs 20 crore from the company’s founder Vijay Shekhar Sharma. They threatened the owner to leak stolen personal data and information. Listen in!. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more