Home
ಸುದ್ದಿಜಾಲ

ಭಾರತದ ಮಾರುಕಟ್ಟೆಯಲ್ಲಿ ಟಿಕ್‌ವಾಚ್ GTX ಸ್ಮಾರ್ಟ್‌ವಾಚ್ ಬಿಡುಗಡೆ!

ಟಿಕ್ ವಾಚ್ ಕಂಪೆನಿ ತನ್ನ ಹೊಸ ಮಾದರಿಯ GTX ಸ್ಮಾರ್ಟ್ ವಾಚ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಗೂಗಲ್ ಬೆಂಬಲಿತ ಮೊಬ್ವೊಯ್ ಅವರ ಬಜೆಟ್ ಸ್ನೇಹಿ ವೆರಿಯೆಬಲ್ಸ್‌ ಆಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 14 ವರ್ಕ್-ಔಟ್‌ ಮೋಡ್ಸ್‌ ಮತ್ತು ಹಾರ್ಟ್ರೇಟ್ ಮಾನಿಟರಿಂಗ್‌ ಫೀಚರ್ಸ್‌ಗಳನ್ನು ಹೊಂದಿದೆ. ಅಲ್ಲದೆ ಇದು ಏಳು ದಿನಗಳ ಬ್ಯಾಟರಿ ಅವಧಿಯನ್ನು ಒಳಗೊಂಡಿದೆ ಎಂದು ಕಂಪನಿ ಹೇಳಿದೆ. ಇನ್ನು ಟಿಕ್‌ವಾಚ್ GTX ಸ್ಮಾರ್ಟ್‌ವಾಚ್‌ ಬಲಭಾಗದಲ್ಲಿ ಎರಡು ಗುಂಡಿಗಳೊಂದಿಗೆ ನಯವಾದ ವೃತ್ತಾಕಾರದ ಡಯಲ್ ಅನ್ನು ಹೊಂದಿದೆ.

ಟಿಕ್‌ವಾಚ್‌

ಹೌದು, ಟಿಕ್‌ವಾಚ್‌ ಸಂಸ್ಥೆಯು ತನ್ನ ಟಿಕ್‌ವಾಚ್‌ GTX ಸ್ಮಾರ್ಟ್ ವಾಚ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ವಾಚ್ ವೈಯಕ್ತಿಕಗೊಳಿಸಿದ ವಾಚ್ ಫೇಸ್‌, ಮತ್ತು ಸ್ಲಿಪಿಂಗ್‌ ಮಾನಿಟರಿಂಗ್‌ ಅನ್ನು ಮಾಡಲಿದೆ. ಇದು ಟಿಕ್‌ವಾಚ್‌ GTX ಸ್ವಾಮ್ಯದ ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಟಿಕ್‌ವಾಚ್‌ ಮುಂದಿನ ತಿಂಗಳಿನಿಂದ ಮಾರಾಟಕ್ಕೆ ಬರಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟಿಕ್‌ವಾಚ್

ಟಿಕ್‌ವಾಚ್ GTX ಸ್ಮಾರ್ಟ್‌ವಾಚ್‌ 240x240 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 1.x-ಇಂಚಿನ TFT ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಟಿಕ್‌ವಾಚ್ GTX 160KB RAM ಮತ್ತು 16MB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದು RLC8762C ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದೆ. ಆದರೆ ಇದು ವೈ-ಫೈ ಅಥವಾ ಜಿಪಿಎಸ್ ಅನ್ನು ಹೊಂದಿಲ್ಲ. ಅಲ್ಲದೆ ಇದರಲ್ಲಿ ಯಾವುದೇ ಮೈಕ್ಸ್ ಅಥವಾ ಸ್ಪೀಕರ್‌ಗಳಿಲ್ಲ.

ಟಿಕ್‌ವಾಚ್

ಇನ್ನು ಟಿಕ್‌ವಾಚ್ GTX ವಿಕೇರ್ ವಿಸಿ 31 24-ಗಂಟೆಗಳ ಹೃದಯ ಬಡಿತ ಮಾನಿಟರ್, ಬಾಷ್ ಬಿಎಂಎ 421 ಆಕ್ಸಿಲರೊಮೀಟರ್ ಮತ್ತು ನಿದ್ರೆಯ ಮೇಲ್ವಿಚಾರಣಾ ಸಾಮರ್ಥ್ಯಗಳನ್ನು ಹೊಂದಿದೆ. ಇದಲ್ಲದೆ ಇದು ಸೈಕ್ಲಿಂಗ್, ರನ್ನಿಂಗ್‌, ಈಜು, ರೋಯಿಂಗ್, ಜಿಮ್ನಾಸ್ಟಿಕ್ಸ್ ಮತ್ತು ಬ್ಯಾಸ್ಕೆಟ್‌ಬಾಲ್ ಸೇರಿದಂತೆ 14 ವಿಭಿನ್ನ ಕ್ರೀಡಾ ವಿಧಾನಗಳನ್ನು ಟ್ರ್ಯಾಕ್ ಮಾಡಬಹುದು. ಅಲ್ಲದೆ ಇದು IP68 ವಾಟರ್‌ ಮತ್ತು ಧೂಳಿನ ಪ್ರತಿರೋಧ ಎಂದು ರೇಟ್ ಮಾಡಲಾಗಿದೆ.

ಸ್ಮಾರ್ಟ್ ವಾಚ್

ಇದಲ್ಲದೆ ಈ ಸ್ಮಾರ್ಟ್ ವಾಚ್ 200mAh ಬ್ಯಾಟರಿ ಪ್ಯಾಕ್ಅಪ್‌ ಹೊಂದಿದೆ. ಅಲ್ಲದೆ ಈ ವಾಚ್‌ ನಿಯಮಿತ ಬಳಕೆಯೊಂದಿಗೆ ಏಳು ದಿನಗಳವರೆಗೆ ಮತ್ತು ಪವರ್‌ ಸೇವರ್‌ ಮೋಡ್‌ನಲ್ಲಿ 10 ದಿನಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳುತ್ತದೆ. ಇನ್ನು ಟಿಕ್‌ವಾಚ್ ಜಿಟಿಎಕ್ಸ್ ಅನ್ನು ಎರಡು ಗಂಟೆಗಳಲ್ಲಿ ಕಂಪ್ಲಿಟ್‌ ಚಾರ್ಜ್ ಮಾಡಬಹುದು. ಅಲ್ಲದೆ ಇದು ಟಿಲ್ಟ್-ಟು-ವೇಕ್ ಗೆಸ್ಚರ್ ಬೆಂಬಲದೊಂದಿಗೆ ಬರುತ್ತದೆ, ಇದು ಸಮಯವನ್ನು ಪರೀಕ್ಷಿಸಲು ನಿಮ್ಮ ಕೈಯನ್ನು ಆಕ್ಷನ್‌ ಮಾಡಿದರೆ ಸಾಕು ಡಿಸ್‌ಪ್ಲೇ ಆನ್‌ ಆಗಲಿದೆ.

ಟಿಕ್‌ವಾಚ್

ಸದ್ಯ ಟಿಕ್‌ವಾಚ್ GTX ಬೆಲೆ 5,669 ರೂ ಆಗಿದ್ದು, ಇದು ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಅಲ್ಲದೆ ಸ್ಮಾರ್ಟ್‌ವಾಚ್ ಅನ್ನು ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ 6,299. ರೂ ಬೆಲೆಯನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಸೆಪ್ಟೆಂಬರ್ 3 ರಿಂದ ಮಾತ್ರ ಖರೀದಿಸಲು ಲಭ್ಯವಾಗಲಿದೆ.

Best Mobiles in India

English summary
TicWatch GTX does not have Wi-Fi or GPS connectivity. It uses Bluetooth v5.0 to connect to its app.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+