ದೇಶಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಟಿಕ್ ವಾಚ್ ಪ್ರೊ 3 GPS!

|

ಟೆಕ್‌ ವಲಯದಲ್ಲಿ ಸ್ಮಾರ್ಟ್‌ವಾಚ್‌ಗಳ ಭರಾಟೆ ಜೋರಾಗಿಯೇ ಇದೆ. ಸ್ಮಾರ್ಟ್‌ವಾಚ್‌ಗಳ ವಿನ್ಯಾಸ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು ಹೊಸ ಹೊಸ ಆಕರ್ಷಕ ಲುಕ್‌ನಲ್ಲಿ ಎಂಟ್ರಿ ಆಗುತ್ತಿವೆ. ಸದ್ಯ ಇದೀಗ Mobvoi ಕಂಪೆನಿ ತನ್ನ ಹೊಸ ಟಿಕ್ ವಾಚ್ ಪ್ರೊ 3 GPS ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಸ್ಮಾರ್ಟ್ ವಾಚ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ವೇರ್ 4100 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಗೂಗಲ್‌ನ ವೇರ್ ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಟಿಕ್‌ವಾಚ್

ಹೌದು, Mobvoi ಸಂಸ್ಥೆ ತನ್ನ ಹೊಸ ಟಿಕ್‌ವಾಚ್ ಪ್ರೊ 3 ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ಹೃದಯ ಬಡಿತ ಮೇಲ್ವಿಚಾರಣೆ ಮತ್ತು ರಕ್ತದ ಆಮ್ಲಜನಕದ ಮಟ್ಟದ ಟ್ರ್ಯಾಕಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಈ ಸ್ಮಾರ್ಟ್‌ವಾಚ್‌ ಧರಿಸಬಹುದಾದ ಸ್ಟೇನ್ಲೆಸ್ ಸ್ಟೀಲ್ ಮತ್ತು ಪ್ಲಾಸ್ಟಿಕ್ ನಿರ್ಮಾಣವನ್ನು ಹೊಂದಿದೆ. ಅಲ್ಲದೆ ಬದಲಾಯಿಸಬಹುದಾದ ಸಿಲಿಕೋನ್ ಪಟ್ಟಿಯನ್ನು ಸಹ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ ವಾಚ್ ಎಸೆನ್ಷಿಯಲ್ ಮೋಡ್‌ನಲ್ಲಿ ಸಿಂಗಲ್‌ ಚಾರ್ಜ್‌ನಲ್ಲಿ 45 ದಿನಗಳವರೆಗೆ ಇರುತ್ತದೆ. ಇನ್ನುಳಿದಂತೆ ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟಿಕ್‌ವಾಚ್ ಪ್ರೊ

ಟಿಕ್‌ವಾಚ್ ಪ್ರೊ 3GPS 454x454 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿದ್ದು, 1.4-ಇಂಚಿನ ಅಮೋಲೆಡ್ "ರೆಟಿನಾ" ಡಿಸ್‌ಪ್ಲೇ ಹೊಂದಿದೆ. ಇದರ ಸ್ಕ್ರೀನ್‌ ಆಟೋಮ್ಯಾಟಿಕ್‌ ಬ್ರೈಟ್‌ನೆಶ್‌ ಹೊಂದಾಣಿಕೆಯೊಂದಿಗೆ ಬರುತ್ತದೆ. ಅಲ್ಲದೆ ಮಣಿಕಟ್ಟಿನ ಫ್ಲಿಕ್‌ನೊಂದಿಗೆ ಎಚ್ಚರಗೊಳ್ಳಲು ವಿನ್ಯಾಸಗೊಳಿಸಲಾಗಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ವೇರ್ 4100 SoC ಪ್ರೊಸೆಸರ್‌ ಹೊಂದಿದ್ದು, ಜಿಪಿಎಸ್ ವೇರ್ ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಈ ವಾಚ್‌ 1GB RAM ಮತ್ತು 8GB ಇಂಟರ್‌ ಸ್ಟೊರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಫಿಟ್‌ನೆಸ್ ಟ್ರ್ಯಾಕಿಂಗ್

ಇನ್ನು ಫಿಟ್‌ನೆಸ್ ಟ್ರ್ಯಾಕಿಂಗ್‌ಗೆ ಸಂಬಂಧಿಸಿದಂತೆ, ಟಿಕ್‌ವಾಚ್ ಪ್ರೊ 3 ಜಿಪಿಎಸ್ ಟಿಕ್ಎಕ್ಸರ್ಸೈಸ್ ಎಂಬ ಸ್ವಾಮ್ಯದ ಅಪ್ಲಿಕೇಶನ್‌ನೊಂದಿಗೆ ಪ್ರೀ ಲೋಡ್ ಆಗಿದೆ. ಇದು ಹೊರಾಂಗಣ ಓಟ, ಒಳಾಂಗಣ ಓಟ, ಸೈಕ್ಲಿಂಗ್, ಈಜು, ರೋಯಿಂಗ್ ಮತ್ತು ಪರ್ವತಾರೋಹಣ ಸೇರಿದಂತೆ 10 ಕ್ಕೂ ಹೆಚ್ಚು ವರ್ಕೌಟ್ ಮೋಡ್‌ಗಳನ್ನು ಒಳಗೊಂಡಿದೆ. ಹೃದಯ ಬಡಿತದ ವ್ಯತ್ಯಾಸ, ರಕ್ತದ ಆಮ್ಲಜನಕದ ಶುದ್ಧತ್ವ ಮತ್ತು ಒತ್ತಡದ ಮಟ್ಟಗಳಂತಹ ನಿಮ್ಮ ಜೀವಕೋಶಗಳನ್ನು ಪತ್ತೆಹಚ್ಚಲು ಟಿಕ್ಆಕ್ಸಿಜನ್, ಟಿಕ್ಜೆನ್, ಟಿಕ್ಬ್ರೀತ್ ಮತ್ತು ಟಿಕ್ಹಿಯರಿಂಗ್‌ನಂತಹ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ.

ಟಿಕ್‌ವಾಚ್

ಇದಲ್ಲದೆ ಟಿಕ್‌ವಾಚ್ ಪ್ರೊ 3GPS ಇಂಟರ್‌ಬಿಲ್ಟ್‌ ಜಿಪಿಎಸ್‌ನೊಂದಿಗೆ ಬರುತ್ತದೆ. ಇದು ನಿಖರವಾದ ತಾಲೀಮು ಟ್ರ್ಯಾಕಿಂಗ್ ಅನ್ನು ಸಕ್ರಿಯಗೊಳಿಸಲು ಐದು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ Constellations ಅನ್ನು ಬಳಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 4.2, ಜಿಪಿಎಸ್ ಮತ್ತು ಎನ್‌ಎಫ್‌ಸಿ ಯನ್ನು ಬೆಂಬಲಿಸಲಿದೆ. ಕಾರ್ಯಕ್ಷಮತೆ ಮತ್ತು ಬ್ಯಾಟರಿ ದಕ್ಷತೆಯ ನಡುವೆ ಬದಲಾಯಿಸಲು ಸ್ಮಾರ್ಟ್ ವಾಚ್ ಸ್ಮಾರ್ಟ್ ಮೋಡ್ ಮತ್ತು ಎಸೆನ್ಷಿಯಲ್ ಮೋಡ್‌ನೊಂದಿಗೆ ಬರುತ್ತದೆ. ಸ್ಮಾರ್ಟ್ ಮೋಡ್ ಅಡಿಯಲ್ಲಿ, ವಾಚ್ 72 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ, ಆದರೆ ಎಸೆನ್ಷಿಯಲ್ ಮೋಡ್ ಅನ್ನು 45 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

ಟಿಕ್‌ವಾಚ್

ಇನ್ನು ಭಾರತದಲ್ಲಿ ಟಿಕ್‌ವಾಚ್ ಪ್ರೊ 3 ಜಿಪಿಎಸ್ ಬೆಲೆ 27,999. ರೂ ಆಗಿದೆ. ಸದ್ಯ ಈ ಸ್ಮಾರ್ಟ್ ವಾಚ್ ಅಮೆಜಾನ್ ಮೂಲಕ ಶ್ಯಾಡೋ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಮಾರಾಟವಾಗಲಿದೆ.

Most Read Articles
Best Mobiles in India

English summary
TicWatch Pro 3 GPS comes with a price tag of Rs. 27,999.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X