ಟಿಕ್ ಟಾಕ್ ಬ್ಯಾನ್ ಆದ್ರೂ ಡೌನ್ ಲೋಡ್ ಆಗುವುದು ಕಡಿಮೆಯಾಗಿಲ್ಲ!

By Gizbot Bureau
|

ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆಗಿ ಒಂದು ವಾರವಾಗುತ್ತಾ ಬಂತು. ಅದೇ ಕಾರಣಕ್ಕೆ ಗೂಗಲ್ ಮತ್ತು ಆಪಲ್ ಕೂಡ ಟಿಕ್ ಟಾಕ್ ನ್ನು ತನ್ನ ತಮ್ಮತಮ್ಮ ಆಪ್ ಸ್ಟೋರ್ ಗಳಿಂದ ತೆಗೆದುಹಾಕಿದ್ದೂ ಆಗಿದೆ. ಆದರೆ ಚೀನಾ ಮೂಲದ ಶಾರ್ಟ್ ವೀಡಿಯೋ ಶೇರಿಂಗ್ ಆಪ್ ಮಾತ್ರ ಭಾರತದಲ್ಲಿ ಈಗಲೂ ಡೌನ್ ಲೋಡ್ ಆಗುತ್ತಲೇ ಇದೆ. ಥರ್ಡ್ ಪಾರ್ಟಿ ವೆಬ್ ಸೈಟ್ ಗಳಿಂದ ದಿನೇದಿನೇ ಈ ಆಪ್ ಡೌನ್ ಲೋಡ್ ಮಾಡುವವರ ಸಂಖ್ಯೆ ಅಧಿಕವಾಗುತ್ತಲೇ ಇದೆ.

10 ರಿಂದ 15% ಹೆಚ್ಚಳ:

10 ರಿಂದ 15% ಹೆಚ್ಚಳ:

ಎಪಿಕೆ ಮಿರರ್ ಸ್ಥಾಪಕರಾಗಿರುವ ಆರ್ಮೆಟ್ ರುಸಕೋವ್ಸ್ಕಿ ಟಿಕ್ ಟಾಕ್ ಬ್ಯಾನ್ ಆದ ನಂತರ ಅದರ ಡೌನ್ ಲೋಡ್ ಮಾಡುವಿಕೆ ಭಾರತದಲ್ಲಿ 10 ರಿಂದ 15 ಶೇಕಡಾ ಅಧಿಕಗೊಂಡಿದೆ .ಆಂಡ್ರಾಯ್ಡ್ ಆಪ್ ಸ್ಟೋರ್ ನಲ್ಲಿ ಲಭ್ಯವಿರದ ಕೆಲವು ಆಪ್ ಗಳು ಎಪಿಕೆಮಿರರ್ ನಲ್ಲಿ ಲಭ್ಯವಾಗುತ್ತದೆ . ಇದೊಂದು ನಂಬಿಕೆಗೆ ಅರ್ಹವಾಗಿರುವ ಆಪ್ ಡೌನ್ ಲೋಡ್ ಮಾಡುವ ವೆಬ್ ಸೈಟ್ ಆಗಿದೆ.

5 ಪಟ್ಟು ಹೆಚ್ಚಳವಾದ ಟ್ರಾಫಿಕ್:

5 ಪಟ್ಟು ಹೆಚ್ಚಳವಾದ ಟ್ರಾಫಿಕ್:

ಎಪ್ರಿಲ್ 16 ರಿಂದ ಟಿಕ್ ಟಾಕ್ ಡೌನ್ ಲೋಡ್ ಮಾಡುವಿಕೆಯ ಟ್ರಾಫಿಕ್ ಸುಮಾರು 5 ಪಟ್ಟು ಅಧಿಕಗೊಂಡಿದೆ. ಅಂದರೆ ಇದು ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಮಾಡಿದ ಮಾರನೇ ದಿನದಿಂದ ಆರಂಭವಾಗಿರುವ ಬೆಳವಣಿಗೆಯಾಗಿದೆ. ಎಪ್ರಿಲ್ 17 ರಂದು ಸಾಮಾನ್ಯ ದಿನಗಳಲ್ಲಿ ಇದ್ದ ಟ್ರಾಫಿಕ್ ಗಿಂತ 12 ಪಟ್ಟು ಅಧಿಕವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಗೂಗಲ್ ನಲ್ಲೂ ಹೆಚ್ಚು ಹುಡುಕಾಟ:

ಗೂಗಲ್ ನಲ್ಲೂ ಹೆಚ್ಚು ಹುಡುಕಾಟ:

ಗೂಗಲ್ ಟ್ರೆಂಡ್ ನ ಮಾಹಿತಿಯ ಪ್ರಕಾರ "TikTok download" ಎಂಬ ಪದವು ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆದ ದಿನದಿಂದ ಅಧಿಕವಾಗಿ ಹುಡಕಾಟ ನಡೆಸಲ್ಪಟ್ಟ ಪದಗಳಲ್ಲಿ ಒಂದೆನಿಸುತ್ತಿದೆ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್ ಆದೇಶದ ನಂತರದ ಪರಿಣಾಮಗಳು:

ಸುಪ್ರೀಂ ಕೋರ್ಟ್ ಆದೇಶದ ನಂತರದ ಪರಿಣಾಮಗಳು:

ಎಪ್ರಿಲ್ 15 ರಂದು ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆಯ್ತು. ಸುಪ್ರೀಂ ಕೋರ್ಟ್ ಮದ್ರಾಸ್ ಹೈಕೋರ್ಟಿನ ಆದೇಶವನ್ನು ನಿಷೇಧಿಸಿ ಟಿಕ್ ಟಾಕ್ ನ್ನು ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಆದೇಶ ಹೊರಡಿಸಿತು. ಎಪ್ರಿಲ್ 3 ರಂದು ಟಿಕ್ ಟಾಕ್ ಡೌನ್ ಲೋಡ್ ನ್ನು ಬ್ಯಾನ್ ಮಾಡುವಂತೆ ಕೋರ್ಟ್ ನ್ನು ಕೇಳಲಾಗಿತ್ತು.ಇದು ಅಶ್ಲೀಲತೆಯನ್ನು ಪ್ರೊತ್ಸಾಹಿಸುತ್ತಿದೆ ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಇದನ್ನು ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

ಆಪ್ ಸ್ಟೋರ್ ಗಳಿಂದ ಡಿಲೀಟ್:

ಆಪ್ ಸ್ಟೋರ್ ಗಳಿಂದ ಡಿಲೀಟ್:

ಇದೇ ತೀರ್ಪಿನ ಅನುಸಾರ ಸರ್ಕಾರವು ಗೂಗಲ್ ಮತ್ತು ಆಪಲ್ ಬಳಿ ಟಿಕ್ ಟಾಕ್ ಆಪ್ ನ್ನು ತಮ್ಮತಮ್ಮ ಆಪ್ ಸ್ಟೋರ್ ನಿಂದ ಡಿಲೀಟ್ ಮಾಡುವಂತೆ ಕೇಳಿತ್ತು. ಎಪ್ರಿಲ್ 16 ರಂದು ಗೂಗಲ್ ಮತ್ತು ಆಪಲ್ ಎರಡೂ ಕೂಡ ಇದನ್ನು ತಮ್ಮ ಆಪ್ ಸ್ಟೋರ್ ನಿಂದ ತೆಗೆದು ಹಾಕಿದವು.

ಇನ್ನೊಂದು ತೀರ್ಪು ಎಪ್ರಿಲ್ 22ಕ್ಕೆ:

ಇನ್ನೊಂದು ತೀರ್ಪು ಎಪ್ರಿಲ್ 22ಕ್ಕೆ:

ಎಪ್ರಿಲ್ 22 ರಂದು ಈಗಾಗಲೇ ಡೌನ್ ಲೋಡ್ ಮಾಡಿರುವ ಬಳಕೆದಾರರಿಗೆ ಬಳಸುವುದಕ್ಕೆ ಅನುಮತಿ ನೀಡುವ ಕುರಿತು ತೀರ್ಪು ಬರಲಿದೆ.

120 ಮಂದಿ ಆಕ್ಟೀವ್ ಬಳಕೆದಾರರು:

120 ಮಂದಿ ಆಕ್ಟೀವ್ ಬಳಕೆದಾರರು:

2018 ರಲ್ಲಿ ಟಿಕ್ ಟಾಕ್ ಭಾರತದಲ್ಲಿ ಬಿಡುಗಡೆಗೊಂಡಿತು ಮತ್ತು ದೇಶದಾದ್ಯಂತ ಸುಮಾರು 120 ಮಿಲಿಯನ್ ಆಕ್ಟೀವ್ ಬಳಕೆದಾರರು ಇದರಲ್ಲಿದ್ದಾರೆ. ಸಣ್ಣ ಸಿಟಿ ಮತ್ತು ನಗರಗಳಿಂದ ಯುವಜನತೆ ಇದರಲ್ಲಿ ಸಾಕಷ್ಟು ತೊಡಗಿಕೊಂಡಿದ್ದಾರೆ. ಹೆಚ್ಚಿನವರು ಸಣ್ಣ ವೀಡಿಯೋಗಳನ್ನು ಮಾಡಿ ಅದರಲ್ಲಿ ಸ್ಟಿಕ್ಕರ್ ಮತ್ತು ಜಿಫ್ ಫೈಲ್ ಗಳನ್ನು ಸೇರಿಸಿ ಹಂಚಿಕೊಳ್ಳುವುದಕ್ಕಾಗಿ ಬಳಕೆ ಮಾಡುತ್ತಿದ್ದಾರೆ.

ಆಶ್ಲೀಲತೆಗೆ ಪ್ರಚೋದನೆ ನೀಡಿದ ಆಪ್:

ಆಶ್ಲೀಲತೆಗೆ ಪ್ರಚೋದನೆ ನೀಡಿದ ಆಪ್:

ಕೆಲವು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲತೆಗೆ ಇದು ಆಸ್ಪದ ನೀಡಿದೆ ಟ್ವೀಟರ್ ನಲ್ಲಿ ಇಂತಹ ಕಾಮಪ್ರಚೋದಕ ಸಣ್ಣ ವೀಡಿಯೋ ಕ್ಲಿಪ್ ಗಳು ಮತ್ತು ಫೋಟೋಗಳನ್ನು ಕೆಲವರು ಪಬ್ಲಿಷ್ ಮಾಡಿದ್ದಾರೆ.

ಟಿಕ್ ಟಾಕ್ ನ್ನು ಯಾರ ಕೈಗೂ ಸಿಗದಂತೆ ಮಾಡುವುದು ಕಷ್ಟವೆಂದು ಅಭಿಪ್ರಾಯ ಪಡುತ್ತಾರೆ ಸೈಬರ್ ತಜ್ಞ ಪವನ್ ದುಗ್ಗಾಲ್.

ಸಂಪೂರ್ಣ ಬ್ಯಾನ್ ಅಸಾಧ್ಯ:

ಇಂದಿನ ದಿನಗಳಲ್ಲಿ ಸಂಪೂರ್ಣವಾಗಿ ಆಪ್ ನ್ನು ಬ್ಯಾನ್ ಮಾಡಿದರೂ ಕೂಡ ಜನರು ಇತರೆ ಮೂಲದಿಂದ ಡೌನ್ ಲೋಡ್ ಮಾಡಿಕೊಳ್ಳುತ್ತಾರೆ ಮತ್ತು ಲೊಕೇಷನ್ ನ್ನು ಬದಲಾಯಿಸಿಕೊಂಡು ಬಿಡುತ್ತಾರೆ. ಆಪ್ ನಿಂದ ಸಮಸ್ಯೆಯಲ್ಲ ಬದಲಾಗಿ ಥರ್ಡ್ ಪಾರ್ಟಿ ಕಟೆಂಟ್ ಗಳಿಂದ ಸಮಸ್ಯೆಯಾಗುತ್ತಿದೆ.ಆಪ್ ಬ್ಯಾನ್ ಮಾಡುವ ಬದಲು ಕೆಟ್ಟ ರೀತಿಯಲ್ಲಿ ಪಬ್ಲಿಷಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಇವರ ಅಭಿಪ್ರಾಯವಾಗಿದೆ.

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ:

ಮೂರನೇ ಪಕ್ಷದ ಸೈಟ್ ಗಳಿಂದ ಟಿಕ್ ಟಾಕ್ ನ್ನು ಈಗಲೂ ಡೌನ್ ಲೋಡ್ ಮಾಡಬಹುದು ಎಂಬ ವಿಚಾರವು ಮಾನಸಿಕ ಆರೋಗ್ಯ ತಜ್ಞರಿಗೆ ಕಳವಳವನ್ನುಂಟುಮಾಡಿದೆ. ಟಿಕ್ ಟಾಕ್ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಖಂಡಿತವಾಗ್ಲೂ ಇಂತಹ ಮಾನಸಿಕ ಸಮಸ್ಯೆಯನ್ನೂ ಕೂಡ ಗುರುತಿಸಬೇಕಾಗುತ್ತದೆ. ವಿಚಿತ್ರ ವರ್ತನೆಯ ವ್ಯಸನದ ಒಂದು ರೂಪವಾಗಿದೆ ಇದು. ಆದರೆ ನಾವು ಸಾಮಾಜಿಕ ಮಾಧ್ಯಮದ ಬಳಕೆಯ ಗೀಳು ಮತ್ತು ವಿಚಿತ್ರ ವರ್ತನೆಯ ವ್ಯಸನ ಎರಡೂ ಕೂಡ ಬೇರೆಬೇರೆ ರೀತಿಯ ಮಾನಸಿಕ ಸಮಸ್ಯೆಗಳಾಗಿರುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಮತ್ತು ನ್ಯೂರೋಸೈನ್ಸ್(ನಿಮ್ಹಾನ್ಸ್) ಬೆಂಗಳೂರಿನ ವೈದ್ಯರಾಗಿರುವ ಜಯಂತ್ ಮಹದೇವನ್.

ಇದೇ ರೀತಿಯ ಪರಿಸ್ಥಿತಿಯನ್ನು ನಾವು ಪಿಯುಬಿಜಿಯಿಂದ ಎದುರಿಸಿದೆವು ಮತ್ತು ಇದೀಗ ಟಿಕ್ ಟಾಕ್ ನಿಂದ. ಇಂತಹ ಸಮಸ್ಯೆಯನ್ನು ವೈಜ್ಞಾನಿಕ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕಾಗುತ್ತದೆ. ಸರಿಯಾಗಿ ಸಮಸ್ಯೆಯನ್ನು ಗುರುತಿಸಿಕೊಳ್ಳದೇ ಇದ್ದಲ್ಲಿ ಇದು ಉಲ್ಬಣವಾಗುತ್ತಲೇ ಸಾಗುತ್ತದೆ. ನಿಷೇಧವು ಯಾವುದೇ ಹಾನಿ ಮಾಡದೇ ಇದ್ದರೆ ಒಳಿತು ಎನ್ನುತ್ತಾರೆ ನಿಮ್ಹಾನ್ಸ್ ನ ಸೈಕಿಯಾಸ್ಟ್ರಿಯ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾಕ್ಟರ್ ಅರುಣ್ ಕಂಡಸಾಮಿ.

ಒಟ್ಟಾರೆ ಪ್ರಸಿದ್ಧ ಆಪ್ ವೊಂದು ವಿಚಿತ್ರ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು ಮತ್ತು ಅದರ ಬ್ಯಾನ್ ನಿಂದ ಸಮಸ್ಯೆ ಸಂಪೂರ್ಣ ಪರಿಹಾರವಾಗಿಲ್ಲ ಎಂಬುದು ಮಾತ್ರ ಸತ್ಯ.

Best Mobiles in India

Read more about:
English summary
TikTok downloads on APKMirror surge 12 times since India ban

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X