ಕೆಟ್ಟ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾದ ಟಿಕ್ ಟಾಕ್

By Gizbot Bureau
|

ಹದಿಹರೆಯದವರಲ್ಲಿ ಮತ್ತು ಯುವಕ-ಯುವತಿಯರಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಚೀನಾದ ಶಾರ್ಟ್ ವೀಡಿಯೋ ಆಪ್ ಟಿಕ್ ಟಾಕ್ ಸರ್ಕಾರವು ವಿಷಯ ಮತ್ತು ಗೌಪ್ಯತೆಯ ವಿಚಾರದಲ್ಲಿ ತೆಗೆದುಕೊಳ್ಳಲು ಇಚ್ಛಿಸುತ್ತಿರುವ ಕಾಳಜಿಯ ಕುರಿತಂತೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಿದೆ. ಕಂಪೆನಿಯು ಸ್ಥಳೀಯ ಕುಂದುಕೊರತೆ ಅಧಿಕಾರಿಯನ್ನು ನೇಮಿಸುವುದಕ್ಕೆ ಯೋಜಿಸುತ್ತಿದೆ.

ಭಾರತೀಯರೇ ಹೆಚ್ಚು:

ಭಾರತೀಯರೇ ಹೆಚ್ಚು:

ಟಿಕ್ ಟಾಕ್ ನ ವಿಶ್ವದ 500 ಮಿಲಿಯನ್ ಬಳಕೆದಾರರಲಲ್ಲಿ ಶೇಕಡಾ 39 ರಷ್ಟು ಬಳಕೆದಾರರು ಭಾರತೀಯರಾಗಿದ್ದಾರೆ ಮತ್ತು ಭಾರತವು ಚೀನಾಕ್ಕೆ ಅತೀ ದೊಡ್ಡ ವಿದೇಶಿ ಮಾರುಕಟ್ಟೆಯನ್ನು ಈ ನಿಟ್ಟಿನಲ್ಲಿ ಸೃಷ್ಟಿಸಿದೆ.

ಕೆಟ್ಟ ಚಟುವಟಿಕೆಗೆ ಬ್ರೇಕ್:

ಕೆಟ್ಟ ಚಟುವಟಿಕೆಗೆ ಬ್ರೇಕ್:

ಬೈಟ್ ಡ್ಯಾನ್ಸ್ ಮಾಲೀಕತ್ವದ ಟಿಕ್ ಟಾಕ್ ವಿಶ್ವದಲ್ಲೇ ಮೌಲ್ಯಯುತವಾಗಿರುವ ಆರಂಭಿಕ ಆನ್ಲೈನ್ ಸ್ಟೇಷನ್, ಆನ್ ಲೈನ್ ಸುರಕ್ಷತೆಯನ್ನು ಉತ್ತೇಜಿಸಲು ಸೈಬರ್ ಪೀಸ್ ಫೌಂಡೇಷನ್ ನ ಸಹಯೋಗದೊಂದಿಗೆ ಆನ್ ಲೈನ್ ಪ್ರಚಾರವನ್ನು ಪ್ರಾರಂಭಿಸಿತು.

ಕೆಲವು ಅಪಾಯಕಾರಿ ವೀಡಿಯೋಗಳನ್ನು ಮಾಡುವುದು, ದ್ವೇಷದ ಭಾಷಣ , ಲೈಂಗಿಕ ದೌರ್ಜನ್ಯ ಸೇರಿದಂತೆ ಇತರೆ ಕೆಲವು ವಿಚಾರಗಳ ಬಗ್ಗೆ ಟಿಕ್ ಟಾಕ್ ನಲ್ಲಿ ವರದಿ ಮಾಡಲು ಕೆಲವು ಪ್ರಸಿದ್ಧ ವ್ಯಕ್ತಿಗಳ ಕಡೆಗೆ ಇದು ತಿರುಗಿದೆ.

ಸರ್ಕಾರದ ಮಾತುಕತೆ:

ಸರ್ಕಾರದ ಮಾತುಕತೆ:

ಟಿಕ್ ಟಾಕ್, ಬಿಗೋ ಲೈವ್ ಸೇರಿದಂತೆ ಕೆಲವು ಚೀನಾದ ವೀಡಿಯೋ ಆಪ್ ಗಳ ಮಕ್ಕಳ ದೌರ್ಜನ್ಯಕ್ಕೆ ಕಾರಣವಾಗುತ್ತಿದ್ದು ಅವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲವು ಗೌಪ್ಯತೆಯ ನಿಯಮಗಳು ಸೇರಿದಂತೆ ಹಲವು ದಿಟ್ಟ ಕ್ರಮಗಳ ಜಾರಿಗೆ ಸರ್ಕಾರ ಮಾತುಕತೆ ಮಾಡಿದೆ ಮತ್ತು ಆ ನಿಟ್ಟಿನಲ್ಲಿ ಆಪ್ ಗಳು ಇದೀಗ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಿದೆ.

ಮಾರ್ಗದರ್ಶಿ ಸೂತ್ರಗಳು:

ಮಾರ್ಗದರ್ಶಿ ಸೂತ್ರಗಳು:

ಆಪ್ ನಲ್ಲಿ ಧನಾತ್ಮಕ ವಾತಾವರಣವನ್ನು ಸೃಷ್ಟಿಸುವುದಕ್ಕೆ ಟಿಕ್ ಟಾಕ್ ಇದೀಗ ಮುಂದಾಗುತ್ತಿದೆ ಮತ್ತು ಕ್ರಿಯೇಟಿವಿಟಿ ಮತ್ತು ಟ್ಯಾಲೆಂಟ್ ಗೆ ಅವಕಾಶ ನೀಡಲು ಇದು ಬದ್ಧವಾಗಿದೆ. ನಮ್ಮ ಸಮುದಾಯದ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿರುವ ಸೂತ್ರಗಳನ್ನು ಅನುಮೋದಿಸುವುದಿಲ್ಲ ಪಬ್ಲಿಕ್ ಪಾಲಿಸಿ ಡೈರೆಕ್ಟರ್ ಆಗಿರುವ ಶರ್ಮಾ ತಿಳಿಸಿದ್ದಾರೆ.

ಫೀಚರ್ ಗಳು:

ಫೀಚರ್ ಗಳು:

ಟಿಕ್ ಟಾಕ್ ನಲ್ಲಿ ಬಳಕೆದಾರರು ಶಾರ್ಟ್ ವೀಡಿಯೋಗಳನ್ನು ಕ್ರಿಯೇಟ್ ಮಾಡಬಹುದು ಮತ್ತು ಲಿಪ್ ಸಿಂಕ್ ಮಾಡುವುದು, ಡ್ಯಾನ್ಸಿಂಗ್, ಆಕ್ಟಿಂಗ್ , ಶಾರ್ಟ್ ಸ್ಕಿಟ್ ಗಳನ್ನು ಮಾಡಬಹುದು. ಅಷ್ಟೇ ಅಲ್ಲ ಲೈವ್ ಸ್ಟ್ರೀಮಿಂಗ್ ಫೀಚರ್ ಕೂಡ ಲಭ್ಯವಿದೆ. ಹ್ಯಾಷ್ ಟ್ಯಾಕ್, ಫಾಲೋವರ್ಸ್ ಮತ್ತು ಕಮೆಂಟ್ ಇತ್ಯಾದಿ ಸಾಮಾಜಿಕ ಆಪ್ ಗಳಲ್ಲಿರುವ ಫೀಚರ್ ಗಳು ಲಭ್ಯವಿದೆ.

ಭಾರತೀಯ ಮಾರುಕಟ್ಟೆ:

ಭಾರತೀಯ ಮಾರುಕಟ್ಟೆ:

ಸಿಟಿಜನ್ ಡಾಟಾ ತಿಳಿಸುವಂತೆ ಆಪ್ ಗಳ ವಿಚಾರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅಮೇರಿಕಾ ಮತ್ತ ಚೀನಾ ಆಪ್ ಗಳು ಸ್ಪರ್ಧೆಯಲ್ಲಿರುತ್ತದೆ. ಶೇರ್ ಚಾಟ್. ಹೈಕ್ ಮತ್ತು ಜಿಯೋ ಚಾಟ್ ಸೇರಿದಂತೆ ಹಲವು ಆಪ್ ಗಳು ಭಾರತೀಯ ಸಾಮಾಜಿಕ ಮೀಡಿಯಾದಲ್ಲಿ ನಿಕಟ ಸ್ಪರ್ಧೆಯಲ್ಲಿರುತ್ತದೆ. ಹೆಚ್ಚಿನ ಆಪ್ ಗಳು ಭಾರತೀಯ ಭಾಷೆಗಳಿಗೆ ಅಂದರೆ ಹಿಂದಿ, ತಮಿಳು, ತೆಲುಗು, ಗುಜರಾತಿ, ಮರಾಠಿ ಇತ್ಯಾದಿ ಭಾಷೆಗಳಿಗೆ ಬೆಂಬಲ ನೀಡುತ್ತದೆ. ಕಳೆದೊಂದು ವರ್ಷದಲ್ಲಿ ಐದು ಪಟ್ಟು ಹೆಚ್ಚು ಪ್ರಸಿದ್ಧತೆಯನ್ನು ಟಿಕ್ ಟಾಕ್ ಆಪ್ ಹೆಚ್ಚಿಸಿಕೊಂಡಿದೆ.

ಒಟ್ಟಾರೆ ಲೆಕ್ಕಾಚಾರ:

ಅದರಲ್ಲಿ ಚೀನಾಕ್ಕಿಂತ ಹೊರದೇಶಗಳಲ್ಲಿ ಇದರ ಪ್ರಸಿದ್ಧತೆ ಹೆಚ್ಚಾಗಿದೆ. ಭಾರತವು ಅದರ ಕೇಂದ್ರಬಿಂದುವೆಂದೇ ಹೇಳಬಹುದು. 2017 ರಿಂದ 2018 ರ ವರೆಗೆ ಭಾರತದಲ್ಲಿ ಶೇಕಡಾ 27 ರಷ್ಟು ಟಿಕ್ ಟಾಕ್ ಇನ್ಸ್ಟಾಲೇಷನ್ ನಡೆದಿದೆ. ಅಂದರೆ ಈ ಸಂದರ್ಬದಲ್ಲಿ ಒಟ್ಟಾರೆ ಶೇಕಡಾ 25 ರಷ್ಟು ಡೌನ್ ಲೋಡ್ ನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ಭಾರತ ವಹಿಸಿದೆ.ಅಂದರೆ 1.3 ಮಿಲಿಯನ್ ನಷ್ಟಿದ್ದ ಡೌನ್ ಲೋಡ್ ಕಳೆದೊಂದು ವರ್ಷದಲ್ಲಿ 32.3 ಮಿಲಿಯನ್ ನಷ್ಟು ಅಧಿಕಗೊಂಡಿದೆ.

Best Mobiles in India

Read more about:
English summary
TikTok makes move to take bad content by the horns

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X