Just In
- 12 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 13 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 14 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 16 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Movies
Chaitra Rai: 'ರಾಧಾ ಕಲ್ಯಾಣ'ದ ಚೈತ್ರಾ ರೈ ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದೇಕೆ?
- Sports
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್ ಸ್ಟೋಕ್ಸ್ ಟೀಕೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತ ಸರ್ಕಾರಕ್ಕೆ ತಲೆಬಾಗಿದ 'ಟಿಕ್‌ಟಾಕ್'!
ಭಾರತದ ಸರ್ಕಾರದ ನಿಷೇಧದ ತೂಗುಗತ್ತಿಯಿಂದ ಪಾರಾಗುವ ಸಲುವಾಗಿ, ಭಾರತದಲ್ಲೇ ತನ್ನ ದತ್ತಾಂಶ ಸಂಗ್ರಹ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ 'ಟಿಕ್‌ಟಾಕ್' ಮತ್ತು 'ಹೆಲೊ' ಆಪ್ ಒಡೆತನದ 'ಬೈಟ್‌ಡ್ಯಾನ್ಸ್' ಸಂಸ್ಥೆಯು ಗಂಭೀರ ಚಿಂತನೆ ನಡೆಸಿವೆ ಎನ್ನಲಾಗಿದೆ. ಬಳಕೆದಾರರ ದತ್ತಾಂಶಗಳನ್ನು ಕದಿಯುತ್ತಿರುವ ಗಂಭೀರ ಆರೋಪಕ್ಕೆ ತುತ್ತಾಗಿರುವ ಚೀನಾ ಮೂಲದ ಕಂಪೆನಿ ಇದೀಗ ತಾನು ಭಾರತೀಯರಿಗೆ ಮತ್ತು ಭಾರತ ಸರ್ಕಾರಕ್ಕೆ ನಂಬಿಕಸ್ಥ ಎಂಬುದನ್ನು ತೋರಿಸಲು ಮುಂದಾಗಿದೆ.

ಹೌದು, ದೇಶದ್ರೋಹಿ ಚಟುವಟಿಕೆಗಳಿಗೆ ಟಿಕ್‌ಟಾಕ್ ಹಾಗೂ ಹೆಲೋ ಆಪ್‌ಗಳನ್ನು ಬಳಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಎರಡೂ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿತ್ತು. ಸ್ವದೇಶಿ ಜಾಗರಣ ಮಂಚ್ ಇತ್ತೀಚೆಗೆ ಈ ಬಗ್ಗೆ ದೂರು ನೀಡಿದ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೋಟಿಸ್ ಜಾರಿ ಮಾಡಿ, ದೇಶದ್ರೋಹಿ ಚಟುವಟಿಕೆ ಹಾಗೂ ದತ್ತಾಂಶ ವರ್ಗಾವಣೆ, ಸುಳ್ಳು ಸುದ್ದಿ, ಮತ್ತಿತರೆ ವಿಚಾರಗಳ ಸಂಬಂಧ 21 ಪ್ರಶ್ನೆಗಳನ್ನೂ ಕೇಳಿತ್ತು.
ಸಂಬಂಧ 21 ಪ್ರಶ್ನೆಗಳಲಗಲಿ ಮುಖ್ಯವಾಗಿ ದೇಶ ದ್ರೋಹಿ ಚಟುವಟಿಕೆಗಳ ಕುರಿತ ಆರೋಪಗಳಿಗೆ ಉತ್ತರಿಸುವಂತೆ ಹಾಗೂ ಭಾರತೀಯ ಡೇಟಾಗಳನ್ನು ವಿದೇಶಕ್ಕೆ ಅಥವಾ ಬೇರಾವುದೇ ಖಾಸಗಿ ಕಂಪನಿಗೆ ವರ್ಗಾವಣೆ ಅಥವಾ ಮಾರಾಟ ಮಾಡದಿರುವಂತೆ ಸರ್ಕಾರ ಸೂಚಿಸಿ 'ಟಿಕ್‌ಟಾಕ್' ಮತ್ತು 'ಹೆಲೊ' ಆಪ್‌ಗಳಿಗೆ ಎಚ್ಚರಿಕೆ ನೀಡಿತ್ತು. ಹಾಗಾಗಿ, ಭಾರತೀಯ ಕಾನೂನುಗಳನ್ನು ಗೌರವಿಸುವ ನಿಟ್ಟಿನಲ್ಲಿ, ಭಾರತದಲ್ಲೇ ದತ್ತಾಂಶ ಕೇಂದ್ರ ಸ್ಥಾಪನೆ ಬಗ್ಗೆ ಬೈಟ್‌ಡ್ಯಾನ್ಸ್ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ತಿಳಿದುಬಂದಿದೆ.

ಭಾರತವು ನಮ್ಮ ಅತ್ಯಂತ ಪ್ರಬಲ ಮಾರುಕಟ್ಟೆಯಾಗಿದ್ದು, ಸರ್ಕಾರದ ಜತೆ ತಾವು ಸಹಕರಿಸುವುದಾಗಿ ಟಿಕ್‌ಟಾಕ್ ಮತ್ತು ಹೆಲೊ ತಾಣಗಳು ಕಳೆದವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದವು. ಇದಾದ ನಂತರ ಇಂತಹ ಯೋಜನೆಗೆ ಕೈಹಾಕಲಾಗಿದೆ. ಹಾಗಾಗಿ, ಶೀಘ್ರವೇ ಭಾರತದಲ್ಲೇ 'ಬೈಟ್‌ಡ್ಯಾನ್ಸ್' ತನ್ನ ಸರ್ವರ್ ಸ್ಥಾಪಿಸಲಿದೆ. ಈ ಮೊದಲು ಬೈಟ್‌ಡ್ಯಾನ್ಸ್ ಸಂಸ್ಥೆಯು, ಭಾರತೀಯ ಗ್ರಾಹಕರ ದತ್ತಾಂಶಗಳನ್ನು ಅಮೆರಿಕ ಮತ್ತು ಸಿಂಗಾಪುರದಲ್ಲಿರುವ ತನ್ನ ಸರ್ವರ್‌ಗಳಲ್ಲಿ ಸಂಗ್ರಹಿಸಿಡುತ್ತಿತ್ತು.
ಟಿಕ್‌ಟಾಕ್‌ಗೆ ಭಾರತದಲ್ಲಿ 20 ಕೋಟಿ ಸೇರಿ ವಿಶ್ವದಾದ್ಯಂತ 70 ಕೋಟಿ ಸಕ್ರಿಯ ಬಳಕೆದಾರರಿದ್ದಾರೆ. ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಟಿಕ್‌ಟಾಕ್ ಅತ್ಯಂತ ವೇಗವಾಗಿ ಬೆಳವಣಿಗೆ ಕಂಡಿದೆ. ಫೇಸ್‌ಬುಕ್ ಭಾರತಕ್ಕೆ ಕಾಲಿಟ್ಟ13 ವರ್ಷಗಳಲ್ಲಿ 30 ಕೋಟಿ ಗ್ರಾಹಕರನ್ನು ಪಡೆದಿದ್ದರೆ, ಟಿಕ್‌ಟಾಕ್ ಕೇವಲ ಒಂದೇ ವರ್ಷದಲ್ಲಿ 20 ಕೋಟಿ ಗ್ರಾಹಕರನ್ನು ಸೆಳೆದುಕೊಂಡಿದೆ. ಹಾಗಾಗಿಯೇ, ಭಾರತದಂತ ದೇಶದಲ್ಲಿ ತನ್ನ ಆಪ್ ಸದಾ ಉಳಿಯಬೇಕು ಎಂದು ಟಿಕ್‌ಟಾಕ್ ಒಡೆತನದ ಬೈಟ್‌ಡ್ಯಾನ್ಸ್ ಈ ನಿರ್ಧಾರಕ್ಕೆ ಬಂದಿದೆ ಎನ್ನಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470