ಚೀನಾದೊಂದಿಗೆ ಡೇಟಾ ಶೇರ್?..ತರೂರ್ ಆರೋಪಕ್ಕೆ 'ಟಿಕ್ ಟಾಕ್' ಪ್ರತಿಕ್ರಿಯೆ!

|

ಚೀನಾ ಸರ್ಕಾರದೊಂದಿಗೆ 'ಟಿಕ್‌ಟಾಕ್' ರಹಸ್ಯವಾಗಿ ದತ್ತಾಂಶಗಳನ್ನು ಹಂಚಿಕೊಳ್ಳುತ್ತಿದೆ ಎಂದು ಸಂಸದ 'ಶಶಿ ತರೂರ್' ಆರೋಪಿಸಿದ ಒಂದು ದಿನದ ನಂತರ ಟಿಕ್ ಟಾಕ್ ಸಂಸ್ಥೆ ಪ್ರತಿಕ್ರಿಯಿಸಿದೆ. ವಿಡಿಯೋ ನೆಟ್ವರ್ಕಿಂಗ್ ಆಪ್ ಟಿಕ್‌ ಟಾಕ್ ಅಕ್ರಮವಾಗಿ ದತ್ತಾಂಶವನ್ನು ಸಂಗ್ರಹಿಸಿ ಚೀನಾಕ್ಕೆ ಕಳುಹಿಸುತ್ತಿದೆ ಎಂಬ ತರೂರ್ ಆರೋಪವನ್ನು ಟಿಕ್‌ಟಾಕ್ ನಿರಾಕರಿಸಿದೆ.

ಚೀನಾದೊಂದಿಗೆ ಡೇಟಾ ಶೇರ್?..ತರೂರ್ ಆರೋಪಕ್ಕೆ 'ಟಿಕ್ ಟಾಕ್' ಪ್ರತಿಕ್ರಿಯೆ!

ಹೌದು, ಚೀನಾ ಸರ್ಕಾರದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವ ಟಿಕ್‌ಟಾಕ್, ನಮ್ಮ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯು ನಮ್ಮ ಮೊದಲ ಆಯ್ಕೆಯಾಗಿದೆ. ನಾವು ಕಾರ್ಯನಿರ್ವಹಿಸುವ ಮಾರುಕಟ್ಟೆಗಳಲ್ಲಿ ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ನಾವು ಪಾಲಿಸುತ್ತೇವೆ ಎಂದು ಹೇಳುವ ಮೂಲಕ ತನ್ನ ಮೇಲಿನ ಆರೋಪವನ್ನು ಅಲ್ಲಗಳೆದಿದೆ.

ಟಿಕ್‌ಟಾಕ್ 'ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಲ್ಲಿ ಕಾರ್ಯನಿರ್ವಹಿಸುವುದಿಲ್ಲ' ಮತ್ತು ಚೀನಾ ಸರ್ಕಾರವು ಟಿಕ್‌ಟಾಕ್ ಬಳಕೆದಾರರ ಡೇಟಾಗೆ ಪ್ರವೇಶವನ್ನು ಹೊಂದಿಲ್ಲ ಅಥವಾ ಚೀನಾ ಟೆಲಿಕಾಂನೊಂದಿಗೆ ಅಸ್ತಿತ್ವದಲ್ಲಿರುವ ಯಾವುದೇ ಸಹಭಾಗಿತ್ವವನ್ನು ಹೊಂದಿಲ್ಲ ಎಂದು ಹೇಳುವ ಮೂಲಕ ತನ್ನ ಕಾರ್ಯನಿರ್ವಹಣೆಯ ಬಗ್ಗೆಯೂ ಸಹ ಮಾಹಿತಿ ನೀಡಿ ಗಮನಸೆಳೆದಿದೆ.

ಚೀನಾದೊಂದಿಗೆ ಡೇಟಾ ಶೇರ್?..ತರೂರ್ ಆರೋಪಕ್ಕೆ 'ಟಿಕ್ ಟಾಕ್' ಪ್ರತಿಕ್ರಿಯೆ!

ಶಶಿ ತರೂರ್ ಅವರ ಆರೋಪಗಳಿಗೆ ವಿರುದ್ಧವಾಗಿ,' ನಾವು ಎಂದಿಗೂ ಚೀನಾಕ್ಕೆ ಭಾರತೀಯ ಬಳಕೆದಾರರ ಡೇಟಾವನ್ನು ಕಳುಹಿಸಿಲ್ಲ ಮತ್ತು ಕಳುಹಿಸುವುದಿಲ್ಲ' ಎಂದು ಟಿಕ್ ಟಾಕ್ ಹೇಳಿದೆ. ನಾವು ಭಾರತೀಯ ಬಳಕೆದಾರರ ಡೇಟಾವನ್ನು ಯುಎಸ್ ಮತ್ತು ಸಿಂಗಾಪುರದಲ್ಲಿ ಉದ್ಯಮದ ಪ್ರಮುಖ ತೃತೀಯ ಸುರಕ್ಷತಾ ದತ್ತಾಂಶ ಕೇಂದ್ರಗಳಲ್ಲಿ ಸಂಗ್ರಹಿಸಿದ್ದೇವೆ ಎಂದು ತಿಳಿಸಿದೆ.

ಕಿರಿಕಿರಿಯನ್ನು ದೂರ ಮಾಡಿದ ವಾಟ್ಸ್‌ಆಪ್‌ನ ಹೊಸ 5 ವೈಶಿಷ್ಟ್ಯಗಳು!ಕಿರಿಕಿರಿಯನ್ನು ದೂರ ಮಾಡಿದ ವಾಟ್ಸ್‌ಆಪ್‌ನ ಹೊಸ 5 ವೈಶಿಷ್ಟ್ಯಗಳು!

ಚೀನಾ ಸರ್ಕಾರವು ಟಿಕ್‌ಟಾಕ್‌ನಿಂದ ಸಂಪೂರ್ಣ ಡೇಟಾವನ್ನು ಸ್ವೀಕರಿಸಿದೆ ಎಂದು ಶಶಿ ತರೂರ್ ಅವರು ಲೋಕಸಭೆಯ ಜ್ದಿರೋ ಅವರ್ ಸಂದರ್ಭದಲ್ಲಿ ಹೇಳಿದ್ದರು. ಯುಎಸ್‌ನಲ್ಲಿ ಫೆಡರಲ್ ನಿಯಂತ್ರಕರು ಇತ್ತೀಚೆಗೆ ಮಕ್ಕಳ ಮೇಲೆ ಕಾನೂನುಬಾಹಿರವಾಗಿ ಡೇಟಾವನ್ನು ಸಂಗ್ರಹಿಸಿದ್ದಕ್ಕಾಗಿ ಟಿಕ್‌ಟಾಕ್‌ಗೆ 7 5.7 ಮಿಲಿಯನ್ ದಂಡವನ್ನು ವಿಧಿಸಿರುವ ಬಗ್ಗೆ ತಿಳಿಸಿದ್ದರು.

Best Mobiles in India

English summary
TikTok also claimed that contrary to Tharoor’s allegations, it has never sent Indian user-data to China.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X