Just In
Don't Miss
- Sports
ಐಪಿಎಲ್ 2021: ಮತ್ತೆ ಕಣಕ್ಕಿಳಿಯಲು ವೇಗಿ ಎಸ್ ಶ್ರೀಶಾಂತ್ ಸಜ್ಜು
- News
ನೇತಾಜಿ 125ನೇ ಜನ್ಮದಿನ; ಪರಾಕ್ರಮ ಸ್ಮರಿಸಿ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
- Finance
ರಿಲಯನ್ಸ್ ಜಿಯೋ ತ್ರೈಮಾಸಿಕ ನಿವ್ವಳ ಲಾಭ ಶೇ. 15.5ರಷ್ಟು ಏರಿಕೆ
- Movies
ಅಕ್ಷಯ್ ಕುಮಾರ್ ನಟನೆಯ 'ಬಚ್ಚನ್ ಪಾಂಡೆ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್
- Automobiles
ಟಾಟಾ ಬಹುನೀರಿಕ್ಷಿತ ಆಲ್ಟ್ರೊಜ್ ಐ-ಟರ್ಬೊ ವರ್ಷನ್ ಬಿಡುಗಡೆ
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟಿಕ್‌ಟಾಕ್ ಆಪ್ ಸೇಫ್ ಇದೆಯಾ?..ಖಂಡಿತ ಇಲ್ಲ!
ಜಾಗತಿಕವಾಗಿ ಜನಪ್ರಿಯವಾಗಿರುವ ಸೊಶೀಯಲ್ ಮೀಡಿಯಾ ಆಪ್ ಟಿಕ್‌ಟಾಕ್ ಅನ್ನು ಕೂಡ ಸುಲಭವಾಗಿ ಹ್ಯಾಕ್ ಮಾಡಬಹುದು ಅನ್ನೊ ಶಾಕಿಂಗ್ ಸತ್ಯ ಬಹಿರಂಗವಾಗಿದೆ. ಪ್ರಪಂಚದಾದ್ಯಂತ ಒಂದು ಶತಕೋಟಿ ಬಳಕೆದಾರರನ್ನು ಹೊಂದಿರುವ, ಅದರಲ್ಲೂ ಭಾರತದಲ್ಲಿಯೇ ಸುಮಾರು 300 ಮಿಲಿಯನ್ ಬಳಕೆದಾರರನ್ನ ಹೊಂದಿರುವ ಟಿಕ್‌ಟಾಕ್ ಆಪ್ ಕೂಡ ಹ್ಯಾಕರ್ಸ್‌ಗಳ ದಾಳಿಗೆ ಸುಲಭವಾಗಿ ತುತ್ತಾಗಲಿದೆಯಾ.? ಯೆಸ್ ಇಸ್ರೆಲ್ ದೇಶದ ಸೈಬರ್ ಸೆಕ್ಯುರಿಟಿ ಸಂಸ್ಥೆ ಚೆಕ್ ಪಾಯಿಂಟ್ ನ ಸಂಶೋಧನೆಯಲ್ಲಿ ಟಿಕ್‌ಟಾಕ್ ನ ದೋಷಗಳು ಪತ್ತೆಯಾಗಿದೆ.

ಹೌದು, ಟಿಕ್‌ಟಾಕ್ ಆಪ್ ಬಾರಿ ಇಡೀ ವಿಶ್ವದಲ್ಲಿಯೇ ಜನಪ್ರಿಯತೆ ಪಡೆದುಕೊಂಡಿದೆ. 150 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ, ಜಾಗತಿಕವಾಗಿ 75 ಭಾಷೆಗಳಲ್ಲಿ ಬಳಸಲಾಗುತ್ತಿದ್ದು, 1 ಬಿಲಿಯನ್ ಬಳಕೆದಾರರನ್ನು ಹೊಂದಿರುವ ಟಿಕ್‌ಟಾಕ್ ಹೆಚ್ಚು ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಸದ್ಯ ಚೀನಾ ಮೂಲದ ಸಂಸ್ಥೆಯಾದ ಟಿಕ್ ಟಾಕ್ 30ಸೆಕೆಂಡ್‌ನ ವಿಡಿಯೋ ಶೇರ್ ಮಾಡುವ ಅವಕಾಶವನ್ನ ನೀಡಿದೆ.

ಹಿರಿಯರು ಕಿರಿಯರು ಎನ್ನದೇ ಎಲ್ಲ ವಯೋಮಾನದವರನ್ನು ಟಿಕ್‌ಟಾಕ್ ಆಪ್ ಸೆಳೆದಿದೆ. ವಿಭಿನ್ನ ಮಾದರಿಯ ನಾನಾ ಹವಾಭಾವಗಳನ್ನ ವ್ಯಕ್ತಪಡಿಸುವ ವಿಡಿಯೋಗಳನ್ನ ಬಳಕೆದಾರರು ಟಿಕ್‌ಟಾಕ್‌ನಲ್ಲಿ ಶೇರ್ ಮಾಡುತ್ತಾರೆ. ಆದರೆ ಈ ವಿಡಿಯೋಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಅನ್ನೊ ಪ್ರಶ್ನೆ ಇದೀಗ ಎದುರಾಗಿದೆ. ಏಕೆಂದರೆ ಟಿಕ್‌ಟಾಕ್ ಅನ್ನು ಕೂಡ ಹ್ಯಾಕ್ ಮಾಡಬಹುದು ಅನ್ನುತ್ತೆ ಇಸ್ರೆಲ್ ಸಂಸ್ಥೆ ನಡೆಸಿರುವ ಸಂಶೋದನೆ.

ಇಸ್ರೆಲ್‌ನ ಚೆಕ್ ಪಾಯಿಂಟ್ ಸಂಸ್ಥೆ ಹೇಳುವ ಪ್ರಕಾರ ಟಿಕ್‌ಟಾಕ್ ಆಪ್‌ನಲ್ಲಿ ಸಾಕಷ್ಟು ಭದ್ರತಾ ದೋಷವಿದ್ದು, ಅದರಲ್ಲೂ ಇಮೇಲ್ ವಿಳಾಸಗಳು ಮತ್ತು ಸೂಕ್ಷ್ಮ ವೀಡಿಯೊಗಳ ವೈಯಕ್ತಿಕ ಮಾಹಿತಿಯನ್ನು ಕದಿಯಲು ಹ್ಯಾಕರ್‌ಗಳಿಗೆ ಸುಲಭ ಅವಕಾಶ ಸಿಗಲಿದೆ ಎಂದು ಹೇಳಿದೆ. ಅದರಲ್ಲೂ ಹದಿಹರೆಯದವರು ಮತ್ತು ಮಕ್ಕಳು ಹಾಗೂ ಪ್ರೀತಿ ಪಾತ್ರರ ಖಾಸಗಿ ವೀಡಿಯೊಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಅಪ್ಲಿಕೇಶನ್‌ಗಳು ಹೆಚ್ಚು ಜನಪ್ರಿಯಗೊಂಡಷ್ಟು, ಹ್ಯಾಕರ್‌ಗಳು ಟಾರ್ಗೆಟ್ ಮಾಡುತ್ತಾರೆ, ಇದಕ್ಕೆ ಟಿಕ್‌ಟಾಕ್ ಕೂಡ ಹೊರತಾಗಿಲ್ಲ ಅನ್ನೊ ,ಮಾತನ್ನ ಚೆಕ್ ಪಾಯಿಂಟ್‌ನ ಸಂಸ್ಥೆ ನಡೆಸಿದ ಸಂಶೋಧನೆಯ ಮುಖ್ಯಸ್ಥ ಓಡೆಡ್ ವನುನು(Oded Vanunu) ಹೇಳಿದ್ದಾರೆ.

ಇನ್ನು ಚೆಕ್‌ಪಾಯಿಂಟ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್ ಪ್ರಕಾರ ಟಿಕ್‌ಟಾಕ್ ಆಪ್ಲಿಕೇಶನ್ ಮೇಲೆ ಹ್ಯಾಕರ್‌ಗಳು ದುರುದ್ದೇಶಪೂರಿತ ಲಿಂಕ್ ಅನ್ನ ಬಳಕೆದಾರರಿಗೆ ಕಳುಹಿಸಬಹುದಾಗಿದೆ. ಈ ಲಿಂಕ್ ಮೇಲೆ ಬಳಕೆದಾರರು ಕ್ಲಿಕ್ ಮಾಡಿದರೆ ಸಾಕು ಬಳಕೆದಾರರ ಖಾತೆಯ ಮೇಲಿನ ಸಂಪೂರ್ಣ ಹಿಡಿತವನ್ನ ಹ್ಯಾಕರ್‌ಗಳು ಸುಲಭವಾಗಿ ಮಾಡಬಹುದಾಗಿದೆ. ಆ ಮೂಲಕ ಬಳಕೆದಾರನ ಖಾತೆಯಿಂದ ಅನಧಿಕೃತ ವಿಡಿಯೋಗಳನ್ನ ಶೇರ್ ಮಾಡುವ, ಗೌಪ್ಯ ಮಾಹಿತಿಯನ್ನ ಕದಿಯುವ, ಖಾಸಗಿ ವಿಡಿಯೋಗಳನ್ನ ಬಹಿರಂಗ ಪಡಿಸುವ ಸಾಧ್ಯತೆ ಕಂಡುಬಂದಿದೆ.

ಈಗಾಗ್ಲೆ ಸೈಬರ್ ಹ್ಯಾಕರ್ಸ್‌ಗಳು ಯಾವಾಗಲೂ ಸೊಶೀಯಲ್ ಮೀಡಿಯಾ ಆಪ್ಲಿಕೇಶನ್‌ಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಯಾಕಂದ್ರೆ ಸೊಶೀಯಲ್ ಮೀಡಿಯಾ ಆಪ್ಲಿಕೇಶನ್‌ಗಳಲ್ಲಿ ಬಳಕೆದಾರರ ಖಾಸಗಿ ಮಾಹಿತಿ ಲಭ್ಯವಾಗುತ್ತೆ. ಇದನ್ನೆ ಬಂಡವಾಳ ಮಾಡಿಕೊಂಡಿರೋ ಹ್ಯಾಕರ್ಸ್‌ಗಳು ಮಾಹಿತಿಯನ್ನ ಹ್ಯಾಕ್ ಮಾಡಿ ಬಳಕೆದಾರರಿಂದ ಹಣಕ್ಕಾಗಿ ಒತ್ತಾಯಿಸುವುದು, ಬೆದರಿಕೆ ಹಾಕೋದು ಮಾಮೂಲಿ ಆಗಿ ಬಿಟ್ಟಿದೆ.

ಇನ್ನು ಚೆಕ್‌ಪಾಯಿಂಟ್ ನೀಡಿರುವ ಸಂಶೋದನೆ ವರದಿಯನ್ನ ಟಿಕ್‌ಟಾಕ್ ಸ್ವಾಗತಿಸಿದ್ದು, ಟಿಕ್‌ಟಾಕ್ ಬಳಕೆದಾರರ ಡೇಟಾವನ್ನು ರಕ್ಷಿಸಲು ಬದ್ಧವಾಗಿದೆ. ಸದ್ಯ ಕಂಡುಬಂದಿರುವ ದೋಷಗಳನ್ನು ಸರಿಪಡಿಸಿಕೊಂಡು ಬಳಕೆದಾರರ ಮಾಹಿತಿ ರಕ್ಷಣೆಗೆ ಇನ್ನಷ್ಟು ಹೆಚ್ಚಿನ ಭದ್ರತೆಯನ್ನ ನೀಡಲಾಗುತ್ತೆ ಎಂದು ಟಿಕ್‌ಟಾಕ್ ಭದ್ರತಾ ತಂಡದ ಮುಖ್ಯಸ್ಥ Luke Deshotels ಹೇಳಿದ್ದಾರೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190