Home
ಸುದ್ದಿಜಾಲ

ದೊಡ್ಡ ಘೋಷಣೆ! ಫೆ.19ಕ್ಕೆ ಅಗ್ಗದ iPhone SE 4 ಲಾಂಚ್; ಬೆಲೆ, ವಿಶೇಷತೆಗಳೇನು?

ಐಫೋನ್ ಪ್ರಿಯರ ಕಾಯುವಿಕೆ ಮುಗಿಯುವ ಸಮಯ ಬಂದಿದೆ. ಆಪಲ್‌ ಇಂದು ಪ್ರಮುಖ ಮಾಹಿತಿಯನ್ನು ಪ್ರಕಟಿಸಿದೆ. ಇದೇ ಫೆಬ್ರವರಿ 19 ರಂದು ಅಗ್ಗದ ಆಪಲ್ ಮೊಬೈಲ್ ಬಿಡುಗಡೆಯಾಗಲಿದೆ. ಹೌದು, ಎಲ್ಲರೂ ಈ ವಾರ ಆಪಲ್ ತನ್ನ ಅಗ್ಗದ ಐಫೋನ್ SE 4 (iPhone SE 4) ಫೋನನ್ನು ಬಿಡುಗಡೆ ಮಾಡುತ್ತದೆ ಎಂದು ಕಾಯುತ್ತಿದ್ದರು. ಆದರೆ, ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಇದೀಗ, ಆಪಲ್ ಸಿಇಒ ಟಿಮ್ ಕುಕ್ ಅಧಿಕೃತ ಘೋಷಣೆ ಮಾಡಿದ್ದಾರೆ.ಈ ಹೊಸ ಐಫೋನ್ SE 4 ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೌದು, ಈ ಕಡಿಮೆ ಬಜೆಟ್ ಐಫೋನ್ SE 4 ಮೊಬೈಲ್‌ ಅನ್ನು ಇದೇ ಫೆಬ್ರವರಿ 19 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ಇದರ ಬೆಲೆ ಕಡಿಮೆಯಿರುತ್ತದೆ ಮತ್ತು ಇದು ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿರುತ್ತದೆ. 2022 ರಲ್ಲಿ ಐಫೋನ್ SE 3 ಅನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ, ಹೊಸ ಐಫೋನ್ ಹಲವು ಅಪ್ಡೇಟ್ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇದು ಐಫೋನ್ SE 3 ಫೋನಿಗೆ ಹೋಲಿಸಿದರೆ ದೊಡ್ಡ ಡಿಸ್ಪ್ಲೇ, ಹೆಚ್ಚು ಶಕ್ತಿಶಾಲಿ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿ ಹೊಂದಿರುತ್ತದೆ.

ದೊಡ್ಡ ಘೋಷಣೆ! ಫೆ.19ಕ್ಕೆ ಅಗ್ಗದ iPhone SE 4 ಲಾಂಚ್; ಬೆಲೆ, ವಿಶೇಷತೆಗಳೇನು?

ಐಫೋನ್ SE 4 ಬಿಡುಗಡೆ ವಿವರ

ಆಪಲ್ ಸಿಇಒ ಟಿಮ್ ಕುಕ್ ತಮ್ಮ ಎಕ್ಸ್‌ ಖಾತೆಯಲ್ಲಿ 'ಕುಟುಂಬದ ಹೊಸ ಸದಸ್ಯರನ್ನು ಭೇಟಿ ಮಾಡಲು ಸಿದ್ಧರಾಗಿ' ಎಂದು ಪೋಸ್ಟ್ ಮಾಡಿದ್ದಾರೆ. ಇಲ್ಲಿ ಯಾವುದೇ ಫೋನಿನ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಕುಟುಂಬಕ್ಕೆ ಸೇರುವ ಈ ಹೊಸ ಸದಸ್ಯ ಐಫೋನ್ SE 4 ಆಗಿರುವ ಸಾಧ್ಯತೆಯಿದೆ. ತಮ್ಮ ಪೋಸ್ಟ್‌ನಲ್ಲಿ ಆಪಲ್ ಸಿಇಒ ಹೊಸ ಐಫೋನ್ ಅನ್ನು ಫೆಬ್ರವರಿ 19 ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕಂಪನಿಯು ಫೆಬ್ರವರಿ 19 ರಂದು ಐಫೋನ್ SE 4 ಜೊತೆಗೆ ಹೊಸ ಪವರ್‌ಬೀಟ್ಸ್ ಪ್ರೊ 2 ಇಯರ್‌ಬಡ್‌ಗಳನ್ನು ಸಹ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಆಪಲ್ ಲಾಂಚ್ ಈವೆಂಟ್‌ನಲ್ಲಿ ಪರಿಚಯಿಸಲಾಗುವ ಉತ್ಪನ್ನಗಳ ಸಂಪೂರ್ಣ ವಿವರಗಳಿಗಾಗಿ, ಮುಂದಿನ ವಾರದವರೆಗೆ ಕಾಯಬೇಕಿದೆ.

ಐಫೋನ್ SE 4 ಬೆಲೆ

ಐಫೋನ್ SE 4 ಅಗ್ಗದ ಆಪಲ್ ಫೋನ್ ಆಗಿರುವುದು ಖಚಿತವಾಗಿದೆ. ಈ ಮೊಬೈಲ್‌ನ ಬೆಲೆ ಐಫೋನ್ 15 ಗಿಂತಲೂ ಕಡಿಮೆ ಇರಲಿದೆ. ವರದಿಯ ಪ್ರಕಾರ, ಈ ಫೋನನ್ನು 43,490 ರೂ.ಗೆ ($499) ಬಿಡುಗಡೆ ಮಾಡುವ ಸಾಧ್ಯತೆಯಿದೆ. ಭಾರತದಲ್ಲಿ ಐಫೋನ್ SE 4 ಅನ್ನು 50 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿ ಪರಿಚಯಿಸುವ ಸಾಧ್ಯತೆಯಿದೆ.

ಐಫೋನ್ SE 4 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಫೋನ್ SE 4 ಸ್ಮಾರ್ಟ್‌ಫೋನ್ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಕಾಂಪ್ಯಾಕ್ಟ್ ಐಫೋನ್ ಡಿಸ್ಪ್ಲೇಯನ್ನು OLED ಪ್ಯಾನೆಲ್‌ನಲ್ಲಿ ನಿರ್ಮಿಸಲಾಗಿದೆ. ಈ ಫೋನ್ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 460ppi ಪಿಕ್ಸೆಲ್ ಸಾಂದ್ರತೆಯನ್ನು ಸಪೋರ್ಟ್‌ ಮಾಡಲಿದೆ.

ದೊಡ್ಡ ಘೋಷಣೆ! ಫೆ.19ಕ್ಕೆ ಅಗ್ಗದ iPhone SE 4 ಲಾಂಚ್; ಬೆಲೆ, ವಿಶೇಷತೆಗಳೇನು?

ಪ್ರೊಸೆಸರ್ ಸಾಮರ್ಥ್ಯ

ಈ ಅಗ್ಗದ ಐಫೋನ್ SE 4 ಅನ್ನು ಬಯೋನಿಕ್ A18 ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ವಿಶೇಷವಾಗಿ ಐಫೋನ್ 16 ಬಯೋನಿಕ್ A18 ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಸರಾಗವಾಗಿ ಮತ್ತು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಐಫೋನ್ 16 ಸರಣಿಯಂತೆ, ಐಫೋನ್ SE 4 ಸಹ 8GB RAM ಅನ್ನು ಹೊಂದಿರುತ್ತದೆ. ಐಫೋನ್ SE 4 ಅನ್ನು ಆಪಲ್ ಇಂಟೆಲಿಜೆನ್ಸ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲಾಗುವುದು.

ಕ್ಯಾಮೆರಾ ಸೆಟಪ್

ಮುಂಬರುವ ಐಫೋನ್ SE 4 ಮೊಬೈಲ್ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರುವ ಸಾಧ್ಯತೆಯಿದೆ. ಇದು ಫ್ಲ್ಯಾಷ್‌ ಲೈಟ್ ಜೊತೆಗೆ ಬರುತ್ತದೆ. ಈ ಹೊಸ ಐಫೋನ್ SE 4 ಸ್ಮಾರ್ಟ್‌ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರುತ್ತದೆ.

Best Mobiles in India

English summary
Tim Cook teases Next Apple launch for February 19; iPhone SE 4 launch for next week
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+