ಭಾರತದಲ್ಲಿ ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ಲಾಂಚ್! ಬೆಲೆ 4,495 ರೂ.
ಜನಪ್ರಿಯ ವಾಚ್ ಕಂಪೆನಿ ಟೈಮೆಕ್ಸ್ ಕಂಪೆನಿ ಭಾರತದಲ್ಲಿ ತನ್ನ ಹೊಸ ಫಿಟ್ನೆಸ್ ಬ್ಯಾಂಡ್ ಅನ್ನು ಬಿಡುಗಡೆ ಮಾಡಿದೆ. ಈಗಾಗಲೇ ಹಲವು ಮಾದರಿಯ ವಾಚ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ವಲಯದಲ್ಲೂ ತನ್ನ ಜನಪ್ರಿಯತೆಯನ್ನ ಸ್ಥಾಪಿಸುವ ಕಾರ್ಯಕ್ಕೆ ಮುಂದಾಗಿದೆ. ಸದ್ಯ ಹೊಸದಾಗಿ ಪರಿಚಯಿಸಿರುವ ಫಿಟ್ನೆಸ್ ಬ್ಯಾಂಡ್ 2.4-ಸೆಂ.ಮೀ ಕಲರ್ ಫುಲ್-ಟಚ್ ಸ್ಕ್ರೀನ್ ಅನ್ನು ಹೊಂದಿದೆ. ಅಲ್ಲದೆ ಐದು ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ.

ಹೌದು, ಟೈಮೆಕ್ಸ್ ಕಂಪೆನಿ ತನ್ನ ಹೊಸ ಫಿಟ್ನೆಸ್ ಬ್ಯಾಂಡ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಆಕ್ಟಿವಿಟಿ ಟ್ರ್ಯಾಕಿಂಗ್, ಹಾರ್ಟ್‌ಬಿಟ್ ಮೇಲ್ವಿಚಾರಣೆಯಂತಹ ಪ್ರಮುಖ ಫೀಚರ್ಸ್‌ಗಳನ್ನ ಒಳಗೊಂಡಿದೆ. ಇನ್ನು ಫಿಟ್‌ನೆಸ್ ಬ್ಯಾಂಡ್ ರೋಸ್ ಗೋಲ್ಡ್ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಅಲ್ಲದೆ ಸ್ಟೇನ್‌ಲೆಸ್ ಸ್ಟೀಲ್ ಮೆಶ್ ಬ್ಯಾಂಡ್‌ನೊಂದಿಗೆ ಮತ್ತು ಕಪ್ಪು ಬಣ್ಣದಲ್ಲಿ ಸಿಲಿಕೋನ್ ಪಟ್ಟಿಯೊಂದಿಗೆ ಲಭ್ಯವಿದೆ. ಇದು ಮಿಶ್ರಲೋಹ ಕೇಸ್‌ನೊಂದಿಗೆ ಲಭ್ಯವಾಗಲಿದೆ. ಇನ್ನುಳಿದಂತೆ ಈ ಬ್ಯಾಂಡ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗುಣಮಟ್ಟದ ವಾಚ್‌ಗಳಿಗೆ ಪ್ರಸಿದ್ದಿಯಾಗಿರುವ ಟೈಮೆಕ್ಸ್ ತನ್ನ ಫಿಟ್‌ನೆಸ್ ಬ್ಯಾಂಡ್ ನಲ್ಲೂ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿದೆ. ಇದು ಕಂಪನಿಯ ಮೊದಲ ಫ್ಯಾಶನ್ ಫಿಟ್‌ನೆಸ್ ಬ್ಯಾಂಡ್ ಆಗಿದ್ದು, ಇದು ಯುನಿಸೆಕ್ಸ್ ಕೊಡುಗೆಯಾಗಿದೆ. ಇನ್ನು ಈ ಫಿಟ್ನೆಸ್ ಬ್ಯಾಂಡ್ 160x80 ಪಿಕ್ಸೆಲ್-ಸಾಂದ್ರತೆ ಹೊಂದಿರುವ 2.4-C.M ಕಲರ್ ಫುಲ್ ಸ್ಕ್ರೀನ್ ಅನ್ನು ಹೊಂದಿದೆ. ಇದು ಆಕ್ಟಿವಿಟಿ ಟ್ರ್ಯಾಕಿಂಗ್, ಮ್ಯೂಸಿಕ್ ಕಂಟ್ರೂಲ್ , ಹೃದಯ ಬಡಿತ ಮೇಲ್ವಿಚಾರಣೆ ಮತ್ತು ಅಧಿಸೂಚನೆಗಳ ಆಲರ್ಟ್ ಮಾಡುವಂತಹ ಫೀಚರ್ಸ್‌ಗಳನ್ನು ಹೊಂದಿದೆ.

ಇನ್ನು ಟೈಮೆಕ್ಸ್ ಕಂಪನಿಯ ಪ್ರಕಾರ, ಇದು 5 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ ಮತ್ತು 1.5 ಮೀಟರ್ ವರೆಗೆ ನೀರಿನ ನಿರೋಧಕವಾಗಿದೆ. ಈ ಬ್ಯಾಂಡ್ ಸ್ಪೋಟ್ಸ್ ಮಾದರಿಯ ಬ್ಯಾಂಡ್ ಆಗಿದೆ ಎನ್ನಲಾಗಿದೆ. ಆದರೂ ಇದು,ನಿರ್ದಿಷ್ಟ ಕ್ರೀಡಾ ವಿಧಾನಗಳು ಅಥವಾ ರಕ್ತ-ಆಮ್ಲಜನಕದ ಸೆನ್ಸಾರ್‌ನಂತಹ ಉನ್ನತ-ಮಟ್ಟದ ಗುಣಲಕ್ಷಣಗಳನ್ನು ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇನ್ನು ಈ ಬ್ಯಾಂಡ್ ತನ್ನ ವಿನ್ಯಾಸದಲ್ಲಿ ಆಪಲ್ ವಾಚ್‌ಳ ಮಾದರಿಯನ್ನು ಹೊಂದಿದ್ದು, ಯುವಜನತೆಯನ್ನು ಆಕರ್ಷಿಸಲಿದೆ.

ಸದ್ಯ ಟೈಮೆಕ್ಸ್ ಫಿಟ್‌ನೆಸ್ ಬ್ಯಾಂಡ್‌ನ ಬೆಲೆ ರೂ. ಭಾರತದಲ್ಲಿ 4,495 ರೂ. ಆಗಿದೆ. ಇದು ಟೈಮೆಕ್ಸ್ ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ಅಧಿಕೃತ ಚಿಲ್ಲರೆ ಪಾಲುದಾರರಲ್ಲಿ ಖರೀದಿಸಲು ಲಭ್ಯವಿರುತ್ತದೆ. ಇನ್ನು ಮೊದಲೇ ಹೇಳಿದಂತೆ, ಫಿಟ್‌ನೆಸ್ ಬ್ಯಾಂಡ್ ರೋಸ್ ಗೋಲ್ಡ್ ಮತ್ತು ಕಪ್ಪು ಬಣ್ಣಗಳಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಮೆಶ್ ಬ್ಯಾಂಡ್‌ನೊಂದಿಗೆ ಲಭ್ಯವಿದೆ, ಮತ್ತು ಸಿಲಿಕೋನ್ ಪಟ್ಟಿಯೊಂದಿಗೆ ಕಪ್ಪು ಬಣ್ಣದಲ್ಲಿ ಸಹ ಲಭ್ಯವಿದೆ.


Click it and Unblock the Notifications