ಟೈಮೆಕ್ಸ್ ಐರನ್ ಮ್ಯಾನ್ R300 GPS ಸ್ಮಾರ್ಟ್‌ವಾಚ್ ಬಿಡುಗಡೆ!
ಇತ್ತೀಚಿನ ದಿನಗಳಲ್ಲಿ ಟೆಕ್ ವಲಯದಲ್ಲಿ ಸ್ಮಾರ್ಟ್‌ವಾಚ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಫೀಟ್ನೆಸ್ ಆಧಾರಿತ ಈ ಸ್ಮಾರ್ಟ್ ಡಿವೈಸ್‌ಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಈಗಾಗ್ಲೆ ಹಲವು ಕಂಪೆನಿಗಳ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೂ ಗ್ರಾಹಕರು ಮಾತ್ರ ಬ್ರ್ಯಾಂಡ್ ಕಂಪೆನಿಗಳ ಸ್ಮಾರ್ಟ್‌ವಾಚ್‌ಗಳನ್ನೇ ಆಯ್ಕೆಮಾಡಿಕೊಳ್ಳುತ್ತಾರೆ. ಇದರಲ್ಲಿ ಟೈಮೆಕ್ಸ್ ಕಂಪೆನಿ ಕೂಡ ಒಂದಾಗಿದ್ದು. ಇದೀಗ ಹೊಸ ಮಾದರಿಯ ಸ್ಮಾರ್ಟ್‌ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಹೌದು, ಅಮೆರಿಕಾದ ಜನಪ್ರಿಯ ಸ್ಮಾರ್ಟ್‌ವಾಚ್ ತಯಾರಕ ಕಂಪೆನಿ ಟೈಮೆಕ್ಸ್ ತನ್ನ ಹೊಸ ಟೈಮೆಕ್ಸ್ ಐರನ್ ಮ್ಯಾನ್ R300 ಜಿಪಿಎಸ್ ಸ್ಮಾರ್ಟ್ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ 25 ದಿನಗಳವರೆಗೆ ಬೆಂಬಲಿಸುವ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ ಸತತ 20 ಗಂಟೆಗಳವರೆಗೆ ಜಿಪಿಎಸ್ ಅನ್ನು ಬಳಸಿದರು ಬ್ಯಾಟರಿ ತನ್ನ ಬ್ಯಾಕ್‌ಅಪ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ವಾಚ್‌ನ ವಿನ್ಯಾಸ
ಈ ಸ್ಮಾರ್ಟ್‌ವಾಚ್ ಸ್ಪೋರ್ಟ್ಸ ಮತ್ತು ಫಿಟ್ನೆಸ್ ಆಧಾರಿತ ಫೀಚರ್ಸ್‌ಗಳನ್ನ ಒಳಗೊಂಡಿದ್ದು, ಇದು 40.5mm ಅಗಲದ ಕೇಸ್, ಹಾಗೂ 24mm ಸ್ಟ್ರಾಪ್ ಅನ್ನು ಒಳಗೊಂಡಿದೆ. ಸದ್ಯ ಕಂಪೆನಿಯು ಈ ಸ್ಮಾರ್ಟ್‌ವಾಚ್‌ಗೆ ಸಂಬಂಧಪಟ್ಟಂತೆ ಇದು ಪರ್ಸನಲ್ ಟ್ರೈನರ್ ಎಂದು ವರ್ಣನೆ ಮಾಡಿದೆ. ಅಂದರೆ ಇದೊಂದು ಉತ್ತಮವಾದ ಸ್ಪೋರ್ಟ್ ಫೀಟ್ನೆಸ್ ಸ್ಮಾರ್ಟ್ ವಾಚ್ ಎಂದು ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್ ನಾವೆಲ್ ಡಿಸೈನ್ ಹೊಂದಿದ್ದು, ಥಿಕ್‌ನೆಸ್ ಹೊಂದಿರುವ ಬೆಜೆಲ್ ಮತ್ತು ಬಿಗ್ ಬಟನ್ಸ್ ಹೊಂದಿರುವ ಹೆಪ್ಟಗಾನ್ ಆಕಾರವನ್ನ ಹೊಂದಿದೆ.

ವಾಚ್‌ನ ವಿಶೇಷತೆ
ಇನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ವರ್ಕೌಟ್‌ಗಳನ್ನ ಮಾಡಲು ಮಾರ್ಗದರ್ಶಿ ನೀಡುವ ಅಪ್ಲಿಕೇಶನ್‌ಗಳು, ನಿರಂತರ ಹೃದಯ ಬಡಿತದ ಟ್ರ್ಯಾಕಿಂಗ್‌ಗಾಗಿ ಆಪ್ಟಿಕಲ್ ಸೆನ್ಸಾರ್ ಮತ್ತು ಇದು ವಾಟರ್ ಪ್ರೂಫ್ ವ್ಯವಸ್ಥೆಯನ್ನು ಹೊಂದಿದ್ದು 30 ಮೀಟರ್‌ವರೆಗಿನ ನೀರಿನಾಳದಲ್ಲೂ ಇದನ್ನು ಬಳಸಬಹುದಾಗಿದೆ. ಇದಲ್ಲದೆ ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಅನ್ನು ಬೆಂಬಲಿಸಲಿದ್ದು, ಟೈಮೆಕ್ಸ್ ಸ್ಮಾರ್ಟ್ ಅಪ್ಲಿಕೇಶನ್ ಮೂಲಕ ಕನೆಕ್ಟ್ ಆಗಿರುವ ಟೆಕ್ಸ್ಟ್‌ಗಳು, ಕರೆಗಳು ಮತ್ತು ಸೊಶೀಯಲ್ ಮೀಡಿಯಾ ನೊಟೀಫಿಕೇಶನ್‌ಗಳನ್ನ ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.

ಬ್ಯಾಟರಿ ಮತ್ತು ಇತರೆ
ಟೈಮೆಕ್ಸ್ ಐರನ್ ಮ್ಯಾನ್ R300 ಜಿಪಿಎಸ್ ಸ್ಮಾರ್ಟ್ ವಾಚ್ ಉತ್ತಮ ಬ್ಯಾಟರಿ ಪ್ಯಾಕ್‌ಅಪ್ ಹೊಂದಿದ್ದು, 25 ದಿನಗಳವರೆಗೂ ಬ್ಯಾಟರಿ ಬಾಳಿಕೆ ಬರಲಿದೆ. ನಿರಂತರ ಜಿಪಿಎಸ್ ಬಾಳಿಕೆಯಲ್ಲೂ ಬ್ಯಾಟರಿ ಬ್ಯಾಕ್‌ಅಪ್ ಇರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ ಅನ್ನು ಬೆಂಬಲಿಸಲಿದ್ದು, ಟೈಮೆಕ್ಸ್ ನ ಸ್ಮಾರ್ಟ್ ಆಪ್ಲಿಕೇಶನ್ ಸಂದೇಶಗಳನ್ನು ಸಹ ಸ್ವೀಕರಿಸಲಿದೆ.

ಬೆಲೆ ಮತ್ತು ಲಭ್ಯತೆ
ಇನ್ನು ಈ ಸ್ಮಾರ್ಟ್‌ವಾಚ್ ಯುಎಸ್‌ನಲ್ಲಿ ಬಿಡುಗಡೆಯಾಗಿದ್ದು, ಭಾರತದ ಮಾರುಕಟ್ಟೆಗೆ ಯಾವಾಗ ಎಂಟ್ರಿ ನೀಡಲಿದೆ ಅನ್ನೊದು ಇನ್ನೂ ಕೂಡ ತಿಳಿದು ಬಂದಿಲ್ಲ. ಸದ್ಯ ಇದರ ಬೆಲೆ $120 (ಅಂದಾಜು 8661ರೂ.) ಬೆಲೆಯನ್ನ ಹೊಂದಿದ್ದು, ಬ್ಲ್ಯಾಕ್, ಗ್ರೇ ಮತ್ತು ವೈಟ್ ಕಲರ್‌ನಲ್ಲಿ ಲಭ್ಯವಾಗಲಿದೆ.


Click it and Unblock the Notifications




