Tinder:ಡೇಟಿಂಗ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ ಟಿಂಡರ್ ಅಪ್ಲಿಕೇಶನ್! ಹೊಸ ಅಪ್ಡೇಟ್‌ನಲ್ಲಿ ಏನಿದೆ?
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಟಿಂಡರ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇಂದಿನ ಯುವಜನತೆಯ ಅದ್ಯತೆಗಳಿಗೆ ತಕ್ಕಂತೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದೀಗ ಟಿಂಡರ್ ಅಪ್ಲಿಕೇಶನ್‌ನ ಹೊಸ ಅಪ್ಡೇಟ್‌ನಲ್ಲಿ ಹೆಚ್ಚು ಆಧುನಿಕ ಮತ್ತು ವೈವಿಧ್ಯಮಯ ಸಮಾಜವನ್ನು ಪೂರೈಸಲು ವಿನ್ಯಾಸಗೊಳಿಸಲಾದ ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.
ಹೌದು, ಟಿಂಡರ್ (Tinder) ಅಪ್ಲಿಕೇಶನ್‌ನ ಹೊಸ ಆವೃತ್ತಿಯಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ. ಅದರಂತೆ ಅಪ್ಲಿಕೇಶನ್‌ನಲ್ಲಿ ಇದೀಗ "ಪ್ರೊಫೈಲ್ ಪ್ರಾಂಪ್ಟ್‌ಗಳನ್ನು" ಸೇರ್ಪಡೆ ಮಾಡಲಾಗಿದೆ. ಇದು ಹೊಂದಾಣಿಕೆಯ ವ್ಯಕ್ತಿಗಳು ಒದಗಿಸಿದ ಪ್ರಾಂಪ್ಟ್‌ಗಳನ್ನು ಆಯ್ಕೆ ಮಾಡುವ ಮೂಲಕ ತಮ್ಮ ವ್ಯಕ್ತಿತ್ವವನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ಟಿಂಡರ್ ಅಪ್ಲಿಕೇಶನ್ ಸೇರಿರುವ ಹೊಸ ಫೀಚರ್ಸ್‌ಗಳು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟಿಂಡರ್ ಇದೀಗ ತನ್ನ ಹೊಸ ಆವೃತ್ತಿಯಲ್ಲಿ ಪ್ರೊಫೈಲ್ ಪ್ರಾಂಪ್ಟ್‌ಗಳನ್ನು ಸೇರ್ಪಡೆ ಮಾಡಿದೆ. ಇದರಲ್ಲಿ "ನನ್ನ ಹೃದಯದ ಕೀಲಿಯು,"(The key to my heart is) "ನನ್ನ ಬಕೆಟ್ ಪಟ್ಟಿಯಲ್ಲಿರುವ ಮೊದಲ ಐಟಂ," (The first item on my bucket list is) ಮತ್ತು "ಎರಡು ಸತ್ಯಗಳು ಮತ್ತು ಸುಳ್ಳು" (Two truths and a lie) ಈ ಮೂರು ಅತ್ಯಂತ ಜನಪ್ರಿಯ ಪ್ರಾಂಪ್ಟ್‌ಗಳಾಗಿವೆ. ಈ ಹೊಸ ಪ್ರೊಫೈಲ್ ಕ್ವೀಜ್ ಆಯ್ಕೆಯು ಸರಳವಾದ ರಸಪ್ರಶ್ನೆಗೆ ಉತ್ತರಿಸುವ ಮೂಲಕ ಹೊಂದಾಣಿಕೆಯನ್ನು ಕಂಡುಹಿಡಿಯುವಲ್ಲಿ ಹೊಂದಾಣಿಕೆಯ ಪ್ರೊಫೈಲ್‌ಗಳಿಗೆ ಸಹಾಯ ಮಾಡಲಿದೆ.

ಅದರಂತೆ ಟಿಂಡರ್ ಈಗ ಬಳಕೆದಾರರು ತಮ್ಮ ಪ್ರೊಫೈಲ್‌ಗಳಿಗೆ ರಾಶಿಚಕ್ರ ಚಿಹ್ನೆಗಳು, ಪ್ರೀತಿಯ ಭಾಷೆಗಳಂತಹ ಮೂಲ ಮಾಹಿತಿ ಟ್ಯಾಗ್‌ಗಳನ್ನು ಸೇರಿಸಲು ಅವಕಾಶ ನೀಡಲಿದೆ. ಇದರಿಂದ ಬಳಕೆದಾರರಿಗೆ ತಮ್ಮ ಹೊಂದಾಣಿಕೆಯ ಪ್ರೊಫೈಲ್‌ಗಳಿಗೆ ಇನ್ನಷ್ಟು ತಿಳಿದುಕೊಳ್ಳಲು ಸಂಭಾವ್ಯ ಹೊಂದಾಣಿಕೆಗಳಿಗೆ ಸಹಾಯ ಮಾಡುತ್ತದೆ. ಇದರೊಂದಿಗೆ ಟಿಂಡರ್ ವರದಿ ಮಾಡುವ ವ್ಯವಸ್ಥೆಯನ್ನು ಸಹ ನೀಡಿದೆ. ಅಂದರೆ ನೀವು ಪ್ರೊಫೈಲ್‌ನ ನಿರ್ದಿಷ್ಟ ಅಂಶಗಳನ್ನು ಫೈಂಡ್ ಔಟ್ ಮಾಡುವ ಮೂಲಕ ಪ್ರೊಫೈಲ್‌ಗಳ ಮೇಲೆ ವರದಿ ಮಾಡುವುದಕ್ಕೆ ಅವಕಾಶ ನೀಡಿದೆ.

ಇನ್ನು ಟಿಂಡರ್ ಈ ಫೀಚರ್ಸ್‌ಗಳನ್ನು ಅಪ್ಡೇಟ್ ಮಾಡಿದ ಅನಿಮೇಷನ್‌ಗಳೊಂದಿಗೆ ಹೊಚ್ಚಹೊಸ ರಿಜ್-ಫಸ್ಟ್ ಯುಐನಲ್ಲಿ ಸುತ್ತುವರಿಯಲಾಗಿದೆ. ಇದಕ್ಕಾಗಿ ಟಿಂಡರ್ ಪ್ಲಾಟ್‌ಫಾರ್ಮ್ "ಇಟ್ಸ್ ಎ ಮ್ಯಾಚ್!" ಅನ್ನು ರಿಫ್ರೆಶ್ ಮಾಡಿದೆ. ಇದರೊಂದಿಗೆ ತಡರಾತ್ರಿಯಲ್ಲಿ ಬಲ/ಎಡಕ್ಕೆ ಸ್ವೈಪ್ ಮಾಡಲು ಇಷ್ಟಪಡುವವರಿಗೆ ಮೀಸಲಾದ ಡಾರ್ಕ್ ಮೋಡ್ ಅನ್ನು ಸಹ ಪರಿಚಯಿಸಿದೆ. ಈ ರೀತಿಯ ಆಯ್ಕೆಯನ್ನು ನೀಡುತ್ತಿರುವ ಮೊದಲ ಡೇಟಿಂಗ್ ಅಪ್ಲಿಕೇಶನ್ ಎಂಬ ಖ್ಯಾತಿಗೆ ಟಿಂಡರ್ ಪಾತ್ರವಾಗಿದೆ.
ಇದಲ್ಲದೆ ಟಿಂಡರ್ ಅಪ್ಲಿಕೇಶನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷಿತ ಡೇಟಿಂಗ್ ಮಾಡುವುದಕ್ಕೆ ಕೂಡ ಹಲವು ಫೀಚರ್ಸ್‌ಗಳನ್ನು ಹೊಂದಿದೆ. ಇದರಲ್ಲಿ incognito ಮೋಡ್ ಫೀಚರ್ಸ್ ಕೂಡ ಒಂದಾಗಿದೆ. ಅಜ್ಞಾತ ಮೋಡ್ ಫೀಚರ್ಸ್ ಮೂಲಕ ಬಳಕೆದಾರರು ಈ ಡೇಟಿಂಗ್ ಆಪ್‌ನಲ್ಲಿ ಲೈಕ್ ಮಾಡಲು ಮತ್ತು ನೋಪ್ ಮಾಡಲು ಅನುಕೂಲ ಮಾಡಿಕೊಡಲಾಗಿದೆ.

ಇದರಲ್ಲಿ ಪ್ರೊಫೈಲ್‌ಗಳನ್ನು ನಿರ್ಬಂಧಿಸುವ ಸಾಮರ್ಥ್ಯವನ್ನು ಸಹ ಪಡೆದಿದ್ದು, ಬಳಕೆದಾರರು ಯಾರನ್ನು ನೋಡಲು ಬಯಸುತ್ತಾರೆ ಎಂಬುದನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ಜೊತೆಗೆ ಅನವಶ್ಯಕವಾಗಿ ಸಮಸ್ಯೆ ನೀಡುವ ಖಾತೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಇನ್ನು ಟಿಂಡರ್ ಅಪ್ಲಿಕೇಶನ್‌ನಲ್ಲಿ ವರದಿ ಮಾಡುವ ಆಯ್ಕೆ ಕೂಡ ನೀಡಲಾಗಿದೆ. ಇದರ ಮೂಲಕ ಬಳಕೆದಾರರು ಆಕ್ಷೇಪಾರ್ಹ ಸಂದೇಶಗಳನ್ನು ಟ್ಯಾಪ್ ಮಾಡಬಹುದು ಮತ್ತು ಲಾಂಗ್ ಪ್ರೆಸ್ ಮಾಡುವ ಮೂಲಕ ನೇರವಾಗಿ ವರದಿ ಮಾಡುವ ಆಯ್ಕೆಯನ್ನು ಪಡೆಯಬಹುದಾಗಿದೆ. ಇದರಿಂದ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಸುರಕ್ಷಿತಾ ಪ್ರಕ್ರಿಯೆಗಳು ಜರುಗಲು ಸಹಾಯವಾಗಲಿದೆ.


Click it and Unblock the Notifications








