ಆನ್‌ಲೈನ್‌ ಡೇಟಿಂಗ್‌ ಮಾಡುವವರಿಗೆ ಹೊಸ ಫೀಚರ್ಸ್‌ ಪರಿಚಯಿಸಿದ ಟಿಂಡರ್‌!

|

ಇತ್ತಿಚಿನ ದಿನಗಳಲ್ಲಿ ಆನ್‌ಲೈನ್‌ ಡೇಟಿಂಗ್‌ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆ ಹೊಂದಿರುವುದು ನಿಮಗೆಲ್ಲಾ ತಿಳಿದೆ ಇದೆ. ಅದರಲ್ಲೂ ಟಿಂಡರ್‌ ಎಂಬ ಆನ್‌ಲೈನ್‌ ಡೇಟಿಂಗ್‌ ಅಪ್ಲಿಕೇಶನ್‌ ಭಾರತದಲ್ಲಿ ಕೆಲವೇ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡಿದೆ. ಅದರಲ್ಲೂ ಪುರುಷರು ಮಹಿಳೆಯರು ಎನ್ನದೆ ಹೆಚ್ಚಿನ ಸಂಖ್ಯೆಯಲ್ಲಿ ಟಿಂಡರ್‌ ಅಪ್ಲಿಕೇಶನ್‌ ಬಳಕೆಯಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಟಿಂಡರ್‌ ಆಪ್‌ ಬಳಕೆದಾರರಿಗಾಗಿ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಅದರಲ್ಲಿ ನ್ಯೂ ಫೋಟೋ ವೆರಿಫಿಕೇಷನ್‌ ಫೀಚರ್ಸ್‌ ಕೂಡ ಒಂದು. ಸದ್ಯ ಈ ಫೀಚರ್ಸ್‌ ಇದೀಗ ಭಾರತದಲ್ಲಿಯೂ ಕೂಡ ಲಭ್ಯವಾಗಲಿದೆ.

ಟಿಂಡರ್‌

ಹೌದು, ಆನ್‌ಲೈನ್‌ ಡೇಟಿಂಗ್‌ ಆಪ್ ಟಿಂಡರ್‌ ಈ ವರ್ಷದ ಆರಂಭದಲ್ಲಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಫೋಟೋ ಪರಿಶೀಲನೆ(new Photo Verification) ಫೀಚರ್ಸ್‌ ಅನ್ನು ಪರಿಚಯಿಸಿತ್ತು. ಆದರೆ ಇದನ್ನ ಪ್ರಾರಂಭದಲ್ಲಿ ಭಾರತದಲ್ಲಿ ಪರಿಚಯಿಸಿರಲಿಲ್ಲ. ಆದರೆ ಇದೀಗ ಸರಿ ಸುಮಾರು ಆರು ತಿಂಗಳ ನಂತರ, ಭಾರತದಲ್ಲಿಯೂ ಕೂಡ ತನ್ನ ಪ್ಲಾಟ್‌ಫಾರ್ಮ್‌ new Photo Verification ಫೀಚರ್ಸ್‌ ಅನ್ನು ಪರಿಚಯಿಸಿದೆ. ಇನ್ನು ಈ ಫೀಚರ್ಸ್‌ ಪೋಸ್ಡ್ ಸೆಲ್ಫಿಗಳ ರಿಯಲ್‌-ಟೈಂ ಅನ್ನು ದೃಡಿಕರಿಸಲು ಬಳಕೆದಾರರಿಗೆ ಅವಕಾಶ ನೀಡಲಿದೆ. ಇನ್ನು ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ತಿಳಿಯೋಣ ಬನ್ನಿರಿ

ಫೀಚರ್ಸ್‌

ಈ ಫೀಚರ್ಸ್‌ ಮೂಲಕ ಟಿಂಡರ್‌ನಲ್ಲಿರುವ ಸೆಲ್ಫಿಗಳನ್ನು AI ಟೆಕ್ನಾಲಜಿ ಬಳಸುವ ಮೂಲಕ ಟಿಂಡರ್ ಬಳಕೆದಾರರ ಪ್ರೊಫೈಲ್ ಫೋಟೋಗಳೊಂದಿಗೆ ಹೋಲಿಸಲು ಸಾಧ್ಯವಾಗಲಿದೆ. ಅಲ್ಲದೆ ಈ ಪರಿಶೀಲನೆ ಪ್ರಕ್ರಿಯೆಯು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿದೆ. ಜೊತೆಗೆ ಒಮ್ಮೆ ಪರಿಶೀಲಿಸಿದ ನಂತರ, ಪ್ರೊಫೈಲ್‌ಗಳು ನೀಲಿ ಚೆಕ್‌ಮಾರ್ಕ್ ಅನ್ನು ಡಿಸ್‌ಪ್ಲೇ ಮಾಡುತ್ತದೆ. ಆದ್ದರಿಂದ ಸದಸ್ಯರು ಸ್ವೈಪ್ ಮಾಡುವಾಗ ಪ್ರೊಫೈಲ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದಾಗಿದೆ.

ಟಿಂಡರ್‌

ಇದಲ್ಲದೆ ಈ ಫೀಚರ್ಸ್‌ನಿಂದಾಗಿ ಟಿಂಡರ್‌ನಲ್ಲಿರುವ ಜನರು ತಾವು ಯಾರು ಎಂದು ನಿಖರವಾಗಿ ಹೇಳುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಟಿಂಡರ್ ಪ್ರೊಫೈಲ್‌ಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹಾಗದ್ರೆ ಈ ಫೀಚರ್ಸ್‌ ಮೂಲಕ ನಿಮ್ಮ ಪ್ರೊಫೈಲ್ ಅನ್ನು ನೀವು ಹೇಗೆ ಪರಿಶೀಲಿಸಬಹುದು ಅನ್ನೊದನ್ನ ಇಲ್ಲಿ ಹಂತಹಂತವಾಗಿ ತಿಳಿಯಿರಿ.

ಟಿಂಡರ್‌ ಅಪ್ಲಿಕೇಶನ್‌ನಲ್ಲಿ ನಿಮ್ಮ ಪ್ರೊಫೈಲ್ ಅನ್ನು ಪರಿಶೀಲಿಸುವುದು ಹೇಗೆ?

ಟಿಂಡರ್‌ ಅಪ್ಲಿಕೇಶನ್‌ನಲ್ಲಿ ನಿಮ್ಮ ಪ್ರೊಫೈಲ್ ಅನ್ನು ಪರಿಶೀಲಿಸುವುದು ಹೇಗೆ?

ಹಂತ 1: ಟಿಂಡರ್ ಅಪ್ಲಿಕೇಶನ್‌ ತೆರೆಯಿರಿ ಮತ್ತು ಪ್ರೊಫೈಲ್ ಐಕಾನ್ ಟ್ಯಾಪ್ ಮಾಡಿ.

ಹಂತ 2: ನಿಮ್ಮ ಹೆಸರು/ ವಯಸ್ಸಿನ ಪ್ರಕಾರ ಗ್ರೇ ಚೆಕ್‌ಮಾರ್ಕ್ ಟ್ಯಾಪ್ ಮಾಡಿ.

ಹಂತ 3: ನಂತರ ‘‘Verify your profile' ಅನ್ನು ಆಯ್ಕೆಮಾಡಿ.

ಹಂತ 4: ನಂತರ ಸೆಲ್ಫಿ ತೆಗೆದುಕೊಳ್ಳುವ ಪೋಸ್‌ ಮೂಲಕ ಆ ಪೋಸ್‌ ಅನ್ನು ಕಾಪಿ ಮಾಡಬೇಕು.

ಹಂತ 5: ಇದಾದ ಮೇಲೆ ನಿಮ್ಮ ಸೆಲ್ಫಿ ಪೋಸ್‌ ನಿಮ್ಮ ಪೋಸ್‌ಗೆ ಹೊಂದಿಕೆಯಾಗಿದೆಯೆ ಎಂದು ದೃಡೀಕರಿಸಿ ಮತ್ತು ‘Submit for review' ಒತ್ತಿರಿ.

ಹಂತ 6: ನಂತರ 4 ಮತ್ತು 5ನೇ ಹಂತಗಳನ್ನ ಮತ್ತೊಮ್ಮೆ ಪುನರಾವರ್ತಿಸಿ.

Most Read Articles
Best Mobiles in India

English summary
Tinder's new Photo Verification feature enhancing the safety of the dating platform by enabling users to verify their profiles using real-time selfies.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X