Home
ಸುದ್ದಿಜಾಲ

ಶೀಘ್ರದಲ್ಲೇ ಟಿಂಡರ್‌ ಡೇಟಿಂಗ್‌ ಆಪ್‌ನಲ್ಲಿ ಲಭ್ಯವಾಗಲಿದೆ ವಿಡಿಯೋ ಚಾಟಿಂಗ್‌ ಫೀಚರ್ಸ್‌!

ಟೆಕ್ನಾಲಜಿ ಮುಂದುವರೆದಂತೆ ಟೆಕ್‌ವಲಯದಲ್ಲಿ ಸಾಕಷ್ಟು ಆಪ್‌ಡೇಟ್‌ ಆಗುತ್ತಲೇ ಇರೋದು ಎಲ್ಲರಿಗು ಗೊತ್ತಿರುವಂತಹದ್ದೇ. ಇನ್ನು ಇವತ್ತಿನ ಯುವ ಜನತೆಯ ಆಶಯಗಳಿಗೆ ತಕ್ಕಂತೆ ಸಾಕಷ್ಟು ವಿಭಿನ್ನ ಮಾದರಿಯ ಆಪ್‌ಗಳು ಕೂಡ ಲಭ್ಯವಿವೆ. ಇನ್ನು ಸದ್ಯ ಭಾರತದಲ್ಲಿ ಟೆಂಡರ್‌ ಡೇಟಿಂಗ್‌ ಆಪ್‌ ಸಾಕಷ್ಟು ಜನಪ್ರಿಯತೆಯನ್ನ ಹೊಂದಿದೆ. ಇದೀಗ ಈ ಟಿಂಡರ್ ಡೇಟಿಂಗ್ ಆಪ್‌ನ ಮೂಲ ಕಂಪೆನಿಯಾದ ಮ್ಯಾಚ್‌ ಗ್ರೂಪ್‌ ಮತ್ತೊಂದು ಹೊಸ ಮಾದರಿಯ ಆಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.

ಹೌದು

ಹೌದು, ಟಿಂಡರ್‌ ಆಪ್‌ನ ಮೂಲ ಕಂಪನಿಯಾದ ಮ್ಯಾಚ್ ಗ್ರೂಪ್, ಈ ವರ್ಷದ ಕೊನೆಯಲ್ಲಿ ತನ್ನದೇ ಆದ ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಹಾಗಂತ ಈ ಆಪ್ಲಿಕೇಶನ್‌ ಹೊಸ ರೂಪದಲ್ಲಿ ಬರುವುದಿಲ್ಲ. ಬದಲಿಗೆ ಟಿಂಡರ್‌ಆಪ್‌ನಲ್ಲಿಯೇ ಹೊಸದಾಗಿ ಸೇರ್ಪಡೆ ಆಗಲಿದೆ. ಈಗಾಗಲೇ ನಿಮಗೆಲ್ಲಾ ತಿಳಿದಿರುವಂತೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವೀಡಿಯೋ ಚಾಟ್‌ ಆಪ್ಲಿಕೇಶನ್‌ಗಳಿಗೆ ಭಾರಿ ಜನಪ್ರಿಯತೆ ಸಿಗುತ್ತಿದೆ. ಸದ್ಯ ಇದನ್ನ ಗಮನಿಸಿರುವ ಮ್ಯಾಚ್‌ಗ್ರೂಪ್‌ ಯುವಜನತೆಯ ಡೇಟಿಂಗ್‌ ಆಪ್‌ ಆದ ಟಿಂಡರ್‌ ಆಪ್‌ನಲ್ಲಿ ಒನ್-ಒನ್ ವಿಡಿಯೋ ಚಾಟ್‌ ಅನ್ನು ಪ್ರಾರಂಭಿಸುವ ಪ್ಲ್ಯಾನ್‌ ರೂಪಿಸಿಕೊಂಡಿದೆ.

ಮ್ಯಾಚ್‌

ಇನ್ನು ಮ್ಯಾಚ್‌ ಗ್ರೂಪ್‌ ಹಿಂಜ್ ಮತ್ತು ಒಕ್‌ಕುಪಿಡ್‌ನಂತಹ ಇತರ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಸಹ ಹೊಂದಿದೆ, ಆದರೆ ವೀಡಿಯೊ ಚಾಟ್ ಆಯ್ಕೆಯು ಇದೀಗ ಟಿಂಡರ್‌ ಆಪ್‌ನಲ್ಲಿ ಮಾತ್ರ ಲಬ್ಯವಾಗಲಿದೆ ಎಂದು ಹೇಳಲಾಗ್ತಿದೆ. ಸದ್ಯ ವಿಶ್ವದ ಅತಿದೊಡ್ಡ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ವೀಡಿಯೊ ಚಾಟ್ ಆಯ್ಕೆಯು ಅತಿ ದೊಡ್ಡ ಫೀಚರ್ಸ್‌ ಆಯ್ಕೆ ಆಗಿರಲಿದೆ. ಅಲ್ಲದೆ ಮ್ಯಾಚ್ ಗ್ರೂಪ್‌ನ ಅತಿದೊಡ್ಡ ಫೀಚರ್ಸ್‌ ಪರಿಚಯಗಳಲ್ಲಿ ಇದು ಕೂಡ ಒಂದಾಗಿದೆ.

ಈಗಾಗಲೇ

ಆದರೆ ಈಗಾಗಲೇ ಟಿಂಡರ್ ಲಕ್ಷಾಂತರ ಬಳಕೆದಾರರನ್ನು ಹೊಂದಿದೆ ಮತ್ತು ವೀಡಿಯೊ ಕರೆ ಫೀಚರ್ಸ್‌ ಅನ್ನು ಪರಿಚಯಿಸಿದರೆ ಇದನ್ನು ದುರುಪಯೋಗಕ್ಕೆ ಬಳಸುವ ಸಾಧ್ಯತೆ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಹಾಗೇ ನೋಡಿದ್ರೆ ಟೆಕ್ಸ್ಟ್‌ ಮೇಸೆಜ್‌ಗಳಿಗೆ ಹೋಲಿಸಿದರೆ ಕಿರುಕುಳ ಮತ್ತು ನಿಂದನೆ ವೀಡಿಯೊದಲ್ಲಿ ಸ್ಕ್ರೀನ್ ಮಾಡುವುದು ಹೆಚ್ಚು ಕಷ್ಟ. ಆದರೂ ಈ ಮಾದರಿಯ ಫೀಚರ್ಸ ಪರಿಚಯಿಸಲು ಮ್ಯಾಚ್‌ ಗ್ರೂಪ್‌ ಮುಂದಾಗಿರುವುದರಿಂದ ಮ್ಯಾಚ್‌ಗ್ರೂಪ್‌ ತನ್ನದೇ ಆದ ಆಕ್ರಮಣಕಾರಿ ಚಿತ್ರ ಪತ್ತೆ ವ್ಯವಸ್ಥೆಯನ್ನು ನಿರ್ಮಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ.

ಹೆಚ್ಚುವರಿಯಾಗಿ

ಇದಕ್ಕೆ ಹೆಚ್ಚುವರಿಯಾಗಿ, ಬಳಕೆದಾರರು ತಮ್ಮ ದಿನಾಂಕಗಳನ್ನು ವೈಯಕ್ತಿಕವಾಗಿ ಪ್ರದರ್ಶಿಸುವ ಬದಲು ಯಾರೊಂದಿಗಾದರೂ ಹೊಂದಾಣಿಕೆ ಮತ್ತು ವೀಡಿಯೊದಲ್ಲಿ ಚಾಟ್ ಮಾಡುವ ಕಲ್ಪನೆಯನ್ನು ಸಹ ಬಳಸಿಕೊಳ್ಳಬೇಕಾಗುತ್ತದೆ. ಅಲ್ಲದೆ ಜನರನ್ನು ಡೇಟಿಂಗ್ ಮಾಡುವ ಪ್ರಯತ್ನದಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳು ತಮ್ಮ ಕಾರ್ಯಶೈಲಿಯನ್ನ ಬದಲಾವಣೆ ಮಾಡುತ್ತಿವೆ. ಸದ್ಯ ಟಿಂಡರ್‌ ಆಪ್‌ನಲ್ಲಿ ವಿಡಿಯೋ ಚಾಟಿಂಗ್‌ ಅವಕಾಶ ಈ ವರ್ಷದ ಕೊನೆಯಲ್ಲಿ ಕಂಡುಬರುವುದರಿಂದ ಮುಂದಿನ ದಿನಗಳಲ್ಲಿ ಇದರ ಪ್ರಭಾವ ಹಗೇಗಿರಲಿದೆ ಅನ್ನೊದು ತಿಳಿದು ಬರಲಿದೆ.

Best Mobiles in India

English summary
While this feature is great over the lockdown, harassment and abuse is harder to screen on video calls as compared to text messages.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+