ಶೀಘ್ರದಲ್ಲೇ ಟಿಂಡರ್‌ ಡೇಟಿಂಗ್‌ ಆಪ್‌ನಲ್ಲಿ ಹೊಸ ಲೈವ್ಸ್‌ ಈವೆಂಟ್‌ ಪ್ರಾರಂಭ!

|

ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್‌ ಆಗಿ ಟಿಂಡರ್ ಗುರುತಿಸಿಕೊಂಡಿದೆ. ಈಗಾಗಲೇ ಡೆಟಿಂಗ್‌ ಪ್ರಿಯರ ನೆಚ್ಚಿನ ಅಪ್ಲಿಕೇಶನ್‌ ಆಗಿ ಪ್ರಸಿದ್ಧಿಯನ್ನು ಪಡೆಎದುಕೊಂಡಿದೆ. ಇನ್ನು ಟಿಂಡರ್‌ ಅಪ್ಲಿಕೇಶನ್‌ ಕೂಡ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಇದೀಗ ಟಿಂಡರ್‌ ಅಪ್ಲಿಕೇಶನ್‌ ಹೊಸ ಲೈವ್ ಈವೆಂಟ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು ಬಳಕೆದಾರರು ಸಾಮಾನ್ಯ ಆಸಕ್ತಿಗಳನ್ನು ಹಂಚಿಕೊಳ್ಳುವ ಜನರೊಂದಿಗೆ ಹೊಂದಾಣಿಕೆ ಮಾಡಲು ಸಹಾಯ ಮಾಡುತ್ತದೆ.

ಡೇಟಿಂಗ್‌

ಹೌದು, ನೆಚ್ಚಿನ ಡೇಟಿಂಗ್‌ ಅಪ್ಲಿಕೆಶನ್‌ ಎನಿಸಿಕೊಂಡಿರುವ ಟಿಂಡರ್‌ "ವೈಬ್ಸ್" ಎಂದು ಕರೆಯಲ್ಪಡುವ ಹೊಸ ಲೈವ್‌ ಈವೆಂಟ್‌ ಪ್ರಾರಂಭಿಸುವುದಾಗಿ ಹೇಳಿದೆ. ಇನ್ನು ಈ ಈವೆಂಟ್‌ನಲ್ಲಿ ಬಳಕೆದಾರರು ಉತ್ತರಿಸಬಹುದಾದ ಪ್ರಶ್ನೆಗಳ ಸರಣಿಯನ್ನು ಒಳಗೊಂಡಿರಲಿದ್ದು, ಇದು ಬಳಕೆದಾರರ ಚಾಟ್‌ಗಳಲ್ಲಿ ತೋರಿಸುತ್ತದೆ. ಇನ್ನು ಈ ಹೊಸ ವೈಬ್ಸ್‌ ಫೀಚರ್ಸ್‌ ಡೇಟಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿ ಪರಸ್ಪರ ರೆಸ್ಪಾನ್ಸ್‌ ಹೆಚ್ಚಿಸಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಈವೆಂಟ್‌

ಹೊಸ ವೈಬ್ಸ್ ಲೈವ್ಸ್‌ ಈವೆಂಟ್‌ ಟಿಂಡರ್‌ ಡೇಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪರಸ್ಪರ ಕ್ರಿಯೆಯನ್ನು ಹೆಚ್ಚಿಸುವ ಸಲುವಾಗಿ ಪರಿಚಯಿಸಲಾಗಿದೆ. ಇನ್ನು ಇದೇ ಮಾದರಿಯ ಈವೆಂಟ್‌ ಅನ್ನು ಕಳೆದ ವರ್ಷ, ಸ್ವೈಪ್ ನೈಟ್ ಎಂಬ ಸರಣಿ ಮೂಲಕ ಪರಿಚಯಿಸಿತ್ತು. ಅದು ಸಂವಾದಾತ್ಮಕ ಆಯ್ಕೆ-ನಿಮ್ಮ-ಸಾಹಸವನ್ನು ಒಳಗೊಂಡಿತ್ತು. ಇದರಲ್ಲಿ ಬಳಕೆದಾರರು ಅಂತ್ಯದ ಮೇಲೆ ಪ್ರಭಾವ ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಈ ಕಾರ್ಯಕ್ರಮದಲ್ಲಿ 13 ದಶಲಕ್ಷಕ್ಕೂ ಹೆಚ್ಚು ಬಳಕೆದಾರರು ಭಾಗವಹಿಸಿದ್ದರು ಎಂದು ಟಿಂಡರ್ ಹೇಳಿದೆ. ಆದರೆ ವೈಬ್ಸ್‌ ಅನ್ನು ಸ್ವೈಪ್ ನೈಟ್‌ ಗಿಂತ ವಿಭಿನ್ನ ರೀತಿಯಲ್ಲಿ ಸಂವಾದಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ.

ಈವೆಂಟ್‌

ಇನ್ನು ಈ ಈವೆಂಟ್‌ ಬಳಕೆದಾರರು ತಮ್ಮ ವೈಯಕ್ತಿಕ ಆದ್ಯತೆಗಳು, ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು, ಸಂಗೀತ ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಅನುವು ಮಾಡಿಕೊಡುತ್ತದೆ. ಈ ಪ್ರಶ್ನೆಗಳಿಗೆ ಪ್ರತಿಕ್ರಿಯೆಗಳು ಬಳಕೆದಾರರ ಪ್ರೊಫೈಲ್‌ಗಳಲ್ಲಿ ಮೂರು ದಿನಗಳವರೆಗೆ ಕಾಣಿಸುತ್ತದೆ. ಅಲ್ಲದೆ ವೈಬ್ಸ್ ಈವೆಂಟ್‌ನಲ್ಲಿ ಭಾಗವಹಿಸಿದ ಬಳಕೆದಾರರು ಭಾಗವಹಿಸಿದ ಇನ್ನೊಬ್ಬ ಬಳಕೆದಾರರೊಂದಿಗೆ ಹೊಂದಾಣಿಕೆ ಮಾಡಿದಾಗ, ಅವರು ಬಳಸಿದ ಚಾಟ್ ವಿಂಡೋವನ್ನು ಅವರ ಪ್ರತ್ಯುತ್ತರಗಳನ್ನು ನೋಡಬಹುದು. ಟಿಂಡರ್ ಇದನ್ನು "ಮ್ಯೂಚುಯಲ್ ವೈಬ್ಸ್" ಎಂದು ಕರೆಯುತ್ತಿದೆ. ಇದು ಬಳಕೆದಾರರಿಗೆ ಹೆಚ್ಚು ಆಸಕ್ತಿದಾಯಕ ಸಂಭಾಷಣೆಗಳನ್ನು ಮಾಡಲು ಸಹಾಯ ಮಾಡುತ್ತದೆ.

ಈವೆಂಟ್

ವೈಬ್ಸ್ ಈವೆಂಟ್ 48 ಗಂಟೆಗಳ ಕಾಲ ಲೈವ್ ಆಗಿದ್ದರೆ, ಈವೆಂಟ್‌ನಲ್ಲಿ ಭಾಗವಹಿಸುವ ಬಳಕೆದಾರರಿಗೆ 72 ಗಂಟೆಗಳ ಕಾಲ ಪ್ರತಿಕ್ರಿಯೆಗಳು ಲಭ್ಯವಿರುತ್ತವೆ. ಆದ್ದರಿಂದ ಬಳಕೆದಾರರು ಸಾಧ್ಯವಾದಷ್ಟು ಬೇಗ ಈವೆಂಟ್‌ನಲ್ಲಿ ಭಾಗವಹಿಸಲು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ತೋರುತ್ತದೆ. ಆ ಉತ್ತರಗಳು ಕಣ್ಮರೆಯಾದ ನಂತರ, ಟಿಂಡರ್ ಬಳಕೆದಾರರು ಮುಂದಿನ ಈವೆಂಟ್ ತಮ್ಮ ಪ್ರೊಫೈಲ್‌ನಲ್ಲಿ ಮತ್ತೆ ಕಾಣಿಸಿಕೊಳ್ಳುವ ಹೊಸ ಪ್ರಶ್ನೆಗಳಿಗೆ ಉತ್ತರಿಸಲು ಪ್ರಾರಂಭಿಸುವವರೆಗೆ ಕಾಯಬೇಕಾಗುತ್ತದೆ. ಹೊಸ ವೈಬ್ಸ್ ಫೀಚರ್ಸ್‌ ಈ ತಿಂಗಳ ಅಂತ್ಯದ ವೇಳೆಗೆ ಜಗತ್ತಿನ ಎಲ್ಲ ಟಿಂಡರ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

Best Mobiles in India

English summary
The new feature could help users strike up more interesting conversations, and is expected to see high engagement like Swipe Night which saw millions of users participate last year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X