360TB ಡೇಟಾ ಸಂಗ್ರಹಿಸುತ್ತದೆ ಸಣ್ಣ ಗಾಜಿನ ಡಿಸ್ಕ್‌

By Suneel
|

ಜನರು ಪ್ರತಿದಿನ 10 ದಶಲಕ್ಷ ಬ್ಲೂ-ರೇ ಡಿಸ್ಕ್‌ನ ದತ್ತಾಂಶವನ್ನು ಉತ್ಪಾದಿಸುತ್ತಾರೆ ಎಂದು ಅಂದಾಜು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ ಸಂಶೋಧಕರು ದತ್ತಾಂಶ ಶೇಕರಣೆಗಾಗಿ 5 ಆಯಾಮಗಳನ್ನು ಉಳ್ಳ 360 TB ಡೇಟಾ ಶೇಕರಣೆ ಮಾಡುವ ಸಣ್ಣ ಗಾಜಿನ ಡಿಜಿಟಲ್‌ ಡಿಸ್ಕ್‌ ಅನ್ನು ಅಭಿವೃದ್ದಿಪಡಿಸಿದ್ದಾರೆ. ಗಾಜಿನ ಸಣ್ಣ ಡಿಸ್ಕ್‌ 13.8 ಶತಕೋಟಿ ವರ್ಷಗಳವರೆಗೂ ಸಹ ಡೇಟಾ ಸಂಗ್ರಹ ಹೊಂದುತ್ತದೆ ಎನ್ನಲಾಗಿದೆ. ಈ ಬಗ್ಗೆ ಇಂದಿನ ಲೇಖನದಲ್ಲಿ ವಿಶೇಷ ಮಾಹಿತಿಯನ್ನು ಓದಿ ತಿಳಿಯಿರಿ.

ಸಣ್ಣ ಗಾಜಿನ ಡಿಸ್ಕ್‌

ಸಣ್ಣ ಗಾಜಿನ ಡಿಸ್ಕ್‌

5 ಆಯಾಮಗಳನ್ನು ಹೊಂದಿರುವ ಸಣ್ಣ ಗಾಜಿನ ಡಿಸ್ಕ್‌ ಒಂದು 360TB ಡೇಟಾವನ್ನು 13.8 ಶತಕೋಟಿ ವರ್ಷಗಳವರೆಗೂ ಸಹ ಶೇಖರಣೆ ಮಾಡಿ ಇಡುತ್ತದೆ.

ಬ್ರಿಟನ್‌ ಸಂಶೋಧಕರು

ಬ್ರಿಟನ್‌ ಸಂಶೋಧಕರು

ಬ್ರಿಟನ್‌ ಮೂಲದ ಸಂಶೋಧಕರು ಸಣ್ಣ ಗಾಜಿನ ಡಿಜಿಟಲ್‌ ಡಿಸ್ಕ್‌ ಅನ್ನು ಅಭಿವೃದ್ದಿಪಡಿಸಿದ್ದಾರೆ. ಸೌತಾಂಪ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಫೆಮ್ಟೊಸೆಕೆಂಡ್ ಲೇಸರ್ ಬರವಣಿಗೆಯನ್ನು ಉಪಯೋಗಿಸಿ ಇದನ್ನು ಅಭಿವೃದ್ದಿಪಡಿಸಿದ್ದಾರೆ.

5 ಮೈಕ್ರೋಮೀಟರ್

5 ಮೈಕ್ರೋಮೀಟರ್

ಅಲ್ಟ್ರಾಫಾಸ್ಟ್‌ ಲೇಸರ್‌ ಬಳಸಿದ ಸಣ್ಣ ಗಾಜಿನ ಡಿಸ್ಕ್‌ ಅಲ್ಪಾವಧಿಯ ಮತ್ತು ಕಂಪನಗಳನ್ನು ಉತ್ಪಾದಿಸುತ್ತದೆ. ಇದು ಮೂರು ಪದರಗಳ ಮೇಲೆ ಡೇಟಾವನ್ನು ಬರೆಯಲು ನ್ಯಾನೋಸ್ಟ್ರಕ್ಚರ್‌ ಡಾಟ್‌ ಬಳಸಿ 5 ಮೈಕ್ರೋಮೀಟರ್‌ಗಳನ್ನು ಬೇರ್ಪಡಿಸುತ್ತದೆ.

ಶಿಕ್ಷಣ ಸಂಸ್ಥೆಗಳಿಗೆ ಉಪಯೋಗ

ಶಿಕ್ಷಣ ಸಂಸ್ಥೆಗಳಿಗೆ ಉಪಯೋಗ

ಗಾಜಿನ ಡಿಜಿಟಲ್‌ ಡಿಸ್ಕ್‌ ಅಭಿವೃದ್ದಿಪಡಿಸಿದ ಸಂಶೋಧಕರ ತಂಡ ಇದು ಹೆಚ್ಚು ದಾಖಲೆಗಳನ್ನು ಹೊಂದುವ ಅಥವಾ ಬಳಸುವ ಸಂಸ್ಥೆಗಳಿಗೆ ಉಪಯೋಗವಾಗುತ್ತದೆ ಎಂದು ಹೇಳಿದ್ದಾರೆ.

ಟೆಕ್ನಾಲಜಿ ಕ್ಷೇತ್ರದಲ್ಲಿ ಆಶ್ಚರ್ಯ ಮೂಡಿಸಿದ ಡಿಸ್ಕ್‌

ಟೆಕ್ನಾಲಜಿ ಕ್ಷೇತ್ರದಲ್ಲಿ ಆಶ್ಚರ್ಯ ಮೂಡಿಸಿದ ಡಿಸ್ಕ್‌

ಮುಂದಿನ ಪೀಳಿಗೆಗಾಗಿ ದತ್ತಾಂಶಗಳನ್ನು, ಮಾಹಿತಿಗಳನ್ನು ಶೇಖರಿಸಿ ಇಡಲು ಅನುಕೂಲವಾಗುವ ಈ ಟೆಕ್ನಾಲಜಿಯು ಹೆಚ್ಚು ಅಚ್ಚರಿಯನ್ನು ಮೂಡಿಸಿದೆ. ಅಲ್ಲದೇ ಇದು ನಮ್ಮ ಪೂರ್ಣ ನಾಗರಿಕತೆ ಬಗ್ಗೆ ಮಾಹಿತಿ ಶೇಖರಿಸಿಡಲು ಸಹಾಯಕವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋ

ಸ್ಯಾನ್ ಫ್ರಾನ್ಸಿಸ್ಕೋ

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕಳೆದ ವಾರ ನಡೆದ "ಇಂಟರ್‌ನ್ಯಾಷನಲ್‌ ಸೊಸೈಟಿ ಫಾರ್‌ ಆಪ್ಟಿಕಲ್‌ ಇಂಜಿನಿಯರಿಂಗ್‌ ಕಾನ್ಫರೆನ್ಸ್"ನಲ್ಲಿ ಸಂಶೋಧಕರು ತಮ್ಮ ಈ ಸಣ್ಣ ಗಾಜಿನ ಡಿಸ್ಕ್‌ ಟೆಕ್ನಾಲಜಿಯನ್ನು ಪ್ರದರ್ಶಿಸಿದರು.

2013 ರಲ್ಲಿ ಮೊದಲ ಬಾರಿಗೆ ಪ್ರದರ್ಶನ

2013 ರಲ್ಲಿ ಮೊದಲ ಬಾರಿಗೆ ಪ್ರದರ್ಶನ

360TB ಡೇಟಾ ಸಂಗ್ರಹಿಸುವ ಸಣ್ಣ ಗಾಜಿನ ಡಿಸ್ಕ್‌ ಟೆಕ್ನಾಲಜಿಯನ್ನು ಮೊದಲ ಬಾರಿಗೆ 2013ರಲ್ಲಿ ಪ್ರದರ್ಶನ ಮಾಡಲಾಗಿತ್ತು. ಪ್ರಸ್ತುತದಲ್ಲಿ ಅಧಿಕವಾದ ಡೇಟಾ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.

ಶೇಖರಣೆಗೊಂಡ ಮಾಹಿತಿ

ಈಗಾಗಲೇ ಸಣ್ಣ ಗಾಜಿನ ಡಿಸ್ಕ್‌ ನಲ್ಲಿ ಸಾರ್ವತ್ರಿಕ ಮಾನವ ಹಕ್ಕುಗಳು, ನ್ಯೂಟನ್‌ ಆಪ್ಟಕ್ಸ್, ದಿ ಮಾಗ್ನ ಕಾರ್ಟಾ ಮತ್ತು ದಿ ಕಿಂಗ್‌ ಜೇಮ್ಸ್‌ ಬೈಬಲ್‌ನ ಪ್ರತಿಯನ್ನು ಸಂಗ್ರಹಿಸಿಕೊಂಡಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ

<strong>ನಾಯಿಗಳ ತಳಿ ಕಂಡುಹಿಡಿಯಲು ಮೊಬೈಲ್‌ ಆಪ್‌</strong>ನಾಯಿಗಳ ತಳಿ ಕಂಡುಹಿಡಿಯಲು ಮೊಬೈಲ್‌ ಆಪ್‌

4G ಇಂಟರ್ನೆಟ್‌ಕ್ಕಿಂತ 1000 ಪಟ್ಟು ವೇಗ: ಪಿಸೆಲ್ ನೆಟ್‌ವರ್ಕ್‌4G ಇಂಟರ್ನೆಟ್‌ಕ್ಕಿಂತ 1000 ಪಟ್ಟು ವೇಗ: ಪಿಸೆಲ್ ನೆಟ್‌ವರ್ಕ್‌

3,000 ಇಂಜಿನಿಯರ್‌ಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ3,000 ಇಂಜಿನಿಯರ್‌ಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
Tiny glass disc can store 360TB of data for 13.8 billion years. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X