Home
ಸುದ್ದಿಜಾಲ

ಮಳೆಯ ನೀರು ಬಿದ್ದು ನಿಮ್ಮ ಮೊಬೈಲ್‌ ಒದ್ದೆಯಾಗಿದ್ದರೆ ಕೂಡಲೇ ಈ ಕೆಲಸ ಮಾಡಿ!

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತುಂತುರು ಮಳೆ ಸುರಿಯುತ್ತಿದೆ. ಮನೆಯಿಂದ ಹೊರ ಬಂದರೆ ಸಾಕು ಮಳೆಯಲ್ಲಿ ನೆನೆಯಬೇಕಾದ ಅನಿವಾರ್ಯತೆಯಿದೆ. ಇಂತಹ ಸನ್ನಿವೇಶದಲ್ಲಿ ನಿಮ್ಮ ಫೋನ್‌ಗಳನ್ನು ಮಳೆಯಿಂದ ರಕ್ಷಿಸುವುದು ಅತ್ಯಗತ್ಯವಾಗಿದೆ. ನಿಮ್ಮ ಮೊಬೈಲ್‌ ಐಪಿ ರೇಟೆಡ್‌ ಆಗಿದ್ದರೂ ಸಹ ಮಳೆ ನೀರಿನಿಂದ ರಕ್ಷಿಸುವುದು ಅನಿವಾರ್ಯವಾಗಿದೆ.

ಹೌದು, ಮಳೆ ಬರುವ ಸಮಯದಲ್ಲಿ ಸ್ಮಾರ್ಟ್‌ಫೋನ್‌ ರಕ್ಷಣೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಅವಶ್ಯಕವಾಗಿದೆ. ಮಳೆ ಸಮಯದಲ್ಲಿಯೂ ಸ್ಮಾರ್ಟ್‌ಫೋನ್‌ನಲ್ಲಿ ಮಾತನಾಡಬೇಕಾದರೆ ಅದಕ್ಕೆ ಸೂಕ್ತವಾದ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್‌ಗಳು, ಇಯರ್‌ಬಡ್ಸ್‌ ಮತ್ತು ಇತರ ಗ್ಯಾಜೆಟ್ಸ್‌ಗಳನ್ನು ಮಳೆ ನೀರಿನಿಂದ ಸುರಕ್ಷಿತವಾಗಿಡುವುದಕ್ಕೆ ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಳೆಯ ನೀರು ಬಿದ್ದು ನಿಮ್ಮ ಮೊಬೈಲ್‌ ಒದ್ದೆಯಾಗಿದ್ದರೆ ಕೂಡಲೇ ಈ ಕೆಲಸ ಮಾಡಿ!

ಸ್ಮಾರ್ಟ್‌ಫೋನ್‌ಗಳಿಗೆ ಜಿಪ್-ಲಾಕ್ ಪೌಚ್‌ಗಳನ್ನು ಬಳಸಿ
ಮಳೆ ಬರುವ ಸಮಯದಲ್ಲಿ ಸ್ಮಾರ್ಟ್‌ಫೋನ್‌ ಸುರಕ್ಷತೆಯಿಂದ ಕೂಡಿರಬೇಕಾದರೆ ಅದಕ್ಕೆ ಜಿಪ್‌ ಲಾಕ್‌ ಪೌಚ್‌ಗಳನ್ನು ಬಳಸುವುದು ಸೂಕ್ತ. ಮಳೆಯ ನೀರು ಸ್ಮಾರ್ಟ್‌ಫೋನ್‌ ಒಳಭಾಗಕ್ಕೆ ಹೋಗದಂತೆ ತಡೆಗಟ್ಟಲು ಜಿಪ್‌ ಲಾಕ್‌ ಪೌಚ್‌ಗಳು ಸಹಕಾರಿಯಾಗಿವೆ. ನಿಮ್ಮ ಸ್ಮಾರ್ಟ್‌ಫೋನ್‌ ಎಷ್ಟೇ ಐಪಿ ರೇಟೆಡ್‌ ಆಗಿದ್ದರೂ ಕೂಡ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಹೊಂದಿರುವುದಿಲ್ಲ.

ಸಿಲಿಕಾ ಜೆಲ್ ಪೌಚ್ ಬಳಸಿರಿ
ಮಳೆಯ ನೀರಿನಿಂದ ನಿಮ್ಮ ಮೊಬೈಲ್‌ ತೇವವಾಗದಂತೆ ಮಾಡುವುದಕ್ಕೆ ಸಿಲಿಕಾ ಜೆಲ್ ಸೂಕ್ತವಾಗಿದೆ. ಸಿಲಿಕಾ ಜೆಲ್‌ ಪೌಚ್‌ ತೇವಾಂಶವನ್ನು ಹೀರಿಕೊಳ್ಳುವ ಉತ್ತಮ ವಸ್ತುವಾಗಿದ್ದು, ಇದನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಮೊಬೈಲ್‌ ಸುತ್ತಲಿನ ನೀರು ಅಥವಾ ತೇವಾಂಶವನ್ನು ಹೀರಿಕೊಳ್ಳಲಿದೆ. ಒಂದು ವೇಳೆ ನಿಮ್ಮ ಮೊಬೈಲ್‌ ತೇವವಾಗಿದ್ದರೆ ಸಿಲಿಕಾ ಜೆಲ್‌ ಪೌಚ್‌ ಹೀರಿಕೊಳ್ಳಲಿದೆ.

ಸ್ಮಾರ್ಟ್‌ವಾಚ್‌ ಬಳಕೆ ಮಾಡುವಾಗ ಎಚ್ಚರವಿರಲಿ
ಇನ್ನನು ಇತ್ತೀಚಿನ ದಿನಗಳ ಟ್ರೆಂಡ್‌ ಆಗಿರುವ ಸ್ಮಾರ್ಟ್‌ವಾಚ್‌ಗಳು ಸಾಮಾನ್ಯವಾಗಿ ವಾಟರ್‌ಪ್ರೂಫ್‌ ಆಗಿವೆ. ಆದರೆ ಮಳೆ ಸಮಯದದಲ್ಲಿ ನೀರಿನಿಂದ ರಕ್ಷಣೆ ನೀಡುವ ಸೂಕ್ತವಾದ ಐಪಿ ರೇಟಿಂಗ್‌ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಇದೇ ಕಾರಣಕ್ಕೆ ಮಳೆ ಸಮಯದಲ್ಲಿ ಸ್ಮಾರ್ಟ್‌ವಾಚ್‌ ಅನ್ನು ಬಳಕೆ ಮಾಡದಿರುವುದು ಉತ್ತಮವಾಗಿದೆ.

ಪವರ್‌ಬ್ಯಾಂಕ್ ಅನ್ನು ವಾಟರ್‌ಪ್ರೂಫ್ ಬ್ಯಾಗ್‌ನಲ್ಲಿ ಸುತ್ತಿಡಿ
ಪವರ್‌ಬ್ಯಾಂಕ್‌ಗಳು ಯಾವುದೇ ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಇದರಿಂದ ಮಳೆ ಸಮಯದಲ್ಲಿ ಪವರ್‌ಬ್ಯಾಂಕ್‌ ಅನ್ನು ಬಳಸದಿರುವುದು ಸೂಕ್ತವಾಗಿದೆ. ಯಾಕೆಂದರೆ ಒದ್ದೆಯಾಗಿರುವ ಪವರ್‌ಬ್ಯಾಂಕ್‌ನಲ್ಲಿ ಫೋನ್‌ ಚಾರ್ಜಿಂಗ್‌ ಮಾಡಿದರೆ ಮೊಬೈಲ್‌ಗೆ ಹಾನಿಯಾಗಲಿದೆ.

ಸುಲಭವಾದ ಪ್ಯಾಟರ್ನ್ ಸಕ್ರಿಯಗೊಳಿಸಿ
ಮಳೆ ಸಮಯದಲ್ಲಿ ಸಾಧ್ಯವಾದಷ್ಟು ನಿಮ್ಮ ಮೊಬೈಲ್‌ಗೆ ಸುಲಭವಾದ ಪ್ಯಾಟರ್ನ್‌ ಅನ್ನು ಆಕ್ಟಿವ್‌ ಮಾಡಿರಿ. ಇದರಿಂದ ಮಳೆಯ ಸಮಯದಲ್ಲಿ ಒದೆಯಾದ ಕೈಗಳಲ್ಲಿ ಪ್ಯಾಟರ್ನ್‌ ಅನ್ನು ತೆರೆಯಲು ಸಾದ್ಯವಾಗಲಿದೆ.

ಸ್ಮಾರ್ಟ್ ಫೋನ್ ಒದ್ದೆಯಾದರೆ ಮೊಬೈಲ್‌ ಆಫ್ ಮಾಡಿ
ಒಂದು ವೇಳೆ ನಿಮ್ಮ ಮೊಬೈಲ್‌ ನೀರಿನಲ್ಲಿ ಬಿದ್ದು ಒದ್ದೆಯಾದರೆ ಸ್ಮಾರ್ಟ್‌ಫೋನ್‌ ಅನ್ನು ಆಫ್‌ ಮಾಡುವುದು ಮೊದಲ ಕೆಲಸವಾಗಿದೆ. ಏಕೆಂದರೆ ನಿಮ್ಮ ಮೊಬೈಲ್‌ ಒಳಗೆ ನೀರು ಪ್ರವೇಶಿಸಿ ಆಗಬಹುದಾದ ಶಾರ್ಟ್-ಸರ್ಕ್ಯೂಟ್ ಅನ್ನು ತಡೆಯಲಿದೆ.

ಮಳೆಯ ನೀರು ಬಿದ್ದು ನಿಮ್ಮ ಮೊಬೈಲ್‌ ಒದ್ದೆಯಾಗಿದ್ದರೆ ಕೂಡಲೇ ಈ ಕೆಲಸ ಮಾಡಿ!

ಫೋನ್ ಕವರ್ ತೆಗೆದುಹಾಕಿ
ಇದಲ್ಲದೆ ನಿಮ್ಮ ಮೊಬೈಲ್‌ ನೀರಿನಲ್ಲಿ ಬಿದ್ದ ತಕ್ಷಣ ಅದಕ್ಕೆ ಹಾಕಿರುವ ಫೋನ್‌ ಕವರ್‌ ಅನ್ನು ತೆಗೆದುಹಾಕಬೇಕು. ಯಾಕೆಂದರೆ ಮೊಬೈಲ್‌ನಲ್ಲಿರುವ ಫೋನ್‌ ಕವರ್‌ ಒಳಗೆ ಸೇರಿರುವ ನೀರುವ ಮೊಬೈಲ್‌ ಅನ್ನು ಹಾಳು ಮಾಡಲಿದೆ. ಇದು ಫೋನ್‌ ಒಳಗೆ ನೀರು ಪ್ರವೇಶಿಸುವುದನ್ನು ತಡೆಯಲಿದೆ.

ನಿಮ್ಮ ಫೋನ್ ಅನ್ನು ಒಣಗಿಸಲು ಹೇರ್ ಡ್ರೈಯರ್ ಅನ್ನು ಎಂದಿಗೂ ಬಳಸಬೇಡಿ
ನಿಮ್ಮ ಮೊಬೈಲ್‌ ನೀರಿಗೆ ಬಿದ್ದ ತೇವವಾಗಿದ್ದರೆ ಯಾವುದೇ ಕಾರಣಕ್ಕೂ ಹೇರ್ ಡ್ರೈಯರ್‌ಗಳ ಮೂಲಕ ತೇವಾಂಶ ಹೋಗಿಸಲು ಹೋಗಬೇಡಿ. ಏಕೆಂದರೆ ಫೋನ್‌ಗೆ ಗಾಳಿಯ ಉಷ್ಣತೆಯು ಸ್ವಲ್ಪ ಹೆಚ್ಚಿರುವುದರಿಂದ ಫೋನ್‌ನ ಆಂತರಿಕವನ್ನು ಹಾನಿಗೊಳಿಸಬಹುದು. ಇದು ಫೋನ್‌ನ ನೀರಿನ ಸೀಲಾಂಟ್ ಅನ್ನು ಸಡಿಲಗೊಳಿಸಲಿದ್ದು, ನಿಮ್ಮ ಡಿವೈಸ್‌ ಅನ್ನು ಇನ್ನಷ್ಟು ಹಾನಿ ಮಾಡಲಿದೆ ಎನ್ನಬಹುದಾಗಿದೆ.

Best Mobiles in India

English summary
Tips to keep your smartphones safe from water damage!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+