ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್ ನೀಡಿದೆ. ದೇಶದ ಅತಿ ಸಿರಿವಂತ ದೇವಸ್ಥಾನಗಳಲ್ಲಿ ಒಂದಾದ ಟಿಟಿಡಿಯು ಭಕ್ತರ ಅನುಕೂಲಕ್ಕಾಗಿ ಹಲವು ಸೇವೆಗಳನ್ನು ನೀಡುತ್ತಾ ಬಂದಿದೆ. ಟೆಕ್ನಾಲಜಿಯನ್ನು ಕೂಡ ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಟಿಟಿಡಿ ಇದೀಗ ತನ್ನ ಭಕ್ತರಿಗಾಗಿ ಹೊಸ ಮೊಬೈಲ್ ಅಪ್ಲಿಕೇಶನ್ ಶ್ರೀ ಟಿಟಿ ದೇವಸ್ಥಾನಮ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ ಆ್ಯಪ್ ತಿರುಪತಿಗೆ ಬೇಡಿ ನೀಡುವ ಭಕ್ತರಿಗೆ ಅನೇಕ ಉಪಯೋಗಗಳನ್ನು ನೀಡಲಿದೆ ಎಂದು ವರದಿಯಾಗಿದೆ.

ಹೌದು, ತಿರುಪತಿ ತಿಮ್ಮಪ್ಪನ್ನ ಸನ್ನಿಧಿಗೆ ತೆರಳುವ ಭಕ್ತರಿಗಾಗಿ ಟಿಟಿಡಿ ಹೊಸ ಆ್ಯಪ್ ಅನ್ನು ಪರಿಚಯಿಸಿದೆ. ಈ ಆ್ಯಪ್ ತಿರುಪತಿ ಯಾತ್ರೆಯ ಸಮಯದಲ್ಲಿ ನಿಮಗೆ ಉಪಯೋಗಕ್ಕೆ ಬರಲಿದೆ. ಇದು ತಿಮ್ಮಪ್ಪನ ಭಕ್ತರಿಗೆ ತಡೆರಹಿತ ತೀರ್ಥಯಾತ್ರೆಯ ಅನುಭವವನ್ನು ಒದಗಿಸಲಿದೆ ಎನ್ನಲಾಗಿದೆ. ಇನ್ನು ಈ ಆ್ಯಪ್ ಅನ್ನು JIO ಪ್ಲಾಟ್‌ಫಾರ್ಮ್ ಬೆಂಬಲದೊಂದುಗೆ ಅಭಿವೃದ್ಧಿಪಡಿಸಲಾಗಿದೆ. ಹಾಗಾದ್ರೆ ಟಿಟಿಡಿ ಪರಿಚಯಿಸಿರುವ ಹೊಸ ಅಪ್ಲಿಕೇಶನ್ ಏನೆಲ್ಲಾ ಸೇವೆ ನೀಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟಿಟಿಡಿಯಿಂದ ಹೊಸ ಆ್ಯಪ್ ಬಿಡುಗಡೆ!
ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ವರ್ಷಪೂರ್ತಿ ಅಸಂಖ್ಯಾತ ಭಕ್ತರು ಬೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಸಂಬಂಧಿಸಿದ ಹಲವು ಸೇವೆಗಳನ್ನು ಬೆರಳ ತುದಿಯಲ್ಲಿಯೇ ನೀಡುವುದಕ್ಕೆ ಟಿಟಿಡಿ ಮುಂದಾಗಿದೆ. ಇದಕ್ಕಾಗಿ ಶ್ರೀ ಟಿಟಿ ದೇವಸ್ಥಾನಮ್ಸ್ ಎನ್ನುವ ಆ್ಯಪ್ ಅನ್ನು ಪರಿಚಯಿಸಿದೆ. ಇದರ ಮೂಲಕ ನೀವು ದೇವಸ್ಥಾನಕ್ಕೆ ಸಂಬಂಧಪಟ್ಟ ಹಲವು ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಶ್ರೀ ಟಿಟಿ ದೇವಸ್ಥಾನಮ್ಸ್ ಆ್ಯಪ್‌ನ ಲಾಭವೇನು?
ತಿಮ್ಮಪ್ಪನ್ನ ಸನ್ನಿಧಿಯಲ್ಲಿ ಬಿಡುಗಡೆಯಾಗಿರುವ ಈ ಆ್ಯಪ್ ಬಳಕೆದಾರರಿಗೆ ಬೆರಳ ತುದಿಯಲ್ಲಿಯೇ ಅನೇಕ ಮಾಹಿತಿಗಳನ್ನು ನೀಡಲಿದೆ. ಇದರಲ್ಲಿ ಮುಖ್ಯವಾಗಿ ದೇವರ ದರ್ಶನ ಟಿಕೆಟ್ ಬುಕಿಂಗ್, ದೇವಸ್ಥಾನಕ್ಕೆ ಸಂಬಂಧಿಸಿದ ರೂಮ್‌ಗಳ ಬುಕ್ಕಿಂಗ್, ಇ-ಹುಂಡಿ ಸೇವೆ ಸೇರಿದಂತೆ ವಿವಿಧ ಯಾತ್ರಿ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಟಿಟಿಡಿ ಹೇಳಿದ್ದೇನು?
ಟಿಟಿಡಿ ಶ್ರೀ ಟಿಟಿ ದೇವಸ್ಥಾನಮ್ಸ್ ಆ್ಯಪ್ ಅನ್ನು ಜಿಯೋ ಪ್ಲಾಟ್‌ಫಾರ್ಮ್ ಬೆಂಬಲದೊಂದಿಗೆ ಅಭಿವೃದ್ದಧಿಪಡಿಸಿರುವುದಾಗಿ ಹೇಳಿದೆ. ಇದಕ್ಕಾಗಿ ಕೋಟ್ಯಾಂತರ ಹಣವನ್ನು ಖರ್ಚು ಮಾಡಿರುವುದಾಗಿ ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಟಿಟಿಡಿಗೆ ದೇಣಿಗೆಯನ್ನು ಸಹ ನೀಡಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಈ ಮೊಬೈಲ್ ಅಪ್ಲಿಕೇಶನ್‌ನ ಫೀಚರ್ಸ್‌ಗಳು ಏನು ಅನ್ನೊದನ್ನ ದೇವಸ್ಥಾನಮ್ಸ್ ಮ್ಯಾನೇಜ್‌ಮೆಂಟ್ ಪ್ರಸ್ತುತಪಡಿಸಿದೆ.
ಜಿಯೋ ಪ್ಲಾಟ್‌ಫಾರ್ಮ್‌ಗೆ ದನ್ಯವಾದ ತಿಳಿಸಿದ ಟಿಟಿಡಿ
ಟಿಟಿಡಿಗಾಗಿ ಹೊಸ ಆ್ಯಪ್ ಅಭಿವೃದ್ದಿ ಪಡಿಸಲು ಕೈ ಜೋಡಿಸಿದ ಜಿಯೋ ಪ್ಲಾಟ್‌ಫಾರ್ಮ್ ಅಧಿಕಾರಿಗಳಿಗೆ ಟಿಟಿಡಿ ದನ್ಯವಾದ ತಿಳಿಸಿದೆ. ವಿಶ್ವ ದರ್ಜೆಯ ಮೊಬೈಲ್ ಅಪ್ಲಿಕೇಶನ್ ಅನ್ನು ಹೊರತರುವಲ್ಲಿ Reliancw ಗ್ರೂಪ್ ಮಹತ್ತರವಾದ ಪಾತ್ರವಹಿಸಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಹೊಸ ಆ್ಯಪ್‌ನ ಅವಶ್ಯಕತೆ ಏನಿದೆ?
ಇನ್ನು ಕೊರೊನಾ ನಂತರ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡುವ ವಿಧಾನದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳು ಮೊದಲಿಗೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡುವುದು ಕಡ್ಡಾಯವಾಗಿದೆ. ಇತ್ತೀಚಿಗೆ ಈ ನಿಯಮದಲ್ಲಿ ಬದಲಾವಣೆ ಮಾಡಿದೆಯಾದರೂ, ಆನ್‌ಲೈನ್ ಮೂಲಕವೇ ಹಲವು ಸೇವೆಗಳನ್ನು ಟಿಟಿಡಿ ನೀಡುತ್ತಿದೆ. ಇದರ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಹೊಸ ಆ್ಯಪ್ ಅನ್ನು ಟಿಟಿಡಿ ಪರಿಚಯಿಸಿದೆ.
ಇಂದಿನ ಜಮಾನದಲ್ಲಿ ಎಲ್ಲವೂ ಆ್ಯಪ್ ಆಧಾರಿತ ಸೇವೆಗಳ ಭರಾಟೆ ಜೋರಾಗಿದೆ. ಅದರಂತೆ ಭಾರತದ ಅತಿ ಸಿರಿವಂತ ದೇವಸ್ಥಾನವಾದ ತಿಮ್ಮಪ್ಪನ ಸನ್ನಿಧಾನದ ಬಗ್ಗೆ ಅಗತ್ಯ ಮಾಹಿತಿ ನೀಡುವ ಆ್ಯಪ್‌ನ ಅವಶ್ಯಕತೆ ಅತಿ ಅಗತ್ಯವಾಗಿದೆ. ಇದಕ್ಕೆ ತಕ್ಕಂತೆ ಈ ಹೊಸ ಆ್ಯಪ್ ಅನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಹೇಳಲಾಗಿದೆ.


Click it and Unblock the Notifications








