Home
ಸುದ್ದಿಜಾಲ

ತಿರುಪತಿ ತಿಮ್ಮಪ್ಪನ ಭಕ್ತರ ಅನುಕೂಲಕ್ಕಾಗಿ ಟಿಟಿಡಿಯಿಂದ ಹೊಸ ಸೇವೆ ಪ್ರಾರಂಭ! ಅನುಕೂಲ ಏನು?

ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಬೇಟಿ ನೀಡುವ ಯಾತ್ರಿಕರಿಗೆ ಟಿಟಿಡಿ ಗುಡ್‌ನ್ಯೂಸ್‌ ನೀಡಿದೆ. ಭಕ್ತಾಧಿಗಳ ಅನುಕೂಲಕ್ಕಾಗಿ ಹಲವು ಸೇವೆಗಳನ್ನು ನೀಡುತ್ತಿರುವ ಟಿಟಿಡಿ ಇದೀಗ ತಿರುಮಲ ಬೆಟ್ಟದಲ್ಲಿ ಹೊಸದಾಗಿ 10 ಎಲೆಕ್ಟ್ರಿಕ್‌ ಬಸ್‌ಗಳನ್ನು ಪ್ರಾರಂಭಿಸಿದೆ. ಭಕ್ತಾಧಿಗಳು ಉಚಿತವಾಗಿ ಈ ಎಲೆಕ್ಟ್ರಿಕ್‌ ಬಸ್‌ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಹೌದು, ತಿಮ್ಮಪ್ಪನ ಆಲಯದಲ್ಲಿ ಉಚಿತ ಬಸ್‌ ಸೇವೆ ಈಗಾಗಲೇ ಲಭ್ಯವಿದೆ. ಇದೀಗ ಈ ಸೇವೆಗೆ ಹೊಸದಾಗಿ ಎಲೆಕ್ಟ್ರಿಕ್‌ ಬಸ್‌ ಸೇವೆಗಳನ್ನು ಪರಿಚಯಿಸಲಾಗಿದೆ. ತಿರುಪತಿಯಲ್ಲಿ ಪರಿಸರ ಸ್ನೇಹಿ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಈ ಹೊಸ ಹೆಜ್ಜೆಯನ್ನು ಇಡಲಾಗಿದೆ. ಹಾಗಾದ್ರೆ ಈ ಹೊಸ ಬಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ತಿರುಪತಿ ತಿಮ್ಮಪ್ಪನ ಭಕ್ತರ ಅನುಕೂಲಕ್ಕಾಗಿ ಟಿಟಿಡಿಯಿಂದ ಹೊಸ ಸೇವೆ ಪ್ರಾರಂಭ!

ತಿರುಪತಿ ತಿಮ್ಮಪ್ಪನ ಆಲಯಕ್ಕೆ ಕೋಟ್ಯಾಂತರ ಭಕ್ತಾಧಿಗಳು ಬೇಟಿ ನೀಡುತ್ತಾರೆ. ತಿರುಮಲ ಬೆಟ್ಟದಲ್ಲಿ ದೇವಸ್ಥಾನದಿಂದ ವಸತಿ ಗೃಹಗಳಿಗೆ, ಅನ್ನಾದನ ಛತ್ರಗಳಿಗೆ ತೆರಳುವುದಕ್ಕೆ ಉಚಿತ ಬಸ್‌ ಸೇವೆಯನ್ನು ಬಹಳ ವರ್ಷಗಳಿಂದ ಉಚಿತವಾಗಿ ನೀಡಲಾಗ್ತಿದೆ. ಇಷ್ಟು ದಿನ ಈ ಸೇವೆಯನ್ನು ಡಿಸೆಲ್‌ ಚಾಲಿತ ಬಸ್‌ಗಳನ್ನು ನೀಡುತ್ತಿದ್ದವು. ಆದರೆ ತಿರುಮಲದಲ್ಲಿ ಪರಿಸರ ಸ್ನೇಹಿ ಸೇವೆ ನೀಡುವುದಕ್ಕಾಗಿ ಹೊಸದಾಗಿ ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನು ಪ್ರಾರಂಭಿಸಲಾಗಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ಡೀಸೆಲ್ ಚಾಲಿತ ಬಸ್‌ಗಳನ್ನು ಹಂತಹಂತವಾಗಿ ನಿಲ್ಲಿಸುವ ಯೋಜನೆಯನ್ನು ಟಿಟಿಡಿ ಹಾಕಿಕೊಂಡಿದೆ. ಇದೇ ಕಾರಣಕ್ಕೆ ಇದೀಗ ಹತ್ತು ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನು ಪರಿಚಯಿಸಲಾಗಿದೆ. ಸದ್ಯ ಈ ಸೇವೆಗೆ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮ ರೆಡ್ಡಿ ಚಾಲನೆ ನೀಡಿದ್ದಾರೆ. ಇನ್ನು ಈ ಬಸ್‌ಗಳನ್ನು ಹೈದರಾಬಾದ್ ಮೂಲದ ಸಂಸ್ಥೆ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಕೊಡುಗೆಯಾಗಿ ನೀಡಿದ್ದು, ಈ ಎಲೆಕ್ಟ್ರಿಕ್‌ ಬಸ್‌ಗಳ ಬೆಲೆ ಸುಮಾರು 1.80 ಕೋಟಿ ರೂ.ಆಗಿದೆ.

ತಿರುಪತಿ ತಿಮ್ಮಪ್ಪನ ಭಕ್ತರ ಅನುಕೂಲಕ್ಕಾಗಿ ಟಿಟಿಡಿಯಿಂದ ಹೊಸ ಸೇವೆ ಪ್ರಾರಂಭ!

ಎಲೆಕ್ಟ್ರಿಕ್‌ ಬಸ್‌ಗಳ ವಿಶೇಷತೆ ಏನು?

TTD ತಿರುಮಲದಲ್ಲಿ ನಿವ್ವಳ ಶೂನ್ಯ ಹೊರಸೂಸುವಿಕೆಯ ಗುರಿಯನ್ನು ಸಾಧಿಸುವ ಗುರಿ ಹೊಂದಿದೆ. ತಿರುಮಲವನ್ನು ಸಂಪೂರ್ಣ ಗ್ರೀನ್‌ ಸಿಟಿಯಾಗಿ ಪರಿವರ್ತಿಸುವ ಪ್ಲಾನ್‌ ರೂಪಿಸಿದೆ. ಇದಕ್ಕೆ ಪೂರಕವಾಗಿ ಹೊಸ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ ಟಿಟಿಡಿ ಅಧಿಕಾರಿಗಳು ಅಧಿಕೃತ ಬಳಕೆಗಾಗಿ 35 ಇ-ಕಾರುಗಳನ್ನು (ಟಾಟಾ ನೆಕ್ಸಾನ್) ನೀಡಿದ್ದಾರೆ. ಆದರೆ ಪ್ರಸ್ತುತ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (APSRTC) ತಿರುಮಲ ಮತ್ತು ತಿರುಪತಿ ಘಾಟ್ ರಸ್ತೆಗಳಲ್ಲಿ 64 ಇ-ಬಸ್‌ಗಳನ್ನು ಓಡಿಸುತ್ತಿದೆ.

ಇನ್ನು ಇ-ಬಸ್‌ಗಳ ಅನುಕೂಲಕ್ಕಾಗಿ ಏಪ್ರಿಲ್ 15 ರೊಳಗೆ ತಿರುಮಲದಲ್ಲಿ ಚಾರ್ಜಿಂಗ್ ಸೆಂಟರ್‌ಗಳನ್ನು ಸ್ಥಾಪಿಸುವುದಾಗಿ ಟಿಟಿಡಿ ಹೇಳಿದೆ. ಇದಲ್ಲದೆ ಎಲೆಕ್ಟ್ರಿಕ್‌ ಬಸ್‌ಗಳನ್ನು ನಿರ್ವಹಿಸಲು M/s Olectra TTD ಚಾಲಕರಿಗೆ ತರಬೇತಿ ನೀಡಲಿದೆ ಎಂದು ಹೇಳಲಾಗಿದೆ. ಇದರ ಮೂಲಕ ನಾವು ತಿರುಮಲವನ್ನು ಹೆಚ್ಚು ಪರಿಸರ ಸ್ನೇಹಿ ಮತ್ತು ಮಾಲಿನ್ಯ ಮುಕ್ತಗೊಳಿಸಲಿದ್ದೇವೆ ಎಂದು ಹೇಳಿದೆ. ಅಲ್ಲದೆ ಪ್ರಸ್ತುತ ಇರುವ ಟ್ಯಾಕ್ಸಿಗಳನ್ನು ಇ-ವೆಹಿಕಲ್‌ಗಳೊಂದಿಗೆ ಬದಲಾಯಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.

ತಿರುಪತಿ ತಿಮ್ಮಪ್ಪನ ಭಕ್ತರ ಅನುಕೂಲಕ್ಕಾಗಿ ಟಿಟಿಡಿಯಿಂದ ಹೊಸ ಸೇವೆ ಪ್ರಾರಂಭ!

ಇದರ ನಡುವೆ ಟಿಟಿಡಿ 2023-24ನೇ ಸಾಲಿನಲ್ಲಿ ಒಟ್ಟು 4411 ಕೋಟಿ ರೂ.ಗಳ ಆದಾಯವನ್ನು ಅಂದಾಜಿಸಿದೆ. ಇದರಲ್ಲಿ 1600 ಕೋಟಿ ರೂ.ಗಳು ಹುಂಡಿ ಸಂಗ್ರಹದ ಮೂಲಕ ಬರಲಿದೆ ಎಂದು ಹೇಳಿದೆ. ಸದ್ಯ ಟಿಟಿಡಿ ಪ್ರಕಾರ, ಬ್ಯಾಂಕ್ ಠೇವಣಿಗಳ ಬಡ್ಡಿಯಲ್ಲಿ 990 ಕೋಟಿ, ಪ್ರಸಾದ ಮಾರಾಟದಿಂದ 500 ಕೋಟಿ, ವಿಶೇಷ ದರ್ಶನ ಟಿಕೆಟ್‌ನಿಂದ 330 ಕೋಟಿ, ಆರ್ಜಿತ ಸೇವೆ ಮೂಲಕ 140 ಕೋಟಿ ಮತ್ತು ವಸತಿ ಮತ್ತು ಬಾಡಿಗೆ ಮೂಲಕ 129 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ವರದಿಯಾಗಿದೆ.

Best Mobiles in India

English summary
Tirumala Tirupati Devasthanams (TTD) has launched 10 electric buses in Tirumala for pilgrims
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+