Tirumala: ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸೂಚನೆ ನೀಡಿದ ಟಿಟಿಡಿ! ಈ ಸೇವೆಯಲ್ಲಿ ಹೊಸ ಬದಲಾವಣೆ!
ತಿರುಪತಿಗೆ ಬರುವ ಭಕ್ತಾಧಿಗಳಿಗೆ ಟಿಟಿಡಿ ಮಹತ್ವದ ಸೂಚನೆಯೊಂದನ್ನು ನೀಡಿದೆ. ಇಲ್ಲಿಯವರೆಗೆ ತಿರುಮಲ(Tirumala) ತಿರುಪತಿ ಶ್ರೀವಾರಿ ದೇವಸ್ಥಾನಕ್ಕೆ ಸಂಬಂಧಿಸಿದ ವಿವರಗಳನ್ನು ನೀಡುತ್ತಿದ್ದ ಅಧಿಕೃತ ವೆಬ್‌ಸೈಟ್ ಅನ್ನು ಇದೀಗ ಬದಲಾಯಿಸಿರುವುದಾಗಿ ಹೇಳಿದೆ. ಅಂದರೆ ಇಲ್ಲಿಯವರೆಗೆ tirupatibalaji.ap.gov.in ಎಂದಿದ್ದ ಟಿಟಿಡಿ ವೆಬ್‌ಸೈಟ್ ಹೆಸರು ಇದೀಗ ಅಧಿಕೃತವಾಗಿ ttdevasthanams.ap.gov.in ಎಂದು ಬದಲಾಯಿಸಲಾಗಿದೆ.
ಹೌದು, ತಿರುಪತಿ ತಿರುಮಲ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಅನ್ನು ಬದಲಾಯಿಸಲಾಗಿದೆ. ಜಿಯೋ ಸಂಸ್ಥೆಯ ಸಹಯೋಗದೊಂದಿಗೆ ಹೊಸ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಟಿಟಿಡಿ ಹೇಳಿದೆ. ಇನ್ನು ಈ ಹೊಸ ವೆಬ್‌ಸೈಟ್ ಅನ್ನು ಒಂದು ಸಂಸ್ಥೆ ಒಂದು ವೆಬ್‌ಸೈಟ್ ಒಂದು ಮೊಬೈಲ್ ಅಪ್ಲಿಕೇಶನ್ ಭಾಗವಾಗಿ ಬದಲಾಯಿಸಲಾಗಿದೆ. ಹಾಗಾದ್ರೆ ತಿರುಮಲ ತಿರುಪತಿಯ ಹೊಸ ವೆಬ್‌ಸೈಟ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ತಿರುಪತಿ ತಿಮ್ಮಪ್ಪನ ವೆಬ್‌ಸೈಟ್ ಇದೀಗ ಬದಲಾಗಿದೆ. ಜಿಯೋ ಸಹಯೋಗದೊಂದಿಗೆ ಟಿಟಿಡಿ ಈ ನಿರ್ಧಾರಕ್ಕೆ ಬಂದಿದ್ದು, tirupatibalaji.ap.gov.in ಎಂದಿದ್ದ ಟಿಟಿಡಿ ವೆಬ್‌ಸೈಟ್ ಹೆಸರು ಇದೀಗ ಅಧಿಕೃತವಾಗಿ ttdevasthanams.ap.gov.in ಎಂದು ಬದಲಾಯಿಸಲಾಗಿದೆ. ತಿರುಪತಿಗೆ ಸಂಬಂಧಿಸಿದ ಎಲ್ಲಾ ವಿವಿಧ ವಿಷಯಗಳ ಜೊತೆಗೆ ಹಿಂದೂ ಧರ್ಮದ ವ್ಯಾಪಕ ಪ್ರಚಾರಕ್ಕಾಗಿ ಹೊಸ ವೆಬ್‌ಸೈಟ್ ttdevasthanams.ap.gov.in ಅನ್ನು ಪ್ರಾರಂಭಿಸಲಾಗಿದೆ ಎಂದು ಟಿಟಿಡಿ ಹೇಳಿದೆ.
ಈ ವೆಬ್‌ಸೈಟ್ ದೇವಾಲಯಕ್ಕೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್ ಆಗಿದ್ದು, 'ಒಂದು ಸಂಸ್ಥೆ, ಒಂದು ವೆಬ್‌ಸೈಟ್, ಒಂದು ಮೊಬೈಲ್ ಅಪ್ಲಿಕೇಶನ್' ಭಾಗವಾಗಿ ಹೆಸರು ಬದಲಾವಣೆ ಮಾಡಲಾಗಿದೆ. ಆದರಿಂದ ಇನ್ಮುಂದೆ ಶ್ರೀವಾರಿ ಭಕ್ತರು ttdevasthanams.ap.gov.in ವೆಬ್‌ಸೈಟ್ ಮೂಲಕ ಆನ್‌ಲೈನ್ ಸೇವೆಗಳನ್ನು ಪಡೆಯುವಂತೆ ಟಿಟಿಡಿ ಸೂಚಿಸಿದೆ. ಅಂದರೆ ಹೊಸ ವೆಬ್‌ಸೈಟ್‌ನ ಮೂಲಕ ತಿರುಪತಿಗೆ ಸಬಂಧಿಸಿದ ಎಲ್ಲಾ ರೀತಿಯ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ಪಡೆದುಕೊಳ್ಳಬಹುದು.

ಟಿಟಿಡಿಯ ಈ ನಿರ್ಧಾರದಿಂದ ತಿಮ್ಮಪ್ಪನ ಭಕ್ತರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ. ವಿವಿಧ ವಿಷಯಗಳಿಗೆ ಹಲವು ರೀತಿಯ ವೆಬ್‌ಸೈಟ್‌ಗಳಿಗೆ ಬೇಟಿ ನೀಡುವುದನ್ನು ತಪ್ಪಿಸಲಿದೆ. ತಿರುಪತಿ ತಿಮ್ಮಪ್ಪನ ಭಕ್ತರಿಗೆ ಒಂದೇ ಕಡೆ ಎಲ್ಲ ಸೌಲಭ್ಯ ಸಿಗುವಂತೆ ವೆಬ್‌ಸೈಟ್‌ನ ಹೆಸರನ್ನು ಬದಲಾಯಿಸುವ ಮೂಲಕ ಟಿಟಿಡಿ ಗುಡ್‌ನ್ಯೂಸ್ ನೀಡಿದೆ. ಇದರಿಂದ ಭಕ್ತರು ಶ್ರೀವಾರಿ ದರ್ಶನಕ್ಕಾಗಿ ಅಥವಾ ದೇವಸ್ಥಾನದ ವಿವರಗಳಿಗಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡಲು ಬಯಸಿದರೆ, ಹೊಸ ವೆಬ್‌ಸೈಟ್ ಅನ್ನು ಬಳಸಬೇಕಾಗುತ್ತದೆ.
ಈ ಹೊಸ ವೆಬ್‌ಸೈಟ್‌ನಲ್ಲಿ, ಭಕ್ತರು ತಿರುಪತಿಯ ಟಿಟಿಡಿ ಪ್ರದೇಶದಲ್ಲಿರುವ ದೇವಾಲಯಗಳಿಗೆ ಸಂಬಂಧಿಸಿದ ವಿವರಗಳೊಂದಿಗೆ ಸಂಬಂಧಿಸಿದ ದೇವಾಲಯಗಳಿಗೆ ಸಂಬಂಧಿಸಿದ ವಿವರಗಳನ್ನು ಸಹ ತಿಳಿದುಕೊಳ್ಳಬಹುದು. ಅಲ್ಲದೆ ತಿರುಪತಿಯ ಇತಿಹಾಸ ಸೇರಿದಂತೆ ಶ್ರೀವಾರಿ ದರ್ಶನ ಸಮಯದ ಬಗ್ಗೆ ಕೂಡ ವಿವರಣೆ ಇರಲಿದೆ. ಇದಲ್ಲದೆ, ಈ ವೆಬ್‌ಸೈಟ್ ಮೂಲಕ, ಶ್ರೀವಾರಿ ದೇವಾಲಯದ ವಿಶೇಷ ಫೋಟೋಗಳು ಮತ್ತು ವೀಡಿಯೊಗಳನ್ನು ಭಕ್ತರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಜೊತೆಗೆ ತಿರುಪತಿಯಲ್ಲಿ ಸಿಗುವ ಸೇವೆಗಳು, ಸಾರಿಗೆ ವಿವರಗಳು, ಬಸ್‌ಗಳು ಮತ್ತು ಇತರ ವಿವರಗಳನ್ನು ತಿಳಿದುಕೊಳ್ಳಬಹುದು.

ತಿರುಪತಿ ತಿಮ್ಮಪ್ಪನ ದರ್ಶನ ಟಿಕೆಟ್ ಬುಕ್ ಮಾಡುವುದು ಹೇಗೆ?
ಹಂತ:1 ಇದೀಗ ಹೊಸ ವೆಬ್‌ಸೈಟ್ ttdevasthanams.ap.gov.in ತೆರೆಯಿರಿ
ಹಂತ:2 ವೆಬ್‌ಸೈಟ್‌ನ ಹೋಮ್‌ಪೇಜ್‌ನಲ್ಲಿ "ಆನ್‌ಲೈನ್ ಬುಕಿಂಗ್" ಆಯ್ಕೆ ಕಾಣಲಿದೆ ಅದನ್ನು ಟ್ಯಾಪ್ ಮಾಡಿ
ಹಂತ:3 ಇದೀಗ TTD ದರ್ಶನ್ ಬುಕಿಂಗ್ ಆನ್‌ಲೈನ್ ಆಯ್ಕೆಯನ್ನು ಟ್ಯಾಪ್ ಮಾಡಿರಿ
ಹಂತ:4 ಇದರಲ್ಲಿ ನೀವು ನಿಮ್ಮ ಲಾಗಿನ್ ಐಡಿ ಕ್ರಿಯೆಟ್ ಮಾಡಬೇಕಾಗುತ್ತದೆ.
ಹಂತ:5 ಇದಕ್ಕಾಗಿ ನೀವು ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಅಕೌಂಟ್ ಕ್ರಿಯೆಟ್ ಮಾಡಬೇಕು
ಹಂತ:6 ನಂತರ ಲಾಗಿನ್ ಆಗಿ ಟಿಟಿಡಿ ಟಿಕೆಟ್‌ಗಾಗಿ ಆನ್‌ಲೈನ್ ಬುಕಿಂಗ್ ಫಾರ್ಮ್ ನಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ
ಹಂತ:7 ಇಲ್ಲಿ ನಿಮಗೆ ದರ್ಶನಕ್ಕೆ ಟಿಕೆಟ್ ಲಭ್ಯವಿರುವ ದಿನಾಂಕದ ವಿವರಗಳನ್ನು ತೋರಿಸಲಾಗುತ್ತದೆ
ಹಂತ:8 ಇದರಲ್ಲಿ ನಿಮಗೆ ಸೂಕ್ತ ಎನಿಸುವ ದಿನಾಂಕವನ್ನು ಆಯ್ಕೆ ಮಾಡುವ ಮೂಲಕ ಟಿಕೆಟ್ ಬುಕ್ ಮಾಡಬಹುದು
ಹಂತ:9 ನಂತರ ಟಿಕೆಟ್ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು
ಹಂತ:10 ನೀವು ಟಿಕೆಟ್ ಶುಲ್ಕ 300ರೂ. ಅನ್ನು ಪಾವತಿಸಿದ ತಕ್ಷಣವೇ TTD ಟಿಕೆಟ್ ಅನ್ನು ಇಮೇಲ್ ಮೂಲಕ ಅಥವಾ ಟಿಟಿಡಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಹುದು.


Click it and Unblock the Notifications








