ತಿರುಪತಿ ದರ್ಶನಕ್ಕೆ ಹೋಗ್ತಾ ಇದ್ದೀರಾ? ಇವರಿಗೆ ಮಾತ್ರ ತಿಮ್ಮಪ್ಪನ ದರ್ಶನ ಬಹುಬೇಗ ಸಿಗಲಿದೆ!
ತಿರುಪತಿ ತಿಮ್ಮಪ್ಪನ ದರ್ಶನ ಮಾಡುವವರಿಗೆ ಟಿಟಿಡಿ ಗುಡ್‌ನ್ಯೂಸ್ ನೀಡಿದೆ. ತಿಮ್ಮಪ್ಪನ ದರ್ಶನಕ್ಕೆ ಬಸ್‌ಗಳಲ್ಲಿ ಬರುವ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದೆ. ಅದರಂತೆ ತೆಲಂಗಾಣ ಇಲ್ಲವೇ ಆಂದ್ರ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಬರುವ ಭಕ್ತರಿಗಾಗಿ ನೀಡುವಗ ದರ್ಶನ ಟಿಕೆಟ್‌ಗಳ ಕೋಟಾವನ್ನು ಹೆಚ್ಚಿಸಲು ಮುಂದಾಗಿದೆ.
ಹೌದು, ತಿರುಮಲ ತಿರುಪತಿ ದೇವಸ್ಥಾನ ಹೊಸ ನಿರ್ಧಾರವನ್ನು ಕೈಗೊಂಡಿದೆ. ಅದರಂತೆ ಬಸ್‌ಗಳಲ್ಲಿ ಪ್ರಯಾಣ ಮಾಡಿಕೊಂಡು ಬರುವ ಭಕ್ತರಿಗೆ ವಿಶೇಷ ಟಿಕೆಟ್ ಕೋಟಾವನ್ನು ಹೆಚ್ಚಿಸಲು ಮುಂದಾಗಿದೆ. ಅದರಂತೆ ಆಂದ್ರಪ್ರದೇಶ ಮತ್ತು ತೆಲಂಗಾಣ ಆರ್ ಟಿಸಿ ಬಸ್ ಗಳಲ್ಲಿ ಬರುವ ಪ್ರಯಾಣಿಕರಿಗೆ ನಿಗದಿಪಡಿಸಿರುವ ದರ್ಶನ್ ಕೋಟಾ ಹೆಚ್ಚಿಸುವುದಾಗಿ ಹೇಳಿದೆ. ಹಾಗಾದ್ರೆ ಈ ಕೋಟಾದಲ್ಲಿ ದರ್ಶನ್ ಟಿಕೆಟ್ ಪಡೆದುಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಷ್ಟು ದಿನ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಬಂದವರಿಗೆ ವಿಶೇಷ ಆದ್ಯತೆ ನೀಡುತ್ತಿದ್ದ ಟಿಟಿಡಿ ತನ್ನ ನಿಲುವನ್ನು ಸಡಿಲ ಮಾಡಿದೆ. ಇದಕ್ಕಾಗಿ ಇತ್ತೀಚಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿ ಬರುತ್ತಿದ್ದವ ಭಕ್ತರಿಗಾಗಿ ವಿಶೇಷ ದರ್ಶನ್ ಟಿಕೆಟ್ ಕೋಟಾವನ್ನು ನೀಡುತ್ತಿದೆ. ಇದೀಗ ಈ ಕೋಟಾವನ್ನು ಮತ್ತಷ್ಟು ಹೆಚ್ಚಿಸಲು ನಿರ್ಧಾರ ಮಾಡಿದೆ. ಇದೀಗ ಅವರಿಗೆ ನೀಡುತ್ತಿರುವ ದರ್ಶನ ಟಿಕೆಟ್‌ಗಳ ಕೋಟಾವನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಿದೆ.
ಇನ್ನು ಈ ಕೋಟಾದಲ್ಲಿ ಇಲ್ಲಿಯವರೆಗೆ ಎಪಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ರಾಜ್ಯಾದ್ಯಂತ 600 ಟಿಕೆಟ್‌ಗಳನ್ನು ನೀಡುತ್ತಿತ್ತು. ಆದರೆ ಇತ್ತೀಚೆಗೆ ಇದನ್ನು 1000 ಕ್ಕೆ ಹೆಚ್ಚಿಸಿದೆ. ಇನ್ನು ವಿಶೇಷ ದರ್ಶನ್ ಕೋಟಾದ ಟಿಕೆಟ್ ಪಡೆಯಲು ಬಯಸುವ ಪ್ರಯಾಣಿಕರು ಬಸ್ ದರದ ಜೊತೆಗೆ ಶ್ರೀವಾರಿ ದರ್ಶನಕ್ಕೆ 300 ರೂಪಾಯಿ ದರ್ಶನ ಟಿಕೆಟ್ ಕೂಡ ಖರೀದಿಸಬೇಕಾಗುತ್ತದೆ. ಇನ್ನು ಈ ಟಿಕೆಟ್‌ಗಳು ಈ ತಿಂಗಳ 15 ರಿಂದ ಅಕ್ಟೋಬರ್ 7 ರವರೆಗೆ ಪ್ರಯಾಣ ಮತ್ತು ದರ್ಶನಕ್ಕೆ ಲಭ್ಯವಾಗಲಿವೆ.
ಇನ್ನು ಈ ಟಿಕೆಟ್‌ಗಳನ್ನು ನೇರವಾಗಿ ಖರೀದಿಸಲು ಸಾದ್ಯವಿಲ್ಲ. ಬದಲಿಗೆ ನೀವು ಆರ್‌ಟಿಸಿ ಅಧಿಕೃತ ವೆಬ್‌ಸೈಟ್ www.apsrtconline.in ಮೂಲಕ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಇನ್ನು ಈ ಹೆಚ್ಚುವರಿ ಕೋಟಾ ಟಿಕೆಟ್‌ಗಳ ಬುಕ್ಕಿಂಗ್ ಮಂಗಳವಾರದಿಂದಲೇ ಜಾರಿಗೆ ಬಂದಿದೆ ಎಂದು ಆರ್‌ಟಿಸಿ ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ಆರ್‌ಟಿಸಿ ಬಸ್‌ಗಳಲ್ಲಿ ತಿರುಮಲ ತಲುಪುವ ಪ್ರಯಾಣಿಕರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಸುಲಭವಾಗಿ ದೊರೆಯಲಿದೆ.
ಇದೇ ಸಮಯದಲ್ಲಿ ತೆಲಂಗಾಣ ಆರ್‌ಟಿಸಿ ಬಸ್‌ಗಳಲ್ಲಿ ಬರುವ ಪ್ರಯಾಣಿಕರಿಗೆ ಪ್ರತಿದಿನ ಸಾವಿರ ಟಿಕೆಟ್‌ಗಳನ್ನು ತಲಾ 300 ರೂ.ಗಳಂತೆ ನೀಡಲಾಗ್ತಿದೆ. ಇನ್ನು ಈ ಸೇವೆಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಮೂಲಕ ತಿರುಮಲ ತಲುಪುವ ಪ್ರಯಾಣಿಕರಿಗೆ ಮಾತ್ರ ನೀಡಲಾಗ್ತಿದೆ ಅನ್ನೊದು ವಿಶೇಷವಾಗಿದೆ. ಅಲ್ಲದೆ ಈ ಟಿಕೆಟ್‌ಗಳನ್ನು ಬುಕ್ ಮಾಡಿಕೊಮಡು ದರ್ಶನಕ್ಕೆ ಹೋಗುವ ಭಕ್ತರಿಗೆ ಪ್ರತಿದಿನ ಬೆಳಗ್ಗೆ 11 ಮತ್ತು ಸಂಜೆ 4 ಗಂಟೆಗೆ ತ್ವರಿತ ದರ್ಶನ ಸ್ಲಾಟ್‌ಗಳ ವ್ಯವಸ್ಥೆ ಮಾಡಲಾಗಿದೆ.
ಇನ್ನು ತಿರುಪತಿಗೆ ತೆಲಂಗಾಣ ಇಲ್ಲವೇ ಆಂದ್ರ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಪ್ರಯಾಣಿಸುವ ಭಕ್ತರಿಗೆ ಈ ಸೇವೆ ಲಭ್ಯವಾಗಲಿದೆ. ಇನ್ನು ಈ ಕೋಟಾದಲ್ಲಿ ಟಿಕೆಟ್ ಪಡೆದುಕೊಂಡು ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಭಕ್ತರು ತಿರುಮಲ ಬಸ್ ನಿಲ್ದಾಣವನ್ನು ತಲುಪಿದ ನಂತರ, ಆರ್‌ಟಿಸಿ ಮೇಲ್ವಿಚಾರಕರು ಅವರಿಗೆ ತ್ವರಿತ ದರ್ಶನಕ್ಕೆ ಸಹಾಯ ಮಾಡುತ್ತಾರೆ. ಇದೇ ಸಮಯದಲ್ಲಿ, RTC ಕೆಲವು ಡಿಪೋಗಳಿಂದ ತಿರುಮಲಕ್ಕೆ ವಿಶೇಷ ಪ್ರವಾಸ ಪ್ಯಾಕೇಜ್ಗಳನ್ನು ನಡೆಸುತ್ತಿದೆ. ಈ ವಿಶೇಷ ಪ್ರವಾಸ ಪ್ಯಾಕೇಜ್ ಸೇವೆಗಳನ್ನು ಸಹ ಪಡೆದುಕೊಳ್ಳುವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಸದ್ಯ ಟಿಟಿಡಿ ತೆಗೆದುಕೊಂಡಿರುವ ನಿರ್ಧಾರದಿಂದ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.


Click it and Unblock the Notifications








