Home
ಸುದ್ದಿಜಾಲ

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್‌! ತಿಮ್ಮಪ್ಪನ ದರ್ಶನ ಇನ್ನಷ್ಟು ಸುಲಭ!

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತಾಧಿಗಳಿಗೆ ಟಿಟಿಡಿ ಗುಡ್‌ನ್ಯೂಸ್‌ ನೀಡಿದೆ. ಇದರಿಂದ ತಿಮ್ಮಪ್ಪನ ದರ್ಶನ ಮಾಡುವುದು ಇನ್ನಷ್ಟು ಸುಲಭವಾಗಲಿದೆ ಎಂದು ಹೇಳಿದೆ. ಇದಕ್ಕಾಗಿ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಫೇಸ್‌ ರೆಕಗ್ನಿಷನ್ (ಮುಖ ಗುರುತಿಸುವಿಕೆ ) ಟೆಕ್ನಾಲಜಿಯನ್ನು ಪರಿಚಯಿಸಿದೆ. ಈ ಹೊಸ ಸಿಸ್ಟಂ ಇದೇ ಮಾರ್ಚ್‌ 1 ರಿಂದ ಜಾರಿಗೆ ಬರಲಿದೆ.

ಹೌದು, ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಶೀಘ್ರದಲ್ಲೇ ಹೊಸ ಬದಲಾವಣೆ ಶುರುವಾಗಲಿದೆ. ದೇವರ ದರ್ಶನದಲ್ಲಿ ಉಂಟಾಗುತ್ತಿದ್ದ ಲೋಪದೋಷಗಳನ್ನು ತೆಗೆದುಹಾಕುವುದಕ್ಕಾಗಿ ಫೇಸ್‌ ರೆಕಗ್ನಿಷನ್ (ಮುಖ ಗುರುತಿಸುವಿಕೆ ) ಟೆಕ್ನಾಲಜಿ ಪರಿಚಯಿಸಲಾಗ್ತಿದೆ. ಹಾಗಾದ್ರೆ ಈ ಹೊಸ ಸಿಸ್ಟಂ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್‌! ತಿಮ್ಮಪ್ಪನ ದರ್ಶನ ಇನ್ನಷ್ಟು ಸುಲಭ

ತಿರುಪತಿ ತಿಮ್ಮಪ್ಪನ ದರ್ಶನ ಬಯಸುವವರು ಮಾರ್ಚ್‌ ಒಂದರಿಂದ ಫೇಸ್‌ ರೆಕಗ್ನಿಷನ್ ಮೂಲಕ ದರ್ಶನ ಟಿಕೆಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಹೊಸ ಫೇಸ್‌ ರೆಕಗ್ನಿಷನ್ ಸಿಸ್ಟಂ ಸರ್ವ ದರ್ಶನ, ಟೋಕನ್ ರಹಿತ ದರ್ಶನ (ಪವಿತ್ರ ದರ್ಶನ), ಲಡ್ಡು ವಿತರಣೆ, ವಸತಿ ಹಂಚಿಕೆ ವ್ಯವಸ್ಥೆಗಳು, ಎಚ್ಚರಿಕೆ ಠೇವಣಿ ಮರುಪಾವತಿ ಎಲ್ಲಾ ವಿಭಾಗಗಳಲ್ಲಿಯೂ ಹೊಸ ಟೆಕ್ನಾಲಜಿಯನ್ನು ಪ್ರಯೋಗಿಸಲಾಗುವುದು ಎಂದು ಟಿಟಿಡಿ ಹೇಳಿದೆ.

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್‌! ತಿಮ್ಮಪ್ಪನ ದರ್ಶನ ಇನ್ನಷ್ಟು ಸುಲಭ

ಸದ್ಯ ಮಾರ್ಚ್ 1 ರಿಂದ ವೈಕುಂಟಂ 2 ಮತ್ತು ಎಎಂಎಸ್ ಸಿಸ್ಟಮ್‌ಗಳಲ್ಲಿ ಫೇಸ್‌ ರೆಕಗ್ನಿಷನ್ ಸಿಸ್ಟಂ ಅನ್ನು ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಗುತ್ತದೆ ಎನ್ನಲಾಗಿದೆ. ಟಿಟಿಡಿ ನೀಡಿರುವ ಮಾಹಿತಿಯ ಪ್ರಕಾರ ಲಡ್ಡು ಪ್ರಸಾದ ವಿತರಣೆಯಿಂದ ಹಿಡಿದು ಸರ್ವ ದರ್ಶನಂ ಟೋಕನ್‌ಗಳವರೆಗೆ ಸಾಕಷ್ಟು ಲೋಪದೋಷಗಳು ನಡೆದಿವೆ ಎನ್ನಲಾಗಿದೆ. ಅಲ್ಲದೆ ಭಕ್ತರಿಗೆ ವಸತಿ ಮಂಜೂರು ಮಾಡುವವರೆಗೆ ಕೆಲವು ಅಕ್ರಮಗಳು ನಡೆಯುತ್ತಿವೆ ಎಂದು ಟಿಟಿಡಿ ಹೇಳಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಫೇಸ್‌ ರೆಕಗ್ನಿಷನ್ ಸಿಸ್ಟಂ ಉತ್ತಮ ಆಯ್ಕೆಯಾಗಿದೆ ಎಂದು ಹೇಳಲಾಗಿದೆ.

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್‌! ತಿಮ್ಮಪ್ಪನ ದರ್ಶನ ಇನ್ನಷ್ಟು ಸುಲಭ

ತಿರುಪತಿಯಲ್ಲಿ ಕೆಲವು ಭಕ್ತರು ಶಿಫಾರಸು ಪತ್ರಗಳೊಂದಿಗೆ ವಸತಿ ಪಡೆಯುತ್ತಾರೆ. ಇದರಲ್ಲಿ ಕೆಲವು ಭಕ್ತರು ದಲ್ಲಾಳಿಗಳ ಮೂಲಕ ವಸತಿ ಪಡೆಯಲು ಮುಂದಾಗುತ್ತಿದ್ದಾರೆ. ಇದರಿಂದ ದಲ್ಲಾಳಿಗಳು ಕಾಶನ್ ಡಿಪಾಸಿಟ್ ಅನ್ನು ಪಡೆದುಕೊಂಡು ವಂಚಿಸುತ್ತಿದ್ದಾರೆ ಅನ್ನೊದು ಬಹಿರಂಗವಾಗಿದೆ. ಕಾಶನ್ ಠೇವಣಿ ವಾಪಸ್ ಪಡೆಯಲು ಭಕ್ತರು ದಲ್ಲಾಳಿ ಬಳಿ ಹೋದಾಗ ದಲ್ಲಾಳಿಗಳು ಭಕ್ತರ ಹಣವನ್ನು ವಾಪಾಸ್‌ ಮಾಡದೆ ವಂಚಿಸಿರುವ ಘಟನೆಗಳು ವರದಿಯಾಗಿವೆ.

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್‌! ತಿಮ್ಮಪ್ಪನ ದರ್ಶನ ಇನ್ನಷ್ಟು ಸುಲಭ

ಫೇಶಿಯಲ್ ರೆಕಗ್ನಿಷನ್ ಟೆಕ್ನಾಲಜಿ ಎಂದರೇನು?

ತಿರುಪತಿಯಲ್ಲಿ ಫೇಸ್‌ ರೆಕಗ್ನಿಷನ್ ಸಿಸ್ಟಂ ಜಾರಿಗೆ ತರುವುದರಿಂದ ದರ್ಶನ ಹಾಗೂ ಲಡ್ಡು ವಿತರಣೆಯ ಕಾರ್ಯದಲ್ಲಿ ಉಪಯೋಗಕ್ಕೆ ಬರಲಿದೆ. ಫೇಸ್‌ ರೆಕಗ್ನಿಷನ್ ಸಿಸ್ಟಂ ಹೆಸರೇ ಸೂಚಿಸುವಂತೆ ವ್ಯಕ್ತಿಯ ಮುಖವನ್ನು ಬಳಸಿಕೊಂಡು ಅವರ ಗುರುತನ್ನು ಗುರುತಿಸುವ ಕಾರ್ಯವನ್ನು ಈ ಸಿಸ್ಟಂ ಮಾಡಲಿದೆ. ಅಂದರೆ ಫೇಸ್‌ ರೆಕಗ್ನಿಷನ್ ಬಯೋಮೆಟ್ರಿಕ್ ಭದ್ರತೆಯ ಮತ್ತೊಂದು ರೂಪವಾಗಿದೆ.

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್‌! ತಿಮ್ಮಪ್ಪನ ದರ್ಶನ ಇನ್ನಷ್ಟು ಸುಲಭ

ಇನ್ನು ಇತ್ತೀಚಿಗೆ ಟಿಟಿಡಿ ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್‌ ಅನ್ನು ಪರಿಚಯಿಸಿದೆ. ಈ ಆ್ಯಪ್‌ ತಿರುಪತಿ ಯಾತ್ರೆಯ ಸಮಯದಲ್ಲಿ ನಿಮಗೆ ಉಪಯೋಗಕ್ಕೆ ಬರಲಿದೆ. ಇದು ತಿಮ್ಮಪ್ಪನ ಭಕ್ತರಿಗೆ ತಡೆರಹಿತ ತೀರ್ಥಯಾತ್ರೆಯ ಅನುಭವವನ್ನು ಒದಗಿಸಲಿದೆ ಎನ್ನಲಾಗಿದೆ. ಇನ್ನು ಈ ಆ್ಯಪ್‌ ಅನ್ನು JIO ಪ್ಲಾಟ್‌ಫಾರ್ಮ್‌ ಬೆಂಬಲದೊಂದುಗೆ ಅಭಿವೃದ್ಧಿಪಡಿಸಲಾಗಿದೆ. ತಿಮ್ಮಪ್ಪನ್ನ ಸನ್ನಿಧಿಯಲ್ಲಿ ಬಿಡುಗಡೆಯಾಗಿರುವ ಈ ಆ್ಯಪ್‌ ಬಳಕೆದಾರರಿಗೆ ಬೆರಳ ತುದಿಯಲ್ಲಿಯೇ ಅನೇಕ ಮಾಹಿತಿಗಳನ್ನು ನೀಡಲಿದೆ. ಇದರಲ್ಲಿ ಮುಖ್ಯವಾಗಿ ದೇವರ ದರ್ಶನ ಟಿಕೆಟ್‌ ಬುಕಿಂಗ್‌, ದೇವಸ್ಥಾನಕ್ಕೆ ಸಂಬಂಧಿಸಿದ ರೂಮ್‌ಗಳ ಬುಕ್ಕಿಂಗ್‌, ಇ-ಹುಂಡಿ ಸೇವೆ ಸೇರಿದಂತೆ ವಿವಿಧ ಯಾತ್ರಿ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
The TTD higher authorities are of hope that introducing the face recognition system may avert the irregularities to a maximum extent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+