Home
ಸುದ್ದಿಜಾಲ

ತಿರುಪತಿಗೆ ಹೋಗುವ ಪ್ಲಾನ್‌ ಇದ್ದರೆ ಮುಂದೂಡಿ! ಯಾಕೆ ಅಂತೀರಾ ಕಾರಣ ಇಲ್ಲಿದೆ!

ನೀವು ತಿರುಪತಿಗೆ ಹೋಗುವ ಪ್ಲಾನ್‌ ಮಾಡಿದ್ದರೆ ಸ್ವಲ್ಪ ದಿನಗಳ ಕಾಲ ಮುಂದೂಡುವುದು ಸೂಕ್ತ. ಏಕೆಂದರೆ ಕಳೆದ ಒಂದು ವಾರದಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ದರ್ಶನಕ್ಕಾಗಿ 24ಗಂಟೆಗಳಿಗೂ ಅಧಿಕ ಸಮಯ ತೆಗೆದುಕೊಳ್ಳಬಹುದು ಎಂದು ಟಿಟಿಡಿ ಹೇಳಿದೆ.

ಹೌದು, ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಲಕ್ಷಾಂತರ ಭಕ್ತರ ಬೇಟಿ ನೀಡುತ್ತಿದ್ದು, ಭಾರಿ ನೂಕುನುಗ್ಗಲು ಉಂಟಾಗಿದೆ ಎಂದು ಟಿಟಿಡಿ ಹೇಳಿದೆ. ಅಲ್ಲದೆ ಸ್ವಲ್ಪ ದಿನಗಳ ಕಾಲ ಭಕ್ತರು ತಿರುಪತಿ ಬೇಟಿಯನ್ನು ಮುಂದೂಡುವುದು ಸೂಕ್ತ ಎಂದಿದೆ. ಪ್ರಸ್ತುತ ದರ್ಶನಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದರಿಂದ ದರ್ಶನದ ಸಮಯ ಹೆಚ್ಚಿನ ಅವಧಿ ತೆಗೆದುಕೊಳ್ಳಲಿದೆ. ಈ ವಿಚಾರವಾಗಿ ಇನ್ನು ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ತಿರುಪತಿಗೆ ಹೋಗುವ ಪ್ಲಾನ್‌ ಇದ್ದರೆ ಮುಂದೂಡಿ! ಯಾಕೆ ಅಂತೀರಾ ಕಾರಣ ಇಲ್ಲಿದೆ!

ಬೇಸಿಗೆ ರಜೆ ಮುಗಿದು ಶಾಲಾ ಕಾಲೇಜುಗಳ ಪ್ರಾರಂಭವಾಗುತ್ತಿರುವ ಈ ಸಮಯದಲ್ಲಿ ತಿರುಪತಿಗೆ ಬೇಟಿ ನೀಡುವವರ ಸಂಖ್ಯೆಯಲ್ಲಿ ದಿಡೀರ್‌ ಹೆಚ್ಚಳವಾಗಿದೆ. ಇದರ ಪರಿಣಾಮ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಎರಡು ದಿನಗಳ ಕಾಲ ಸರದಿಯಲ್ಲಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ನೀವೆನಾದರೂ ಈ ಸಮಯದಲ್ಲಿ ತಿರುಪತಿಗೆ ಬೇಟಿ ನೀಡುವ ಪ್ಲಾನ್‌ ಮಾಡಿದ್ದರೆ ಮುಂದೂಡುವುದು ಸೂಕ್ತವಾಗಿದೆ. ಅದರಲ್ಲೂ ಮಕ್ಕಳನ್ನು ಕರೆದುಕೊಂಡು ಹೋಗುವವರು ಇನ್ನಷ್ಟು ದಿನಗಳ ಕಾಲ ಮುಂದೂಡುವುದು ಉತ್ತಮ.

ದರ್ಶನಕ್ಕಾಗಿ ಕಾದು ಕುಳಿತುಕೊಳ್ಳುವ ಕಂಪಾರ್ಟ್‌ಮೆಂಟ್‌ಗಳು ಭಕ್ತರಿಂದ ತುಂಬಿ ಹೋಗಿವೆ. ಇನ್ನು ಭಕ್ತರ ಸಂಖ್ಯೆ ಹೆಚ್ಚಾದಂತೆ ತಿರುಪತಿಯಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಅಲ್ಲದೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸೆಕ್ಯುರಿಟಿ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಟಿಟಿಡಿ ಅಧಿಕಾರಿಗಳು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ತಿರುಪತಿಗೆ ಹೋಗುವ ಪ್ಲಾನ್‌ ಇದ್ದರೆ ಮುಂದೂಡಿ! ಯಾಕೆ ಅಂತೀರಾ ಕಾರಣ ಇಲ್ಲಿದೆ!

ಇದಲ್ಲದೆ ಸಾಮಾನ್ಯ ಯಾತ್ರಾರ್ಥಿಗಳಿಗೆ ಹೆಚ್ಚಿನ ದರ್ಶನ ಸಮಯವನ್ನು ಒದಗಿಸುವುದಕ್ಕಾಗಿ, ವಿಐಪಿ ಶಿಫಾರಸು ಪತ್ರಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಒಂದು ಗಂಟೆಯ ದರ್ಶನ ಸಮಯ ಉಳಿತಾಯವಾಗಿದೆ ಎಂದು ಟಿಟಿಡಿ ಹೇಳಿದೆ. ಆದರೆ ವಿಐಪಿಗಳು ದೇವಸ್ಥಾನಕ್ಕೆ ಭೇಟಿ ನೀಡಿದರೆ ನೇರವಾಗಿ ದರ್ಶನ ಪಡೆಯಬಹುದಾಗಿದೆ. ಸದ್ಯದ ಮಾಹಿತಿ ಪ್ರಕಾರ ಇದೇ ಗುರುವಾರ ಒಟ್ಟು 70,160 ಭಕ್ತರು ತಿರುಮಲಕ್ಕೆ ಭೇಟಿ ನೀಡಿದ್ದು, 3.67 ಕೋಟಿ ಆದಾಯ ಹರಿದು ಬಂದಿದೆ.

ಇನ್ನು ತಿರುಪತಿಗೆ ಬೇಟಿ ನೀಡಲು ಬಯಸುವ ಕನ್ನಡಿಗರಿಗೊಂದು ಗುಡ್‌ನ್ಯೂಸ್‌ ಸಿಕ್ಕಿದೆ. ಬೆಂಗಳೂರಿನಿಂದ ನೇರವಾಗಿ ತಿರುಪತಿಗೆ ಹೆಲಿಕಾಪ್ಟರ್‌ ಸೇವೆ ಪ್ರಾರಂಭವಾಗಿದೆ. ಬೆಂಗಳೂರಿನಿಂದ ತಿರುಪತಿಗೆ ಹೆಲಿಕಾಪ್ಟರ್‌ ಸೇವೆ ನೀಡುವುದಕ್ಕೆ ಪ್ಲೇ ಬ್ಲೇಡ್ ಇಂಡಿಯಾ ಮುಂದಾಗಿದೆ. ಹಂಚ್ ವೆಂಚರ್ಸ್ ಮತ್ತು ಬೇಡ್ ಏರ್ ಮೊಬಿಲಿಟಿ ಜಂಟಿಯಾಗಿ ಸ್ಥಾಪಿಸಿರುವ ಕಂಪೆನಿಯು ಬೆಂಗಳೂರು ತಿರುಪತಿ ನಡುವೆ ಹಲಿಕಾಪ್ಟರ್ ಸೇವಯನ್ನು ಪರಿಚಯಿಸಿದೆ. ಇದರಿಂದ ಹಲಿಕಾಪ್ಟರ್‌ನಲ್ಲಿ ತಿರಪತಿಗೆ ತೆರಳಲು ಬಯಸುವ ಭಕ್ತರು ಬೆಂಗಳೂರಿನಿಂದ ತಿರುಪತಿಗೆ, ತಿರುಪತಿಯಿಂದ ಬೆಂಗಳೂರಿಗೆ ಪ್ರಯಾಣಿಸಬಹುದು.

ತಿರುಪತಿಗೆ ಹೋಗುವ ಪ್ಲಾನ್‌ ಇದ್ದರೆ ಮುಂದೂಡಿ! ಯಾಕೆ ಅಂತೀರಾ ಕಾರಣ ಇಲ್ಲಿದೆ!

ಈ ಸೇವೆಯು ಭಕ್ತರ ಬೇಡಿಯ ಆಧಾರದ ಮೇಲೆ ಲಭ್ಯವಾಗಲಿದೆ. ಫ್ಲೈಬ್ಲೇಡ್ ಇಂಡಿಯಾ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಪ್ರತಿದಿನ ಬೆಳಿಗ್ಗೆ 9.30 ರ ಸುಮಾರಿಗೆ ಈ ಸೇವೆಯನ್ನು ಪ್ರಾರಂಭಿಸಲಿದೆ. ಅದರಂತೆ ಭಕ್ತರು ಬೆಳಗ್ಗೆ 9.15 ರಿಂದ 9:30ಕ್ಕೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದರೆ ಅದೇ ದಿನ ಸಂಜೆ 4:00 ರಿಂದ 4:15 ಗಂಟೆಗೆ ತಿರುಪತಿಯಿಂದ ಹಿಂತಿರುಗಬಹುದು ಎಂದು ಹೇಳಲಾಗಿದೆ. ಈ ಸೇವೆಯಲ್ಲಿ ಭಕ್ತಾಧಿಗಳು ಕೇವಲ 1.5 ಗಂಟೆಗಳಲ್ಲಿ ದೇವಸ್ಥಾನಕ್ಕೆ ತಲುಪಬಹುದು ಎನ್ನಲಾಗಿದೆ. ಇನ್ನು ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನಿಂದ ತಿರುಪತಿಗೆ ಪ್ರಯಾಣಿಸುವುದಕ್ಕೆ ಜಿಎಸ್‌ಟಿ (GST) ಹೊರತುಪಡಿಸಿ ಸುಮಾರು 3,50,000ರೂ. ವೆಚ್ಚವಾಗಲಿದೆ.

Best Mobiles in India

English summary
Tirupati tirumala heavy rush of devotees: 24 hours Sarvadarshan:TTD
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+