Tirupati: ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್: ಸರ್ವದರ್ಶನಂ ಟಿಕೆಟ್ ಬುಕಿಂಗ್ ಪ್ರಾರಂಭ!
ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಬಯಸುವವರಿಗೆ ಟಿಟಿಡಿ ಗುಡ್‌ನ್ಯೂಸ್ ನೀಡಿದೆ. ವೈಕುಂಠ ಏಕಾದಶಿ ದರ್ಶನದ ಟಿಕೆಟ್ ವಿತರಣೆಯ ನಂತರ ಸ್ಥಗಿತವಾಗಿದ್ದ ಸರ್ವದರ್ಶನ ಟಿಕೆಟ್ ಬುಕಿಂಗ್ ಇಂದಿನಿಂದ (ಜನವರಿ 2) ಮತ್ತೆ ಪ್ರಾರಂಭವಾಗಿದೆ. ಅದರಂತೆ ಜನವರಿ 2ರಿಂದ ತಿಮ್ಮಪ್ಪನ ದರ್ಶನ ಪಡೆಯಲು ಬಯಸುವ ಭಕ್ತರಿಗೆ ಸರ್ವದರ್ಶನ ಟೋಕನ್‌ಗಳನ್ನು ನೀಡುವುದಕ್ಕೆ ಟಿಟಿಡಿ ಮುಂದಾಗಿದೆ.
ಹೌದು, ತಿರುಪತಿ ತಿರುಮಲ ಶ್ರೀವಾರಿ ದರ್ಶನದ ಸರ್ವದರ್ಶನ ಟಿಕೆಟ್ ಬುಕಿಂಗ್ ಶುರುವಾಗಿದೆ. ಇಂದಿನಿಂದ ತಿರುಪತಿಯ ಕೌಂಟರ್‌ಗಳಲ್ಲಿ ಸರ್ವದರ್ಶನಂ ಟೋಕನ್‌ಗಳನ್ನು ನೀಡಲಾಗುವುದು ಎಂದು ಟಿಟಿಡಿ ಪ್ರಕಟಿಸಿದೆ. ಅಷ್ಟೇ ಅಲ್ಲ ಇಂದು ಮಧ್ಯಾಹ್ನದಿಂದಲೇ ದರ್ಶನ ಸ್ಲಾಟ್‌ಗಳನ್ನು ಸಹ ಪ್ರಾರಂಭಿಸಲಾಗಿದೆ. ಹಾಗಾದ್ರೆ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಸರ್ವದರ್ಶನ ಟಿಕೆಟ್ ಅನ್ನು ಆನ್‌ಲೈನ್ ಮೂಲಕ ಬುಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಕಾದು ಕುಳಿತವರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ಡಿಸೆಂಬರ್ 23 ರಿಂದ 2024ರ ಜನವರಿ 1 ರವರೆಗೆ ಶ್ರೀವಾರಿ ವೈಕುಂಠ ದರ್ಶನಕ್ಕೆ ಸಂಬಂಧಿಸಿದಂತೆ ಸರ್ವ ದರ್ಶನ ಟೋಕನ್‌ಗಳನ್ನು ವಿತರಿಸಲಾಗಿತ್ತು.ಇದೀಗ ಜನವರಿ 2ರಿಂದ ಮತ್ತೆ ಸರ್ವದರ್ಶನ ಟಿಕೆಟ್ ಬುಕಿಂಗ್ ಶುರುವಾಗಿದೆ. ಇದರಿಂದ ಭಕ್ತರು ಸರ್ವದರ್ಶನ ಟಿಕೆಟ್ ಬುಕ್ ಮಾಡಿಕೊಂಡು ದರ್ಶನ ಸ್ಲಾಟ್ ಅನ್ನು ಲಾಕ್ ಮಾಡಿಕೊಳ್ಳಬಹುದಾಗಿದೆ.
ಇನ್ನು ಈ ಸಂದರ್ಭದಲ್ಲಿ ತಿರುಪತಿಯ ಅಲಿಪಿರಿ ಸಪ್ತಗೋಪ್ರದಕ್ಷಿಣಾ ಮಂದಿರದಲ್ಲಿ ನಡೆಯುತ್ತಿರುವ ಶ್ರೀನಿವಾಸ ದಿವ್ಯಾನುಗ್ರಹ ವಿಶೇಷ ಹೋಮದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಇನ್ಮುಂದೆ ಶ್ರೀಗಳ ದರ್ಶನ ನೀಡಲಾಗುವುದು ಎಂದು ಟಿಟಿಡಿ ಹೇಳಿದೆ. ಆದರೆ ಹೋಮ ಟಿಕೆಟ್ ಜೊತೆಗೆ 300ರೂ ಪಾವತಿಸಿದವರಿಗೆ ಸುಪಥದಿಂದ ದೇವಸ್ಥಾನ ಪ್ರವೇಶಿಸಿದಾಗ ಶ್ರೀಗಳ ದರ್ಶನಕ್ಕೆ ಸೌಲಭ್ಯ ಕಲ್ಪಿಸುವ ಕೆಲಸವಾಗಲಿದೆ ಎನ್ನಲಾಗಿದೆ.

ಆನ್‌ಲೈನ್‌ನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಟಿಕೆಟ್ ಬುಕ್ ಮಾಡುವುದು ಹೇಗೆ?
* ಮೊದಲು ತಿರುಮಲ ತಿರುಪತಿ ದೇವಸ್ಥಾನದ (TTD) ಅಧಿಕೃತ ವೆಬ್‌ಸೈಟ್ tirupatibalaji.ap.gov.in ತೆರೆಯಿರಿ
* ನಂತರ ವೆಬ್‌ಸೈಟ್‌ನ ಹೋಮ್‌ಪೇಜ್‌ನಲ್ಲಿ "ಆನ್‌ಲೈನ್ ಬುಕಿಂಗ್" ಆಯ್ಕೆ ಕಾಣಲಿದೆ
* ಈ ಆಯ್ಕೆಯನ್ನು ಟ್ಯಾಪ್ ಮಾಡಿ
* ಇದೀಗ TTD ದರ್ಶನ್ ಬುಕಿಂಗ್ ಆನ್‌ಲೈನ್ ಆಯ್ಕೆಯನ್ನು ಟ್ಯಾಪ್ ಮಾಡಿರಿ
* ಇದಕ್ಕಾಗಿ ನಿಮ್ಮ ಲಾಗಿನ್ ಐಡಿ ಕ್ರಿಯೆಟ್ ಮಾಡಬೇಕಾಗುತ್ತದೆ.
* ಲಾಗಿನ್ ಐಡಿ ಕ್ರಿಯೆಟ್ ಮಾಡಲು ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕು
* ಇದೀಗ ನಿಮ್ಮ ಲಾಗಿನ್ ಅಕೌಂಟ್ ಕ್ರಿಯೆಟ್ ಆಗಲಿದೆ
* ನಿಮ್ಮ ಲಾಗಿನ್ ಐಡಿ ಮೂಲಕ ಲಾಗಿನ್ ಆಗಿರಿ
* ಇದೀಗ ಟಿಟಿಡಿ ಟಿಕೆಟ್‌ಗಾಗಿ ಆನ್‌ಲೈನ್ ಬುಕಿಂಗ್ ಫಾರ್ಮ್ ನಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ
* ನಿಮಗೆ ದರ್ಶನಕ್ಕೆ ಟಿಕೆಟ್ ಲಭ್ಯವಿರುವ ದಿನಾಂಕದ ವಿವರಗಳನ್ನು ತೋರಿಸಲಾಗುತ್ತದೆ
* ಈ ಆಯ್ಕೆಗಳಲ್ಲಿ ನಿಮಗೆ ಸೂಕ್ತ ಎನಿಸುವ ದಿನಾಂಕವನ್ನು ಆಯ್ಕೆ ಮಾಡುವ ಮೂಲಕ ಟಿಕೆಟ್ ಬುಕ್ ಮಾಡಬಹುದು
* ಇದೀಗ ಟಿಕೆಟ್ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು
* ನಂತರ ನೀವು ಟಿಕೆಟ್ ಶುಲ್ಕ 300ರೂ. ಅನ್ನು ಪಾವತಿಸಿದ ತಕ್ಷಣವೇ TTD ಟಿಕೆಟ್ ಅನ್ನು ಇಮೇಲ್ ಮೂಲಕ ಅಥವಾ ಟಿಟಿಡಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಹುದು.

ಟಿಕೆಟ್ ಬುಕ್ ಮಾಡುವಾಗ ಇರಲೇಬೇಕಾದ ದಾಖಲೆಗಳೇನು?
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆನ್‌ಲೈನ್ ಟಿಕೆಟ್ ಬುಕ್ ಮಾಡುವಾಗ ವ್ಯಕ್ತಿಯ ಹೆಸರು, ವಯಸ್ಸು, ಲಿಂಗ, ಐಡಿ ಮತ್ತು ಆಧಾರ್ ಕಾರ್ಡ್ ಸಂಖ್ಯೆ ಇರಬೇಕಾಗಿದೆ. ನಿಮ್ಮ ಐಡಿಯನ್ನು ಅಪ್‌ಲೋಡ್ ಮಾಡಬೇಕಾದ ಅವಶ್ಯಕತೆಯಿಲ್ಲ. ಆದರೆ ನೀವು ದೇವಾಲಯ ಪ್ರವೇಶಿಸುವಾಗ ನಿಮ್ಮ ಟಿಕೆಟ್ ಜೊತೆಗೆ ಐಡಿಕಾರ್ಡ್ ಅನ್ನು ತೋರಿಸಬೇಕಾಗುತ್ತದೆ. ಇದರಲ್ಲಿ ನೀವು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಅನ್ನು ಕೂಡ ತೋರಿಸಬಹುದಾಗಿದೆ.


Click it and Unblock the Notifications








