Tirupati: ವೈಕುಂಠ ಏಕಾದಶಿಯಂದು ತಿಮ್ಮಪ್ಪನ ದರ್ಶನ ಮಾಡಬೇಕೆ? TTD ಕಡೆಯಿಂದ ಬಂತು ಗುಡ್‌ನ್ಯೂಸ್!
ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಹೋಗುವವರಿಗೆ ಟಿಟಿಡಿ ಗುಡ್‌ನ್ಯೂಸ್ ನೀಡಿದೆ. ವೈಕುಂಠ ಏಕಾದಶಿಯ ಪ್ರಯುಕ್ತ ತಿಮ್ಮಪ್ಪನ ವೈಕುಂಠ ದ್ವಾರ ದರ್ಶನಕ್ಕಾಗಿ 4.25 ಲಕ್ಷ ಟೈಂ ಸ್ಲಾಟ್ ಸರ್ವದರ್ಶನ ಟೋಕನ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಇದು ಡಿಸೆಂಬರ್ 23ರಿಂದ ಜನವರಿ 1ರವರೆಗೆ ದರ್ಶನ ಪಡೆಯಲು ಇಚ್ಛಿಸುವವರಿಗೆ ಲಭ್ಯವಾಗಲಿದೆ.
ಹೌದು, ಡಿಸೆಂಬರ್ 23ರಿಂದ ಜನವರಿ 1ರವರೆಗೆ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕಾಗಿ 4.25 ಲಕ್ಷ ಟಿಕೆಟ್‌ಗಳನ್ನು ಬಿಡುಗಡೆ ಮಾಡಲು ಟಿಟಿಡಿ ಮುಂದಾಗಿದೆ. ಈ ಮೂಲಕ ವೈಕುಂಠ ಏಕಾದಶಿಯ ಸಮಯದಲ್ಲಿ ಶ್ರೀನಿವಾಸನ ದರ್ಶನ ಮಾಡಬೇಕೆಂದು ಕೊಂಡವರಿಗೆ ಸಿಹಿಸುದ್ದಿಯನ್ನು ನೀಡಿದೆ. ಇನ್ನು ಈ ಟಿಕೆಟ್‌ಗಳಲ್ಲಿ ಸರ್ವದರ್ಶನ ಟಿಕೆಟ್‌ಗಳ ಬೆಲೆ 300 ರೂಪಾಯಿ ಇರಲಿದೆ. ಹಾಗಾದ್ರೆ ಟಿಟಿಡಿ ಹೇಳಿದ್ದೇನು? ತಿಮ್ಮಪ್ಪನ ದರ್ಶನ ಟಿಕೆಟ್‌ಗಳನ್ನು ಬುಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೈಕುಂಠ ಏಕಾದಶಿಯ ಸಮಯದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚಿರುತ್ತದೆ. ಇದೆ ಕಾರಣಕ್ಕೆ ಟಿಟಿಡಿ ದರ್ಶನ ಟಿಕೆಟ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದೆ. ಅದರಂತೆ ಸಾಮಾನ್ಯ ಯಾತ್ರಾರ್ಥಿಗಳಿಗೆ 4.25 ಲಕ್ಷ ಸಮಯ-ಸ್ಲಾಟ್ ಸರ್ವ ದರ್ಶನ ಟೋಕನ್‌ಗಳನ್ನು ನೀಡುವುದಾಗಿ ಘೋಷಿಸಿದೆ. ಇನ್ನು ಈ ದರ್ಶನ ಟೋಕನ್‌ಗಳು ಡಿಸೆಂಬರ್ 23 ರಿಂದ ತಿರುಪತಿಯ ಒಂಬತ್ತು ವಿವಿಧ ಪಾಯಿಂಟ್‌ಗಳಲ್ಲಿರುವ ಸುಮಾರು 100 ಕೌಂಟರ್‌ಗಳಲ್ಲಿ ಲಭ್ಯವಾಗಲಿವೆ.
ಇನ್ನು ವೈಕುಂಠ ದ್ವಾರ ದರ್ಶನವು ಡಿಸೆಂಬರ್ 23 ರಂದು ಪ್ರಾರಂಭವಾಗಲಿದ್ದು, ಜನವರಿ 1 ರವರೆಗೆ ನಡೆಯಲಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ. ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಸುಗಮ ದರ್ಶನಕ್ಕೆ ಅನುಕೂಲವಾಗುವಂತೆ, 10 ದಿನಗಳಲ್ಲಿ 4.25 ಲಕ್ಷ ಎಸ್‌ಎಸ್‌ಡಿ ಟೋಕನ್‌ಗಳನ್ನು ವಿತರಿಸಲಿದೆ. SSD ಟೋಕನ್‌ಗಳ ಜೊತೆಗೆ, TTD ನವೆಂಬರ್ 10 ರಿಂದ ಆನ್‌ಲೈನ್‌ನಲ್ಲಿ 300ರೂ. ಬೆಲೆಯ 2.25 ಲಕ್ಷ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡುವುದಾಗಿಯು ಹೇಳಿದೆ. ಅಲ್ಲದೆ ಹೆಚ್ಚುವರಿಯಾಗಿ, 20,000 ಶ್ರೀವಾಣಿ-ಟ್ರಸ್ಟ್ ಲಿಂಕ್ಡ್ ದರ್ಶನ ಟಿಕೆಟ್‌ಗಳನ್ನು ಸಹ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಇನ್ನು ಹಿಂದಿನ ವರ್ಷಗಳಂತೆಯೇ ವೈಕುಂಠ ದ್ವಾರದ ಅವಧಿಯಲ್ಲಿ ಶ್ರೀವಾಣಿ ಟಿಕೆಟ್ ಹೊಂದಿರುವವರಿಗೆ 300 ರೂ.ಗಳ ದರ್ಶನವನ್ನು ನೀಡಲಾಗುವುದು ಎಂದು ಹೇಳಲಾಗಿದೆ. ಇದಲ್ಲದೆ ವೈಕುಂಠ ಏಕಾದಶಿಯ ಪ್ರಯುಕ್ತ ಈ 10 ದಿನಗಳಲ್ಲಿ ವಿಐಪಿ ಬ್ರೇಕ್ ದರ್ಶನಗಳು, ಆರ್ಜಿತ ಸೇವಾ ದರ್ಶನಗಳು ಮತ್ತು ಶಿಶುಗಳನ್ನು ಹೊಂದಿರುವ ಪೋಷಕರು, ದೈಹಿಕ ವಿಕಲಚೇತನರು, ಹಿರಿಯ ನಾಗರಿಕರು ಮತ್ತು ಅನಿವಾಸಿ ಭಾರತೀಯರು ಸೇರಿದಂತೆ ಇತರ ವಿಶೇಷ ದರ್ಶನಗಳನ್ನು ರದ್ದುಗೊಳಿಸುವುದಕ್ಕೆ ಟಿಟಿಡಿ ನಿರ್ಧರಿಸಿದೆ.
ಇದರೊಂದಿಗೆ ಶ್ರೀವಾರಿ ಪುಷ್ಪಯಾಗ ಮಾಡಿಸಬೇಕೆಂದು ಕೊಂಡವರಿಗಾಗಿ ಇಂದಿನಿಂದ (ನವೆಂಬರ್ 4)ಆನ್‌ಲೈನ್‌ನಲ್ಲಿ 1,000 ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪ್ರತಿ ಟಿಕೆಟ್‌ಗೆ ತಲಾ 700 ರೂ. ನಿಗಧಿಪಡಿಸಲಾಗಿದೆ. ಇದಲ್ಲದೆ ಶ್ರೀವಾರಿ ಟ್ರಸ್ಟ್ ಗೆ 10 ಸಾವಿರ ರೂ ದೇಣಿಗೆ ನೀಡುವವರು ಕೂಡ 300ರೂಪಾಯಿ ದರ್ಶನ ಟಿಕೆಟ್ ಖರೀದಿಸಬೇಕು. ಆದರೆ ಈ ಟಿಕೆಟ್‌ಗಳನ್ನು ಪಡೆಯುವ ಭಕ್ತರಿಗೆ ಶೀಘ್ರದರ್ಶನಕ್ಕೆ (ಜಯ ವಿಜಯದಿಂದ ಮಾತ್ರ) ಅವಕಾಶ ಇರಲಿದೆ.

ಇದಲ್ಲದೆ ಅಲಿಪಿರಿ ವಾಕಿಂಗ್ ಪಾತ್‌ನಲ್ಲಿ ತಿರುಮಲಕ್ಕೆ ತೆರಳುವ ಭಕ್ತರು ಜಾಗೃತರಾಗಬೇಕು ಎಂದು ಟಿಟಿಡಿ ಇಒ ಸೂಚಿಸಿದ್ದಾರೆ. ಅಕ್ಟೋಬರ್ 24 ಮತ್ತು 27 ರ ನಡುವೆ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದ ರಿಪೀಟರ್ ಮಧ್ಯದ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ಅಲ್ಲದೆ ಇತ್ತೀಚಿಗೆ ಚಿರತೆಗಳ ಹಾವಳಿಯಿಂದ ಭಕ್ತರಿಗೆ ತೊಂದರೆಯಾದ ಘಟನೆಗಳು ಕೂಡ ನಡೆದಿವೆ. ಆದರಿಂದ ಪಾದಚಾರಿ ಮಾರ್ಗದ ಭಕ್ತರು ಜಾಗೃತರಾಗಿ ಗುಂಪು ಗುಂಪಾಗಿ ತೆರಳುವಂತೆ ಮನವಿ ಮಾಡಲಾಗಿದೆ.


Click it and Unblock the Notifications








