5 ನಿಮಿಷದಲ್ಲಿ ಕನ್ನಡದಲ್ಲಿ ನಿಮ್ಮ ಕಣ್ಣಿನ ಪರೀಕ್ಷೆ ಮಾಡಿಕೊಳ್ಳಿ

Posted By:

ಟೈಟನ್ ಇಂಡಸ್ಟ್ರೀಸ್ ಲಿ.ನ ಅಂಗಸಂಸ್ಥೆ ಟೈಟನ್ ಐ ಪ್ಲಸ್ ,ಇಂಟರ್‌ನೆಟ್‌ ಮೂಲಕ ಜನರೇ ಸ್ವತಃ ದೃಷ್ಟಿದೋಷ ತಪಾಸಣೆ ಮಾಡಿಕೊಳ್ಳುವಂಥ ವಿಷನ್ ಚೆಕ್ ಸೇವೆಯನ್ನು ಕನ್ನಡದಲ್ಲಿ ಆರಂಭಿಸಿದೆ.ಕನ್ನಡ ಸೇರಿದಂತೆ ಏಳು ಪ್ರಾದೇಶಿಕ ಭಾಷೆಯಲ್ಲಿ ಈ ಸೇವೆ ಲಭ್ಯವಿದ್ದು ಜನರು 5 ನಿಮಿಷದಲ್ಲಿ ತಮ್ಮ ಕಣ್ಣನ್ನು ಪರೀಕ್ಷೆ ಮಾಡಿ ಫಲಿತಾಂಶ ಪಡೆಯಬಹುದು.

ವಿಷನ್‌ ಚೆಕ್‌ ಪರೀಕ್ಷೆ ಹೇಗೆ..?

ವಿಷನ್‌ ಚೆಕ್‌ ಸೇವೆಯನ್ನು ನೀವು ಸುಲಭವಾಗಿ ಪಡೆಯಬಹುದು. ದೃಷ್ಟಿ ತಪಾಸಣೆ ವೇಳೆ ಕಂಪ್ಯೂಟರ್ ಮಾನಿಟರ್‌ನಿಂದ 3 ಅಡಿ ಅಂತರ ಕಾಯ್ದುಕೊಳ್ಳಬೇಕು. ವೆಬ್‌ಕ್ಯಾಮೆರಾ ಅಗತ್ಯವಿಲ್ಲದೇ ಐದೇ ನಿಮಿಷಗಳಲ್ಲಿ ಸ್ವತ: ನೀವೆ ನಿಮ್ಮ ಪ್ರಾಥಮಿಕ ನೇತ್ರ ತಪಾಸಣೆ ಮಾಡಬಹುದು. ಟೈಟನ್‌ಪ್ಲಸ್‌ ವೆಬ್‌ಸೈಟ್‌ನಲ್ಲಿರುವ ಸೂಚನೆ ಅನುಸರಿಸಿಕೊಂಡು ನೀವು ಪರೀಕ್ಷೆ ಮಾಡಬಹುದು. ಎಲ್ಲಾ ಸೂಚನೆಗಳನ್ನು ನೀವು ಪಾಲಿಸಿದರೆ ತಕ್ಷಣ ಇ ಮೇಲ್‌ನಲ್ಲಿ ಫಲಿತಾಂಶ ಲಭ್ಯ. ನಿಮಗೆ ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ ನಿಮ್ಮ ನಗರದ ಹತ್ತಿರದಲ್ಲಿರುವ ಟೈಟನ್‌ ಐ ಪ್ಲಸ್‌ ಸಿಬ್ಬಂದಿಯೇ ಕರೆ ಮಾಡಿ ನಿಮ್ಮ ಸಮಸ್ಯೆ ಬಗೆಹರಿಸಲು ನೆರವಾಗುತ್ತಾರೆ. ಒಂದೊಂದೆ ಪುಟ ತಿರುಗಿಸಿ ಯಾವ ರೀತಿ ಪರೀಕ್ಷೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಷನ್‌ ಚೆಕ್‌ ಪರೀಕ್ಷೆ ಹೇಗೆ..?

ವಿಷನ್‌ ಚೆಕ್‌ ಪರೀಕ್ಷೆ ಹೇಗೆ..?

ಟೈಟನ್‌ ಐ ಪ್ಲಸ್‌ ಹೋಮ್‌ಪೇಜ್‌ ಹೋಗಿ ಕನ್ನಡದಲ್ಲಿ ಆಯ್ಕೆ ಸೆಲೆಕ್ಟ್‌ ಮಾಡಿ. ಅದರಲ್ಲಿ ನಿಮ್ಮ ಹೆಸರು ಇಮೇಲ್‌ ಐಡಿ, ಮೊಬೈಲ್‌ ನಂ ಟೈಪ್‌ ಮಾಡಿ ಪರೀಕ್ಷೆಯನ್ನು ಆರಂಭಿಸಿ ಆಯ್ಕೆಯನ್ನು ಆರಿಸಿ.

 ವಿಷನ್‌ ಚೆಕ್‌ ಪರೀಕ್ಷೆ ಹೇಗೆ..?

ವಿಷನ್‌ ಚೆಕ್‌ ಪರೀಕ್ಷೆ ಹೇಗೆ..?

ಈ ಸಂದರ್ಭದಲ್ಲಿ ನಿಮ್ಮ ಮೊಬೈಲ್‌ಗೆ ಒಂದು ಕೋಡ್‌ ನಂ ಬರುತ್ತದೆ ಅದನ್ನು ಆರಿಸಿ ಮುಂದುವರಿದಾಗ ಸೂಚನೆಗಳು ಎನ್ನುವ ಪೇಜ್‌ ಓಪನ್‌ ಆಗುತ್ತದೆ. ಇಲ್ಲಿರುವ ಸೂಚನೆಗಳನ್ನು ಓದಿ ನಂತರ ಭಾಗ ಆಯ್ಕೆಯನ್ನು ಆರಿಸಿ

ವಿಷನ್‌ ಚೆಕ್‌ ಪರೀಕ್ಷೆ ಹೇಗೆ..?

ವಿಷನ್‌ ಚೆಕ್‌ ಪರೀಕ್ಷೆ ಹೇಗೆ..?

ಸೂಚನೆಗಳನ್ನು ಓದಿನ ನಂತರ ನಿಮ್ಮ ಪರೀಕ್ಷೆ ಆರಂಭವಾಗುತ್ತದೆ. ನಂತರ ಅಲ್ಲಿ ನಮೂದಿಸಿದಂತೆ ಆಯ್ಕೆಗಳನ್ನು ಆರಿಸಿಕೊಂಡು ಹೋಗಿ

ವಿಷನ್‌ ಚೆಕ್‌ ಪರೀಕ್ಷೆ ಹೇಗೆ..?

ವಿಷನ್‌ ಚೆಕ್‌ ಪರೀಕ್ಷೆ ಹೇಗೆ..?

ಎಲ್ಲಾ ಪರೀಕ್ಷೆಗಳನ್ನು ಮುಗಿಸಿದ ಬಳಿಕ ನಿಮ್ಮ ಹತ್ತಿರದ ನಗರವನ್ನು ಆರಿಸಿ. ಒಂದು ವೇಳೆ ನಿಮಗೆ ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ ಸಿಬ್ಬಂದಿಯೇ ನಿಮಗೆ ಕರೆ ಮಾಡಿ ಸಮ್ಯಸೆ ಬಗೆಹರಿಸಲು ನೆರವಾಗುತ್ತಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting