Subscribe to Gizbot

ಟೈಟನ್ ಕಂಪೆನಿಯ ಮೆಗಾ ಸಾಧನೆ ಜಿಯಸ್ ಟೀವಿ

Written By:

ಬ್ರಿಟಿಷ್ ಟೆಲಿವಿಶನ್ ತಯಾರಕರಾದ ಟೈಟನ್ ಕಂಪೆನಿ ಜಗತ್ತಿನ ಅತ್ಯಂತ ದೊಡ್ಡದಾದ ಟಿವಿಯನ್ನು ಬಿಡುಗಡೆ ಮಾಡಿದೆ. ಇದು ಜಗತ್ತಿನ ಅತಿ ದೊಡ್ಡ ಟೀವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದು 370 ಇಂಚುಗಳ ಗಾತ್ರವನ್ನು ಹೊಂದಿದ್ದು ಇದರ ಪರದೆ ದೊಡ್ಡದಾಗಿದೆ. ಒಂದು ಫುಟ್‌ಬಾಲ್ ಗೋಲ್‌ನ ಗಾತ್ರದ ಆಕಾರದಲ್ಲಿದೆ ಇದರ ಬೆಲೆ ಒಂದು ಮಿಲಿಯನ್ ಆಗಿರಬಹುದೆಂಬುದು ಅಂದಾಜಿನಿಂದ ತಿಳಿಯಲಾಗಿದೆ.

ಪ್ರಪಂಚದ ಅತಿ ದೊಡ್ಡ ಟೆಲಿವಿಶನ್ ಜಿಯಸ್

ಈ ಜಿಯಸ್ ಟೀವಿ ಯನ್ನು ಒಳಾಂಗಣ ಬಳಕೆಗೆ ಮಾತ್ರ ವಿನ್ಯಾಸಪಡಿಸಲಾಗಿದೆ ಆದರೆ ಇದನ್ನು ಹೊರಾಂಗಣ ವೀಕ್ಷಣೆಗೂ ಬಳಸಬಹುದಾಗಿದೆ ಎಂಬುದು ತಿಳಿದುಬಂದಿರುವ ಸುದ್ದಿಯಾಗಿದೆ. ಇದನ್ನು ನೀವು ನೇರವಾಗಿ ಸೂರ್ಯನ ಬೆಳಕು ಬೀಳುವಲ್ಲಿ ಕೂಡ ವೀಕ್ಷಿಸಬಹುದಾಗಿದ್ದು ತನ್ನ ಗಾತ್ರಕ್ಕೆ ತಕ್ಕಂತೆ ಟೀವಿ ಕೂಡ ಅತ್ಯಾಕರ್ಷಕ ಫೀಚರ್‌ಗಳನ್ನು ಹೊಂದಿದೆ. ಇದು 65 ಮಿಲಿಯನ್ ಬಣ್ಣಗಳನ್ನು ಡಿಸ್‌ಪ್ಲೇ ಮಾಡುತ್ತಿದ್ದು 4 ಕೆ ಬೆಂಬಲ ಟೀವಿಗಿದೆ.

ಟೈಟನ್‌ನ ಟೆಲಿವಿಶನ್ ಹಾರ್ಡ್‌ವೇರ್ ಶ್ರೇಣಿ ಕೂಡ ಮಧ್ಯಮ ಕ್ರಮಾಂಕದ ಸೆಟ್‌ಗಳನ್ನು ಹೊಂದಿದ್ದು, ಇದು 100 ಇಂಚುಗಳಲ್ಲಿ ಇದನ್ನು ಅಳತೆ ಮಾಡುತ್ತದೆ. ಇನ್ನೇನು ಆರಂಭವಾಗಲಿರುವ ಫೀಫಾ ವರ್ಲ್ಡ್‌ಕಪ್ ಅನ್ನು ವೀಕ್ಷಿಸಲು ಈ ಜಿಯಸ್ ಟಿವಿ ನಿಮಗೆ ಉತ್ತಮ ಸಂಗಾತಿಯಾಗಲಿದೆ. ಮತ್ತು ಈ ಡಿವೈಸ್ ಅನ್ನು ಪಬ್‌ಗಳು ಹಾಗೂ ಇತರ ಸಾರ್ವಜನಿಕ ವ್ಯವಹಾರ ಕೇಂದ್ರಗಳಲ್ಲಿ ಕೂಡ ಬಳಸಬಹುದಾಗಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot