ವೈರಲ್ ಸ್ಟೋರಿ!..ಮುಂದಿನ 48 ವರ್ಷಗಳವರೆಗೆ ಲಾಕ್​ ಆದ ಐಪ್ಯಾಡ್!!

|

ತಂತ್ರಜ್ಞಾನವು ಕೆಲವೊಮ್ಮೆ ಹೇಗೆಲ್ಲಾ ತೊಂದರೆಗಳನ್ನು ತಂದಿಡಬಹುದು ಎಂಬುದಕ್ಕೆ ಇತ್ತೀಚಿಗೆ ಅಮೇರಿಕಾದಲ್ಲಿ ನಡೆದಿರುವ ಒಂದು ವಿಶೇಷ ಘಟನೆ ಸಾಕ್ಷಿಯಾಗಿದೆ. ಅಮೆರಿಕಾದಲ್ಲಿನ ಪತ್ರಕರ್ತ ಇವನ್​ ಒಸ್ನೋಸ್ ಎಂಬುವವರ ಆಪಲ್ ಸಂಸ್ಥೆಯ ಐಪ್ಯಾಡ್​​ ಮುಂದಿನ 48 ವರ್ಷಗಳವರೆಗೆ ಲಾಕ್​ ಆಗಿದೆ. ಅಂದರೆ, 48 ವರ್ಷದ ನಂತರವಷ್ಟೇ ಅದನ್ನ ಓಪನ್​ ಮಾಡಲು ಸಾಧ್ಯವಾಗಲಿದೆ. ಅಲ್ಲಿಯವರೆಗೂ ಅದರ ಸರಿಯಾದ ಪಾಸ್​ವರ್ಡ್​ ಹಾಕಿದರೂ ಸಹ ಅದು ಓಪನ್​ ಆಗಲ್ಲ.

ಹೌದು, ಇಂತಹದೊಂದು ಸಮಸ್ಯೆಯು ಅವರು ಹೊರಗೆ ಹೋಗುವಾಗ​ ಅವರ ಐಪ್ಯಾಡ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರಿಂದ ಶುರುವಾಗಿದೆ. ಅವರ 3 ವರ್ಷದ ಮಗು ಆಟ ಆಡುವಾಗ ಐಪ್ಯಾಡ್​ ನೋಡಿ, ಅದರ ಲಾಕ್​ ಓಪನ್​ ಮಾಡಲು ಯತ್ನಿಸಿದೆ. ಪಾಸ್​ವರ್ಡ್​ ಗೊತ್ತಿಲ್ಲದಿದ್ದರೂ ಪದೇ ಪದೇ ರಾಂಗ್​ ಪಾಸ್​​ವರ್ಡ್​ ಟ್ರೈ ಮಾಡಿದೆ. ಪರಿಣಾಮ ಐಪ್ಯಾಡ್​ ಲಾಕ್​ ಆಗಿದ್ದು ಓಪನ್​ ಆಗಲು 25,536,442 ನಿಮಿಷ ಸಮಯ ಕೇಳುತ್ತಿರುವುದು ಇದೀಗ ವೈರಲ್ ಆಗಿದೆ.

ವೈರಲ್ ಸ್ಟೋರಿ!..ಮುಂದಿನ 48 ವರ್ಷಗಳವರೆಗೆ ಲಾಕ್​ ಆದ ಐಪ್ಯಾಡ್!!

ಈ ಕುರಿತು ನ್ಯೂಯಾರ್ಕ್​ ಡೈಲಿ ನ್ಯೂಸ್​ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಪತ್ರಕರ್ತರ ಲಾಕ್​ ಆಗಿರುವ ಐಪ್ಯಾಡ್​​ನ​ ಸರಿಯಾದ ಪಾಸ್​ವರ್ಡ್​ ಕೊಟ್ಟರೂ ಓಪನ್​ ಆಗುತ್ತಿಲ್ಲ. ಸರಿಯಾದ ಪಾಸ್‌ವರ್ಡ್ ನೀಡಿದರೂ ಅದು ತೆರೆಯಲು 2,55,36,442 ನಿಮಿಷಗಳಾಗುತ್ತವೆ. ಈ ನಿಮಿಷಗಳನ್ನು ದಿನಗಳಿಗೆ ಕನ್ವರ್ಟ್​ ಮಾಡಿದ್ರೆ ಬರೋಬ್ಬರಿ ಅರ್ಧ ಶತಕವೇ ಕಾಯಬೇಕಾಗುತ್ತದೆ. ಅವರ ಐಪ್ಯಾಡ್​ ಲಾಕ್​ ಓಪನ್​ ಆಗಬೇಕಾದ್ರೆ 2067 ರವರೆಗೆ ಕಾಯಬೇಕಾ ಎಂದು ಕೇಳಿದೆ.

ಈ ಬಗ್ಗೆ ಇವನ್​ ಒಸ್ನೋಸ್ ಅವರು ಕೂಡ​ ತನ್ನ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದು ಫೇಕ್​ ಎಂದು ನಿಮಗೆ ಅನಿಸಬಹುದು ಆದರೆ, ಇದು ಫೇಕ್​ ಅಲ್ಲಾ. ​ನನ್ನ ಮೂರು ವರ್ಷದ ನನ್ನ ಐಪ್ಯಾಡ್​ ಮಗು ಇದರ ಲಾಕ್​ ಓಪನ್​ ಮಾಡಲು ಪದೇ ಪದೇ ರಾಂಗ್​ ಪಾಸ್ವರ್ಡ್​ ಟ್ರೈ ಮಾಡಿದ ಪರಿಣಾಮ ಲಾಕ್​ ಆಗಿದೆ. ಇದನ್ನು ಅನ್‌ಲಾಕ್ ಮಾಡಲು 48 ವರ್ಷ 59 ದಿನ ಕಾಯಬೇಕಾಗುತ್ತದೆ ಎಂದು ತಿಳಿಸಿರುವ ಫೋಟೋವನ್ನು ಕೂಡ ಶೇರ್​ ಮಾಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಸಿರುವ ಆಪಲ್ ಸಂಸ್ಥೆಯ ಅಧಿಕಾರಿಗಳು, 25,536,442 ನಿಮಿಷ ಐಪ್ಯಾಡ್​ ಲಾಕ್​ ಆಗಿರುವ ಬಗ್ಗೆ​ ಸಲಹೆ ನೀಡಿದ್ದು, ಐಪ್ಯಾಡ್​ ಸೆಟ್ಟಿಂಗ್ಸ್​ ಅನ್ನುರೀ ಸ್ಟೋರ್ ಮಾಡಿದರೆ ಈ ಸರಿ ಹೋಗುತ್ತದೆ. ಆದರೆ ಅದರಲ್ಲಿ ಸ್ಟೋರ್​ ಆಗಿದ್ದ ಎಲ್ಲಾ ಡಾಟಾ ಡಿಲೀಟ್​ ಆಗುತ್ತದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಎಲೆಕ್ಟ್ರಾನಿಕ್​ ವಸ್ತುಗಳೇ ಹಾಗೆ ಅವು ಯಾವಾಗ ಹೇಗೆ ವರ್ಕ್​ ಆಗ್ತವೆ ಅನ್ನೋದನ್ನ ಹೇಳೋದಕ್ಕೆ ಆಗಲ್ಲ. ಮಕ್ಕಳಿಗೆ ಮೊಬೈಲ್ ಕೊಡದೇ ಇರೋಕು ಆಗಲ್ಲ.!

Best Mobiles in India

English summary
Evan Osnos posted on Twitter. A man has been locked out of his iPad for 48 years after his son tried to use the device. A Washington DC-based journalist was locked out of his iPad for nearly half a century after his three-year-old toddler tried to use the device with the incorrect password. to know more visit to kannad

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X