ಆನ್‌ಲೈನ್ ಗೇಮ್ ತಯಾರಿಸಿದವರು ಎಷ್ಟು ಹಣ ಗಳಿಸುತ್ತಾರೆ?..ಕುತೂಹಲ ರಿಪೋರ್ಟ್!

|

1970ರಲ್ಲಿ ಆರಂಭವಾಗಿ ಸಾವಿರಾರು ಕೋಟಿ ರೂ.ಗಳ ಮಾರುಕಟ್ಟೆಯಾಗಿ ಬದಲಾಗಿರುವ ಆನ್‌ಲೈನ್‌ ಗೇಮ್‌ಗೆ ಇಂದು ಯುವಜನತೆ ಮಾರುಹೋಗಿದೆ. ಜನರನ್ನು ಎಂಗೇಜ್ ಮಾಡಿ ಇಡುವ ಮೂಲಕ ತಾವು ಹಣಗಳಿಸಿಕೊಳ್ಳಲು ಡೆವಲಪರ್‌ಗಳು ಹೊಸ ಹೊಸ ಗೇಮ್‌ಗಳನ್ನು ಸೃಷ್ಟಿಮಾಡುತ್ತಿದ್ದಾರೆ. ಆದರೆ, ಇಂತಹ ಗೇಮ್ ತಯಾರಿಸಿದವರು ಎಷ್ಟು ಹಣ ಗಳಿಸುತ್ತಾರೆ?, ಗೇಮಿಂಗ್ ಲೋಕದಲ್ಲಿ ಹಣದ ಹೊಳೆ ಹೇಗೆ ಹರಿಯುತ್ತದೆ?, ಗೇಮ್ ತಯಾರಿಸಿದವರು ಎಲ್ಲರೂ ಹಣ ಮಾಡಲು ಸಾಧ್ಯವೇ? ಎಂಬ ಕುತೂಹಲ ವಿಷಯಗಳನ್ನು ಇಂದಿನ ರಿಪೋರ್ಟ್ ಒಂದು ತೆರೆದಿಟ್ಟಿದೆ.

 ಗೇಮಿಂಗ್ ಪ್ರಪಂಚ

ಹೌದು, ಗೂಗಲ್ ಪ್ಲೇ ಮತ್ತು ಆಪ್ ಸ್ಟೋರ್‌ನಾದ್ಯಂತ ಗೇಮಿಂಗ್ ಪ್ರಪಂಚ ಹೇಗಿದೆ ಎಂದು ಮಾರುಕಟ್ಟೆ ಗುಪ್ತಚರ ಸಂಸ್ಥೆ ಸೆನ್ಸರ್ ಟವರ್‌ ನೀಡಿರುವ ವರದಿ ಇತ್ತೀಚಿನ ತಿಳಿಸುತ್ತಿದೆ. ಒಟ್ಟು ಮೊಬೈಲ್ ಗೇಮ್‌ಗಳ ಡೌನ್‌ಲೋಡ್‌ಗಳಲ್ಲಿ ಶೇ. 82% ರಷ್ಟು ಡೌನ್‌ಲೋಡ್‌ಗಳು ಕೇವಲ 1% ಅಗ್ರ ಗೇಮ್ ಡೆವಲಪರ್‌ಗಳು ಅಥವಾ ಕಂಪೆನಿಗಳ ಬಳಿ ಇದೆ. 2019 ರ 3ನೇ ತ್ರೈಮಾಸಿಕದಲ್ಲಿ ಒಟ್ಟು 11.1 ಬಿಲಿಯನ್‌ಗಳಲ್ಲಿ 9.1 ಬಿಲಿಯನ್ ಡೌನ್‌ಲೋಡ್‌ಗಳನ್ನು ಕೇವಲ ಉನ್ನತ ಗೇಮ್ ಡೆವಲಪರ್‌ ಅಥವಾ ಕಂಪೆನಿಗಳು ಪಡೆದುಕೊಂಡಿದ್ದಾರೆ ಎಂದು ಸೆನ್ಸರ್ ಟವರ್‌ ವರದಿ ಹೇಳಿದೆ.

ಡೌನ್‌ಲೋಡ್ ವಿಷಯ

ಇದು ಗೇಮ್‌ಗಳ ಡೌನ್‌ಲೋಡ್ ವಿಷಯದಲ್ಲಾದರೆ, ಗೂಗಲ್ ಪ್ಲೇ ಮತ್ತು ಆಪ್ ಸ್ಟೋರ್‌ನಾದ್ಯಂತ ಅಪ್ಲಿಕೇಶನ್‌ನಲ್ಲಿನ ಖರೀದಿಗಳ ಮೂಲಕ ಗಳಿಸಿದ ಆದಾಯದಲ್ಲೂ ಸಹ ಅಗ್ರ ಗೇಮ್ ಡೆವಲಪರ್‌ಗಳು ಅಥವಾ ಕಂಪೆನಿಗಳ ಪಾಲು ಆಕಾಶದಷ್ಟಿದೆ. 2019 ರ 3ನೇ ತ್ರೈಮಾಸಿಕದಲ್ಲಿ ಅಗ್ರ 1% ಗಳಿಕೆಯ ಕಂಪನಿಗಳಲ್ಲಿ ಕೇವಲ 445 ಪ್ರಕಾಶಕರು 95% ಆದಾಯವನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಇನ್ನುಳಿದ ಶೇ. 5 ಪರ್ಸೆಂಟ್‌ನಷ್ಟು ಆದಾಯವನ್ನು ಉಳಿದ ಲಕ್ಷಾಂತರ ಸಣ್ಣ ಗೇಮ್ ಡೆವಲಪರ್‌ಗಳು ಹಂಚಿಕೊಂಡಿದ್ದಾರೆ ಎಂದು ಸೆನ್ಸರ್ ಟವರ್‌ ವರದಿ ತಿಳಿಸಿದೆ.

ಗೂಗಲ್ ಪ್ಲೇ ಮತ್ತು ಆಪ್ ಸ್ಟೋರ್‌

2019 ರ 3ನೇ ತ್ರೈಮಾಸಿಕದಲ್ಲಿ ಗೂಗಲ್ ಪ್ಲೇ ಮತ್ತು ಆಪ್ ಸ್ಟೋರ್‌ನಾದ್ಯಂತ ಗೇಮಿಂಗ್ ಅಪ್ಲಿಕೇಶನ್‌ನಲ್ಲಿನ ಖರೀದಿಗಳ ಮೂಲಕ ಗಳಿಸಿದ 16.3 ಬಿಲಿಯನ್‌ ಡಾಲರ್‌ಗಳಲ್ಲಿ ಅಗ್ರ 445 ಡೆವಲಪರ್‌ಗಳು 15.5 ಬಿಲಿಯನ್ ಆದಾಯವನ್ನು ಪಡೆದಿದ್ದಾರೆ. ಇವರಲ್ಲಿ ಪೂರ್ವ ಏಷ್ಯಾದ ಪ್ರಕಾಶಕರು ಹೆಚ್ಚು ಲಾಭದಾಯಕವಾಗಿದ್ದು, ಕ್ಯೂ 3 ರಲ್ಲಿ ಅಗ್ರ 1% ನಷ್ಟು ಪ್ರಾಬಲ್ಯ ಹೊಂದಿರುವ ಕಂಪೆನಿಗಳಲ್ಲಿ ಟೆನ್ಸೆಂಟ್ ಕಂಪೆನಿ ಸುಮಾರು 2 ಬಿಲಿಯನ್ ಡಾಲರ್ ಗಳಿಸಿದೆ. ನಂತರದ ಸ್ಥಾನದಲ್ಲಿ ನೆಟ್ ಈಸ್ $743 ಮಿಲಿಯನ್ ಮತ್ತು ಬಂದೈ ನಾಮ್ಕೊ $503 ಮಿಲಿಯನ್ ಗಳಿಸಿವೆ.

ಅಂಕಿ ಅಂಶ

ಈ ಮೇಲಿನ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ, ಆನ್‌ಲೈನ್ ಗೇಮಿಂಗ್ ಮಾರುಕಟ್ಟೆಯು ಕೆಲವೇ ಕೆಲವು ಜನರ ಕೈ ಸೇರಿರುವುದು ಕಾಣಿಸುತ್ತದೆ. ಒಟ್ಟಾರೆ ಗೇಮಿಂಗ್ ಆದಾಯದಲ್ಲಿ ಸಣ್ಣ ಸಣ್ಣ ಗೇಮ್ ಡೆವಲಪರ್‌ಗಳು ಲಕ್ಷದಲ್ಲಿ ಒಂದು ಭಾಗದಷ್ಟು ಆದಾಯವನ್ನು ಪಡೆಯುತ್ತಿದ್ದಾರೆ ಎಂದು ಹೇಳಬಹುದಾಗಿದೆ. ''ಆದಾಯ ಮತ್ತು ಡೌನ್‌ಲೋಡ್ ಅಂಕಿ ಅಂಶಗಳಲ್ಲಿನ ವ್ಯತ್ಯಾಸದ ಕೊರತೆಯನ್ನು ಹೇಳುವಂತೆಯೇ ಇದೆ" ಎಂದು ಸೆನ್ಸಾರ್ ಟವರ್ ಮೊಬೈಲ್ ಒಳನೋಟಗಳ ತಂತ್ರಜ್ಞ ಕೇಟೀ ವಿಲಿಯಮ್ಸ್ ಅವರು ಹೇಳಿರುವುದು ಇದಕ್ಕೆ ಸೂಕ್ತವಾಗಿದೆ.

Most Read Articles
Best Mobiles in India

English summary
That's according to data from market intelligence firm Sensor Tower, which found the top publishers reap 9.1 billion downloads out of the total 11.1 billion in Q3 2019.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X