ನಿಮಗಾಗಿ ಮಾತ್ರ!!! ಉಚಿತ ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್ಸ್

By Shwetha
|

ಅಪ್ಲಿಕೇಶನ್‌ಗಳಿಲ್ಲದ ಸ್ಮಾರ್ಟ್‌ಫೋನ್‌ಗಳು ಬಳಕೆಗೆ ಯೋಗ್ಯವಲ್ಲದುದಾಗಿದೆ. ಅಪ್ಲಿಕೇಶನ್‌ಗಳು ಮೊಬೈಲ್ ಅನ್ನು ಒಂದು ಪ್ರಯೋಜನಕಾರಿಯನ್ನಾಗಿಸುತ್ತದೆ. ಪ್ರತೀ ದಿನ ಹೊಸ ಅಪ್ಲಿಕೇಶನ್‌ಗಳು ಲಾಂಚ್ ಆಗುತ್ತಿದ್ದು, ನಮ್ಮ ಆಲೋಚನೆಗಳಗಿಂತಲೂ ಅಪ್ಲಿಕೇಶನ್‌ಗಳು ಹೆಚ್ಚು ವೇಗವಾಗಿ ಬೆಳೆಯುತ್ತಿವೆ.

ಓದಿರಿ: ಬಳಕೆದಾರ ಸ್ನೇಹಿ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್ಸ್

ವಿಶ್ವಾದ್ಯಂತ ಡೆವಲಪರ್‌ಗಳು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಅದರಲ್ಲಿ ಭಾರತವೂ ಒಂದಾಗಿದೆ. ಕೆಲವೊಂದು ಅಪ್ಲಿಕೇಶನ್‌ಗಳನ್ನು ಬಾರತೀಯರೂ ಡೆವಲಪರ್ ಮಾಡಿದ್ದು ಆ ಅಪ್ಲಿಕೇಶನ್‌ಗಳ ಕುರಿತ ವಿವರವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ. ಬನ್ನಿ ಆ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ಹೈಕ್ ಮೆಸೆಂಜರ್

ಹೈಕ್ ಮೆಸೆಂಜರ್

ಡೌನ್‌ಲೋಡ್ 15 ಮಿಲಿಯನ್

ಹೈಕ್ ಮೆಸೆಂಜರ್ ಅಪ್ಲಿಕೇಶನ್ ವಿವಿಧ ಭಾರತೀಯ ಭಾಷೆಗಳಲ್ಲಿ ತರೇಹವಾರಿ ಸ್ಟಿಕರ್‌ಗಳನ್ನು ಬಳಕೆದಾರರಿಗೆ ಒದಗಿಸುತ್ತಿದೆ. ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್ ಆಗಿದ ಪ್ರಸಿದ್ಧಗೊಂಡಿದೆ ಹೈಕ್ ಮೆಸೆಂಜರ್

ಹಾಟ್ ಸ್ಟಾರ್ ಟಿವಿ ಮೂವೀಸ್ ಲೈವ್ ಕ್ರಿಕೆಟ್

ಹಾಟ್ ಸ್ಟಾರ್ ಟಿವಿ ಮೂವೀಸ್ ಲೈವ್ ಕ್ರಿಕೆಟ್

ಡೌನ್‌ಲೋಡ್ 5 ಮಿಲಿಯನ್

ಇತ್ತೀಚಿನ ಟಿವಿ ಶೋಗಳು, ಚಲನಚಿತ್ರಗಳು ಮತ್ತು ಲೈವ್ ಸ್ಪೋರ್ಟ್ಸ್ ಅನ್ನು ವೀಕ್ಷಿಸಲು ಬಳಕೆದಾರರನ್ನು ಅನುಮತಿಸುತ್ತದೆ. ಇಂಗ್ಲಿಷ್, ಕನ್ನಡ, ಮಲಯಾಳಮ್, ತಮಿಳು, ಮರಾಠಿ, ತೆಲುಗು, ಬೆಂಗಾಳಿ ಚಲನಚಿತ್ರಗಳನ್ನು ಈ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.

ಕ್ರಿಕ್‌ಬಜ್ ಕ್ರಿಕೆಟ್ ಸ್ಕೋರ್ಸ್ ಮತ್ತು ನ್ಯೂಸ್

ಕ್ರಿಕ್‌ಬಜ್ ಕ್ರಿಕೆಟ್ ಸ್ಕೋರ್ಸ್ ಮತ್ತು ನ್ಯೂಸ್

ಡೌನ್‌ಲೋಡ್ 4 ಮಿಲಿಯನ್ ಪ್ಲಸ್

ಭಾರತದಲ್ಲಿ ಕ್ರಿಕೆಟ್ ಒಂದು ಜನಪ್ರಿಯ ಆಟ ಎಂದೇ ಪ್ರಸಿದ್ಧಗೊಂಡಿದೆ. ಕ್ರಿಕ್ ಬಜ್ ಗೂಗಲ್ ಸರ್ಚ್‌ಗಳಲ್ಲಿ ಮೇಲ್ಮಟ್ಟದಲ್ಲಿದ್ದು ಕ್ರಿಕೆಟ್ ಸ್ಕೋರ್‌ಗಳನ್ನು ತಕ್ಷಣವೇ ತಿಳಿದುಕೊಳ್ಳಬಹುದಾಗಿದೆ.

ಜೊಮಾಟೊ

ಜೊಮಾಟೊ

ಡೌನ್‌ಲೋಡ್ 3 ಮಿಲಿಯನ್ ಪ್ಲಸ್

ನಿಮ್ಮ ಸ್ನೇಹಿತರೊಂದಿಗೆ ಹೊರಹೋಗಿದ್ದಾಗ ನೀರೂರಿಸುವ ಖಾದ್ಯಗಳ ಸವಿಯನ್ನು ಸವಿಯಲು ಬಯಸಿದ್ದೀರಾ? ಭಾರತೀಯ ಅಪ್ಲಿಕೇಶನ್ ಜೊಮಾಟೊ ನಿಮಗೆ ಖಂಡಿತ ಸಹಕಾರಿಯಾಗಲಿದೆ. ರೆಸ್ಟೋರೆಂಟ್ ಫೈಂಡರ್ ಅಪ್ಲಿಕೇಶನ್ ಆಗಿದೆ ಜೊಮಾಟೊ

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್

ಡೌನ್‌ಲೋಡ್ 10 ಮಿಲಿಯನ್ ಪ್ಲಸ್

ಭಾರತದ ಅತಿದೊಡ್ಡ ಆನ್‌ಲೈನ್ ಶಾಪಿಂಗ್ ತಾಣವಾಗಿದೆ ಫ್ಲಿಪ್‌ಕಾರ್ಟ್. ವಸ್ತುಗಳ ಖರೀದಿ, ಹೋಲಿಕೆ ಮತ್ತು ದರಗಳ ವಿಮರ್ಶೆಯನ್ನು ಈ ಭಾರತೀಯ ಅಪ್ಲಿಕೇಶನ್ ಬಳಸಿ ತಿಳಿದುಕೊಳ್ಳಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್ 10 ಮಿಲಿಯನ್‌ಗಿಂತಲೂ ಹೆಚ್ಚಿನ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದೆ.

ಜೆಡಿ - ಸರ್ಚ್, ಶಾಪ್, ಟ್ರಾವೆಲ್, ಫುಡ್

ಜೆಡಿ - ಸರ್ಚ್, ಶಾಪ್, ಟ್ರಾವೆಲ್, ಫುಡ್

ಡೌನ್‌ಲೋಡ್ 3 ಮಿಲಿಯನ್ ಪ್ಲಸ್

ಸರಳ, ಇಂಟರಾಕ್ಟೀವ್ ಮತ್ತು ಉಪಯೋಗಕಾರಿ ಅಪ್ಲಿಕೇಶನ್ ಆಗಿದೆ ಜಸ್ಟ್ ಡಯಲ್. ವ್ಯವಹಾರಗಳು, ಉತ್ಪನ್ನಗಳು ಮತ್ತು ಸೇವೆಗಳನ್ನು ಇದರಲ್ಲಿ ನಿಮಗೆ ಹುಡುಕಾಡಬಹುದಾಗಿದೆ. ಭಾರತೀಯ ಅಪ್ಲಿಕೇಶನ್ ಆಗಿದೆ.

ಕ್ವಿಕರ್

ಕ್ವಿಕರ್

ಡೌನ್‌ಲೋಡ್ 4 ಮಿಲಿಯನ್ ಪ್ಲಸ್

ಭಾರತದ ಅತಿದೊಡ್ಡ ಆನ್‌ಲೈನ್ ಮತ್ತು ಮೊಬೈಲ್ ಕ್ಲಾಸಿಫೈಡ್ಸ್ ಪೋರ್ಟಲ್ ಇದಾಗಿದ್ದು, ಭಾರತದಾದ್ಯಂತ 900 ನಗರಗಳಲ್ಲಿ ಪ್ರಸ್ತುತ ಲಭ್ಯವಿದೆ.

ಪೇಟಮ್

ಪೇಟಮ್

ಡೌನ್‌ಲೋಡ್ 10 ಮಿಲಿಯನ್ ಪ್ಲಸ್

ಮೊಬೈಲ್ ಪಾವತಿ ಸೇವಾ ಅಪ್ಲಿಕೇಶನ್ ಆಗಿರುವ ಪೇಟಮ್ ನಿರ್ಮಾಣವಾಗಿರುವುದು ವಿಜಯ್ ಶೇಖರ್ ಶರ್ಮಾ ಮತ್ತು ಅವರ ತಂಡದಿಂದ. ಮೊಬೈಲ್ ರೀಚಾರ್ಜ್‌ಗಳು ಮತ್ತು ಬಿಲ್‌ಗಳ ಪಾವತಿಗಳನ್ನು ಈ ಅಪ್ಲಿಕೇಶನ್ ಮುಖಾಂತರ ನಡೆಸಬಹುದಾಗಿದೆ.

ಬುಕ್ ಮೈ ಶೋ

ಬುಕ್ ಮೈ ಶೋ

ಡೌನ್‌ಲೋಡ್ 4 ಮಿಲಿಯನ್ ಪ್ಲಸ್

ಮೂವಿ ಟಿಕೇಟ್ ಬುಕ್ಕಿಂಗ್ ಅಪ್ಲಿಕೇಶನ್ ಇದಾಗಿದ್ದು ನಿಮ್ಮ ನಗರದಲ್ಲಿ ನಡೆಯುತ್ತಿರುವ ಯಾವುದೇ ಈವೆಂಟ್‌ನ ಟಿಕೇಟ್ ಅನ್ನು ಇದು ವಿತರಿಸುತ್ತದೆ.

ಓಲಾ

ಓಲಾ

ಡೌನ್‌ಲೋಡ್ 5 ಮಿಲಿಯನ್ ಪ್ಲಸ್

ಓಲಾ ಕ್ಯಾಬ್ ಅಪ್ಲಿಕೇಶನ್ ಒಂದು ಅತ್ಯಗತ್ಯ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಇದಾಗಿದ್ದು, ಇದರ ಮುಖಾಂತರ ಕ್ಯಾಬ್ ಅನ್ನು ನೀವಿದ್ದಲ್ಲಿಗೆ ಕರೆಯಿಸಿಕೊಳ್ಳಬಹುದಾಗಿದೆ. ಇದೀಗ ಓಲಾ ಗೃಹೋಪಯೋಗಿ ವಸ್ತುಗಳನ್ನು ವಿತರಿಸುತ್ತಿದ್ದು ಹಣ ವರ್ಗಾವಣೆ ಮತ್ತು ಮೊಬೈಲ್ ಕರೆನ್ಸಿಯನ್ನು ನಿರ್ವಹಿಸುತ್ತದೆ.

Most Read Articles
Best Mobiles in India

English summary
Here are the famous apps that are in our app drawer created by Indians and it is free of cast and reaching million downloads also. Take a look below slider.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more