3000 ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಲಭ್ಯವಿರುವ ಹೋಮ್ ಥಿಯೇಟರ್‌ ಸ್ಪೀಕರ್‌ಗಳು!

|

ಮ್ಯೂಸಿಕ್‌ ಅಂದ್ರೆ ಸಾಕು ಎಲ್ಲರ ಕಿವಿ ಅರಳುತ್ತೆ. ತಮ್ಮ ನೆಚ್ಚಿನ ಮ್ಯೂಸಿಕ್‌ ಆಲಿಸುತ್ತಾ ಕಾಲ ಕಳೆಯಲು ಎಲ್ಲರೂ ಇಷ್ಟ ಪಡುತ್ತಾರೆ. ಇನ್ನು ಮನೆಯಲ್ಲಿ ಉತ್ತಮ ಸೌಂಡ್‌ ಸಿಸ್ಟಂ ಅಳವಡಿಸಿ ಥಿಯೇಟರ್‌ ಫೀಲ್‌ನಲ್ಲಿ ಮ್ಯೂಸಿಕ್‌ ಕೇಳುವುದು, ಸಿನಿಮಾ ವೀಕ್ಷಣೆ ಮಾಡುವುದು ಬಹುತೇಕ ಮಂದಿಯ ಆಸೆಯಾಗಿರುತ್ತೆ. ಅದರಲ್ಲೂ ಮನೆಯಲ್ಲಿ ಹೋಮ್‌ ಥಿಯೇಟರ್‌ ಇದ್ದರೆ ಸಾಕು ಮ್ಯೂಸಿಕ್‌ ಕೇಳುವ ಮಜಾನೇ ಬೇರೆ ಇರುತ್ತೆ. ಇದೇ ಕಾರಣಕ್ಕೆ ಈಗಿನ ಯುವಜನತೆ ಹೆಚ್ಚಇನ ಒಲವನ್ನ ಹೋಮ್‌ ಥಿಯೇಟರ್‌ ತಂದು ಮನೆಯಲ್ಲಿ ಅಳವಡಿಸಿಕೊಳ್ಳುವುದಕ್ಕೆ ನೀಡುತ್ತಾರೆ.

ಮ್ಯೂಸಿಕ್‌

ಹೌದು, ಮ್ಯೂಸಿಕ್‌ ಆನಂದಿಸುವ ಹಾಗೂ ಉತ್ತಮ ಸೌಂಡ್‌ ಎಫೆಕ್ಟ್‌ ನಡುವೆ ಸಿನಿಮಾ ವೀಕ್ಷಣೆ ಮಾಡುವ ಫಿಲ್‌ ನಿಜಕ್ಕೂ ಥ್ರಿಲ್‌ ಎನಿಸುತ್ತೆ. ಇದಕ್ಕಾಗಿಯೇ ಬಹುತೇಕ ಮಂದಿ ಮನೆಯಲ್ಲಿ ಹೋಮ್‌ ಥಿಯೇಟರ್ ಹೊಂದುವುದಕ್ಕೆ ಬಯಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಹೋಮ್‌ ಥಿಯೇಟರ್‌ಗಳು ಲಭ್ಯವಿವೆ. ಆದರೆ ಗ್ರಾಹಕರು ಮಾತ್ರ ಬಜೆಟ್‌ ಬೆಲೆಯ ಹೋಮ್‌ ಥಿಯೇಟರ್‌ಗಳ ಕಡೆಎ ಹೆಚ್ಚಿನ ಗಮನ ನೀಡುತ್ತಾರೆ. ಹಾಗಾದ್ರೆ ಮಾರುಕಟ್ಟೆಯಲ್ಲಿ 3,000 ರೂ ಒಳಗೆ ಲಭ್ಯವಿರುವ ಅತ್ಯುತ್ತಮವಾದ 10 ಹೋಮ್‌ ಥಿಯೇಟರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ZEB-FEEL 4 ಹೋಮ್‌ ಥಿಯೇಟರ್‌

ZEB-FEEL 4 ಹೋಮ್‌ ಥಿಯೇಟರ್‌

ಜೀಬ್ರೋನಿಕ್ಸ್ ಕಂಪೆನಿ ತನ್ನ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಇನ್ನು ನೀವು ಮೂರು ಸಾವಿರದ ಒಳಗೆ ಹೋಮ್‌ ಥಿಯೇಟರ್‌ ಖರೀದಿಸುವುದಾದರೆ ಜೀಬ್ರೋನಿಕ್ಸ್‌ ಕಂಪೆನಿಯ ZEB-FEEL 4 ಉತ್ತಮ ಆಯ್ಕೆಯಾಗಿದೆ. ಇದು 60 W ಪವರ್‌ ಔಟ್‌ಫುಟ್‌ ನೀಡುವ ಬ್ಲೂಟೂತ್ ಹೋಮ್ ಥಿಯೇಟರ್ ಆಗಿದೆ. ಇನ್ನು ಈ ಹೋಮ್‌ ಥಿಯೇಟರ್ 1 ಯೂನಿಟ್‌ ಸಬ್‌ವೂಫರ್‌, ಸೌಂಡ್‌ 4 ಯೂನಿಟ್ಸ್‌, 1 ಯೂನಿಟ್‌ ರಿಮೋಟ್‌ ಕಂಟ್ರೋಲ್‌, 1 ಯೂನಿಟ್‌ ಇನ್‌ಪುಟ್‌ ಕೇಬಲ್‌, ಅನ್ನು ಒಳಗೊಂಡಿದೆ. ಇದು ಬ್ಲೂಟೂತ್‌ ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, 35Hz - 20KHz ಫ್ರಿಕ್ವೆನ್ಸಿ ರೆಸ್ಪಾನ್ಸ್‌ ಅನ್ನು ಹೊಂದಿದೆ. ಜೊತೆಗೆ ಬಿಲ್ಟ್‌ ಇನ್‌ Fm Radio ಸಹ ಒಳಗೊಂಡಿದೆ. ಸದ್ಯ ಇದನ್ನು ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ 2,199 ರೂ ಗಳಿಗೆ ಖರೀದಿಸಬಹುದಾಗಿದೆ.

Philips MMS2625B/94 ಹೋಮ್‌ ಥಿಯೇಟರ್‌

Philips MMS2625B/94 ಹೋಮ್‌ ಥಿಯೇಟರ್‌

ಕೈ ಗೆಟಕುವ ಬೆಲೆಯಲ್ಲಿ ಲಭ್ಯವಾಗುವ ಹೋಮ್‌ ಥಿಯೇಟರ್‌ಗಳಲ್ಲಿ ಫಿಲಿಪ್ಸ್‌ ಕಂಪೆನಿಯ Philips MMS2625B/94 ಹೋಮ್‌ ಥಿಯೇಟರ್‌ ಕೂಡ ಉತ್ತಮ ಆಯ್ಕೆಯಾಗಿದೆ. ಇದು ಉತ್ತಮ ಸೌಂಡ್‌ ಸಿಸ್ಟಂ ಅನ್ನು ಹೊಂದಿದ್ದು, ಮನೆಯಲ್ಲಿ ಪಾರ್ಟಿ ಸಮಾರಂಭಗಳಲ್ಲಿ ಬಳಸಬಹುದಾಗಿದೆ. ಇನ್ನು ಈ ಹೋಮ್‌ ಥಿಯೇಟರ್‌ ಒಂದು ಸ್ಪೀಕರ್‌, ಚಾರ್ಜಿಂಗ್‌ ಕೇಬಲ್‌, ರಿಮೋಟ್‌ ಕಂಟ್ರೋಲ್‌, ಜೊತೆಗೆ ಬರಲಿದೆ. ಈ ಸ್ಪೀಕರ್‌ ಬ್ಲೂಟೂತ್‌ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಸ್ಲಾಟ್‌ ಅನ್ನು ಸಹ ಒಳಗೊಂಡಿದೆ. ಇದರ ಪವರ್‌ ಔಟ್‌ಫುಟ್‌ 38W &31 ಆಗಿದ್ದು, ಫ್ರೀಕ್ವೆನ್ಸಿ ರೆಸ್ಪಾನ್ಸ್‌ 23V AC & 50Hz ಆಗಿದೆ. ಇನ್ನು ಈ ಹೋಮ್‌ ಥಿಯೇಟರ್‌ ಫ್ಲಿಪ್‌ಕಾರ್ಟ್ ನಲ್ಲಿ 2,990 ರೂಗಳಿಗೆ ಲಭ್ಯವಾಗಲಿದೆ.

Intex 2622 ಹೋಮ್‌ ಥಿಯೇಟರ್‌

Intex 2622 ಹೋಮ್‌ ಥಿಯೇಟರ್‌

ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಮತ್ತೊಂದು ಹೋಮ್‌ ಥಿಯೇಟರ್‌ ಅಂದ್ರೆ ಅದು Intex 2622 Portable Bluetooth Home Theatre ಆಗಿದೆ. ಈ ಹೋಮ್‌ ಥಿಯೇಟರ್‌ ವಾಯರ್‌ಲೆಸ್‌ ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆಯನ್ನು ನೀಡಲಿದೆ. ಅಲ್ಲದೆ ಇದರಲ್ಲಿ ಡಿಜಿಟಲ್‌ ಎಫ್‌ಎಂ ಪ್ಲೇ ಎಬಿಲಿಟಿಯನ್ನು ಅಳವಡಿಸಲಾಗಿದೆ. ಇದು ಡಿವಿಡಿ / ಪಿಸಿ / ಟಿವಿಗೆ ಹೊಂದಿಕೆಯಾಗುವ ಮಲ್ಟಿ ಕನೆಕ್ಟಿವಿಟಿಯನ್ನು ಹೊಂದಿದೆ. ಜೊತೆಗೆAUX ಆಡಿಯೊ ಇನ್‌ಫುಟ್

LED ಡಿಸ್‌ಪ್ಲೇ ಹೊಂದಿರುವ ಪವರ್ ಇಂಡಿಕೇಟರ್ ಅನ್ನು ಸಹ ಅಳವಡಿಸಲಾಗಿದೆ. ಸದ್ಯ ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 2,199 ರೂ ಗಳಿಗೆ ಖರೀದಿಸಬಹುದಾಗಿದೆ.

F&D A111F ಹೋಮ್‌ ಥಿಯೇಟರ್‌

F&D A111F ಹೋಮ್‌ ಥಿಯೇಟರ್‌

ಕಡಿಮೆ ಬೆಲೆಯ ಹೋಮ್‌ ಥಿಯೇಟರ್‌ಗಳಲ್ಲಿ F&D A111F ಹೋಮ್‌ ಥಿಯೇಟರ್‌ ಸಹ ಒಂದಾಗಿದೆ. ಇದು 35W ಪವರ್‌ ಔಟ್‌ಪುಟ್‌ ಅನ್ನು ಹೊಂದಿದ್ದು, 65W ಔಟ್‌ಫುಟ್‌ ಪವರ್‌ ಸ್ಪೀಕರ್‌ ಅನ್ನು ಒಳಗೊಂಡಿದೆ. ಹೈ ಡೆಫಿನಿಷನ್‌ ಸೌಂಡ್‌ ಸಿಸ್ಟಂ ಅನ್ನು ಸಹ ಹೊಂದಿದೆ. 25W ಸಬ್‌ವೂಫರ್‌ ಸಿಸ್ಟಂ ಅನ್ನು ಹೊಂದಿದ್ದು, ಹೆಚ್ಚಿನ ಸಾಮರ್ಥ್ಯದ ಬಾಸ್‌ ಔಟ್‌ಪುಟ್‌ ಅನ್ನು ಹೊಂದಿದೆ. ಸದ್ಯ ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 2,989 ರೂ,ಗಳಿಗೆ ಖರೀದಿಸಬಹುದಾಗಿದೆ.

Iball Sound King i3 ಹೋಮ್‌ ಥಿಯೇಟರ್‌

Iball Sound King i3 ಹೋಮ್‌ ಥಿಯೇಟರ್‌

3,000 ರೂ ಒಳಗೆ ಲಭ್ಯವಾಗುವ Iball Sound King i3 ಹೋಮ್‌ ಥಿಯೇಟರ್‌ ಸಹ ಒಂದಾಗಿದೆ. ಇನ್ನು ಈ ಹೋಮ್‌ ಥಿಯೇಟರ್‌ 1 ಆಡಿಯೋ ಕೇಬಲ್‌, 1 ಸಬ್‌ವೂಫರ್‌, 2 ಸ್ಯಾಟ್‌ಲೈಟ್‌ ಸ್ಪೀಕರ್‌, 1 ರಿಮೋಟ್‌ ಕಂಟ್ರೋಲ್‌ ಅನ್ನು ಹೊಂದಿದೆ. 2.1 ಕಾನ್ಫಿಗರೇಷನ್‌ ಅನ್ನು ಹೊಂದಿದೆ. ಇದಲ್ಲದೆ ಇದು 16W ಪವರ್ ಔಟ್‌ಪುಟ್‌ ಅನ್ನು ಹೊಂದಿದೆ. 40Hz ಫ್ರೀಕ್ವೆನ್ಸಿ ರೆಸ್ಪಾನ್ಸ್‌ ಅನ್ನು ಒಳಗೊಂಡಿದೆ. ಇನ್ನು ಈ ಹೋಮ್‌ ಥಿಯೇಟರ್‌ ಫ್ಲಿಪ್‌ಕಾರ್ಟ್‌ನಲ್ಲಿ 2,300 ರೂ ಗಳಿಗೆ ಖರೀದಿಸಬಹುದಾಗಿದೆ.

Altec Lansing AL-3002A

Altec Lansing AL-3002A

ಇನ್ನು ಕಡಿಮೆ ಬೆಲೆಯ ಹೋಮ್‌ ಥಿಯೇಟರ್‌ಗಳಲ್ಲಿ Altec Lansing AL-3002A ಸಹ ಉತ್ತಮ ಆಯ್ಕೆಯಾಗಿದೆ. ಇದು 40W ಪವರ್ ಔಟ್‌ಪುಟ್‌ ಅನ್ನು ಹೊಂದಿದ್ದು, ವಾಯರ್‌ಲೆಸ್‌ ಮ್ಯೂಸಿಕ್‌ ಸ್ಟ್ರೀಮಿಂಗ್‌ ಅನ್ನು ನೀಡಲಿದೆ. ಮೆಮೊರಿ ಕಾರ್ಡ್‌ ಸ್ಲಾಟ್‌ ಅನ್ನು ಸಹ ಹೊಂದಿದೆ. ಜೊತೆಗೆ ಮಲ್ಟಿಪಲ್‌ ಕನೆಕ್ಟಿವಿಟಿಯನ್ನು ಹೊಂದಿದ್ದು, ಬ್ಲೂಟೂತ್‌ ಕಂಟ್ರೋಲ್‌ ಅನ್ನು ಒಳಗೊಂಡಿದೆ. 2 ಸ್ಪೀಕರ್‌, 1 ಸಬ್‌ವೂಫರ್‌, ರಿಮೋಟ್‌ ಕಂಟ್ರೋಲ್‌ ಅನ್ನು ಇನ್‌ಪುಟ್‌ ಕೇಬಲ್‌ ಅನ್ನು ಸಹ ಹೊಂದಿದೆ. ಇನ್ನು ಈ ಹೋಮ್‌ ಥಿಯೇಟರ್‌ ಫ್ಲಿಪ್‌ಕಾರ್ಟ್‌ನಲ್ಲಿ 2,999 ರೂ,ಗಳಿಗೆ ಖರೀದಿಸಬಹುದಾಗಿದೆ.

T-Series M150BT 2.1

T-Series M150BT 2.1

ಅತ್ಯುತ್ತಮ ಹೋಮ್‌ ಥಿಯೇಟರ್‌ಗಳಲ್ಲಿ T-Series M150BT 2.1 ಸಿಸ್ಟಂ ಸಹ ಒಂದಾಗಿದೆ. ಇನ್ನು ಈ ಹೋಮ್‌ ಥಿಯೇಟರ್‌ ಸ್ಯಾಟ್‌ಲೈಟ್‌ ಸ್ಪೀಕರ್‌, ರಿಮೋಟ್‌ ಹ್ಯಾಂಡ್‌ಸೆಟ್‌, 2.1 ಮಲ್ಟಿಮೀಡಿಯಾ ಸ್ಪೀಕರ್‌ ವಿಥ್‌ ಬ್ಲೂಟೂತ್‌ ಅನ್ನು ಒಳಗೊಂಡಿದೆ. 27W ಪವರ್ ಔಟ್‌ಪುಟ್‌ ಅನ್ನು ಹೊಂದಿದೆ. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ 2,589 ರೂ,ಗಳಿಗೆ ಖರೀದಿಸಬಹುದಾಗಿದೆ.

Impex 2.1 (MUSIK R)

Impex 2.1 (MUSIK R)

ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಹೋಮ್‌ ಥಿಯೇಟರ್‌ಗಳಲ್ಲಿ Impex 2.1 (MUSIK R) ಕೂಡ ಒಂದಾಗಿದೆ. ಇದು 2 ಸ್ಪೀಕರ್‌, 1 ಸಬ್‌ವೂಫರ್‌, 1 ರಿಮೋಟ್‌ ಅನ್ನು ಒಳಗೊಂಡಿದೆ. ಅಲ್ಲದೆ ಇದು 60 Hz - 300 Hz ಫ್ರಿಕ್ವೇನ್ಸಿ ರೆಸ್ಪಾನ್ಸ್‌ ಅನ್ನು ಹೊಂದಿದ್ದು, 200 Hz - 20 KHz ಸ್ಯಾಟ್‌ಲೈಟ್‌ ಪ್ರಿಕ್ವೇನ್ಸಿ ರೆಸ್ಪಾನ್ಸ್‌ ಅನ್ನು ಒಳಗೊಂಡಿದೆ. ಇದು ಫ್ಲಿಪ್‌ಕಾರ್ಟ್‌ನಲ್ಲಿ 2,999 ರೂ ಗಳಲ್ಲಿ ಖರೀದಿಸಬಹುದಾಗಿದೆ.

I Kall Ik-4444 BT ಹೋಮ್‌ ಥಿಯೇಟರ್‌

I Kall Ik-4444 BT ಹೋಮ್‌ ಥಿಯೇಟರ್‌

ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಹೋಮ್‌ ಥಿಯೇಟರ್‌ಗಳಲ್ಲಿ I Kall Ik-4444 BT ಸಹ ಒಂದಾಗಿದೆ. 40Hz-200Hz ಫ್ರೀಕ್ವೆನ್ಸಿ ರೆಸ್ಪಾನ್ಸ್‌ ಅನ್ನು ಹೊಂದಿದ್ದು, 200Hz-20KHz ಸ್ಯಾಟ್‌ಲೈಟ್‌ ಫ್ರೀಕ್ವೆನ್ಸಿ ರೆಸ್ಪಾನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ ಇದು ಬ್ಲೂಟೂತ್‌ ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, ಇದು AC 180V-260V/50Hz ಪವರ್‌ ಸೋರ್ಸ್‌ ಅನ್ನು ಹೊಂದಿದೆ. ಇನ್ನು ಈ ಹೋಮ್‌ ಥಿಯೇಟರ್‌ ಅನ್ನು 2,399 ರೂ,ಗಳಲ್ಲಿ ಖರೀದಿಸಬಹುದಾಗಿದೆ.

Kall IK201 BT

Kall IK201 BT

ಇದು 40 W ಪವರ್ ಔಟ್‌ಪುಟ್‌ ಅನ್ನು ಹೊಂದಿದ್ದು, ವಾಯರ್‌ಲೆಸ್‌ ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆಯನ್ನು ಒಳಗೊಂಡಿದೆ. ಇದರ ಫ್ರಿಕ್ವೆನ್ಸಿ ರೆಸ್ಪಾನ್ಸ್‌ 40Hz-200Hz ಮೇನ್‌ ಯೂನಿಟ್‌, 200Hz-20KHz ಸ್ಯಾಟ್‌ಲೈಟ್‌ ಯೂನಿಟ್‌ ಅನ್ನು ಹೊಂದಿದೆ. ಇನ್ನು ಈ ಹೋಮ್‌ ಥಿಯೇಟರ್‌ ಬ್ಲೂಟೂತ್‌ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದು ಫ್ಲಿಪ್‌ಕಾರ್ಟ್‌ನಲ್ಲಿ 1,499 ರೂ,ಗಳಲ್ಲಿ ಖರೀದಿಸಬಹುದಾಗಿದೆ.

Most Read Articles
Best Mobiles in India

English summary
Top 10 Best Home Theater Under Rs 3000 In India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X