ಪ್ರಪಂಚಕ್ಕೆ ಕೊಡುಗೆ ನೀಡಿದ ಭಾರತೀಯರ ಪ್ರಖ್ಯಾತ ಆವಿಷ್ಕಾರಗಳು

Written By:

ಭಾರತ ಎಷ್ಟು ಶ್ರೀಮಂತ ದೇಶ, ಭಾರತ ಜನತೆ ಎಷ್ಟು ಸಾಮರ್ಥ್ಯರು ಎಂಬುದಕ್ಕೆ ಕನ್ನಡದ ಖ್ಯಾತ ನಟರಾದ ರಿಯಲ್‌ ಸ್ಟಾರ್‌ ಉಪ್ರೇಂದ್ರ'ರವರು ಹೇಳಿದ ಮಾತೊಂದು ಯಾವಾಗಲು ನೆನಪಾಗುತ್ತದೆ. ಅವರು ಕಾರ್ಯಕ್ರಮವೊಂದರಲ್ಲಿ "ಇತರ ದೇಶಗಳಲ್ಲಿ ಪತ್ರಿಯೊಬ್ಬರು ಸಹ ಜೀವನ ಸಾಗಿಸಲಿಕ್ಕೆ ದುಡಿಯುತ್ತಾರೆ. ಆದರೆ ನಮ್ಮ ದೇಶದಲ್ಲಿ ಒಂದು ಮನೆಯಲ್ಲಿ ಒಬ್ಬರು ದುಡಿದು ಇತರರೆಲ್ಲರನ್ನು ಸಾಕುತ್ತಾರೆ. ಯಾವ ದೇಶ ಶ್ರೀಮಂತ ಎಂದು ನೀವೇ ನಿರ್ಧರಿಸಿ ಎಂದಿದ್ದರು". ಇಲ್ಲಿ ಒಂದು ನಕರಾತ್ಮಕ ಅಂಶಿವಿದೆ ಅನ್ನೋದು ಬಿಟ್ರೆ ಅವರು ಹೇಳಿದ ಮಾತು ಸತ್ಯವೇ. ಭಾರತ ಕೇವಲ ಇಂತಹ ಉದಾಹರಣೆಗಳಿಗೆ ಮಾತ್ರವಲ್ಲದೇ ಪ್ರಪಂಚದಲ್ಲಿಯೇ ಪ್ರಖ್ಯಾತ ಸಂಶೋಧನೆಗಳಿಗೆ ಹೆಸರುವಾಸಿಯಾಗಿದೆ. ಅಂತಹ ಪ್ರಖ್ಯಾತ ಉದಾಹರಣೆಗೆ ಆರ್ಯಭಟ ಕಂಡುಹಿಡಿದ "ಸೊನ್ನೆ". ಇಂದು ಇಡಿ ಪ್ರಪಂಚವೇ ಸೊನ್ನೆಯನ್ನು ಬಳಸುತ್ತಿದೆ. ಸೊನ್ನೆ ಮಹತ್ವ ಏನು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಇಂದಿನ ಲೇಖನದಲ್ಲಿ ಭಾರತೀಯರು ಸಂಶೋಧಿಸಿದ ಅತ್ಯಧಿಕ ಮಹತ್ವದ ಟಾಪ್‌ 10 ಪ್ರಖ್ಯಾತ ಸಂಶೋಧನೆಗಳು ಯಾವುವು ಎಂದು ನಿಮಗೆ ತಿಳಿಸುತ್ತಿದ್ದೇವೆ. ಪ್ರಪಂಚಕ್ಕೆ ಭಾರತದ ಕೊಡುಗೆ ಏನು ಎಂದು ಈ ಸಂಶೋಧನೆಗಳಿಂದ ತಿಳಿಯುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಕಾಟನ್‌ ಜಿನ್‌ (Cotton Gin)

ಕಾಟನ್‌ ಜಿನ್‌ (Cotton Gin)

10

ಅಂದಹಾಗೆ ಕಾಟನ್‌ ಜಿನ್‌ ಎಂಬುದು ಯಂತ್ರವಾಗಿದ್ದು, ಹತ್ತಿಯನ್ನು ಬೀಜಗಳಿಂದ ಬೇರ್ಪಡಿಸಲು ಉಪಯೋಗಿಸುವ ಪ್ರಖ್ಯಾತ ಯಂತ್ರವಿದು. ಈ ಚಿತ್ರದಲ್ಲಿ ನೋಡುತ್ತಿರುವ ಯಂತ್ರವನ್ನು ಅಜಂತಾ ಗುಹೆಗಳಲ್ಲಿ ಪತ್ತೆ ಹಚ್ಚಿ ಸೆರೆಹಿಡಿದ ಫೋಟೋ. ಪ್ರಸ್ತುತ ಯಾವುದೇ ಅಭಿವೃದ್ದಿಯನ್ನು, ವಿನ್ಯಾಸವನ್ನು ಹತ್ತಿಯಿಂದ ಬೀಜಗಳನ್ನು ಬೇರ್ಪಡಿಸುವ ಯಂತ್ರ ಪಡೆದಿದ್ದರು ಸಹ ಮೊದಲ ಬಾರಿಗೆ ಈ ಯಂತ್ರದ ಮೂಲ ಸಂಶೋಧನೆ ಭಾರತೀಯರದ್ದೇ. ಅಂದಹಾಗೆ ಇದನ್ನು ಸ್ಥಳೀಯವಾಗಿ ಚರ್‌ಖ ಎಂದು ಕರೆಯಲಾಗುತ್ತಿತ್ತು.

 ಬಟನ್ಸ್‌ (Button)

ಬಟನ್ಸ್‌ (Button)

9

ಇಂದಿಗೂ ಸಹ ಬಟನ್‌ಗಳು ಜನರು ಧರಿಸುವ ಬಟ್ಟೆಗಳಲ್ಲಿನ ಮುಖ್ಯ ವಸ್ತುಗಳು. ಬಟನ್‌ಗಳನ್ನು ಭಾರತೀಯರು ಮೂಲತಃ ಸಂಶೋಧಿಸಿದ್ದು, ಇದಕ್ಕೆ ಪುರಾವೆಯಾಗಿ ಐತಿಹಾಸಿಕವಾಗಿ ಸಿಂಧೂ ಕಣಿವೆ ನಾಗರಿಕತೆ ಜನರು ಬಳಸುತ್ತಿದ್ದದ್ದು ಸಾಕ್ಷಿಯಾಗಿದೆ.

 ನ್ಯಾಚುರಲ್‌ ಫೈಬರ್ಸ್‌ ( Natural Fibers)

ನ್ಯಾಚುರಲ್‌ ಫೈಬರ್ಸ್‌ ( Natural Fibers)

8

ನ್ಯಾಚುರಲ್‌ ಫೈಬರ್‌ ಉಣ್ಣೆ, ಹತ್ತಿ, ಸಸ್ಯ ಆಧಾರಿತ ಇತರೆ ಎಲ್ಲವೂ ಮೂಲತಃ ಭಾರತದ ಸಿಂಧೂ ನಾಗರಿಕತೆ ಜನರ ಸಂಶೋಧನೆ. ಅಲ್ಲದೇ ಪರಿಸರ ವಸ್ತುಗಳನ್ನು ಬಳಸಿ ಫ್ಯಾಬ್ರಿಕ್‌ ತಯಾರಿಸುತ್ತಿದ್ದ ಕಲೆ ಸಿಂಧೂ ನಾಗರಿಕತೆ ಜನರಿಗೆ ತಿಳಿದಿತ್ತು. ನಂತರದಲ್ಲಿ ಭಾರತದಿಂದ ಇತರೆ ದೇಶಗಳಿಗೂ ಸಹ ಇಲ್ಲಿನ ಫೈಬರ್ಸ್‌ ಅನ್ನು ರಫ್ತು ಮಾಡಲಾಗುತ್ತಿತ್ತು.

ಸರ್ಜರಿ (Surgery)

ಸರ್ಜರಿ (Surgery)

7

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮತ್ತು ಪ್ಲಾಸ್ಟಿಕ್‌ ಸರ್ಜರಿ ಸಹ ಮೊದಲ ಬಾರಿಗೆ ಪ್ರಯೋಗ ನಡೆದದ್ದು ಪ್ರಾಚೀನ ಕಾಲದ ವೈದ್ಯ ಸುಶ್ರುತ'ರವರಿಂದ. ಇದು 2000BCE ಹಿಂದೆ ನಡೆದಿತ್ತು. ನಂತರದಲ್ಲಿ ಅರೇಬಿಕ್‌ ಮತ್ತು ಭಾಷೆಗೆ ಭಾಷಾಂತರಹೊಂದಿತು. ನಂತರ ಯೂರೋಪಿಯನ್ನರ ಕೈ ಸೇರಿತು. ಬಾಗಿದ ಸೂಜಿ ಬಳಸಿ ಲೆನ್ಸ್ ಅನ್ನು ತಳ್ಳುವುದರ ಮೂಲಕ ಕಣ್ಣಿನ ಪೊರೆಯನ್ನು ತೆಗೆಯುತ್ತಿದ್ದರು ಸುಶ್ರುತ'ರವರು.

 ಮೆಡಿಕಲ್‌ ಚಿಕಿತ್ಸೆ (Medicle Treatments)

ಮೆಡಿಕಲ್‌ ಚಿಕಿತ್ಸೆ (Medicle Treatments)

6

ಕುಷ್ಠರೋಗವು ಮೊದಲ ಬಾರಿಗೆ ಪ್ರಾಚೀನ ಭಾರತೀಯರಿಂದ ಮತ್ತು ಅಥರ್ವ ವೇದದ ಕಾಲದಲ್ಲಿ ಗುರುತಿಸಲ್ಪಟ್ಟಿತು. ದೇಹದ ಮೂತ್ರಾಂಗದಲ್ಲಿನ ಕಲ್ಲನ್ನು ತೆಗೆಯುವ ಚಿಕಿತ್ಸೆ ಸಹ ಭಾರತೀಯರಿಂದ ಪರಿಚಯಿಸಲಾದ ಸಂಶೋಧನೆಯಾಗಿದೆ.

 ಡೈಮೆಂಡ್ಸ್ (Diamonds)

ಡೈಮೆಂಡ್ಸ್ (Diamonds)

5

ವಜ್ರವನ್ನು ಮೊದಲ ಬಾರಿಗೆ ಭಾರತದಲ್ಲಿ ಗಣಿಗಾರಿಕೆ ಮಾಡಲಾಯಿತು. ಅಂದಹಾಗೆ ಭಾರತದ ಮಧ್ಯಭಾಗದಲ್ಲಿ ವಜ್ರದ ನಿಕ್ಷೇಪವನ್ನು ಪತ್ತೆ ಹಚ್ಚಿ ಅದನ್ನು ಪ್ರಮುಖ ಸ್ಪರ್ಶಮಣಿಯಾಗಿ ಮಾಡಲಾಯಿತು. 18ನೇ ಶತಮಾನದಿಂದಲೂ ಸಹ ವಜ್ರವನ್ನು ಪತ್ತೆ ಹಚ್ಚಿ ರಫ್ತು ಮಾಡುತ್ತಿರುವ ಒಂದೇ ಒಂದು ದೇಶ ಭಾರತವಾಗಿದೆ. ಅಲ್ಲದೇ ವಜ್ರದ ಕಲೆ ಅಧಿಕವಾಗಿ ತಿಳಿದಿರುವುದು ಸಹ ಭಾರತೀಯರಿಗೆ.

ಡಾಕ್‌ (Dock)

ಡಾಕ್‌ (Dock)

4

ಮೊಟ್ಟ ಮೊದಲ ಬಾರಿಗೆ ಡಾಕ್‌(ಹಡಗು ಬಂದರು) ಅನ್ನು ಹೊಂದಿದ ದೇಶ ಭಾರತ. 2400BCE ಯಲ್ಲಿ ಹರಪ್ಪ ನಾಗರಿಕತೆ ಲೊಥಾಲ್‌'ನಲ್ಲಿ ಮೊಟ್ಟ ಮೊದಲ ಬಾರಿಗೆ ಹಡಗು ಬಂದರನ್ನು ನಿರ್ಮಿಸಿತು. ಅಂದಹಾಗೆ ಅಧಿಕವಾಗಿ ಹರಪ್ಪ ನಾಗರಿಕತೆ ಜನರು ಸಮುದ್ರವಿಜ್ಞಾನ ಮತ್ತು ಸಮುದ್ರ ಎಂಜಿನಿಯರಿಂಗ್ ಬಗ್ಗೆ ತಿಳಿದಿದ್ದರು.

ಕ್ರೂಸಿಬಲ್ ಸ್ಟೀಲ್ (Crucible Steel)

ಕ್ರೂಸಿಬಲ್ ಸ್ಟೀಲ್ (Crucible Steel)

3

ಪ್ರಾಚೀನ ಕಾಲದಿಂದಲೂ ಪ್ರಸ್ತುತವಾಗಿ ಈಗಲೂ ಸಹ ಉತ್ತಮ ಗುಣಮಟ್ಟದ ಸ್ಟೀಲ್‌ ಅನ್ನು ತಯಾರಿಸುತ್ತಿರುವುದು ದಕ್ಷಿಣ ಭಾರತ. ಸ್ಟೀಲ್‌ ಅನ್ನು ತಯಾರಿಸುವ ತಂತ್ರಗಾರಿಕೆಗೆ ನಂತರದಲ್ಲಿ "ಕ್ರೂಸಿಬಲ್ ತಂತ್ರಗಾರಿಕೆ' ಎನ್ನಲಾಗಿದೆ. ಶುದ್ಧ ಕಬ್ಬಿಣ, ಗಾಜು ಮತ್ತು ಇದ್ದಿಲ್ಲನ್ನು ಒಂದು ದೊಡ್ಡ ಕಂಟೈನರ್‌ ಒಳಗೆ ಸೇರಿಸಿ ಮೆಟಲ್‌ ಗಟ್ಟಿಯಾಗುವ ವರೆಗೆ ಶಾಖ ನೀಡಿ ನಂತರದಲ್ಲಿ ಕಾರ್ಬನ್‌ ಅನ್ನು ಹೀರಲ್ಪಡುತ್ತದೆ.

ಇಂಕ್‌ (Ink)

ಇಂಕ್‌ (Ink)

2

ಇಂಕ್‌ ಅನ್ನು ಹಲವು ಪದಾರ್ಥಗಳಿಂದ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಸಂಶೋಧಿಸಲಾಯಿತು. ಪ್ರಾಚೀನ ಭಾರತದಲ್ಲಿ ಈ ಕಪ್ಪು ಶಾಹಿಯನ್ನು ಹಸ್ತಪ್ರತಿಗಳನ್ನು ಬರೆಯಲು ಬಳಸಲಾಗುತ್ತಿತ್ತು. ಭಾರತದ ಇಂಕ್‌ ಅನ್ನು ಸುಟ್ಟ ತಾರಿನಿಂದ, ಮೂಳೆಯಿಂದ, ಕಾರ್ಬನ್‌ನಿಂದ ತಯಾರಿಸಲಾಗುತ್ತದೆ.

ಸೊನ್ನೆ (Zero)

ಸೊನ್ನೆ (Zero)

1

ಸೊನ್ನೆ ಇಲ್ಲದ ಗಣಿತ ಶಾಸ್ತ್ರ ಗಣಿತವೇ ಅಲ್ಲಾ ಅಲ್ವಾ. ಅಲ್ಲದೇ ಮೌಲ್ಯವು ಸಹ ಇರುವುದಿಲ್ಲ. ಸೊನ್ನೆಯನ್ನು ಭಾರತೀಯ ಪ್ರಖ್ಯಾತ ಗಣಿತ ಶಾಸ್ತ್ರಜ್ಞ ಮತ್ತು ಖಗೋಳ ಶಾಸ್ತ್ರಜ್ಞರಾದ ಆರ್ಯಭಟ'ರವರು ಕೊಡುಗೆ ನೀಡಿದರು. ಇಂದು ಸೊನ್ನೆ ಇಲ್ಲದಿದ್ದರು ಸಹ ಸಂಖ್ಯೆಗಳಿಗೆ ಮೌಲ್ಯ ಇರುವುದೇ ಸೊನ್ನೆಯಿಂದ ಎಂಬುದನ್ನು ಮರೆಯೋ ಹಾಗಿಲ್ಲಾ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್ ಫೇಸ್‌ಬುಕ್‌

ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Top 10 Biggest Inventions by Indian People. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot