ಜಿಮೇಲ್ ಅನ್ನು ಇನ್ನಷ್ಟು ಪ್ರಭಾವಶಾಲಿಯಾಗಿ ಬಳಸುವುದು ಹೇಗೆ?

Posted By:

ಜಿಮೇಲ್ ನಿಜಕ್ಕೂ ಅದ್ಭುತವಾಗಿದೆ. ಇದು ಹೆಚ್ಚುವರಿ ಶಾರ್ಟ್‌ಕಟ್‌ಗಳು, ಸೆಟ್ಟಿಂಗ್‌ಗಳು ಮತ್ತು ಫೀಚರ್‌ಗಳೊಂದಿಗೆ ಬಂದಿದೆ. ಅದಾಗ್ಯೂ ಜಿಮೇಲ್‌ನಲ್ಲಿ ನೀವು ಅನುಸರಿಸಬಹುದಾದ ಇನ್ನಷ್ಟು ಸುಲಭ ಸಲಹೆಗಳಿದ್ದು ಇದರಿಂದ ನಿಮ್ಮ ಜಿಮೇಲ್ ಖಾತೆಯನ್ನು ಪ್ರಭಾವಶಾಲಿಯನ್ನಾಗಿಸಬಹುದು.

ಇದನ್ನೂ ಓದಿ: ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

ಇಂದಿನ ಲೇಖನದಲ್ಲಿ ನಾವು ನೀಡಿರುವ ಜಿಮೇಲ್ ಶಾರ್ಟ್‌ಕಟ್ ಸರಳ ಸಲಹೆಗಳು ಹೆಚ್ಚು ಉಪಯೋಗಕಾರಿಯಾಗಿದ್ದು ನಿಮ್ಮಲ್ಲಿ ಹೆಚ್ಚು ಪರಿಣಾಮವನ್ನುಂಟು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸುಲಭ ಪ್ರವೇಶಕ್ಕಾಗಿ ನಿಮ್ಮ ಇಮೇಲ್ ಇನ್‌ಬಾಕ್ಸ್‌ನಲ್ಲಿ ಫೈಲ್‌ಗಳನ್ನು ಹೋಸ್ಟ್ ಮಾಡುವುದು

ಸುಲಭ ಪ್ರವೇಶಕ್ಕಾಗಿ ನಿಮ್ಮ ಇಮೇಲ್ ಇನ್‌ಬಾಕ್ಸ್‌ನಲ್ಲಿ ಫೈಲ್‌ಗಳನ್ನು ಹೋಸ್ಟ್ ಮಾಡುವುದು

ಟಿಪ್ಸ್1

ಇಂದಿನ ದಿನಗಳಲ್ಲಿ ಡ್ರಾಪ್‌ಬಾಕ್ಸ್‌ನಂತಹ ತ್ವರಿತ ಪ್ರವೇಶ ಫೋಲ್ಡರ್‌ಗಳನ್ನು ನಾವು ಬಳಸುತ್ತಿದ್ದು ಇದು ಫೈಲ್‌ಗಳನ್ನು ಸಂಗ್ರಹಿಸಿಡುತ್ತದೆ. ನೀವು ಇದನ್ನು ಬಳಸುತ್ತಿಲ್ಲ ಎಂದಾದಲ್ಲಿ ಜಿಮೇಲ್‌ನಲ್ಲಿ ಅವುಗಳನ್ನು ಡ್ರಾಫ್ಟ್‌ಗೆ ಲಗತ್ತಿಸಬಹುದಾಗಿದೆ.

ನಿಮ್ಮ ಹೋಮ್ ಐಪಿ ವಿಳಾಸದ ಮೇಲೆ ನಿಗಾ ಇರಿಸುವುದು

ನಿಮ್ಮ ಹೋಮ್ ಐಪಿ ವಿಳಾಸದ ಮೇಲೆ ನಿಗಾ ಇರಿಸುವುದು

ಟಿಪ್ಸ್ 2

ಐಪಿಯು ಸಮಯದಿಂದ ಸಮಯಕ್ಕೆ ಬದಲಾಗುವುದರಿಂದ ನೀವು ಸೆಟ್ಟಿಂಗ್‌ಗೆ ಅವಲಂಬಿತರಾಗಿರಬೇಕಾಗುತ್ತದೆ. ನಿಮ್ಮ ಮನೆಯಿಂದ ಜಿಮೇಲ್ ಅನ್ನು ತುಂಬಾ ಸಮಯದ ಹಿಂದೆ ಪ್ರವೇಶಿಸಿದ್ದರೆ ನಿಮ್ಮ ಮನೆಯ ಕಂಪ್ಯೂಟರ್‌ನಲ್ಲಿ ಇದು ನೀವು ಬಳಸಿದ ಕೊನೆಯ ಐಪಿ ವಿಳಾಸವನ್ನು ತೋರಿಸುತ್ತದೆ.

ಪಠ್ಯ ಸ್ವರೂಪದ ಇಮೇಲ್‌ಗಳನ್ನು ತೆಗೆದು ಹಾಕುವುದು

ಪಠ್ಯ ಸ್ವರೂಪದ ಇಮೇಲ್‌ಗಳನ್ನು ತೆಗೆದು ಹಾಕುವುದು

ಟಿಪ್ಸ್ 3

ಜಿಮೇಲ್‌ಗೆ ಪಠ್ಯವನ್ನು ನಕಲಿಸುವುದು ಅಂಟಿಸುವುದನ್ನು ನೀವು ಮಾಡುವಾಗ, ಇದರ ನೈಜ ಪಠ್ಯವನ್ನು ಹಾಗೆಯೇ ಇರಿಸುವುದು ಎಷ್ಟು ಕಷ್ಟ ಎಂಬುದು ನಿಮಗೆ ತಿಳಿದಿರುತ್ತದೆ. ಜಿಮೇಲ್‌ನ "ರಿಮೂವ್ ಫಾರ್ಮ್ಯಾಟಿಂಗ್" ಬಟನ್ ಕ್ಲಿಕ್ ಮಾಡುವ ಮೂಲಕ ಕಿರಿಕಿರಿಯಿಂದ ಹೊರಬರಬಹುದಾಗಿದೆ.

 ನಿಮ್ಮ ಸಂಪರ್ಕಗಳ ಪಟ್ಟಿಯನ್ನು ಮರುಸಂಗ್ರಹಿಸುವುದು

ನಿಮ್ಮ ಸಂಪರ್ಕಗಳ ಪಟ್ಟಿಯನ್ನು ಮರುಸಂಗ್ರಹಿಸುವುದು

ಟಿಪ್ಸ್ 4

ನಿಯಮಿತವಾಗಿ ಜಿಮೇಲ್ ನಿಮ್ಮ ಸಂಪರ್ಕ ಪಟ್ಟಿಯನ್ನು ಬ್ಯಾಕಪ್ ಮಾಡುತ್ತದೆ. ಒಂದು ವೇಳೆ ನೀವು ನಿಮ್ಮ ಸಂಪರ್ಕ ಪಟ್ಟಿಯನ್ನು ಕಳೆದುಕೊಂಡಲ್ಲಿ, ಜಿಮೇಲ್‌ನಲ್ಲಿ ನಿಮ್ಮ ಸಂಪರ್ಕ ಪಟ್ಟಿಗೆ ಹೋಗಿ "ಮೋರ್" ಬಟನ್ ಕ್ಲಿಕ್ ಮಾಡಿ ಮತ್ತು "ರೀಸ್ಟೋರ್ ಕಾಂಟಾಕ್ಟ್ಸ್" ಆರಿಸಿ.

ಸಂದೇಶಗಳಿಗೆ ನೇರವಾಗಿ ಚಿತ್ರವನ್ನು ನಕಲಿಸಿ ಅಂಟಿಸುವುದು

ಸಂದೇಶಗಳಿಗೆ ನೇರವಾಗಿ ಚಿತ್ರವನ್ನು ನಕಲಿಸಿ ಅಂಟಿಸುವುದು

ಟಿಪ್ಸ್ 5

ಹೆಚ್ಚಿನ ಫೋಟೋಗಳನ್ನು ನೀವು ಹಂಚಿಕೊಂಡಾಗ, ಜಿಮೇಲ್‌ನಲ್ಲಿ ಚಿತ್ರವನ್ನು ಯಾವಾಗಲಾದರೂ ನೀವು ಎಂಬೆಡ್ ಮಾಡಬೇಕೆಂದು ಬಯಸಿದಾಗ "ಇನ್‌ಸರ್ಟ್ ಇಮೇಜ್" ಬಟನ್ ಅನ್ನು ನೀವು ಕ್ಲಿಕ್ ಮಾಡಬೇಕೆಂದೇನಿಲ್ಲ. ಫೈರ್‌ಫಾಕ್ಸ್ ಮತ್ತು ಕ್ರೋಮ್‌ನಲ್ಲಿ ಸಂದೇಶದೊಳಗೆ ಚಿತ್ರಗಳನ್ನು ಡ್ರ್ಯಾಗ್ ಮಾಡಬಹುದು ಮತ್ತು ಅವುಗಳನ್ನು ಒಳಸೇರಿಸಲು ಬಿಡಬಹುದು.

ಸಂದೇಶಗಳನ್ನು ಗಾತ್ರದ ಮೂಲಕ ಸಾರ್ಟ್ ಮಾಡುವುದು

ಸಂದೇಶಗಳನ್ನು ಗಾತ್ರದ ಮೂಲಕ ಸಾರ್ಟ್ ಮಾಡುವುದು

ಟಿಪ್ಸ್ 6

ನಿಮ್ಮ ಜಿಮೇಲ್ ಖಾತೆಯಲ್ಲಿ ಸ್ಥಳಾವಕಾಶದ ಕೊರತೆಯನ್ನು ನೀವು ಎದುರಿಸುತ್ತಿದ್ದೀರಿ ಎಂದಾದಲ್ಲಿ, ಯಾವುದಾದರೂ ಅಳಿಸಬಹುದಾದ ಸಂದೇಶಗಳನ್ನು ಅಳಿಸುವ ಮೂಲಕ ಸ್ಥಳಾವಕಾಶ ಕೊರತೆಯನ್ನು ನೀಗಿಸಬಹುದಾಗಿದೆ.

ಐಓಎಸ್‌ನಲ್ಲಿ ಜಿಮೇಲ್ ಹೊಂದಿಸುವುದು

ಐಓಎಸ್‌ನಲ್ಲಿ ಜಿಮೇಲ್ ಹೊಂದಿಸುವುದು

ಟಿಪ್ಸ್ 7

ನಿಮ್ಮ ಐಓಎಸ್‌ನಲ್ಲಿ ಕೂಡ ಜಿಮೇಲ್ ಹೊಂದಿಸುವ ಮೂಲಕ ಇನ್ನಷ್ಟು ವೇಗವಾಗಿ ಜಿಮೇಲ್ ಸೇವೆಯನ್ನು ಐಫೋನ್ ಬಳಕೆದಾರರು ಪಡೆಯಬಹುದಾಗಿದೆ.

ಜಿಮೇಲ್ ಸರ್ವರ್ ಡೌನ್ ಆಗಿದ್ದಾಗ ಅದನ್ನು ಪ್ರವೇಶಿಸುವುದು

ಜಿಮೇಲ್ ಸರ್ವರ್ ಡೌನ್ ಆಗಿದ್ದಾಗ ಅದನ್ನು ಪ್ರವೇಶಿಸುವುದು

ಟಿಪ್ಸ್ 8

ಜಿಮೇಲ್ ಎಂದಿಗೂ ಡೌನ್‌ಟೈಮ್ ಅನ್ನು ಹೊಂದಿರುವುದಿಲ್ಲ, ಆದರೆ ಅಪರೂಪಕ್ಕೊಮ್ಮೆ ಜಿಮೇಲ್ ಅನ್ನು ಪ್ರವೇಶಿಸಲು ಸಾಧ್ಯವಾಗದು ಮತ್ತು ಇದರಿಂದ ಪ್ರತಿಯೊಬ್ಬರೂ ಚಿಂತಿತರಾಗುತ್ತಾರೆ. ಇದು ಡೌನ್ ಆದಾಗ ಇದನ್ನು ಪ್ರವೇಶಿಸಲು ಎಚ್‌ಟಿಎಮ್‌ಎಲ್ ಇಂಟರ್ಫೇಸ್ ಅಥವಾ ಥಂಡರ್‌ಬರ್ಡ್ ಅನ್ನು ಬಳಸಬಹುದಾಗಿದೆ.

ಜಿಮೇಲ್ ಅನ್ನು ನಿಮ್ಮ ಡೀಫಾಲ್ಟ್ ಮೇಲ್ ಕ್ಲೈಂಟ್ ಆಗಿ ಹೊಂದಿಸುವುದು

ಜಿಮೇಲ್ ಅನ್ನು ನಿಮ್ಮ ಡೀಫಾಲ್ಟ್ ಮೇಲ್ ಕ್ಲೈಂಟ್ ಆಗಿ ಹೊಂದಿಸುವುದು

ಟಿಪ್ಸ್ 9

ನೀವು chrome://settings/handlers ಗೆ ಹೋಗಿ ಜಿಮೇಲ್ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು. ಬ್ರೌಸರ್‌ನ ಒಳಗೆಯೇ ಇದನ್ನು ಮಾಡಬಹುದಾಗಿದ್ದು ಯಾವುದೇ ಅಪ್ಲಿಕೇಶನ್ ಅನ್ನು ಬಳಸಬೇಕಾಗಿಲ್ಲ.

ಜಿಮೇಲ್‌ಗೆ ಸ್ನೂಜ್ ಬಟನ್ ಸೇರಿಸುವುದು

ಜಿಮೇಲ್‌ಗೆ ಸ್ನೂಜ್ ಬಟನ್ ಸೇರಿಸುವುದು

ಟಿಪ್ಸ್ 10

ಸ್ನೂಜ್ ಬಟನ್ ಅನ್ನು ರಿಮೈಂಡರ್‌ನಂತೆ ಬಳಸಿ ಮೇಲ್‌ಗಳನ್ನು ಕಳುಹಿಸಬಹುದು. ನೀವು ಇದರಲ್ಲಿ ಮೇಲ್‌ಗಳನ್ನು ಸ್ಟೋರ್ ಮಾಡಿ ಇಡಬಹುದಾಗಿದ್ದು ತನ್ನಿಂದ ತಾನೇ ಇದು ಮೇಲ್ ಕಳುಹಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 10 Clever Tricks Built Right Into Gmail.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot