ಲೈಫ್‌ಸ್ಟೈಲ್ ಅನ್ನೇ ಮಾರ್ಪಡಿಸುವ ಟಾಪ್ ಗ್ಯಾಜೆಟ್ಸ್

Written By:

ಆಧುನಿಕವಾಗಿ ನಾವು ಎಷ್ಟೇ ಮುಂದುವರಿದಿದ್ದರೂ ಕೆಲವೊಮ್ಮೆ ಇನ್ನಷ್ಟು ವೇಗವಾಗಿ ನಾವು ಆಲೋಚನೆ ಮಾಡಬೇಕಾಗುತ್ತದೆ. ನಮ್ಮ ಜೀವನವನ್ನು ಇನ್ನಷ್ಟು ಸರಳ ಮತ್ತು ಪರಿಣಾಮಕಾರಿಯನ್ನಾಗಿಸುವ ವಿಧಾನಗಳತ್ತ ನಾವು ಆಲೋಚಿಸಲೇಬೇಕಾಗುತ್ತದೆ. ಇಂತಹುದೇ ಹಲವೊಂದು ಅಂಶಗಳನ್ನು ದೈನಂದಿನ ಜೀವನದಲ್ಲಿ ನಾವು ಕಂಡುಕೊಂಡಿದ್ದರೂ ಅದನ್ನು ಇನ್ನಷ್ಟು ಸರಳ ಮತ್ತು ನೇರನೋಟದಲ್ಲಿ ಮಾರ್ಪಡಿಸಲೇಬೇಕಾಗುತ್ತದೆ. 

ಹೌದು ಇಂತಹುದೇ ಜೀವನ ವಿಧಾನವನ್ನು ಬದಲಾಯಿಸುವ ಟಾಪ್ ಗ್ಯಾಜೆಟ್‌ಗಳೊಂದಿಗೆ ನಾವು ಬಂದಿದ್ದು ಈ ಗ್ಯಾಜೆಟ್‌ಗಳು ನಿಮ್ಮೆಲ್ಲಾ ಚಟುವಟಿಕೆಗಳಿಗೆ ಪೂರಕವಾಗಿವೆ. ಈ ಗ್ಯಾಜೆಟ್‌ಗಳತ್ತ ನೋಟ ಹರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್ಕ್ ಡಾಟ್ಸ್

ಡಿಸ್ಕ್ ಡಾಟ್ಸ್

ಟಾಪ್ ಗ್ಯಾಜೆಟ್ಸ್

ಕನ್ಸೋಲ್ ಗೇಮ್‌ಗಳು ಯಾರಿಗೆ ಇಷ್ಟವಿಲ್ಲ ಹೇಳಿ? ಆದರೂ ಈ ಗೇಮ್ ಸಿಡಿಗಳನ್ನು ಸೂಕ್ತವಾಗಿ ಒಂದೇ ಕಡೆ ಸಂಗ್ರಹಿಸಿಡುವುದು ಎಂದರೆ ತಲೆನೋವಿನ ಕೆಲಸವೇ. ಈ ಡಿಸ್ಕ್ ಡಾಟ್ಸ್ ನಿಮ್ ಗೇಮಿಂಗ್ ಸಿಡಿಗಳನ್ನು ಕನ್ಸೋಲ್‌ಗಳನ್ನು ನೀಟಾಗಿ ಬೋರ್ಡ್‌ನಲ್ಲಿ ಸಂಗ್ರಹಿಸಿಡಲು ಸಹಕಾರಿಯಾಗಿದೆ.

ಬೋಂಡಿಕ್ ಪ್ಲಾಸ್ಟಿಕ್ ವೆಲ್ಡರ್

ಬೋಂಡಿಕ್ ಪ್ಲಾಸ್ಟಿಕ್ ವೆಲ್ಡರ್

ಟಾಪ್ ಗ್ಯಾಜೆಟ್ಸ್

ಈ ಬೋಂಡಿಕ್ ಪ್ಲಾಸ್ಟಿಕ್ ವೆಲ್ಡರ್ ನಿಮ್ಮ ಮುರಿದ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ರಿಪೇರಿ ಮಾಡುತ್ತದೆ. ಇದು ನೀಲಿ ಯುವಿ ಲೈಟ್ ಅನ್ನು ಹೊಂದಿದ್ದು ವೆಲ್ಡಿಂಗ್ ಅನ್ನು ಪರಿಪೂರ್ಣಗೊಳಿಸುತ್ತದೆ.

ನೈಫ್ ಬ್ಲಾಕ್

ನೈಫ್ ಬ್ಲಾಕ್

ಟಾಪ್ ಗ್ಯಾಜೆಟ್ಸ್

ಈ ನೈಫ್ ಬ್ಲಾಕ್ ಮಕ್ಕಳಿಗೆ ಯಾವುದೇ ಹಾನಿಯನ್ನುಂಟು ಮಾಡದೇ ನೀಟಾಗಿ ನಿಮ್ಮ ಚಾಕುವನ್ನಿಡಲು ಪ್ರಶಸ್ತವಾಗಿದೆ. ಯಾವುದೇ ರೀತಿಯ ಅಪಘಾತಗಳನ್ನು ಇದು ಉಂಟುಮಾಡುವುದಿಲ್ಲ.

ಡಿವೈಸ್ ಚಾರ್ಜಿಂಗ್ ಟೇಬಲ್

ಡಿವೈಸ್ ಚಾರ್ಜಿಂಗ್ ಟೇಬಲ್

ಟಾಪ್ ಗ್ಯಾಜೆಟ್ಸ್

ಈ ಟೇಬಲ್ ಹೆಚ್ಚುವರಿ ಯುಎಸ್‌ಬಿ ಪೋರ್ಟ್ ಅನ್ನು ಹೊಂದಿದ್ದು, ಕರೆಗಳನ್ನು ಸ್ವೀಕರಿಸಲು, ವೆಬ್ ಸರ್ಫ್ ಮಾಡಲು ಅನುಮತಿಸುತ್ತದೆ. ನಿಮ್ಮ ಫೋನ್‌ಗೆ ಚಾರ್ಜ್ ಮಾಡುವ ಸಾಮರ್ಥ್ಯ ಇದಕ್ಕಿದೆ.

ನೈರಿಸ್ ಸ್ಮಾರ್ಟ್ ಔಟ್‌ಲೆಟ್

ನೈರಿಸ್ ಸ್ಮಾರ್ಟ್ ಔಟ್‌ಲೆಟ್

ಟಾಪ್ ಗ್ಯಾಜೆಟ್ಸ್

ಯಾವುದೇ ಔಟ್‌ಲೆಟ್ ಅನ್ನು ಬ್ಲ್ಯೂಟೂತ್ ಸಕ್ರಿಯಗೊಳಿಸುವಂತೆ ಮಾಡುವ ಈ ನೈರಿಸ್ ನಿಮ್ಮ ಹಸ್ತದಲ್ಲೇ ಡಿವೈಸ್ ಅನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ನೀಡುತ್ತದೆ. ನಿಮ್ಮ ಮನೆಗೆ ಬ್ಲ್ಯೂಟೂತ್ ಸಂಪರ್ಕವನ್ನು ಇದು ಒದಗಿಸುತ್ತದೆ.

ನೆಕ್ಸ್ಟ್ ಬುಕ್ ಟ್ಯಾಬ್ಲೆಟ್ಸ್

ನೆಕ್ಸ್ಟ್ ಬುಕ್ ಟ್ಯಾಬ್ಲೆಟ್ಸ್

ಟಾಪ್ ಗ್ಯಾಜೆಟ್ಸ್

ನೆಕ್ಸ್ಟ್ ಬುಕ್ ಟ್ಯಾಬ್ಲೆಟ್‌ಗಳು ಈ ವರ್ಷದಲ್ಲೇ ಬಿಡುಗಡೆಯನ್ನು ಹೊಂದಲಿದ್ದು ಇದು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಓಎಸ್, ಅಥವಾ ವಿಂಡೋಸ್ 8.1 ಓಎಸ್ ಅನ್ನು ಹೊಂದಬಹುದು.

ಟಿವಿ ಗೇಮಿಂಗ್ ಐ ಸೆನ್ಸಾರ್

ಟಿವಿ ಗೇಮಿಂಗ್ ಐ ಸೆನ್ಸಾರ್

ಟಾಪ್ ಗ್ಯಾಜೆಟ್ಸ್

ಗೇಮ್ ಆಡುತ್ತಿರುವಾಗ ನಿಯಂತ್ರನ ಕಳೆದುಕೊಳ್ಳದಂತೆ ಮಾಡುವ ಈ ಐ ಸೆನ್ಸಾರ್ ಇದು ಸುತ್ತಲಿನ ಸಂಪೂರ್ಣ ವೀಕ್ಷಣೆಯನ್ನು ನಿಮಗೆ ನೀಡುತ್ತದೆ.

ಸ್ಟೀಮ್ ಮೆಶೀನ್

ಸ್ಟೀಮ್ ಮೆಶೀನ್

ಟಾಪ್ ಗ್ಯಾಜೆಟ್ಸ್

ಪೂರ್ಣ ಗಾತ್ರದ ಡೆಸ್ಕ್‌ಟಾಪ್‌ಗಳಿಗೆ ವೈರಿಯಾಗಿರುವ ಈ ಸ್ಟೀಮ್ ಮೆಶೀನ್ ಗೇಮಿಂಗ್ ಪಿಸಿ ಕೂಡ ಆಗಿದೆ.

ಕಾರ್ಬೈನರ್ ಕೇಬಲ್

ಕಾರ್ಬೈನರ್ ಕೇಬಲ್

ಟಾಪ್ ಗ್ಯಾಜೆಟ್ಸ್

ನಿಮ್ಮ ಫೋನ್, ಲ್ಯಾಪ್‌ಟಾಪ್, ಕೀ ಹೀಗೆ ಅಗತ್ಯದ ಸಾಮಾಗ್ರಿಗಳನ್ನು ಜೊತೆಯಾಗಿ ಇರಿಸುವ ಈ ಕೇಬಲ್ ನಿಮ್ಮ ಸಕ್ರಿಯ ಲೈಫ್‌ಸ್ಟೈಲ್‌ಗೆ ಸೂಕ್ತವಾಗಿದೆ.

ಸ್ಮಾರ್ಟ್ ಸೆನ್ಸಾರ್ ಕೀಬೋರ್ಡ್

ಸ್ಮಾರ್ಟ್ ಸೆನ್ಸಾರ್ ಕೀಬೋರ್ಡ್

ಟಾಪ್ ಗ್ಯಾಜೆಟ್ಸ್

ನೀವೊಬ್ಬ ಸಂಗೀತ ಪ್ರೇಮಿಯಾಗಿದ್ದು, ಸಂಗೀತ ಉಪಕರಣಗಳನ್ನು ನುಡಿಸುವ ಹುಚ್ಚುಳ್ಳವರಾಗಿದ್ದಲ್ಲಿ ಇದು ಅತ್ಯಂತ ಸೂಕ್ತವಾಗಿದೆ. ನಿಮ್ಮ ಹಸ್ತದ ನಿಯಂತ್ರಣವನ್ನು ಈ ಕೀಬೋರ್ಡ್ ಹೊಂದಿದ್ದು ಮನಸ್ಸಿಗೆ ಮುದನೀಡುವಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These cool gadgets change your entire lifestyle in a simple way. you can set common things in a systematic way.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot