ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಲ್ಲಿರುವ ಅತಿಕೆಟ್ಟ ಪಾಸ್‌ವರ್ಡ್‌ಗಳು ಇವು!!

|

ಆನ್‌ಲೈನ್ ಪ್ರಪಂಚದಲ್ಲಿ ಪಾಸ್‌ವರ್ಡ್‌ಗಳೇ ಕೀಲಿಕೈಗಳು. ಪ್ರತಿಯೊಂದು ಆನ್‌ಲೈನ್ ಸೇವೆಗಳನ್ನು ಬಳಸುವಾಗಲೂ ಸಹ ಅದಕ್ಕಾಗಿಯೇ ಒಂದೊಂದು ಪಾಸ್‌ವರ್ಡ್‌ಗಳನ್ನು ಪಡೆದಿರುತ್ತೇವೆ. ಆದರೆ, ಅವುಗಳನ್ನು ನೆನಪಿಟ್ಟಿಕೊಳ್ಳುವುದೇ ಡಿಜಿಟಲ್‌ನಲ್ಲಿ ಅತ್ಯಂತ ಕಷ್ಟ ಎನ್ನಬಹುದು.! ಹೌದು, ಏಕೆಂದರೆ, ಮನುಷ್ಯ ಎಷ್ಟು ಅಂತ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯ.?

ಹಾಗಾಗಿಯೇ, ಜನರು ಹಲವು ಪಾಸ್‌ವರ್ಡ್‌ಗಳನ್ನು ಒಮ್ಮೆಲೆ ನೆನಪಿಡಲು ಸಾಧ್ಯವಾಗದೇ ಸುಲಭವಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಿರುವಂತಹ ಒಂದೇ ಪಾಸ್‌ವರ್ಡ್‌ ಅನ್ನೇ ಹೆಚ್ಚಾಗಿ ಬಳಸುತ್ತಿದ್ದಾರಂತೆ. ಸುಲಭವಾಗಿ ನೆನಪಿಗೆ ಬರುವಂತಹ ಪಾರ್ಸ್‌ವರ್ಡ್ ಅನ್ನು ಉಪಯೋಗಿಸುವ ಮೂಲಕ ಪಾಸ್‌ವರ್ಡ್ ಅನ್ನು ಯಾವಾಗಲೂ ಮರೆಯುವ ತಾಪತ್ರಯ ಏಕೆ ಎನ್ನುತ್ತಿದ್ದಾರೆ.

ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಲ್ಲಿರುವ ಅತಿಕೆಟ್ಟ ಪಾಸ್‌ವರ್ಡ್‌ಗಳು ಇವು!!

ಆದರೆ, ನಿಮಗೆ ಗೊತ್ತಾ? ಇದೊದೇ ಕಾರಣದಿಂದ ಸೈಬರ್ ಕ್ರಿಮಿನಲ್‌ಗಳು ನಿಮ್ಮ ಸುಲಭವಾಗಿ ಹಣವನ್ನು ದೋಚುತ್ತಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಬಳಕೆದಾಗಿರುವ ಒಂದೇ ರೀತಿಯ 10 ಪಾರ್ಸ್‌ವರ್ಡ್‌ಗಳು ಯಾವುವು ಎಂಬುದನ್ನು ನಾವು ಪಟ್ಟಿ ಮಾಡಿದ್ದೇವೆ. ಅವುಗಳು ಯಾವುವು ಎಂಬುದನ್ನು ತಿಳಿದು ನೀವು ಹುಷಾರಾಗಿರಿ.!

ವಿಶ್ವದ ಅತಿ ಕೆಟ್ಟ ಪಾಸ್‌ವರ್ಡ್‌!

ವಿಶ್ವದ ಅತಿ ಕೆಟ್ಟ ಪಾಸ್‌ವರ್ಡ್‌!

ಪಾಸ್‌ವರ್ಡ್‌ಗೆ ಕನಿಷ್ಠ ಆರು ಅಕ್ಷರಗಳು ಇರಬೇಕು ಎಂಬ ನಿಯಮ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಕಾಣಿಸಿಕೊಂಡ ಕೂಡಲೇ ಹಿಂದೆ-ಮುಂದೆ ನೋಡದೇ 123456 ಎಂದು ಹಲವರು ಒತ್ತುತ್ತಿದ್ದಾರೆ. ಆದರೆ, ನಿಮಗೆ ಗೊತ್ತಾ? ವಿಶ್ವದಲ್ಲೇ ಅತಿ ಸುಲಭವಾದ ಮತ್ತು ಕೆಟ್ಟ ಪಾಸ್‌ವರ್ಡ್‌ ಇದೇ.

ಎರಡನೇ ಅತಿ ಕೆಟ್ಟ ಪಾಸ್‌ವರ್ಡ್!

ಎರಡನೇ ಅತಿ ಕೆಟ್ಟ ಪಾಸ್‌ವರ್ಡ್!

ಅತಿ ಬುದ್ದಿವಂತಿಕೆಯೂ ಕೆಲವೊಮ್ಮೆ ಮೂರ್ಖತನಕ್ಕೆ ಕಾರಣವಾಗಬಹುದು ಎನ್ನುವುದಕ್ಕೆ ವಿಶ್ವದ ಎರಡನೇ ಅತಿ ಕೆಟ್ಟ ಪಾಸ್‌ವರ್ಡ್ ಉದಾಹರಣೆಯಾಗಬಹುದು. ಏಕೆಂದರೆ, ‘PASSWORD'! ಎಂಬ ಪದವನ್ನೇ ಹಲವು ಬುದ್ಧಿವಂತರು ತಮ್ಮ ಖಾತೆಗಳಿಗೆ ಇಟ್ಟು ತಾವು ಬುದ್ದಿವಂತರು ಎಂದುಕೊಳ್ಳುತ್ತಾರೆ. ಇದು ಎರಡನೇ ಅತಿ ಕೆಟ್ಟ ಪಾಸ್‌ವರ್ಡ್!

ಮೂರನೇ ಅತಿ ಕೆಟ್ಟ ಪಾಸ್‌ವರ್ಡ್!

ಮೂರನೇ ಅತಿ ಕೆಟ್ಟ ಪಾಸ್‌ವರ್ಡ್!

ಪಾಸ್‌ವರ್ಡ್‌ಗೆ ಕನಿಷ್ಠ ಆರು ಅಕ್ಷರಗಳು ಇರಬೇಕು ಎಂಬ ನಿಯಮ ಮುರಿಯುವವರು ವಿಶ್ವದ ಮೂರನೇ ಅತಿ ಕೆಟ್ಟ ಪಾಸ್‌ವರ್ಡ್ ಬಳಸುತ್ತಾರೆ. ಹೇಳಿದ ಕೂಡಲೇ ಆರು ಅಂಕಿಗಳನ್ನೇ ಇಡುವುದು ಅಷ್ಟೊಂದು ಒಳ್ಳೆಯದಲ್ಲ ಎಂದು ಭಾವಿಸಿ 7 ಮತ್ತು 8 ನ್ನು ಸೇರಿಸಿ 12345678 ಎಂಬ ಪಾಸ್‌ವರ್ಡ್ ಇಡುತ್ತಾರೆ. ಇದು ಮೂರನೇ ಅತಿ ಕೆಟ್ಟ ಪಾಸ್‌ವರ್ಡ್.!

QWERTY ಕಿರಿಕ್!

QWERTY ಕಿರಿಕ್!

ಕಂಪ್ಯೂಟರ್ ಕೀಬೋರ್ಡ್‌ನಲ್ಲಿ ಇರುವ ಮೊದಲ ಅಕ್ಷರಗಳನ್ನು ಜನರು ಪಾಸ್‌ವರ್ಡ್ ಆಗಿ ಇಟ್ಟುಕೊಳ್ಳುತ್ತಾರೆ. ವಿಶ್ವದಲ್ಲಿ ಈ ಪಾಸ್‌ವರ್ಡ್ ಅನ್ನೇ ಹಲವರು ತಮ್ಮ ಖಾತೆಗಳಿಗೆ ಪಾಸ್‌ವರ್ಡ್‌ ಮಾಡಿದ್ದಾರೆ. ಅತಿ ಸುಲಭವಾಗಿ ತಿಳಿದುಕೊಳ್ಳಬಹುದಾದ ಪಾಸ್‌ವರ್ಡ್‌ಗಳಲ್ಲಿ ಇದಕ್ಕೆ ನಾಲ್ಕನೇ ಸ್ಥಾನ ಸಿಕ್ಕಿದೆ.!

5ಕ್ಕೆ ಐದನೇ ಸ್ಥಾನ!

5ಕ್ಕೆ ಐದನೇ ಸ್ಥಾನ!

ವಿಶ್ವದಲ್ಲಿಯೇ 5 ಸ್ಥಾನದಲ್ಲಿರುವ ಅತ್ಯಂತ ಕೆಟ್ಟ ಪಾಸ್‌ವರ್ಡ್ ಎಂದರೆ ‘12345'. 5 ಅಂಕಿಗಳಿಂರುವ ಈ ಪಾಸ್‌ವರ್ಡ್ ಅನ್ನು ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ.!

1 ಟು 9 ಗೆ 6 ನೇ ಸ್ಥಾನ!

1 ಟು 9 ಗೆ 6 ನೇ ಸ್ಥಾನ!

ವಿಶ್ವದ 6 ನೇ ಅತ್ಯಂತ ಕೆಟ್ಟ ಪಾಸ್‌ವರ್ಡ್ 1 ರಿಂದ 9 ರ ವರೆಗೆ ಇರುವ ಸಂಖ್ಯೆಗಳಾಗಿವೆ. ‘123456789' ಎಂದು ಪಾಸ್‌ವರ್ಡ್ ಇಡುವವರು ಬಹಳಷ್ಟು ಜನರಿದ್ದಾರೆ.!

ಮಹಾನ್ ಬುದ್ದಿವಂತರು!

ಮಹಾನ್ ಬುದ್ದಿವಂತರು!

ವಿಶ್ವದ 7 ನೇ ಅತ್ಯಂತ ಕೆಟ್ಟ ಪಾಸ್‌ವರ್ಡ್ ಮಹಾನ್ ಬುದ್ದಿವಂತರಿಗೆ ಸಿಕ್ಕಿದೆ. ‘what ever' ಎಂದು ನೀಡಿ ಯಾರಿಗೂ ತಿಳಿಯುವುದಿಲ್ಲ ಎಂದುಕೊಳ್ಳುವ ಈ ಪಾಸ್‌ವರ್ಡ್ ವಿಶ್ವದ 7 ನೇ ಅತ್ಯಂತ ಕೆಟ್ಟ ಪಾಸ್‌ವರ್ಡ್!

ಎಂಟನೇ ಸ್ಥಾನ ಯಾವುದಕ್ಕೆ?

ಎಂಟನೇ ಸ್ಥಾನ ಯಾವುದಕ್ಕೆ?

1 ರಿಂದ 7 ಅಂಕೆಗಳ ಸಂಖ್ಯೆ ವಿಶ್ವದ 8 ನೇ ಅತ್ಯಂತ ಕೆಟ್ಟ ಪಾಸ್‌ವರ್ಡ್ ಎಂದು ಕರೆಯಲ್ಪಟ್ಟಿದೆ. ‘1234567' ರ ವರೆಗೆ ಪಾಸ್‌ವರ್ಡ್ ಕೊನೆ ಮಾಡುವವರು ಇದ್ದಾರೆ.!

ಅತ್ಯಂತ ಸೋಮಾರಿಗಳಿಗೆ 9ನೇ ಸ್ಥಾನ!

ಅತ್ಯಂತ ಸೋಮಾರಿಗಳಿಗೆ 9ನೇ ಸ್ಥಾನ!

ವಿಶ್ವದ 9ನೇ ಅತ್ಯಂತ ಕೆಟ್ಟ ಪಾಸ್‌ವರ್ಡ್ ಅತ್ಯಂತ ಸೋಮಾರಿಗಳ ಪಾಲಾಗಿದೆ. 1 ಅಂಕೆಯನ್ನು ಆರು ಭಾರಿ ಒತ್ತಿ ‘111111' ಪಾಸ್‌ವರ್ಡ್ ಇಡುವವರ ಸಂಖ್ಯೆ 9ನೇ ಸ್ಥಾನದಲ್ಲಿದೆ.

10ನೇ ಸ್ಥಾನ ಡ್ರ್ಯಾಗನ್ ಗೆ!

10ನೇ ಸ್ಥಾನ ಡ್ರ್ಯಾಗನ್ ಗೆ!

ಹೆಚ್ಚು ಬಳಕೆದಾಗಯವ ಪದ ಡ್ರ್ಯಾಗನ್ ಕೆಟ್ಟ ಪಾಸ್‌ವರ್ಡ್‌ಗಳ ಸಾಲಿನಲ್ಲಿ 10ನೇ ಸ್ಥಾನವನ್ನು ಪಡೆದಿದೆ. ನಂತರದ ಸ್ಥಾನಗಳನ್ನು I LOVE YOU, HELLO, FREEDOM, MONKEY, TRUST NUMBER1, ಪಾಸ್‌ವರ್ಡ್‌ಗಳು ಪಡೆದುಕೊಂಡಿವೆ.!

Best Mobiles in India

English summary
SplashData, a company that deals with computer security, as every year has drawn up the ranking of the worst 100 passwords. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X