ಸ್ಮಾರ್ಟ್‌ಫೋನ್‌ನಲ್ಲಿರುವ ಈ ಸೆನ್ಸಾರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರಿಗೂ ಅಗತ್ಯವಾದ ಡಿವೈಸ್‌ ಎನಿಸಿಕೊಂಡಿದೆ. ಟೆಕ್ನಾಲಜಿ ಮುಂದುವರೆದಂತೆ ಸ್ಮಾರ್ಟ್‌ಫೋನ್‌ ಕೇವಲ ಸಂವಹನ ಸಾಧನವಾಗಿ ಉಳಿದಿಲ್ಲ. ಆಧುನಿಕ ದಿನದ ಸ್ಮಾರ್ಟ್‌ಫೋನ್‌ಗಳು ನಿಮ್ಮ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡುವವರಿಂದ ಹಿಡಿದು ಒತ್ತಡದ ಮಟ್ಟವನ್ನು ಅಳೆಯುವವರೆಗೆ ಕಾರ್ಯನಿರ್ವಹಿಸ ಬಲ್ಲವು. ಇದಕ್ಕಾಗಿಯೇ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವಾರು ಸೆನ್ಸಾರ್‌ಗಳನ್ನು ಒಳಗೊಂಡಿವೆ.

ಸ್ಮಾರ್ಟ್‌ಫೋನ್‌

ಹೌದು, ನೀವು ಬಳಸುವ ಸ್ಮಾರ್ಟ್‌ಫೋನ್‌ಗಳು ಇಂದು ಮಲ್ಟಿ ಫಂಕ್ಷನಲ್‌ ಆಗಿವೆ. ಹಲವು ಕಾರ್ಯಗಳಿಗೆ ಅನುಕೂಲವಾಗುವ ಸೆನ್ಸಾರ್‌ಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಲಾಗಿರುತ್ತದೆ. ನಿಮ್ಮ ಫೋನ್‌ನಲ್ಲಿ ಪ್ರತಿಯೊಂದು ಕಾರ್ಯಕ್ಕೂ ಅಗತ್ಯವಾದ ಸೆನ್ಸಾರ್‌ಗಳನ್ನು ಅಳವಡಿಸಲಾಗಿರುತ್ತೆ. ಈ ಸೆನ್ಸಾರ್‌ಗಳ ಬಗ್ಗೆ ಕೆಲವರಿಗೆ ತಿಳಿದೆ ಇಲ್ಲ. ಹಾಗಾದ್ರೆ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಲಾಗಿರುವ ಪ್ರಮುಖ ಸೆನ್ಸಾರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರಾಕ್ಸಿಮಿಟಿ ಸೆನ್ಸರ್

ಪ್ರಾಕ್ಸಿಮಿಟಿ ಸೆನ್ಸರ್

ಪ್ರಾಕ್ಸಿಮಿಟಿ ಸೆನ್ಸಾರ್‌ ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿಯೂ ಲಭ್ಯವಿದೆ. ಇದರೆ ಕಾರ್ಯ ಏನೆಂದರೆ ಸ್ಮಾರ್ಟ್‌ಫೋನ್‌ ಅನ್ನು ಮುಟ್ಟಿದ ತಕ್ಷಣ ಡಿಸ್‌ಪ್ಲೇ ಆನ್‌ ಆಗುವಂತೆ ಮಾಡುತ್ತದೆ. ಯಾವುದೇ ವಸ್ತು ಅಡ್ಡ ಬಂದರೆ ತಕ್ಷಣ ಪತ್ತೆ ಮಾಡುತ್ತದೆ. ಉದಾಹರಣೆಗೆ ನೋಡುವುದಾದರೆ ನಿಮಗೆ ಕರೆ ಬಂದ ಸಮಯದಲ್ಲಿ ನಿಮ್ಮ ಕಿವಿಯ ಬಳಿ ಸ್ಮಾರ್ಟ್‌ಫೋನ್‌ ತಂದರೆ ಆಟೋಮ್ಯಾಟಿಕ್‌ ಡಿಸ್‌ಪ್ಲೇ ಆಪ್‌ ಮಾಡುತ್ತದೆ. ಇದರಿಂದ ಅನಗತ್ಯ ಟಚ್‌ ಅನ್ನು ತಪ್ಪಿಸಬಹುದಾಗಿದೆ.

ಆಕ್ಸಿಲೆರೋಮೀಟರ್‌

ಆಕ್ಸಿಲೆರೋಮೀಟರ್‌

ನಿಮ್ಮ ಸ್ಮಾರ್ಟ್‌ಫೋನ್‌ ವ್ಯೂವ್‌ಆಂಗಲ್‌ ಅನ್ನು ಡಿಸೈಡ್‌ ಮಾಡುವಲ್ಲಿ ​Accelerometer ಸೆನ್ಸಾರ್‌ನ ಪಾತ್ರ ಪ್ರಮುಖವಾಗಿದೆ. ನೀವು ಸ್ಮಾರ್ಟ್‌ಫೋನ್‌ನಲ್ಲಿ ಸೆರೆ ಹಿಡಿಯುವ ಫೋಟೋಗಳು ಯಾವ ಆಂಗಲ್‌ನಲ್ಲಿವೇ ಅನ್ನೊದನ್ನ ಇದು ಪತ್ತೆ ಮಾಡಲಿದೆ. ನೀವು ಸೆರೆ ಹಿಡಿದಿರುವ ಫೋಟೋಗಳನ್ನು ಲ್ಯಾಂಡ್‌ಸ್ಕೇಪ್‌ ಇಲ್ಲವೇ ಸಾಮಾನ್ಯ ವ್ಯೂವ್‌ನಲ್ಲಿ ನೋಡಬೇಕೆ ಅನ್ನೊದನ್ನ ಇದು ನಿರ್ದರಿಸಲಿದೆ.

ಗೈರೊಸ್ಕೋಪ್

ಗೈರೊಸ್ಕೋಪ್

ಇದು ಸ್ಮಾರ್ಟ್ ಫೋನ್ ನಲ್ಲಿ ಅಕ್ಸೆಲೆರೊಮೀಟರ್ ಸೆನ್ಸರ್ ಜೊತೆಗೆ ಕಾರ್ಯನಿರ್ವಹಿಸಲಿದೆ. ನೀವು ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 360 ಡಿಗ್ರಿಯಲ್ಲಿ ಫೋಟೋಗಳನ್ನು ನೋಡುವುದಕ್ಕೆ ಗೈರೊಸ್ಕೋಪ್ ಸೆನ್ಸರ್ ಸಹಾಯ ಮಾಡಲಿದೆ. ಅಲ್ಲದೆ ನೀವು ಗೇಮ್‌ಗಳನ್ನು ಆಡುವಾಗ ಗೇಮ್‌ ಅನ್ನು ರೈಟ್‌ ಆಂಡ್‌ ಲೆಫ್ಟ್‌ ಸೈಡ್‌ಗೆ ರೋಟೆಶನ್‌ ಮಾಡುವುದಕ್ಕೆ ಇದು ಸಹಾಯ ಮಾಡಲಿದೆ.

ಡಿಜಿಟಲ್ ಕಂಪಾಸ್

ಡಿಜಿಟಲ್ ಕಂಪಾಸ್

ಈ ಸೆನ್ಸಾರ್‌ ನೀವು ಯಾವ ದಿಕ್ಕಿನಲ್ಲಿ ಇದ್ದೀರಾ ಅನ್ನೊ ಮಾಹಿತಿಯನ್ನು ನೀಡಲು ಸಹಾಯ ಮಾಡಲಿದೆ. ಅಂದರೆ ನೀವು ಇರುವ ಸ್ಥಳದ ಮ್ಯಾಗ್ನೇಟಿಕ್‌ ಫಿಲ್ಡ್‌ ಆದಾರದ ಮೇಲೆ ಸ್ಮಾರ್ಟ್ ಫೋನ್ ಓರಿಯಂಟೇಶನ್ ಡೇಟಾವನ್ನು ಒದಗಿಸುತ್ತದೆ. ಈ ಸೆನ್ಸಾರ್‌ ಮ್ಯಾಗ್ನೆಟೋಮೀಟರ್ ಅನ್ನು ಆಧರಿಸಿದೆ.

ಜಿಪಿಎಸ್

ಜಿಪಿಎಸ್

ನೀವು ಯಾವ ಸ್ಥಳದಲ್ಲಿ ಇದ್ದೀರಾ ಅನ್ನೊ ಮಾಹಿತಿ ತಿಳಿಯಲು ಜಿಪಿಎಸ್‌ ಸಹಾಯ ಮಾಡಲಿದೆ. ನೀವು ಇರುವ ಸ್ಥಳ ನೀವು ಪ್ರಯಾಣಿಸುತ್ತಿರುವ ಸ್ಥಲ ಎರಡರ ಮಾಹಿತಿಯನ್ನು ಸ್ಯಾಟ್‌ಲೈಟ್‌ ಇನ್‌ಪುಟ್‌ ಆದಾರದ ಮೇಲೆ ನೀಡಲಿದೆ. ಇನ್ನಿ ಜಿಪಿಎಸ್‌ನ ಮತ್ತೊಂದು ಪ್ರಮುಖ ಲಕ್ಷಣ ಎಂದರೆ ಇದು ನಿಮ್ಮ ಸ್ಮಾರ್ಟ್‌ಫೋನ್‌ನ ಡೇಟಾವನ್ನು ಅವಲಂಬಿಸಿಲ್ಲ. ಇಂಟರ್‌ನೆಟ್‌ ಇಲ್ಲದೆ ಇದ್ದಾಗಲೂ ಕೂಡ ಜಿಪಿಎಸ್‌ ಸೆನ್ಸಾರ್‌ ನಿಮಗೆ ಸಹಾಯ ಮಾಡಲಿದೆ.

ಬ್ಯಾರೋಮೀಟರ್

ಬ್ಯಾರೋಮೀಟರ್

ಬ್ಯಾರೋಮೀಟರ್‌ ಸೆನ್ಸಾರ್‌ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಎರಡು ರೀತಿಯಲ್ಲಿ ಸಹಾಯ ಮಾಡಲಿದೆ. ಮೊದಲನೆಯದಾಗಿ ಜಿಪಿಎಸ್ ಮೂಲಕ ವೇಗವಾಗಿ ಡೇಟಾ ಒದಗಿಸುವುದಕ್ಕೆ ಸಹಾಯ ಮಾಡಲಿದೆ. ಎರಡನೆಯದಾಗಿ ನಿಮ್ಮ ಒತ್ತಡವನ್ನು ಅಳೆಯುವುದಕ್ಕೆ ಕೂಡ ಸಹಾಯ ಮಾಡಲಿದೆ. ಅಂದರೆ ಇದು ಹೆಲ್ತ್‌ ಅಪ್ಲಿಕೇಶನ್ ಗಳಿಗೆ ಸಹಾಯ ಮಾಡಲಿದೆ.

ಬಯೋಮೆಟ್ರಿಕ್ಸ್

ಬಯೋಮೆಟ್ರಿಕ್ಸ್

ಬಯೋಮೆಟ್ರಿಕ್ ಸೆನ್ಸಾರ್‌ ಅನ್ನು ಇಂದು ಎಲ್ಲಾ ಕಡೆ ಬಳಸಲಾಗುತ್ತದೆ. ಇನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಲಾಕ್‌ ಅನ್‌ಲಾಕ್‌ ಮಾಡುವುದಕ್ಕೆ, ಡೇಟಾ ಸುರಕ್ಷತೆಗಾಗಿ ಲಾಕ್‌ ಸೆಟ್ಟಿಂಗ್‌ ಮಾಡುವುದುಕ್ಕೆ ಬಯೋಮೆಟ್ರಿಕ್ಸ್‌ ಸಹಾಯ ಮಾಡಲಿದೆ.

ಎನ್‌ಎಫ್‌ಸಿ

ಎನ್‌ಎಫ್‌ಸಿ

ಎನ್‌ಎಫ್‌ಸಿ ಸೆನ್ಸಾರ್‌ ಮೂಲಕ ನೀವು ಎರಡು ಸ್ಮಾರ್ಟ್‌ಫೋನ್‌ಗಳನ್ನು ಕೇವಲ ಹತ್ತು ಸೆಂಟಿಮೀಟರ್‌ ದೂರದಲ್ಲಿದ್ದರೂ ಕಮ್ಯೂನಿಕೇಶನ್‌ ನಡೆಸಲು ಅನುವು ಮಾಡಿಕೊಡುತ್ತದೆ. ಈ ಸೆನ್ಸಾರ್‌ ಬಳಸಿಕೊಂಡೆ Google Pay, Apple Pay ಮತ್ತು Samsung Pay ನಂತಹ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸುವುದಕ್ಕೆ ಸಾದ್ಯವಾಗುತ್ತಿದೆ. ಇದು ಬ್ಲೂಟೂತ್‌ಗಿಂತಲೂ ಹೆಚ್ಚು ಸೆಕ್ಯೂರ್‌ ಆಗಿದೆ.

ಪೆಡೋಮೀಟರ್

ಪೆಡೋಮೀಟರ್

ಪೆಡೋಮೀಟರ್ ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಡೇಟಾ ಓದಗಿಸುವುದಕ್ಕೆ ಬಳಸುತ್ತಾರೆ. ಇದರಿಂದ ಹೆಲ್ತ್ ಆಪ್‌ಗಳನ್ನು ಬಳಸುವುದಕ್ಕೆ ಸುಲಭವಾಗಲಿದೆ. ಹೆಲ್ತ್‌ ಆಪ್‌ಗಳಲ್ಲಿ ನಿಖರವಾದ ಡೇಟಾ ಪಡೆಯುವುದಕ್ಕೆ ಈ ಸೆನ್ಸಾರ್‌ ಸಹಾಯಕವಾಗಿದೆ.

ಆಂಬಿಯೆಂಟ್ ಲೈಟ್ ಸೆನ್ಸರ್

ಆಂಬಿಯೆಂಟ್ ಲೈಟ್ ಸೆನ್ಸರ್

ಆಂಬಿಯೆಂಟ್ ಲೈಟ್ ಸೆನ್ಸರ್ ನಿಮ್ಮ ಡಿಸ್‌ಪ್ಲೇ ಬ್ರೈಟ್‌ನೆಸ್‌ ಅನ್ನು ಸೆಟ್‌ ಮಾಡಲಿದೆ. ಅಗತ್ಯಕ್ಕೆ ತಕ್ಕಂತೆ ಡಿಸ್‌ಪ್ಲೇ ಬ್ರೈಟ್‌ನೆಸ್‌ ಇರುವಂತೆ ನೋಡಿಕೊಳ್ಳಲಿದೆ.

Best Mobiles in India

English summary
here’s looking into the 10 most-important sensors in your phone and what exactly they do.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X