Subscribe to Gizbot

ಸೀನೋಜಿನ್ ಮೋಡ್‌ನ ನೀವು ಅರಿತಿರದ 10 ವಿಶೇಷತೆಗಳು

Written By:

ಕೆಲವು ದಿನಗಳಿಂದೀಚೆಗೆ ನೀವು ಆಂಡ್ರಾಯ್ಡ್ ಫೋನ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ನಿಮಗೆ ಸಿನೋಜಿನ್ ಮೋಡ್ ಕುರಿತು ಗೊತ್ತಿರಲೇ ಬೇಕು. ಹೆಚ್ಚು ಜನಪ್ರಿಯವಾಗಿರುವ ಇಂಟರ್ಫೆಸ್ ಇದಾಗಿದ್ದು, ಇದು 50 ಕ್ಕೂ ಹೆಚ್ಚಿನ ಡಿವೈಸ್‌ಗಳಿಗೆ ಬೆಂಬಲವನ್ನು ಒದಗಿಸುತ್ತಿದೆ. ಇತ್ತೀಚೆಗೆ ಇದು 5 ಮಿಲಿಯನ್ ಬಳಕೆದಾರರನ್ನು ದಾಟಿದೆ ಆದ್ದರಿಂದ ಇದು ಸಮುದಾಯದಲ್ಲೇ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಅತ್ಯುತ್ತಮ ಕ್ಯಾಮೆರಾ ಗುಣಮಟ್ಟವಿರುವ ಸ್ಮಾರ್ಟ್‌ಫೋನ್‌ಗಳು

ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಇಂಟರ್ಫೇಸ್‌ನ 10 ಮಹತ್ವಗಳನ್ನು ಅರಿತುಕೊಳ್ಳೋಣ. ಇದು ಏಕೆ ಇಷ್ಟೊಂದು ಪ್ರಾಮುಖ್ಯತೆಯನ್ನು ಗಳಿಸಿಕೊಂಡಿದೆ ಎಂಬುದನ್ನು ಕೆಳಗಿನ ಫೀಚರ್‌ನಿಂದ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಮುದಾಯ

ಸೀನೋಜಿನ್ ಮೋಡ್‌ನ ನೀವು ಅರಿತಿರದ 10 ವಿಶೇಷತೆಗಳು

ಸಿನೋಜಿನ್ ಮೋಡ್ ಅದ್ಭುತ ಸಮುದಾಯದೊಂದಿಗೆ ಬಂದಿದ್ದು ಇದು ಪ್ರಯೋಜನಕಾರಿಯಾಗಿದೆ. ಇದು ತುಂಬಾ ದೊಡ್ಡದಾಗಿದ್ದು, ಎಲ್ಲಾ ಇಂಟರ್ಫೇಸ್‌ಗಳನ್ನು ಹಿಂದಿಕ್ಕಲಿದೆ. ನಿಮ್ಮ ಫೋನ್‌ನಲ್ಲಿ ಸಿನೋಜಿನ್ ಮೋಡ್ ಅನ್ನು ನೀವು ಅಳವಡಿಸುತ್ತೀರಿ ಎಂದಾದಲ್ಲಿ ಯಾವುದೇ ಸಮಸ್ಯೆಯನ್ನು ನೀವು ಎದುರಿಸುವುದಿಲ್ಲ.

ಭದ್ರತೆ

ಸೀನೋಜಿನ್ ಮೋಡ್‌ನ ನೀವು ಅರಿತಿರದ 10 ವಿಶೇಷತೆಗಳು

ಆಂಡ್ರಾಯ್ಡ್ ಡಿವೈಸ್‌ಗಳ ಬಗ್ ಹೊಂದಿಸುವ ತಂತ್ರಗಾರಿಕೆ ಸಿನೋಜಿನ್ ಮೋಡ್‌ಗಿದೆ. ಇದು ಅತ್ಯಂತ ಬಿಗಿ ಭದ್ರತೆಯೊಂದಿಗೆ ಬಂದಿದ್ದು ನಿಮ್ಮ ಫೋನ್‌ನ ಸಕಲ ದೋಷಗಳನ್ನು ಸರಿಹೊಂದಿಸುವ ತಾಕತ್ತು ಇದಕ್ಕಿದೆ.

ಗೂಗಲ್ ಮಾರ್ಗದರ್ಶನದಲ್ಲಿ ಇದನ್ನು ಬಳಸುವುದು

ಸೀನೋಜಿನ್ ಮೋಡ್‌ನ ನೀವು ಅರಿತಿರದ 10 ವಿಶೇಷತೆಗಳು

ಇದನ್ನು ಬಳಸಲು ನೆಕ್ಸಸ್ ಫೋನ್ ಅನ್ನು ನೀವು ಖರೀದಿಸಬೇಕಾಗಿಲ್ಲ. ಈ ಪ್ಲಾಟ್‌ಫಾರ್ಮ್‌ನಲ್ಲಿರುವ ಅತ್ಯದ್ಭುತ ವಿಶೇಷತೆಗಳು ನಿಜಕ್ಕೂ ಆಂಡ್ರಾಯ್ಡ್ ಬಳಕೆದಾರರನ್ನು ಮನಸೋಲುವಂತೆ ಮಾಡುತ್ತದೆ.

ಇನ್ ಬಿಲ್ಟ್ ಅಪ್ಲಿಕೇಶನ್

ಸೀನೋಜಿನ್ ಮೋಡ್‌ನ ನೀವು ಅರಿತಿರದ 10 ವಿಶೇಷತೆಗಳು

ಇದು ಇನ್ ಬಿಲ್ಟ್ ಅಪ್ಲಿಕೇಶನ್‌ಗಳನ್ನು ಹೊಂದಿದ್ದು ಎಲ್‌ಇಡಿ ನೋಟಿಫಿಕೇಶನ್ ಪಿಕ್ಕರ್, ಅಧಿಸೂಚನೆ ಲೈಟ್, ಸಿಪಿಯು ಕಾರ್ಯಕ್ಷಮತೆ ಹೀಗೆ ವಿಶೇಷ ಅದ್ಭುತಗಳನ್ನು ಪಡೆದುಕೊಂಡಿದೆ.

ಆಯುಷ್ಯ ಹೆಚ್ಚು

ಸೀನೋಜಿನ್ ಮೋಡ್‌ನ ನೀವು ಅರಿತಿರದ 10 ವಿಶೇಷತೆಗಳು

ಈ ತಂಡದ ಕಠಿಣ ಪರಿಶ್ರಮವನ್ನು ನಿಜಕ್ಕೂ ಶ್ಲಾಘಿಸಬೇಕಾಗಿದ್ದು, ಐಸ್‌ಕ್ರೀಮ್ ಸ್ಯಾಂಡ್‌ವಿಚ್ ಅಥವಾ ಜೆಲ್ಲಿಬೀನ್ ಇದ್ದರೂ ಈ ಇಂಟರ್ಫೇಸ್ ತನ್ನ ಕಾರ್ಯವನ್ನು ನಡೆಸುತ್ತದೆ.

ಆಂಡ್ರಾಯ್ಡ್‌ನ ಅತ್ಯಾಧುನಿಕ ಆವೃತ್ತಿ

ಸೀನೋಜಿನ್ ಮೋಡ್‌ನ ನೀವು ಅರಿತಿರದ 10 ವಿಶೇಷತೆಗಳು

ಗೂಗಲ್ ಹೊರತಂದಿರುವ ಆಂಡ್ರಾಯ್ಡ್‌ನ ಅತ್ಯಾಧುನಿಕ ಆವೃತ್ತಿಯನ್ನು ನಿಮಗೆ ಬಳಸಬಹುದಾಗಿದೆ. ಹೊಸ ಆವೃತ್ತಿ ಬಂದೊಡನೆ, ಸಿನೋಜಿನ್ ಮೋಡ್ ತಂಡ ಮೂಲಗಳನ್ನು ಪರಿಶೋಧಿಸಿ ಬಿಲ್ಡ್ ಅನ್ನು ಬಿಡುಗಡೆ ಮಾಡುತ್ತದೆ.

ಬಳಕೆ ಮುಖ್ಯವಾಗಿರುತ್ತದೆ

ಸೀನೋಜಿನ್ ಮೋಡ್‌ನ ನೀವು ಅರಿತಿರದ 10 ವಿಶೇಷತೆಗಳು

ಸಿನೋಜಿನ್ ಮೋಡ್ ಆಂಡ್ರಾಯ್ಡ್ ಅನ್ನು ಅವಲಂಬಿಸಿರುವುದರಿಂದ ಕೆಲವೊಮ್ಮೆ ಫೀಚರ್‌ಗಳಲ್ಲಿ ಕೊರತೆ ಕಾಣಬಹುದು. ಇದರ ಕೆಲವು ಫೀಚರ್‌ಗಳು ಅಷ್ಟೊಂದು ಪ್ರಯೋಜನಕಾರಿಯಲ್ಲ ಎಂದು ನಿಮಗನಿಸಬಹುದು.

ಹೊಸ ಫೀಚರ್‌ಗಳು

ಸೀನೋಜಿನ್ ಮೋಡ್‌ನ ನೀವು ಅರಿತಿರದ 10 ವಿಶೇಷತೆಗಳು

ಕೆಲವೊಂದು ಕೊರತೆಗಳನ್ನು ಸಿನೋಜಿನ್ ಮೋಡ್ ಹೊಂದಿದ್ದರೂ ಹೊಸ ಹೊಸ ಫೀಚರ್‌ಗಳೊಂದಿಗೆ ಇದು ಬಂದಿದೆ. ಲಾಕ್ ಸ್ಕ್ರೀನ್ ಶಾರ್ಟ್‌ಕಟ್, ಅಧಿಸೂಚನೆ ಪಟ್ಟಿಯಲ್ಲಿ ತ್ವರಿತ ಟಾಗಲ್‌ಗಳು, ಸುಧಾರಿತ ಪವರ್ ಮೆನು, RAM ಬಾರ್ ಹೀಗೆ ಕಮಾಲಿನ ಫೀಚರ್‌ಗಳನ್ನು ಈ ಪ್ಲಾಟ್‌ಫಾರ್ಮ್ ಒಳಗೊಂಡಿದೆ.

ಕಸ್ಟಮೈಸೇಶನ್‌ಗಳು

ಸೀನೋಜಿನ್ ಮೋಡ್‌ನ ನೀವು ಅರಿತಿರದ 10 ವಿಶೇಷತೆಗಳು

ಸಿನೋಜಿನ್ ಮೋಡ್‌ನ ಇನ್ನೊಂದು ವಿಶೇಷತೆ ಎಂದರೆ ಇದು ಕಸ್ಟಮೈಸೇಶನ್ ಆಯ್ಕೆಯನ್ನು ನೀಡುತ್ತದೆ. ಆಂಡ್ರಾಯ್ಡ್ ಪರವಾನಿಗೆ ಕೊಡದೇ ಇರುವ ಓಎಸ್‌ನ ಪ್ರತೀ ವಿಶೇಷತೆಯನ್ನು ಇದು ಕಸ್ಟಮೈಸ್ ಮಾಡಬಹುದು.

ವೇಗ

ಸೀನೋಜಿನ್ ಮೋಡ್‌ನ ನೀವು ಅರಿತಿರದ 10 ವಿಶೇಷತೆಗಳು

ಸಿನೋಜಿನ್ ಮೋಡ್‌ ಅನ್ನು ಆರಿಸುವುದರಿಂದ ಇದು ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮತೆಯನ್ನು ಪಡೆದುಕೊಳ್ಳುತ್ತದೆ. ಇದರ ಮೇಲ್ಭಾಗದಲ್ಲಿ ಓಇಎಮ್ ಸ್ಕಿನ್‌ಗಳು ಚಾಲನೆಯಾಗುತ್ತದೆ. ಇದು ಅತ್ಯಮೂಲ್ಯ ಸಂಪನ್ಮೂಲಗಳನ್ನು ಆರಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 10 reasons to install CyanogenMod on your Android device.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot