Subscribe to Gizbot

ಭಾರತದ ಟಾಪ್ 10 ಶಾಪಿಂಗ್ ವೆಬ್ ಸೈಟ್ ಗಳು.

Posted By: Varun
ಭಾರತದ ಟಾಪ್ 10 ಶಾಪಿಂಗ್ ವೆಬ್ ಸೈಟ್ ಗಳು.

ಆನ್ಲೈನ್ ನಲ್ಲಿ ನೀವು ಒಮ್ಮೆಯಾದರೂ ಶಾಪಿಂಗ್ ಮಾಡಿರುತ್ತೀರಿ ಇಲ್ಲವೆ ನಿಮ್ಮ ಸ್ನೇಹಿತರು ಮಾಡಿರುವುದನ್ನ ನೋಡೇ ಇರುತ್ತೀರಿ.ಅಂತರ್ಜಾಲದಲ್ಲಿ ಸಾವಿರಾರು ಸೈಟ್ ಗಳು ಹೊಸ ಆಫರ್ ಹಾಗು ಡಿಸ್ಕೌಂಟ್ ಕೊಟ್ಟರೂ ಅವು ಎಷ್ಟರ ಮಟ್ಟಿಗೆ ಸುರಕ್ಷಿತ ಮತ್ತು ನಂಬಿಕಾರ್ಹ ಎಂಬ ಸಂಶಯ ಇದ್ದೇ ಇರುತ್ತದೆ, ಹಾಗಾಗಿ ನಿಮಗೊಸ್ಕರವೇ ಭಾರತದ ಟಾಪ್ 10 ಅತ್ಯಂತ ವಿಶ್ವಾಸಾರ್ಹ ಶಾಪಿಂಗ್ ವೆಬ್ ಸೈಟ್ ಗಳ ಕಿರುಮಾಹಿತಿ ಇಲ್ಲಿದೆ.

1. ebay.in: ಆನ್ಲೈನ್ ನಲ್ಲಿ 50 ಸಾವಿರಕ್ಕೂ ಹೆಚ್ಚು ವಿವಿಧ ಶ್ರೇಣಿಯ ವಸ್ತುಗಳನ್ನು ಖರೀದಿ ಅಥವಾ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ, ಈ ತಾಣ.

2. fashionandyou.com: ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯಡಿಸೈನರ್ ಬ್ರಾಂಡ್ಸ್, ಹೈ-ಫ್ಯಾಶನ್ ಮತ್ತು ಲೈಫ್ ಸ್ಟೈಲ್ ಬಟ್ಟೆಗಳಮಾರಾಟದ ಜೊತೆಗೆ ಪುರುಷರ ಮತ್ತು ಹೆಣ್ಣು ಮಕ್ಕಳ ಹೈ- ಫ್ಯಾಶನ್ ಮತ್ತು ಲೈಫ್ ಸ್ಟೈಲ್ ಅನುಭವಗಳ ಮಾಹಿತಿಯೂ ಇಲ್ಲಿ ಲಭ್ಯ.

3. flipkart.com: ಪುಸ್ತಕ, ಮೊಬೈಲ್, ಕ್ಯಾಮರಾ, ಗೇಮ್ ಕನ್ಸೋಲ್, ಗೃಹ ಬಳಕೆ ವಸ್ತುಗಳನ್ನ,ಅದೂ ಡಿಸ್ಕೌಂಟ್ ನಲ್ಲಿ ನೀವುಕೊಳ್ಳಬಹುದು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಈ- ಗಿಫ್ಟ್ ಜೊತೆಗೆ, ನೀವು ಕೊಳ್ಳುವ ವಸ್ತು ಮನೆಗೆ ಬಂದ ಮೇಲೆ ಹಣಸಂದಾಯ ಮಾಡುವ ಸೌಲಭ್ಯ ಇರುವುದು ಮತ್ತೊಂದು ವಿಶೇಷ.

4. mygrahak.com: ಭಾರತದ ನಂ.1 ಆನ್ಲೈನ್ ಸೂಪರ್ ಮಾರ್ಕೆಟ್ ಎಂದೇ ಹೇಳಲಾದ ಈ ತಾಣದಲ್ಲಿ ಆಕರ್ಷಕ ಆಫರ್ ಗಳುಸಿಗುತ್ತವೆ.

5. futurebazaar.com: ಫ್ಯೂಚರ್ ಗ್ರೂಪ್ ನ ಒಡೆತನದ ಈ ವೆಬ್ ಸೈಟ್ ನಲ್ಲಿ ನೀವು ಬಿಗ್ ಬಜಾರ್, ಪ್ಯಾನ್ಟಲೂನ್ ಹಾಗು ಸೆಂಟ್ರಲ್ ಮಾಲ್ ನಲ್ಲಿ ದೊರಕುವ ಎಲ್ಲ ವಸ್ತುಗಳೂ ಇಲ್ಲಿ ಖರೀದಿ ಮಾಡಬಹುದು.

6. homeshop18.com: ಟೀ.ವಿ ಯಲ್ಲಿ ನೀವು ಹೋಂ ಶಾಪ್ ವಸ್ತುಗಳ ಬಗ್ಗೆ ನೋಡಿರುತ್ತೀರಿ. ಈ ತಾಣದ ಮೂಲಕವೂ ಅವುಗಳನ್ನಆರ್ಡರ್ ಮಾಡಬಹುದು ಈಗ.

7. myntra.com: ಗಂಡಸರು, ಮಕ್ಕಳು ಮತ್ತು ಹೆಣ್ಣು ಮಕ್ಕಳಿಗಾಗಿಯೇ, ಬ್ರಾಂಡೆಡ್ ಫ್ಯಾಶನ್ ಮತ್ತು ಲೈಫ್ ಸ್ಟೈಲ್ ವಸ್ತುಗಳ ಮಾರಾಟತಾಣ.

8. snapdeal.com:ಹೋಟೆಲ್, ಸ್ಪಾ, ಜಿಮ್, ಪ್ರವಾಸ ಪ್ಯಾಕೇಜ್ ಗಳ ಡಿಸ್ಕೌಂಟ್ ಕೂಪನ್/ವೌಚರ್, 50 - 90 ಪೆರ್ಸೆಂಟ್ ಡಿಸ್ಕೌಂಟ್ ನಲ್ಲಿ ಸಿಗುತ್ತದೆ ಈ ತಾಣದಲ್ಲಿ.

9. letsbuy.com:ನೀವೇನಾದರೂ ಬ್ರಾಂಡೆಡ್ ಕಂಪ್ಯೂಟರ್, ಎಲೆಕ್ಟ್ರೋನಿಕ್ ಉಪಕರಣ ಹಾಗು ಸಾಫ್ಟ್ವೇರ್ ಖರೀದಿಸಬೇಕಿದ್ದರೆ ಇಲ್ಲಿ 9000ಹೆಚ್ಚು ಉತ್ಪನ್ನಗಳು ಲಭ್ಯ.

10. mydala.com: ನಿಮ್ಮ ನಗರದ ಹೋಟೆಲ್ , ಶಾಪಿಂಗ್, ಮುಂತಾದವುಗಳ ಅತ್ಯುತ್ತಮ ಡೀಲ್ ಗಳ ಮಾಹಿತಿ, ಒಂದೇ ಕ್ಲಿಕ್ ನಲ್ಲಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot