ಅತಿ ಹೆಚ್ಚು ವಿಕಿರಣ ಹೊರಸೂಸುವ ಅಪಾಯಕಾರಿ ಫೋನ್‌ಗಳ ಲಿಸ್ಟ್!..ಶಿಯೋಮಿಯ 3 ಫೋನ್‌ಗಳು!!

|

ಮೊಬೈಲ್‌ಗಳಿಂದ ಹೊರಹೊಮ್ಮುವ ವಿಕಿರಣಗಳಿಂದ ಮಾನವ ಆರೋಗ್ಯ ಹದಗೆಡುತ್ತದೆ ಎಂಬ ಆತಂಕಕಾರಿ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ, ಇತ್ತೀಚಿನ ರಿಪೋರ್ಟ್ ಒಂದು ಅತಿ ಹೆಚ್ಚು ವಿಕಿರಣ ಸೂಸುವ ಟಾಪ್ 10 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಅಪಾಯಕಾರಿ ಎಂದು ಹೇಳಿರುವುದು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭಯ ಮೂಡಿಸಿದೆ.

ಹೌದು, ಸ್ಮಾರ್ಟ್‌ಫೋನ್‌ಗಳು ಹೊರಸೂಸುತ್ತಿರುವ ವಿಕಿರಣದ ಪ್ರಮಾಣ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಜರ್ಮನ್ ಫೆಡರಲ್ ಆಫೀಸ್ ಫರ್ ರೇಡಿಯೇಷನ್ ಪ್ರೊಟೆಕ್ಷನ್ ಕಂಪೆನಿ ಬಿಡುಗಡೆ ಮಾಡಿರುವ ಒಂದು ವರದಿ ಬೆಚ್ಚಿ ಬೀಳಿಸುವಂತಿದೆ. ಶಿಯೋಮಿ, ಒನ್‌ಪ್ಲಸ್‌ ಮತ್ತು ಆಪಲ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಅಪಾಯಕಾರಿ ಎಂದು ರಿಪೋರ್ಟ್ ಹೇಳಿದ್ದು, ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್ ಒಂದು ಮೊದಲ ಸ್ಥಾನದಲ್ಲಿದೆ.

ಹೆಚ್ಚು ವಿಕಿರಣ ಹೊರಸೂಸುವ ಅಪಾಯಕಾರಿ ಫೋನ್‌ಗಳ ಲಿಸ್ಟ್!..ಶಿಯೋಮಿಯ 3 ಫೋನ್‌ಗಳು!!

ಮೊಬೈಲ್ ಕ್ಯಾಮರಾ ಹೇಗಿದೆ?, ಸೌಂಡ್ ಕ್ವಾಲಿಟಿ ಚೆನ್ನಗಿದೆಯಾ?, ಇಂಟರ್ನೆಟ್ ಸ್ಪೀಡ್ ಎಷ್ಟಿದೆ?, ಮೆಮೊರಿ ಎಷ್ಟು ಎಂಬುದೆಲ್ಲದರ ಮೇಲೆ ಹೆಚ್ಚಿನ ಗಮನ ನೀಡುವ ಮೊಬೈಲ್ ಬಳಕೆದಾರರು ಇವೆಲ್ಲವನ್ನು ಹೊರತುಪಡಿಸಿ ಈಗ ಮತ್ತೊಂದು ವಿಚಾರವನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಹಾಗಾದರೆ, ರೇಡಿಯೇಷನ್ ಪ್ರೊಟೆಕ್ಷನ್ ಕಂಪೆನಿ ನೀಡಿರುವ ಪಟ್ಟಿಯಂತೆ ಯಾವ ಸ್ಮಾರ್ಟ್‌ಫೋನ್ ಅತಿ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುತ್ತದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಸೋನಿ ಎಕ್ಸ್‌ಪೀರಿಯಾ ಎಕ್ಸ್‌ಝೆಡ್ 1 ಕಾಂಪ್ಯಾಕ್ಟ್

ಸೋನಿ ಎಕ್ಸ್‌ಪೀರಿಯಾ ಎಕ್ಸ್‌ಝೆಡ್ 1 ಕಾಂಪ್ಯಾಕ್ಟ್

ಆಗಸ್ಟ್ 2017 ರಲ್ಲಿ ಸೋಮಿ ಕಂಪೆನಿ ಬಿಡುಗಡೆ ಮಾಡಿದ್ದ 'ಎಕ್ಸ್‌ಪೀರಿಯಾ ಎಕ್ಸ್‌ಝೆಡ್ 1' ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ.

ಐಫೋನ್ 7

ಐಫೋನ್ 7

ಸೆಪ್ಟೆಂಬರ್ 2016 ರಲ್ಲಿ ಆಪಲ್ ಬಿಡುಗಡೆ ಮಾಡಿದ್ದ ಐಫೋನ್ 7 ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಒನ್‌ಪ್ಲಸ್ 5

ಒನ್‌ಪ್ಲಸ್ 5

2017ನೇ ಜೂನ್ ತಿಂಗಳಿನಲ್ಲಿ ಒನ್‌ಪ್ಲಸ್ ಬಿಡುಗಡೆ ಮಾಡಿದ್ದ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಗೂಗಲ್ ಪಿಕ್ಸೆಲ್ 3 ಎಕ್ಸ್ಎಲ್:

ಗೂಗಲ್ ಪಿಕ್ಸೆಲ್ 3 ಎಕ್ಸ್ಎಲ್:

ಕಳೆದ ವರ್ಷ ಗೂಗಲ್ ಬಿಡುಗಡೆ ಮಾಡಿದ್ದ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಗೂಗಲ್ ಪಿಕ್ಸೆಲ್ 3 ಎಕ್ಸ್ಎಲ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಶಿಯೋಮಿ ಮಿ ಮಿಕ್ಸ್ 3

ಶಿಯೋಮಿ ಮಿ ಮಿಕ್ಸ್ 3

ಕಳೆ ಅಕ್ಟೋಬರ್‌ ತಿಂಗಳಿನಲ್ಲಿ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ್ದ ಶಿಯೋಮಿ ಮಿ ಮಿಕ್ಸ್ 3 ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಹೆಚ್‌ಟಿಸಿ ಯು12 ಲೈಫ್

ಹೆಚ್‌ಟಿಸಿ ಯು12 ಲೈಫ್

ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದ ಅಲ್ಟ್ರಾ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಹೆಚ್‌ಟಿಸಿ ಯು12 ಲೈಫ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಒನ್‌ಪ್ಲಸ್ 6T:

ಒನ್‌ಪ್ಲಸ್ 6T:

ಭಾರತದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಹೆಚ್ಚು ಮಾರಾಟವಾದ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

'ಶಿಯೋಮಿ ಮಿ ಮ್ಯಾಕ್ಸ್ 3'

'ಶಿಯೋಮಿ ಮಿ ಮ್ಯಾಕ್ಸ್ 3'

ಶಿಯೋಮಿ 2018ನೇ ಜುಲೈನಲ್ಲಿ ಬಿಡುಗಡೆ ಮಾಡಿದ 'ಶಿಯೋಮಿ ಮಿ ಮ್ಯಾಕ್ಸ್ 3' ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಒನ್‌ಪ್ಲಸ್ 5T!

ಒನ್‌ಪ್ಲಸ್ 5T!

2017ರ ನವೆಂಬರ್‌ನಲ್ಲಿ ಒನ್‌ಪ್ಲಸ್ ಬಿಡುಗಡೆ ಮಾಡಿದ್ದ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.

ಶಿಯೋಮಿ ಮಿ A1

ಶಿಯೋಮಿ ಮಿ A1

ಶಿಯೋಮಿ 2017ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿದ 'ಶಿಯೋಮಿ ಮಿ A1' ​​ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಅಪಾಯಕಾರಿ ಮೊಬೈಲ್ ಆಗಿದೆ.

Best Mobiles in India

English summary
Top 10 smartphones emitting the most radiation: Mi A1, OnePlus 5T, Pixel 3 XL, and more; here's the top 10 list. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X