ನೀವು ಕೇಳಿರದ ಮೊಬೈಲ್ ಕುರಿತ ವಿಚಿತ್ರ ಸತ್ಯಗಳು
ನೀವು ಬಳಸುತ್ತಿರುವ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯದ್ದಾಗಿರಲಿ ಅಥವಾ ಹೆಚ್ಚು ಬೆಲೆಯದ್ದೇ ಆಗಿರಲಿ ನಿಮ್ಮ ಫೋನ್ ಅನ್ನು ನೀವು ಬಳಸಿಕೊಳ್ಳುವ ರೀತಿ ಅತಿ ಮುಖ್ಯವಾಗಿರುತ್ತದೆ. ನಿಮ್ಮ ಫೋನ್ ಅನ್ನು ನೀವು ಸಂದೇಶ ಕಳುಹಿಸಲು, ಕರೆಮಾಡಲು, ಸಾಮಾಜಿಕ ತಾಣಗಳಿಗೆ ಭೇಟಿ ನೀಡಲು, ವಿಷಯಗಳನ್ನು ಹುಡಕಾಡಲು ಹೀಗೆ ಅನೇಕ ರೀತಿಯಲ್ಲಿ ಬಳಕೆ ಮಾಡುತ್ತಿರಬಹುದು. ಅದಾಗ್ಯೂ ನಿಮ್ಮ ಫೋನ್ ಬಗ್ಗೆ ನಿಮಗೆಷ್ಟು ಗೊತ್ತು ಎಂಬುದನ್ನೇ ನಾವಿಲ್ಲಿ ಕೇಳಲಿರುವೆವು.
ಓದಿರಿ: ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ! ಈ ವಿಷಯಗಳು ನೆನಪಿರಲಿ
ಫೋನ್ ಕುರಿತಾದ ಅದ್ಭುತ ಇತಿಹಾಸವನ್ನು ಇಂದಿನ ಲೇಖನದಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದು ಈ ಅಂಶಗಳು ನಿಮ್ಮನ್ನು ಸ್ತಂಭೀಭೂತಗೊಳಿಸಲಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ನಿಮ್ಮ ಫೋನ್ ಕುರಿತಾದ ಇನ್ನಷ್ಟು ಅತ್ಯಮೂಲ್ಯ ವಿಷಯಗಳನ್ನು ಅರಿತುಕೊಳ್ಳೋಣ.

ಕಂಪ್ಯೂಟಿಂಗ್ ಪವರ್
ಅಪೊಲೊ 11 ಮೂನ್ ಲ್ಯಾಂಡಿಂಗ್‌ಗಾಗಿ ಬಳಸಲಾದ ಕಂಪ್ಯೂಟರ್‌ಗಳಿಗಿಂತಲೂ ನಿಮ್ಮ ಮೊಬೈಲ್ ಫೋನ್ ಹೆಚ್ಚಿನ ಕಂಪ್ಯೂಟಿಂಗ್ ಪವರ್ ಅನ್ನು ಹೊಂದಿದೆ.

ಪ್ರಥಮ ಮೊಬೈಲ್ ಮಾರಾಟ
1983 ರಲ್ಲಿ, ಪ್ರಥಮ ಮೊಬೈಲ್ ಫೋನ್ ಯುಎಸ್‌ನಲ್ಲಿ ಹೆಚ್ಚು ಕಡಿಮೆ ಪ್ರತಿಯೊಂದಕ್ಕೆ $4,000 ನಂತೆ ಮಾರಾಟವಾಯಿತಂತೆ.

ಆಪಲ್ ಸಾಧನೆ
2012 ರಲ್ಲಿ ಆಪಲ್ ದಿನಕ್ಕೆ ಮಾರಾಟ ಮಾಡಿದ ಐಫೋನ್‌ಗಳ ಸಂಖ್ಯೆ 340,000 ಆಗಿದೆ.

ಬ್ಯಾಕ್ಟೀರಿಯಾ
ಟಾಯ್ಲೆಟ್ ಹ್ಯಾಂಡಲ್ಸ್‌ಗಳಿಗಿಂತಲೂ 18ರಷ್ಟು ಪಟ್ಟು ಬ್ಯಾಕ್ಟೀರಿಯಾಗಳನ್ನು ನಿಮ್ಮ ಫೋನ್ ಹೊಂದಿದೆ.

ಜಪಾನ್‌ನಲ್ಲಿ ವಾಟರ್ ಪ್ರೂಫ್ ಫೋನೇ ಅಧಿಕ
ಜಪಾನ್‌ನಲ್ಲಿ ಯುವಕರು ಫೋನ್ ಅನ್ನು ಸ್ನಾನದ ಸಮಯದಲ್ಲೂ ಬಳಸುವುದರಿಂದ ಅಲ್ಲಿ 90% ಮೊಬೈಲ್ ಫೋನ್‌ಗಳು ವಾಟರ್ ಪ್ರೂಫ್ ಆಗಿರುತ್ತವೆ.

ಮೊಬೈಲ್ ರೇಡಿಯೇಷನ್
ಮೊಬೈಲ್ ಫೋನ್ ರೇಡಿಯೇಷನ್ ಇನ್‌ಸೋಮ್ನಿಯಾ, ತಲೆನೋವುಗಳನ್ನು ಉಂಟುಮಾಡುವಷ್ಟು ಹಾನಿಕಾರಕ.

ಮೂತ್ರದಿಂದ ಫೋನ್ ಚಾರ್ಜ್
ಮಾನವ ಮೂತ್ರವನ್ನು ಬಳಸಿಕೊಂಡು ಫೋನ್ ಚಾರ್ಜ್ ಮಾಡುವ ಹೊಸ ವಿಧಾನವನ್ನು ವಿಜ್ಞಾನಿಗಳು ಅನ್ವೇಷಿಸುತ್ತಿದ್ದಾರೆ.

ಪ್ರಥಮ ಫೋನ್ ಕರೆ
ಪ್ರಥಮ ಫೋನ್ ಕರೆಯನ್ನು 1973 ರಲ್ಲಿ ಮಾಜಿ ಮೋಟೋರೋಲಾ ಅನ್ವೇಷಕರಾದ ಮಾರ್ಟಿನ್ ಕೂಪರ್ 1973 ರಲ್ಲಿ ಮಾಡಿದರು.

ಆಪಲ್ ಸೇಲ್ ಅಧಿಕ
ಮೈಕ್ರೋಸಾಫ್ಟ್‌ಗಿಂತಲೂ ಆಪಲ್ ಐಫೋನ್ ಹೆಚ್ಚುವರಿ ಮಾರಾಟಗಳನ್ನು ಕಂಡಿದೆ.

ನೋಮೋಫೋಬಿಯಾ
ಫೋನ್ ಇಲ್ಲದೆ ಇರುವುದು ಅಥವಾ ನಿಮ್ಮ ಸಿಗ್ನಲ್‌ಗಳನ್ನು ಕಳೆದುಕೊಳ್ಳುವುದು ನಿಮ್ಮಲ್ಲಿ ನೋಮೋಫೋಬಿಯಾವನ್ನು ಉಂಟುಮಾಡಬಹುದು.

ನೋಕಿಯಾ ಮೈಲಿಗಲ್ಲು
ಇತಿಹಾಸದಲ್ಲೇ ಅತ್ಯುತ್ತಮ ಇಲೆಕ್ಟ್ರಿಕ್ ಮಾರಾಟ ಸಾಧನೆಯನ್ನು ನೋಕಿಯಾ ತನ್ನ 1100 ಡಿವೈಸ್‌ಗಳನ್ನು 250 ಮಿಲಿಯನ್‌ಗಿಂತಲೂ ಅಧಿಕ ಮಾರಾಟ ಮಾಡುವುದರ ಮೂಲಕ ಮಾಡಿದೆ.

ಬ್ರಿಟನ್ ಯಶೋಗಾಥೆ
100,000 ಮೊಬೈಲ್ ಫೋನ್‌ಗಳು ಪ್ರತೀ ವರ್ಷ ಬ್ರಿಟನ್‌ನಲ್ಲಿ ಟಾಯ್ಲೆಟ್ ಪಾಲಾಗುತ್ತಿವೆಯಂತೆ.

ಟಾಯ್ಲೆಟ್‌ಗಿಂತಲೂ ಮೊಬೈಲ್ ಅಧಿಕ
ವಿಶ್ವದಲ್ಲಿ ಹೆಚ್ಚಿನ ಜನರು ಟಾಯ್ಲೆಟ್‌ಗಿಂತಲೂ ಅಧಿಕವಾಗಿ ಮೊಬೈಲ್‌ಗಳನ್ನು ಹೊಂದಿದ್ದಾರೆ.

ಚೀನಾದಲ್ಲಿ ಮೊಬೈಲ್ ಬಳಕೆದಾರರೇ ಹೆಚ್ಚು
ಚೀನಾದಲ್ಲಿ ಇಂಟರ್ನೆಟ್ ಬಳಕೆದಾರರು ಪಿಸಿಗಿಂತಲೂ ಮೊಬೈಲ್ ಅನ್ನೇ ಅಧಿಕವಾಗಿ ಆಶ್ರಯಿಸಿದ್ದಾರೆ.

ವೆಬ್ ಟ್ರಾಫಿಕ್
ಅಧಿಕ ಪ್ರಮಾಣದ ಫೇಸ್‌ಬುಕ್ ಫೋಟೋಗಳು ಮತ್ತು ವೀಡಿಯೊಗಳನ್ನು ಮೊಬೈಲ್ ಮೂಲಕ ಅಪ್‌ಲೋಡ್ ಮಾಡುವುದರಿಂದಾಗಿ ಇದು 27% ದಷ್ಟು ವೆಬ್ ಟ್ರಾಫಿಕ್ ಅನ್ನು ತೆಗೆದುಕೊಳ್ಳುತ್ತದೆ.


Click it and Unblock the Notifications








