ಈ ದೇಶಗಳಲ್ಲಿ ಏನೋ ವಿಶೇಷತೆ ಇದೆ

By Suneel
|

ಕಾರ್ನೆಲ್‌ ವಿಶ್ವವಿದ್ಯಾಲಯ ಮತ್ತು ವರ್ಲ್ಡ್ ಇಂಟೆಲೆಕ್ಚುವಲ್‌ ಪ್ರಾಪರ್ಟಿ ಸಂಸ್ಥೆಯು ಸಮೀಕ್ಷೆಯೊಂದನ್ನು ಕೈಗೊಂಡು ಆನುವಲ್‌ ಗ್ಲೋಬಲ್‌ ಇನೋವೇಶನ್‌ ಇಂಡೆಕ್ಸ್ ಒಂದನ್ನು ಬಿಡುಗಡೆಮಾಡಿದೆ. ಇದರಲ್ಲಿ ಟಾಪ್‌ 15 ಅತ್ಯುತ್ತಮ ಇನೋವೇಟಿವ್‌ ದೇಶಗಳು ಯಾವುವು ಎಂಬುದನ್ನು ಸಮೀಕ್ಷೆ ಮೂಲಕ ಬಹಿರಂಗ ಪಡಿಸಿದೆ. ಆ ದೇಶಗಳು ಅನುಕ್ರಮವಾಗಿ ಯಾವುವು ಎಂಬುದನ್ನು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಓದಿರಿ: ಮುಂದಿನ ಯುದ್ಧ ನೀರಿಗಾಗಿ

ಒಂದು ದೇಶವನ್ನು ಅಭಿವೃದ್ದಿ ದೇಶ ಎಂತಲೋ ಅಥವಾ ಇನೋವೇಟಿವ್‌ ದೇಶ ಎಂತಲೋ ನಿರೂಪಿಸಿ ಅದಕ್ಕೆ ಜಾಗತಿಕವಾಗಿ ಉತ್ತಮ ಸ್ಥಾನ ಮತ್ತು ಹೆಸರು ನೀಡುವ ಪ್ರಮುಖ ಅಂಶಗಳು ಯಾವುವು ? ಎಂದು ಕೇಳಿದರೆ ನಿರ್ಧಿಷ್ಟವಾಗಿ ಹೇಳಲು ಭಾಗಶಃ ಕಷ್ಟಕರ. ಆದರೆ ಈ ಲೇಖನವನ್ನು ಓದಿ ಇನೋವೇಟಿವ್‌ ದೇಶಗಳು ಯಾವುವು ಹಾಗೆ ಕರೆಯಲು ಕಾರಣ ಏನು ಎಂಬುದು ತಿಳಿಯುತ್ತದೆ.

ಸ್ವಿಜರ್‌ಲ್ಯಾಂಡ್‌

ಸ್ವಿಜರ್‌ಲ್ಯಾಂಡ್‌

ಸ್ವಿಜರ್‌ ಲ್ಯಾಂಡ್‌ ಅತ್ಯುತ್ತಮ ಇನೋವೇಟಿವ್‌ ದೇಶವಾಗಿದ್ದು, ಇದು ವರ್ಲ್ಡ್ ಬ್ಯಾಂಕ್‌ ನಲ್ಲು ಹಣ ಡೆಪಾಸಿಟ್‌ ಮಾಡುತ್ತದೆ. ಈ ದೇಶ ನಾಲೆಡ್ಜ್‌ ಆಧಾರದಲ್ಲಿ ಆರ್ಥಿಕತೆಯನ್ನು ಲಾಭದಾಯಕ ಯೋಜನೆಗಳಿಂದ ಉತ್ತಮವಾಗಿಟ್ಟುಕೊಂಡಿದೆ ಹಾಗೂ ಅತ್ಯುತ್ತಮ ಇನೋವೇಟಿವ್‌ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

 ಯುಕೆ (ಬ್ರಿಟನ್)

ಯುಕೆ (ಬ್ರಿಟನ್)

ಈ ದೇಶವು ಶಿಕ್ಷಣ ಮತ್ತು ಉತ್ಪದಕತೆಯಲ್ಲಿ ಕಡಿಮೆ ಪ್ರಮಾಣವಾಗಿದ್ದರು ಸರ್ವಾಂಗೀಣ ಪ್ರದರ್ಶನದಿಂದ ದ್ವೀತಿಯ ಸ್ಥಾನದಲ್ಲಿದೆ.

 ಸ್ವೀಡನ್‌

ಸ್ವೀಡನ್‌

ಸ್ವೀಡನ್‌ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಪರಿಸರ ಸಂಶೋದನೆಗಳಿಂದ ಹೆಸರುವಾಸಿಯಾಗಿದ್ದು ಈ ಸ್ಥಾನದಲ್ಲಿದೆ.

 ನೆದರ್‌ಲ್ಯಾಂಡ್ಸ್‌

ನೆದರ್‌ಲ್ಯಾಂಡ್ಸ್‌

ಈ ದೇಶ ನಾಲ್ಕನೇ ಸ್ಥಾನದಲ್ಲಿರಲು ಪ್ರಮುಖ ಕಾರಣ ಸರ್ಕಾರದ ಉತ್ತಮ ಆನ್‌ಲೈನ್‌ ಸಂಸ್ಕೃತಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಆಧುನಿಕತೆ.

 ಅಮೇರಿಕ

ಅಮೇರಿಕ

ಪ್ರಖ್ಯಾತ ಸಾಮಾಜಿಕ ಜಾಲತಾಣದ ಕ್ರಾಂತಿ ಮತ್ತು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯು ಈ ಸ್ಥಾನಕ್ಕೆ ಕಾರಣವಾಗಿದೆ.

ಫಿನ್‌ಲ್ಯಾಂಡ್‌

ಫಿನ್‌ಲ್ಯಾಂಡ್‌

ಈ ಪ್ರದೇಶವು ಉತ್ತಮ ತಂತ್ರಜ್ಞಾನ ಸಂಶೋಧನೆ ಮತ್ತು ಶಿಕ್ಷಣದಲ್ಲಿ ಪ್ರಾವಿಣ್ಯತೆ ಪಡೆದಿದೆ.

 ಸಿಂಗಾಪುರ್‌

ಸಿಂಗಾಪುರ್‌

ಸುಸ್ಥಿರ ಅಭಿವೃದ್ಧಿ ವಲಯ ಮತ್ತು ಸ್ಥಿರವಾದ ರಾಜಕೀಯ ಪರಿಸರ ಹೊಂದಿರುವುದರಿಂದ ಸಿಂಗಾಪುರ ಏಳನೇ ಇನೋವೇಟಿವ್‌ ದೇಶ ಎಂದು ಹೆಗ್ಗಳಿಕೆ ಪಡೆದಿದೆ.

ಐರ್‌ಲ್ಯಾಂಡ್

ಐರ್‌ಲ್ಯಾಂಡ್

ಜಡ ಆರ್ಥಿಕ ಪರಿಸ್ಥಿತಿ ಹೊರತಾಗಿಯೂ, ಐರ್ಲೆಂಡ್ ಗಣರಾಜ್ಯ ದೇಶವು ಮೂಲಸೌಕರ್ಯ ಮತ್ತು ಸೃಜನಶೀಲತೆಯಿಂದ ಉನ್ನತ ಸ್ಥಾನ ಹೊಂದಿದೆ.

 ಲುಕ್ಸೆಂಬರ್ಗ್‌

ಲುಕ್ಸೆಂಬರ್ಗ್‌

ಉದ್ಯಮ ಹೂಡಿಕೆ ಮತ್ತು ವ್ಯಾಪಾರದ ಜೊತೆಗೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಿಂದ 9 ನೇ ಸ್ಥಾನ ಪಡೆದಿದೆ.

ಡೆನ್ಮಾರ್ಕ್‌

ಡೆನ್ಮಾರ್ಕ್‌

ಡೆನ್ಮಾರ್ಕ್‌ ಉತ್ತಮ ಗುಣಮಟ್ಟದ ಶಿಕ್ಷಣ, ಹೆಚ್ಚಿನ ಸಂಶೋಧಕರ ಸಮುದಾಯ ಮತ್ತು ಸರ್ಕಾರದ ಪರಿಣಾಮಕಾರಿ ಆಡಳಿತದಿಂದ ಇದನ್ನು 10 ನೇ ಸ್ಥಾನಕ್ಕೆ ತಲುಪಿಸಿದೆ.

ಹಾಂಗ್‌ ಕಾಂಗ್

ಹಾಂಗ್‌ ಕಾಂಗ್

ಚೀನಿ ಸರ್ಕಾರದ ಸಾಮಂತ ದೇಶವಾಗಿರುವುದರಿಂದ ಇದು ಈ ಸ್ಥಾನ ಪಡೆದಿದೆ.

ಜರ್ಮನಿ

ಜರ್ಮನಿ

ಆಟೋಮೇಟಿವ್‌ ಕ್ಷೇತ್ರದಲ್ಲಿ ಲೆಕ್ಕಕ್ಕೆ ಬಾರದಷ್ಟು ಅಭಿವೃದ್ಧಿ ಮಾಡಿರುವುದರಿಂದ ಈ ಸ್ಥಾನ ಪಡೆದಿದೆ.

 ಐಲ್ಯಾಂಡ್‌

ಐಲ್ಯಾಂಡ್‌

ಸ್ಕಾಂಡಿನೇವಿಯನ್ ದೇಶ ಇಂಟರ್‌ನೆಟ್‌ ಡಾಟಾದಿಂದ ಆರ್ಥಿಕವಾಗಿ ಮುಂದೆಬಂದಿದೆ.

ಸೌತ್‌ಕೋರಿಯಾ

ಸೌತ್‌ಕೋರಿಯಾ

ಏಷ್ಯನ್ ರಾಷ್ಟ್ರವಾದ ಇದು ಎಲೆಕ್ಟ್ರಾನಿಕ್ಸ್ ಮತ್ತು ಆರ್ & ಡಿ ಕ್ಷೇತ್ರಗಳಲ್ಲಿ ತನ್ನ ಉನ್ನತ ತಂತ್ರಜ್ಞಾನವನ್ನು ಸುಧಾರಣೆ ಮಾಡಿ ಮುಂಚೂಣಿಗೆ ಬಂದಿದೆ.

ನ್ಯೂಜಿಲ್ಯಾಂಡ್‌

ನ್ಯೂಜಿಲ್ಯಾಂಡ್‌

ಇದು ಸಿನಿಮಾ ನಿರ್ಮಾಣಕ್ಕೆ ಡ್ರೋನ್‌ ಬಳಸುವ ಹೊಸ ತಂತ್ರಜ್ಞಾನ ರೂಪಿಸಿ ಸಿನಿಮಾ ಕ್ಚೇತ್ರದ ಅಭಿವೃದ್ದಿಯಿಂದ 15ನೇ ಸ್ಥಾನ ಪಡೆದಿದೆ.

ಹೆಚ್ಚಿನ ಮಾಹಿತಿಗಾಗಿ

Most Read Articles
Best Mobiles in India

English summary
Innovation isn’t exactly a measure of intelligence or output of people living in a country. It is the ability of a state to enforce modern progressive laws, remove obstacles to trade and commerce and do business intelligently while relying on cutting edge technology as their competitive advantage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more