ಭಾರತದಲ್ಲಿ ನೀವು ಖರೀದಿಸಬಹುದಾದ 43 ಇಂಚಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳು!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಟಿವಿ ವಲಯ ಸಾಕಷ್ಟು ವಿಭಿನ್ನವಾಗಿ ಬೆಳೆದಿದೆ. ದೊಡ್ಡ ಗಾತ್ರದ ಸ್ಮಾರ್ಟ್‌ಟಿವಿಗಳು ಇಂದು ಮಾರುಕಟ್ಟೆಯನ್ನ ಆವರಿಸಿಕೊಂಡಿದ್ದು, ಬಳಕೆದಾರರಿಗೆ ಉತ್ತಮ ವೀಕ್ಷಣೆಯ ಅನುಭವ ನೀಡುತ್ತಿವೆ.ಅಷ್ಟೇ ಅಲ್ಲ ಈ ಸ್ಮಾರ್ಟ್‌ಟಿವಿಗಳು ಸ್ಮಾರ್ಟ್‌ಫೋನ್‌ಗಳ ಮಾದರಿಯಲ್ಲಿ ಆಪರೇಟಿಂಗ್ ಸಿಸ್ಟಮ್ ಅನ್ನು ಸಹ ಹೊಂದಿವೆ. ಇವುಗಳಲ್ಲಿ ಬಳಕೆದಾರರು ಆನ್‌ಲೈನ್‌ನಲ್ಲಿ ನಿಮಗೆ ಬೇಕಾದ ವಿಷಯವನ್ನು ಬ್ರೌಸ್ ಮಾಡಬಹುದು ಮತ್ತು ಸ್ಟ್ರೀಮ್ ಮಾಡಬಹುದು. ಜೊತೆಗೆ ಸ್ಮಾರ್ಟ್ ಟಿವಿಗಳು ಬಳಕೆದಾರರಿಗೆ ಒಟಿಟಿ ಸೇವೆಗಳನ್ನು ಸಹ ಸ್ಟ್ರೀಮ್ ಮಾಡಲು ಅವಕಾಶ ನೀಡಿವೆ.

ಸ್ಮಾರ್ಟ್‌ಟಿವಿ

ಹೌದು, ಸ್ಮಾರ್ಟ್‌ಟಿವಿ ಮಾರುಕಟ್ಟೆ ಸಾಕಷ್ಟು ಬದಲಾಗಿದ್ದು, ಮನೆಯಲ್ಲಿಯೇ ಕುಳಿತು ಚಿತ್ರಮಂದಿರದ ಅನುಭವವನ್ನು ಪಡೆಯಬಹುದಾಗಿದೆ. ದೊಡ್ಡ ಗಾತ್ರದ ಪರದೆಯ ಜೊತೆಗೆ ಸಾಕಷ್ಟು ಸ್ಮಾರ್ಟ್‌ಫೀಚರ್ಸ್‌ ಒಳಗೊಂಡ ಸ್ಮಾರ್ಟ್‌ಟಿವಿಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇನ್ನು ಗ್ರಾಹಕರು ಕೂಡ ಇಂದು ದೊಡ್ಡ ಗಾತ್ರದ ಸ್ಮಾರ್ಟ್‌ಟಿವಿಗಳತ್ತ ಒಲವು ತೋರುತ್ತಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ನೀವು 40 ಇಂಚಿನ ಸ್ಮಾರ್ಟ್‌ಟಿವಿಗಳನ್ನ ಖರೀದಿಸುವುದಕ್ಕೆ ಬಯಸಿದರೆ ನೀವು ಖರೀದಿಸಬಹುದಾದ 43 ಇಂಚಿನ ಅತ್ಯುತ್ತಮ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Sony Bravia KD-43X8000G

Sony Bravia KD-43X8000G

ಸೋನಿ ಬ್ರಾವಿಯಾ KD-43X8000G ಉತ್ತಮ 4K LED ಟಿವಿಯಾಗಿದ್ದು, 43 ಇಂಚಿನ ಉತ್ತಮ ಸ್ಮಾರ್ಟ್ ಟಿವಿ ಆಗಿದೆ. ಇದು HDR ಬೆಂಬಲದೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ ಟಿವಿ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು ಕ್ಲೀನ್ ಯೂಸರ್ ಇಂಟರ್ಫೇಸ್ ಅನ್ನು ನೀಡುತ್ತದೆ. ಇದು ಗೂಗಲ್ ಪ್ಲೇಸ್ಟೋರ್‌ಗೆ ಪ್ರವೇಶವನ್ನು ನೀಡುತ್ತದೆ, ಇದು ತನ್ನ ಬಳಕೆದಾರರಿಗೆ ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೊಗಳು, ಡಿಸ್ನಿ + ಹಾಟ್‌ಸ್ಟಾರ್ ಮತ್ತು ಇನ್ನಿತರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಇದು ಇತರ ಸ್ಟ್ರೀಮಿಂಗ್ ಸೇವೆಗಳಿಗೂ ಸಹ ಪ್ರವೇಶವನ್ನು ನೀಡುತ್ತದೆ. ಈ ಸ್ಮಾರ್ಟ್ ಟಿವಿಯು ಟ್ರಿಲುಮಿನಸ್ ಡಿಸ್ಪ್ಲೇಯನ್ನು ಹೊಂದಿದ್ದು ಅದು ಅದ್ಭುತ ಚಿತ್ರ ಗುಣಮಟ್ಟವನ್ನು ನೀಡುತ್ತದೆ. ಇದರಲ್ಲಿ ಆಡಿಯೋಗಾಗಿ,ಕ್ಲಿಯರ್ ಆಡಿಯೋ + ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಇದು ಇಂಟರ್‌ಬಿಲ್ಟ್‌ Chromecast ಫೀಚರ್ಸ್‌ ಅನ್ನು ಸಹ ಹೊಂದಿದೆ. ಇದರ ಬೆಲೆ 58,482 ರೂ ಬೆಲೆಯನ್ನು ಹೊಂದಿದೆ.

LG 43LM5650PTA

LG 43LM5650PTA

LG 43LM5650PTA 43 ಇಂಚಿನ ಅತ್ಯುತ್ತಮ ಸ್ಮಾರ್ಟ್‌ಟಿವಿಗಳಲ್ಲಿ ಒಂದಾಗಿದೆ. ಇದು 50Hz ನ ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, ಫುಲ್‌ಹೆಚ್‌ಡಿ ಎಲ್ಇಡಿ ಸ್ಮಾರ್ಟ್ ಟಿವಿ ಆಗಿದೆ. ಇದು 2 HDMI ಪೋರ್ಟ್‌ಗಳು ಮತ್ತು 1 ಯುಎಸ್‌ಬಿ ಪೋರ್ಟ್‌ ಅನ್ನು ಹೊಂದಿದೆ. ಜೊತೆಗೆ ಇದು 20W ಧ್ವನಿ ಉತ್ಪಾದನೆಯನ್ನು ನೀಡುತ್ತದೆ ಮತ್ತು 2 ಚಾನೆಲ್ ಸ್ಪೀಕರ್‌ಗಳೊಂದಿಗೆ ಬರುತ್ತದೆ. ಇದು ಡಿಟಿಎಸ್ ವರ್ಚುವಲ್: ಎಕ್ಸ್, ಕ್ಲಿಯರ್ ವಾಯ್ಸ್ III ಮತ್ತು ಆಪ್ಟಿಕಲ್ ಸೌಂಡ್ ಸಿಂಕ್ ಫೀಚರ್ಸ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿ ತನ್ನ ಎಲ್‌ಜಿ ವೆಬ್ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಸಹ ಹೊಂದಿದೆ. ಇದು ಹಲವಾರು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಗೆ ಅವಕಾಶ ನೀಡಲಿದೆ. ಇದು ಡಾಲ್ಬಿ ಆಡಿಯೋ, ಡಿಟಿಎಸ್ ವರ್ಚುವಲ್ ಮತ್ತು ಎಚ್‌ಡಿಆರ್ 10 ಪ್ರೊನೊಂದಿಗೆ ರೋಮಾಂಚಕ ದೃಶ್ಯಗಳನ್ನು ಸಹ ಒದಗಿಸುತ್ತದೆ. ಇದರ ಬೆಲೆ 28,990 ರೂ ಆಗಿದೆ.

LG 43UM7290PTF

LG 43UM7290PTF

LG 43UM7290PTF ಟಿವಿ ಕೂಡ ಅತ್ಯುತ್ತಮ ಸ್ಮಾರ್ಟ್‌ಟಿವಿ ಆಗಿದೆ. ಇದು 43 ಇಂಚಿನ 4K IPS ಅಲ್ಟ್ರಾ HD ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 50Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ 3HDMI ಪೋರ್ಟ್‌ಗಳು ಮತ್ತು 2 ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದೆ. ಇದು 20W ಔಟ್‌ಪುಟ್‌ನೊಂದಿಗೆ ಪವರ್‌ಫುಲ್‌ ಸೌಂಡ್‌ ಅನ್ನು ನೀಡಲಿದೆ. ಅಲ್ಲದೆ ಇದು ಸೂಪರ್ ನಯವಾದ ವೆಬ್ ಓಎಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದರ ಬೆಲೆ 34,999 ರೂ ಆಗಿದೆ.

Sony Bravia KDL-43W6603

Sony Bravia KDL-43W6603

ಇನ್ನು ಸೋನಿ ಬ್ರಾವಿಯಾ KDL-43W6603 ಸ್ಮಾರ್ಟ್‌ಟಿವಿ 43 ಇಂಚಿನ ಫುಲ್‌ಹೆಚ್‌ಡಿ ಸ್ಮಾರ್ಟ್ ಎಲ್ಇಡಿ ಟಿವಿ ಆಗಿದೆ. ಇದು 2 ಎಚ್‌ಡಿಎಂಐ ಪೋರ್ಟ್‌ಗಳನ್ನು ಮತ್ತು 2 ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿ ಎಕ್ಸ್-ರಿಯಾಲಿಟಿ ಪ್ರೊ ಮತ್ತು 50Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್ ಟಿವಿಯಲ್ಲಿ 20W ಸ್ಪೀಕರ್‌ಗಳು ಕ್ಲಿಯರ್ ಆಡಿಯೋ + ವೈಶಿಷ್ಟ್ಯಗಳು ಮತ್ತು ಓಪನ್ ಬ್ಯಾಫಲ್ ಸ್ಪೀಕರ್ ಹೊಂದಿದೆ. ಇದರ ಬೆಲೆ 34,999 ರೂ ಆಗಿದೆ.

Best Mobiles in India

English summary
Looking for 40-inch, 43-inch smart TVs? Here are some options from brands like Sony and LG.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X