ಎಐ ಆಧಾರಿತ ಟಾಪ್ ಟೆಕ್ಸ್ಟ್-ಟು-ವೀಡಿಯೋ ಪ್ರೊಡಕ್ಟ್ ಗಳು

By Gizbot Bureau
|

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ಗಳು ವಿಷುವಲ್ ಕಟೆಂಟ್ ಮತ್ತು ಸ್ಟೋರೀಸ್ ಗಳನ್ನು ಸೃಷ್ಟಿಸುವುದಕ್ಕೆ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಸಹಾಯ ಮಾಡುತ್ತಿದೆ. ಈ ಲೇಖನದಲ್ಲಿ ನಾವು 5 ಎಐ ಆಧಾರಿತ ಟೆಕ್ಸ್ಟ್-ಟು-ವೀಡಿಯೋ ಪ್ರೊಡಕ್ಟ್ ಗಳನ್ನು ಪಟ್ಟಿ ಮಾಡಿದ್ದೇವೆ ಮತ್ತು ಇವು ಯಾವುದೇ ಸ್ಟೋರಿ ಹೇಳುವವರಿಗೆ ತಮ್ಮ ಕಟೆಂಟ್ ನ್ನು ಫಾರ್ವರ್ಡ್ ಮಾಡುವುದಕ್ಕೆ ನೆರವು ನೀಡುತ್ತವೆ.

ಲುಮೆನ್ 5

ಲುಮೆನ್ 5

ಇದು ವೀಡಿಯೋ ಸೃಷ್ಟಿಮಾಡುವ ಫ್ಲಾಟ್ ಫಾರ್ಮ್ ಆಗಿದ್ದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕಾರ್ಯ ನಿರ್ವಹಿಸುತ್ತದೆ ಮತ್ತು ಯಾವುದೇ ಅನುಭವವಿಲ್ಲದ ವ್ಯಕ್ತಿ ಕೂಡ ಬಹಳ ಸುಲಭದಲ್ಲಿ, ಕ್ಷಣಮಾತ್ರದಲ್ಲಿ ವೀಡಿಯೋ ಕಟೆಂಟ್ ನಿರ್ಮಿಸುವುದಕ್ಕೆ ನೆರವು ನೀಡುತ್ತದೆ.ಪ್ರಮುಖವಾಗಿ ಇದರಲ್ಲಿ ಮೂರು ಕೆಟಗರಿಗಳಿವೆ. ಕಮ್ಯುನಿಟಿ ಕೆಟಗರಿಗೆ ಪಾವತಿ ಇರುವುದಿಲ್ಲ ಮತ್ತು 480p ರೆಸಲ್ಯೂಷನ್ ನ್ನು ಇದು ನೀಡುತ್ತದೆ ಜೊತೆಗೆ ಸ್ಟ್ಯಾಂಡರ್ಡ್ ಲೈಬ್ರರಿ ಮತ್ತು ಪ್ರಸಿದ್ಧ ಥೀಮ್ ಗಳಿರುತ್ತದೆ. ಪ್ರೋ ಕೆಟಗರಿಗಾಗಿ ನೀವು ಪ್ರತಿ ತಿಂಗಳು 49 ಡಾಲರ್ ಪಾವತಿ ಮಾಡಬೇಕಾಗುತ್ತದೆ. ಇದು 720p ರೆಸಲ್ಯೂಷನ್ ಹೊಂದಿರುತ್ತದೆ ಜೊತೆಗೆ ಇನ್ನಷ್ಟು ವಿಶೇಷ ಫೀಚರ್ ಗಳಿರುತ್ತದೆ. ಬ್ಯುಸಿನೆಸ್ ಕೆಟಗರಿಯು ಬ್ಯುಸಿನೆಸ್ ಮ್ಯಾನ್ ತಮ್ಮ ಬ್ರ್ಯಾಂಡ್ ಬಗ್ಗೆ ಪ್ರಚಾರ ಮಾಡುವುದಕ್ಕಾಗಿ ನಿರ್ಮಿಸಲಾಗಿದ್ದು ಇದರ ಬೆಲೆ ಪ್ರತಿ ತಿಂಗಳಿಗೆ $149 ಆಗಿರುತ್ತದೆ ಮತ್ತು ಇದರ ರೆಸಲ್ಯೂಷನ್ 1080p ಜೊತೆಗೆ ಹಲವು ವಿಭಿನ್ನ ಫೀಚರ್ ಗಳೂ ಕೂಡ ಇರುತ್ತದೆ.

ಇದು ಹೇಗೆ ಕೆಲಸ ಮಾಡುತ್ತೆ?: ಟೆಕ್ಸ್ಟ್ ಟು ವೀಡಿಯೋ ಟ್ರಾನ್ಸ್ಫರ್ ಮೇಷನ್ ಗಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

• ಆರ್ಟಿಕಲ್ ನ ಲಿಂಕ್ ನ್ನು ಎಂಟರ್ ಮಾಡಿ ಮತ್ತು ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್ ಅಲ್ಗೋರಿತ್ತಮ್ ನಿಮಗೆ ಸ್ವಯಂಚಾಲಿತವಾಗಿ ಸ್ಟೋರಿ ಬೋರ್ಡ್ ನ್ನು ನಿರ್ಮಿಸುತ್ತದೆ.

• ಕಂಪ್ಯೂಟರ್ ವಿಷನ್ ತಂತ್ರಗಾರಿಕೆಯನ್ನು ಬಳಸಿ ಸಿಸ್ಟಮ್ ಸಂಬಂಧಪಟ್ಟ ವಿಷುವಲ್ ಮತ್ತು ಆಡಿಯೋವನ್ನು ಕಟೆಂಟ್ ಗಾಗಿ ಹುಡುಕಾಡುತ್ತದೆ.

• ನಿಮ್ಮ ಬ್ರಾಂಡಿಂಗ್ ಪ್ರೊಫೈಲ್ ನ್ನು ಸೆಟ್ ಅಪ್ ಮಾಡಿ

• ಡ್ಯಾಷ್ ಬೋರ್ಡ್ ಸುಲಭದಲ್ಲಿ ನಿಮ್ಮ ಅಡ್ಮಿನ್ ನಿಂದ ಆಕ್ಸಿಸ್ ಆಗಿ ವೀಕ್ಷಿಸಲು ಸಾಧ್ಯವಾಗುತ್ತದೆ ಮತ್ತು ವೀಡಿಯೋ ಅಪ್ರೂ ಆಗಬೇಕು.

ಗ್ಲಿಯಾಕ್ಲೌಡ್

ಗ್ಲಿಯಾಕ್ಲೌಡ್

2015 ರಲ್ಲಿ ಥೈವಾನಿನವರು ಗ್ಲಿಯಾಕ್ಲೌಡ್ ನ್ನು ಬಿಡುಗಡೆಗೊಳಿಸಿದ್ದು ಡಾಟಾ ಅನಲಿಟಿಕ್ಸಿ ಮತ್ತು ಮಷಿನ್ ಲರ್ನಿಂಗ್ ಗೆ ಪರಿಹಾರ ಮತ್ತು ಅಪ್ಲಿಕೇಷನ್ ನೀಡುವ ಸದುದ್ದೇಶದಿಂದ ನಿರ್ಮಿಸಲಾಗಿದೆ. ಇದು ಡೇವಿಡ್ ಚೆನ್ ರ ಮೆದುಳಿನ ಕೂಸು ಎನ್ನಬಹುದು. ಸ್ವಯಂಚಾಲಿತವಾಗಿ ಟೆಕ್ಸ್ಟ್ ಆರ್ಟಿಕಲ್ ಗಳ ವೀಡಿಯೋ ಸಮ್ಮರಿ ಸೃಷ್ಟಿಮಾಡುವುದಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಗಾರಿಕೆಯನ್ನು ಗ್ಲಿಯಾಸ್ಟುಡಿಯೋ ಬಳಸುತ್ತದೆ.

ಇದು ಹೇಗೆ ಕೆಲಸ ಮಾಡುತ್ತೆ?: ಟೆಕ್ಸ್ಟ್ ನ್ನು ವೀಡಿಯೋ ಆಗಿ ಬದಲಾಯಿಸುವ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಹೊಂದಿರುತ್ತದೆ.

• ಕಟೆಂಟ್ URL ನ್ನು ಪೇಸ್ಟ್ ಮಾಡಿ ಅಥವಾ ಫೈಲ್ ನ್ನು ಅಪ್ ಲೋಡ್ ಮಾಡಿ, ಗ್ಲಿಯಾಕ್ಲೌಡ್ ನ ನ್ಯಾಚುರಲ್ ಲಾಂಗೇಜ್ ಅಲ್ಗೋರಿತ್ತಮ್ ಕಟೆಂಟ್ ನ್ನು ಗಮನಿಸುತ್ತದೆ ಮತ್ತು ಪ್ರಮುಖ ಟಾಪಿಕ್ ಮತ್ತು ಕೀವರ್ಡ್ಸ್ ನ್ನು ಗುರುತಿಸುತ್ತದೆ ಮತ್ತು ಸೆಕ್ಷನ್ ಮತ್ತು ಹೈಲೆಟ್ ನ ವೀಡಿಯೋ ಸ್ಕ್ರಿಪ್ಟ್ ನ್ನುತಯಾರಿಸುತ್ತದೆ.

• ಜನರೇಟ್ ಮಾಡಲಾಗಿರುವ ವೀಡಿಯೋ ಸ್ಕ್ರಿಪ್ಟ್ ಅನುಸರಿಸಿ ಎಐ ಇಂಜಿನ್ ಸಂಬಂಧಿಸಿದ ಇಮೇಜ್ ಮತ್ತು ಕ್ಲಿಪ್ ಗಳನ್ನು ಸರ್ಚ್ ಮಾಡಿ ಎಡಿಟ್ ಮಾಡುತ್ತದೆ.

• ನಂತರ ಇದು ವಿಭಿನ್ನ ವರ್ಷನ್ ನ ಟೆಸ್ಟಿಂಗ್ ನ್ನು ಕ್ರಿಯೇಟ್ ಮಾಡುವುದಕ್ಕೆ ಮತ್ತು ಸೋಷಿಯಲ್ ಮಾಡಿಯಾದಲ್ಲಿ ಎಂಗೇಜ್ ಆಗುವುದಕ್ಕೆ ಸಹಾಯಕವಾಗುತ್ತದೆ.

ವೋಚಿಟ್

ವೋಚಿಟ್

ಸೋಷಿಯಲ್ ಮತ್ತು ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಯಾವುದೇ ಲೆವೆಲ್ ನಲ್ಲಿ ಬೇಕಿದ್ದರೂ ವೀಡಿಯೋ ಸೃಷ್ಟಿಮಾಡುವ ಅನುಭವವಿರುವ ವ್ಯಕ್ತಿಯೂ ಕೂಡ ಬಳಸಬಹುದಾದ ಫ್ಲಾಟ್ ಫಾರ್ಮ್ ಇದಾಗಿದೆ. ಹೈ ಇಂಪ್ಯಾಕ್ಟ್ ವೀಡಿಯೋಗಳನ್ನು ಸೃಷ್ಟಿಸುವುದಕ್ಕೆ ಈ ಫ್ಲಾಟ್ ಫಾರ್ಮ್ ನೆರವು ನೀಡುತ್ತದೆ. ಇದು ಹೇಗೆ ಕೆಲಸ ಮಾಡುತ್ತೆ?: ಈ ಪ್ರಕ್ರಿಯೆಯು ಪ್ರಮುಖವಾಗಿ ಮೂರು ಹಂತಗಳನ್ನು ಹೊಂದಿರುತ್ತದೆ.

• ನಿಮ್ಮ ಪ್ಲಾನ್ ಮತ್ತು ಯೋಜನೆಗೆ ಹೊಸ ರೂಪದಲ್ಲಿ ಕ್ಲಿಕ್ ಸ್ಟಾರ್ಟ್ ನೀಡುವ ಯೋಜನೆ ಇದಾಗಿರುತ್ತದೆ.

• ಸ್ಟೋರಿಯನ್ನು ಹೇಳುವುದಕ್ಕಾಗಿ ನೀವು ಪರವಾನಗಿ ಪಡೆದ ಸ್ವತ್ತುಗಳು, ಗ್ರಾಫಿಕ್ಸ್ ಮತ್ತು ಮ್ಯೂಸಿಕ್ ಟ್ರ್ಯಾಕ್ ಗಳನ್ನು ಒಟ್ಟಿಗೆ ಸೇರಿಸಿ ವಾಯ್ಸ್ ಓವರ್ ಜೊತೆಗೆ ಹಾಕಿ ರಿಲಯಲಿಸ್ಟಿಕ್ ಆಗಿರುವ ಸ್ವಂತ ಬ್ರ್ಯಾಂಡ್ ನ ವೀಡಿಯೋ ನಿರ್ಮಾಣಕ್ಕೆ ಇದು ನೆರವು ನೀಡುತ್ತದೆ.

• ಅಡ್ವಾನ್ಸ್ಡ್ ಎಡಿಟಿಂಗ್ ಕೆಪಾಬಿಲಿಟೀಸ್ ನೊಂದಿಗೆ ಮತ್ತು ಅಟೋಮೆಟೆಡ್ ಟೂಲ್ಸ್ ನೊಂದಿಗೆ ನಿಮ್ಮ ಕ್ರಿಯೇಷನ್ ಪ್ರೊಸೆಸ್ ಗೆ ಒಂದು ರೂಪುರೇಷೆ ಲಭ್ಯವಾಗುತ್ತದೆ ಮತ್ತು ಪವರ್ ಫುಲ್ ಆಗಿರುವ ವೀಡಿಯೋವನ್ನು ಕ್ಷಣ ಮಾತ್ರದಲ್ಲಿ ನಿರ್ಮಾಣ ಮಾಡಬಹುದು.

• ಇಂಟರ್ನಲ್ ವರ್ಕ್ ಪ್ಲೋ ಜೊತೆಗೆ ಸ್ಟ್ರೀಮ್ ಲೈನ್ ಸಹಯೋಗ ಮಾಡಿ ಮತ್ತು ಕ್ಲೌಡ್ ಬೇಸ್ಡ್ ಫ್ಲಾಟ್ ಫಾರ್ಮ್ ನೊಂದಿಗೆ ಅನುಮೋದನೆ ಪ್ರಕ್ರಿಯೆ ನಡೆಸಿ ಮತ್ತು ಸ್ಮಾರ್ಟ್ ಸ್ಲ್ಯಾಕ್ ಇಂಟಿಗ್ರೇಷನ್ ನಡೆಸಿ. ಕ್ರಿಯೇಟ್,ಎಡಿಟ್, ರಿಪರ್ಪೋಸ್, ಅಪ್ರೂ ಮತ್ತು ಡಿಸ್ಟ್ರಿಬ್ಯೂಟ್ ಎನಿವೇರ್ ನ್ನು ಟ್ಯಾಗ್ ಮಾಡಿಕೊಳ್ಳಿ.

• ಸಿಎಂಎಸ್, ಓವಿಪಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ನೀವು ನಿಮ್ಮ ಸ್ಟೋರಿಯನ್ನು ಪಬ್ಲಿಷ್ ಮಾಡಬಹುದು ಮತ್ತು ಪ್ರತಿಯೊಬ್ಬ ವೀಕ್ಷಕನಿಗೂ ಸುಲಭದ ಡೆಲಿವರಿ ಮಾಡಬಹುದು.

ವಿಬ್ಬಿಟ್ಜ್

ವಿಬ್ಬಿಟ್ಜ್

2011 ರಲ್ಲಿ ಝೋಹರ್ ದಯಾನ್ ಮತ್ತು ಯೋಟಮ್ ಕೋಹನ್ ಮೊದಲ ಬಾರಿಗೆ ಅಟೋಮೇಟೆಡ್ ವೀಡಿಯೋ ಕ್ರಿಯೇಷನ್ ಫ್ಲಾಟ್ ಫಾರ್ಮ್ ನ್ನು ನ್ಯೂಯಾರ್ಕ್ ಟೆಸ್ ಅವಿವ್ ನಲ್ಲಿ ಕಂಡುಹಿಡಿದರು. ಈ ಫ್ಲಾಟ್ ಫಾರ್ಮ್ ನಲ್ಲಿ ಎರಡು ಪ್ಲಾನ್ ಗಳಿವೆ. ಒಂದು ಸ್ಟ್ಯಾಂಡರ್ಡ್ ಪ್ಲಾನ್ ಮತ್ತು ಕಸ್ಟಮ್ ಪ್ಲಾನ್ ಸ್ಟ್ಯಾಂಡರ್ಡ್ ಪ್ಲಾನಿನ ಬೆಲೆ ಪ್ರತಿ ತಿಂಗಳಿಗೆ $500 ಮತ್ತು ಕಸ್ಟಮ್ ಪ್ಲಾನ್ ನಲ್ಲಿ ಸ್ಟ್ಯಾಂಡರ್ಡ್ ಪ್ಲಾನ್ ನಲ್ಲಿರುವ ಎಲ್ಲಾ ಅಂಶಗಳೂ ಇದ್ದು ಹೆಚ್ಚುವರಿ ಕೆಲವು ಫೀಚರ್ ಗಳು ಲಭ್ಯವಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತೆ?:

• ಸ್ಮಾರ್ಟ್ ಟೆಕ್ಸ್ಟ್ಅನಾಲಿಸಿಸ್ ಮೊದಲು ನಿಮ್ಮ ಸ್ಟೋರಿಯಲ್ಲಿನ ಹೈಲೆಟ್ ನ್ನು ಗುರುತಿಸುತ್ತದೆ ಮತ್ತು ಸ್ವಯಂಚಾಲಿತವಾಗಿ ನಿಮ್ಮ ವೀಡಿಯೋ ಔಟ್ ಲೈನ್ ನ್ನು ಮಾಡುತ್ತದೆ ಮತ್ತು ಎಐ ವಿಷಯದ ಅಂಶಗಳನ್ನು ನಿಮ್ಮ ಸ್ಟೋರಿಯೊಂದಿಗೆ ಪೇರ್ ಮಾಡುತ್ತದೆ ಜೊತೆಗೆ ಮೀಡಿಯಾ ಲೈಬ್ರರಿಯಿಂದ ಅಗತ್ಯ ಫೋಟೋಜ್ ಗಳನ್ನು ಸೇರಿಸುತ್ತದೆ.

• ಈ ಫ್ಲಾಟ್ ಫಾರ್ಮ್ ನಲ್ಲಿ ಕೆಲಸ ಆರಂಭಿಸುವುದಕ್ಕೆ ಮೊದಲು ಡೆಮೋ ರಿಕ್ವೆಸ್ಟ್ ಮಾಡಿ ಮತ್ತು ಫ್ಲಾಟ್ ಫಾರ್ಮ್ ಗೆ ತೆರಳಲು ನಿರ್ಧಿಷ್ಟ ಟೈಮ್ ಲೈನ್ ನ್ನು ಫಿಕ್ಸ್ ಮಾಡಲಾಗುತ್ತದೆ.

• ನೀವು ಆಯ್ಕೆ ಮಾಡುವ ಪ್ಲಾನಿನ ಆಧಾರದಲ್ಲಿ ನೀವು ಹ್ಯಾಂಡ್ಸ್ ಆನ್ ಟ್ರೈನಿಂಗ್ ಸೆಷನ್ ನ್ನು ಹೊಂದುತ್ತೀರಿ ಮತ್ತು ನೀವೇ ಸ್ವತಃ ಕಲಿಯುವುದಕ್ಕೆ ನೆರವು ಸಿಗುತ್ತದೆ.

• ಯಾವುದೇ ಕಥೆಯನ್ನು ಅಥವಾ ಲೇಖನವನ್ನು ಸಣ್ಣ ವೀಡಿಯೋವಾಗಿ ಪರಿವರ್ತಿಸುವುದಕ್ಕೆ ಟೆಂಪ್ಲೇಟ್ ಗಳಿರುತ್ತದೆ.

• ಪ್ರತಿಯೊಂದು ಸೆಕ್ಷನ್ ನ್ನು ಕಟ್, ಕ್ರಾಪ್, ಝೂಮ್ ಮತ್ತು ಟ್ರಿಮ್ ನ್ನು ಯಾವುದೇ ಎಡಿಟಿಂಗ್ ಸ್ಕಿಲ್ ಮತ್ತು ಜ್ಞಾನವಿಲ್ಲದೆಯೂ ಮಾಡುವುದಕ್ಕೆ ನೆರವು ಸಿಗುತ್ತದೆ. ನಿಮ್ಮದೇ ಸ್ವಂತ ವಾಯ್ಸ್ ಕೂಡ ಸೇರಿಸಬಹುದು.

• ನೀವು ನಿಮ್ಮ ಡೀಫಾಲ್ಟ್ ಕಲರ್, ಫಾಂಟ್, ಲೋಗೋ ಮತ್ತು ಬಂಪರ್ಸ್ ನ್ನು ವೀಡಿಯೋಗೆ ಸೇರಿಸಬಹುದು.

ವಿಡಿಯಾ

ವಿಡಿಯಾ

ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ವೀಡಿಯೋ ಮೇಕರ್ ಬಳಕೆದಾರರಿಗೆ ಇನಸ್ಟೆಂಟ್ ಆಗಿ ಪ್ರೊಫೆಷನಲ್ ಆಗಿ ಕಾಣುವ ವೀಡಿಯೋ ತಯಾರಿಕೆಗೆ ನೆರವು ನೀಡುತ್ತದೆ. ಕೇವಲ ಟೆಕ್ಸ್ಟ್ ನ್ನು ಮಾತ್ರವೇ ವೀಡಿಯೋ ಆಗಿ ಅಲ್ಲ ಬದಲಾಗಿ ಯುಆರ್ಎಲ್ ಮತ್ತು ಡಾಟಾವನ್ನು ಕೂಡ ಸ್ವಯಂಚಾಲಿತವಾಗಿ ವೀಡಿಯೋ ಮಾಡುವ ತಾಕತ್ತನ್ನು ಹೊಂದಿದೆ. ವಿಡಿಯಾ ನೀವು ಕಥೆ ಹೇಳುವುದನ್ನು ವೀಡಿಯೋ ಮಾಡುತ್ತದೆ ಮತ್ತು ಘಂಟೆಗಳಿಂದ ಸ್ಟ್ರೆಸ್ ಆಗಿರುವುದನ್ನು ಇದು ತಪ್ಪಿಸುತ್ತದೆ.

ಇದು ಹೇಗೆ ಕೆಲಸ ಮಾಡುತ್ತೆ?: ಪ್ರಮುಖವಾಗಿ ಮೂರು ಹಂತಗಳನ್ನು ಇದು ಹೊಂದಿದೆ.

• ಅನಲೈಝ್: ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೊದಲಿಗೆ ನಿಮ್ಮ ಡಾಟಾ, ಟೆಕ್ಸ್ಟ್ , ಲಿಂಕ್, ಬ್ಲಾಗ್ ಸ್ಕ್ಯಾನ್ ಮಾಡುತ್ತದೆ ಅಥವಾ ನಿಮ್ಮ ಪ್ರಮುಖ ಐಡಿಯಾವನ್ನು ಗುರುತಿಸುತ್ತದೆ.

• ವಿಷುವಲೈಝ್: ನಂತರ ಸಂಬಂಧಪಟ್ಟ ಮೀಡಿಯಾ ಅಸೆಟ್ ನ್ನು ಹುಡುಕುತ್ತದೆ. ವೀಡಿಯೋ ಟೈಮ್ ಲೈನ್ ನಲ್ಲಿ ಹಾಕುತ್ತದೆ ಮತ್ತು ವಾಯ್ಸ್ ನರೇಷನ್ ನ್ನು ಜನರೇಟ್ ಮಾಡುತ್ತದೆ.

• ಕಸ್ಟಮೈಝ್: ಅಂತಿಮವಾಗಿ ರಿವ್ಯೂ ಮಾಡಿ ಪಬ್ಲಿಶ್ ಮಾಡಬಹುದು. ಡ್ರ್ಯಾಗ್ ಎಂಡ್ ಡ್ರಾಪ್ ವೀಡಿಯೋ ಮೇಕರ್ ಮೂಲಕ ನೀವು ಬ್ರ್ಯಾಂಡ್ ಕೂಡ ಮಾಡಿ ಕಸ್ಟಮೈಜ್ ಮಾಡಬಹುದು.

Best Mobiles in India

Read more about:
English summary
Top 5 AI-Based Text-To-Video Products

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X