ಮಾರುಕಟ್ಟೆಯಲ್ಲಿ ಲಭ್ಯವಿರುವ 65 ಇಂಚಿನ ಟಾಪ್‌ 5 ಸ್ಮಾರ್ಟ್‌ಟಿವಿಗಳು!

|

ಇತ್ತಿಚಿನ ದಿನಗಳಲ್ಲಿ ಟಿವಿ ಟೆಕ್ನಾಲಜಿ ಸಾಕಷ್ಟು ಆಪ್ಡೇಟ್‌ ಆಗುತ್ತಿದೆ. ಪ್ರತಿ ದಿನ ಕಳೆದಂತೆ ಸ್ಮಾರ್ಟ್ ಟಿವಿಗಳು ಗಾತ್ರದಲ್ಲಿ ದೊಡ್ಡದಾಗುತ್ತಿವೆ ಮತ್ತು ಸ್ಮಾರ್ಟ್‌ ಆಗುತ್ತಿವೆ. ಇನ್ನು ಈಗಾಗಲೇ ಹಲವು ಬ್ರಾಂಡ್‌ಗಳು ತಮ್ಮ ವಿಭಿನ್ನ ಮಾದರಿಯ, ಉನ್ನತ ಮಟ್ಟದ ಫೀಚರ್ಸ್‌ಗಳು ಮತ್ತು ಫರ್ಮ್‌ವೇರ್ ಆವೃತ್ತಿಗಳನ್ನು ಹೊಂದಿರುವ ಹೊಸ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿವೆ. ಮಾರುಕಟ್ಟೆಯಲ್ಲಿ ಹಲವು ಬ್ರಾಂಡ್‌ಗಳ ಸ್ಮಾರ್ಟ್‌ಟಿವಿಗಳು ಲಭ್ಯವಿದೆಯಾದರೂ ಬಳಕೆದಾರರು ಮಾತ್ರ ತಮ್ಮ ನೆಚ್ಚಿನ ಬ್ರಾಂಡ್‌ಗಳನ್ನ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ.

ಸ್ಮಾರ್ಟ್‌ಟಿವಿ

ಹೌದು, ಸ್ಮಾರ್ಟ್‌ಟಿವಿ ವಲಯದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಸ್ಮಾರ್ಟ್‌ಫೋನ್‌ ವಲಯದ ಸಂಸ್ಥೆಗಳು ಸಹ ಸ್ಮಾರ್ಟ್‌ಟಿವಿ ತಯಾರಕ ವಲಯದಲ್ಲಿ ಗುರುತಿಸಿಕೊಂಡು ಹಲವು ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿವೆ. ಸದ್ಯ ಇದೀಗ ಮಾರುಕಟ್ಟೆಯಲ್ಲಿ ಹೆಚ್ಚಿನ ಗಾತ್ರದ ಸ್ಮಾರ್ಟ್‌ಟಿವಿಗಳು ಮತ್ತು ಹೆಚ್ಚಿನ ರೆಸಲ್ಯೂಶನ್‌ ಸಾಮರ್ಥ್ಯದ ಟಿವಿಗಳಿಗೆ ಬೇಡಿಕೆ ಇದೆ. ಇದೇ ಕಾರಣಕ್ಕೆ ನಾವು ಈ ಲೇಖನದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ 65 ಇಂಚಿನ ಟಾಪ್‌ 5 ಸ್ಮಾರ್ಟ್‌ಟಿವಿಗಳು ಬಗ್ಗೆ ತಿಳಿಸಿಕೊಡ್ತಿವಿ ಓದಿರಿ.

Xiaomi Mi TV 4X 65 inch LED 4K TV

Xiaomi Mi TV 4X 65 inch LED 4K TV

ಶಿಯೋಮಿ ಮಿ ಟಿವಿ 4X 65-ಇಂಚಿನ ಸ್ಮಾರ್ಟ್‌ಟಿವಿ 3840 x 2160 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 4K ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ 178 ಡಿಗ್ರಿ, 9ms ಡೈನಾಮಿಕ್ ರೆಸ್ಪಾನ್ಸ್ ಮಾಲಿ-470mp 3 gpu2 GB ರಾಮ್, ಅನ್ನು ಹೊಂದಿದೆ. ಅಲ್ಲದೆ 16GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಸಹ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ 9.0 ಅನ್ನು ಬೆಂಬಲಿಸಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ , ಬ್ಲೂಟೂತ್ 4.2 LE, 3 x HDMI (1 ARC), AV, 3 x USB, 1 x ಈಥರ್ನೆಟ್ HDR 10 ಮತ್ತು HLG, H.264, H.265, ರಿಯಲ್, MPEG1 / 2/4, WMV3, VC-1 ಅನ್ನು ಬೆಂಬಲಿಸುತ್ತದೆ. ಇದಲ್ಲದೆ 2 x 10W ಸ್ಪೀಕರ್, ಡಾಲ್ಬಿ ಆಡಿಯೋ / ಡಿಟಿಎಸ್-ಹೆಚ್‌ಡಿ ಆಡಿಯೊ ಡ್ಯುಯಲ್ ಡಿಕೋಡಿಂಗ್ ಅನ್ನು ಹೊಂದಿದೆ. ಇದರ ಬೆಲೆ 54,999 ರೂ, ಆಗಿದೆ.

Motorola 65SAUHDM 65 inch LED 4K TV

Motorola 65SAUHDM 65 inch LED 4K TV

ಇದು 65 ಇಂಚಿನ ಅಲ್ಟ್ರಾ ಹೆಚ್‌ಡಿ 4K LED ಸ್ಕ್ರೀನ್ ಅನ್ನು ಹೊಂದಿದೆ. 3840 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಡಿಸ್‌ಪ್ಲೇ ಇದಾಗಿದೆ. ಜೊತೆಗೆ 60 Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಈ ಹೊಸ ಮಾದರಿಯ ಡಿಸ್‌ಪ್ಲೇ ವಿನ್ಯಾಸ ಹೊಂದಿರುವ ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್, ಯುಟ್ಯೂಬ್ ಅಪ್ಲಿಕೇಶನ್‌ಗಳನ್ನ ಹೊಂದಿದೆ. ಇದು ಆಂಡ್ರಾಯ್ಡ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 64,999 ರೂ ಬೆಲೆಯನ್ನು ಹೊಂದಿದೆ.

LG 65UM7290PTD 65 inch LED 4K TV

LG 65UM7290PTD 65 inch LED 4K TV

ಇದು 3840x2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 4K ಅಲ್ಟ್ರಾ ಹೆಚ್‌ಡಿ ಡಿಸ್‌ಪ್ಲೆಯನ್ನು ಹೊಂದಿದೆ. ಜೊತೆಗೆ 50Hz ರಿಫ್ರೆಶ್‌ ರೇಟ್‌ ಅನ್ನು ಸಹ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸೆಟ್ ಟಾಪ್ ಬಾಕ್ಸ್ ಅನ್ನು ಸಂಪರ್ಕಿಸಲು 3HDMI ಪೋರ್ಟ್‌ಗಳು, ಬ್ಲೂ ರೇ ಪ್ಲೇಯರ್‌ಗಳು, ಗೇಮಿಂಗ್ ಕನ್ಸೋಲ್, ಹಾರ್ಡ್ ಡ್ರೈವ್‌ಗಳು ಮತ್ತು ಇತರ ಯುಎಸ್‌ಬಿ ಡಿವೈಸ್‌ಗಳನ್ನು ಸಂಪರ್ಕಿಸಲು 2 ಯುಎಸ್‌ಬಿ ಪೋರ್ಟ್‌ಗಳನ್ನು ಬೆಂಬಲಿಸಲಿದೆ. ಇದಲ್ಲದೆ 20 ವಾಟ್ಸ್ ಔಟ್‌ಪುಟ್‌, ವಾಯರ್‌ಲೆಸ್‌ ಸೌಂಡ್ (2ವೇ ಬ್ಲೂಟೂತ್) ಅನ್ನು ಹೊಂದಿದೆ. ಇನ್ನುಳಿದಂತೆ ವೆಬ್ ಓಎಸ್ ಸ್ಮಾರ್ಟ್ ಟಿವಿ, ಶೇರ್ & ಕಂಟ್ರೋಲ್, ಮಿರಾಕಾಸ್ಟ್, ಹೋಮ್ ಡ್ಯಾಶ್‌ಬೋರ್ಡ್, ಅನಿಯಮಿತ ಒಟಿಟಿ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. ಇದರ ಬೆಲೆ 82,990 ರೂ ಆಗಿದೆ.

Kodak 65CA0101 65 inch LED 4K TV

Kodak 65CA0101 65 inch LED 4K TV

ಈ ಸ್ಮಾರ್ಟ್‌ಟಿವಿ ಕೂಡ 65ಇಂಚಿನ ಟಿವಿ ಆಗಿದ್ದು, 3840x2160 ಸ್ಕ್ರಿನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಜೊತೆಗೆ LED ಸ್ಕ್ರೀನ್ ಅನ್ನು ಸಹ ಹೊಂದಿದೆ. ಇದು ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್, ಯುಟ್ಯೂಬ್ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, ಉತ್ತಮ ಔಟ್‌ಪುಟ್‌ ವಾಯ್ಸ್‌ ಅನ್ನು ಸಹ ಹೊಂದಿದೆ. ಇದರ ಬೆಲೆ 49,999 ರೂ ಹೊಂದಿದೆ.

LG 65UK6360PTE 65 inch LED 4K TV

LG 65UK6360PTE 65 inch LED 4K TV

ಇದು 65 ಇಂಚಿನ ಸ್ಮಾರ್ಟ್‌ಟಿವಿ ಆಗಿದೆ. 3,840x2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದ್ದು 4K LED ಸ್ಕ್ರೀನ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಟಿವಿ ನೆಟ್ಫ್ಲಿಕ್ಸ್, ಯುಟ್ಯೂಬ್ ಅಪ್ಲಿಕೇಶನ್‌ ಅನ್ನು ಬೆಂಬಲಿಸಲಿದೆ. ಇದು ಕೂಡ ಆಂಡ್ರಾಯ್ಡ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರ ಬೆಲೆ 1,20,999 ರೂ ಆಗಿದೆ.

Most Read Articles
Best Mobiles in India

Read more about:
English summary
This article compiles the list of best smart TVs with 65-inch panel available in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X