ಭಾರತದಲ್ಲಿ ಲಭ್ಯವಿರುವ ಐದು ಬೆಸ್ಟ್‌ ಪವರ್‌ ಬ್ಯಾಂಕ್‌ಗಳು.!

|

ಸ್ಮಾರ್ಟ್‌ಫೋನ್‌ಗಳು ಹೊಸ ಹೊಸ ಫೀಚರ್‌ಗಳು, ಕ್ಯಾಮೆರಾ ವಿಶೇಷತೆಗಳಿಂದ ಗ್ರಾಹಕರ ಮನ ಸೆಳೆಯುವ ಪ್ರಯತ್ನ ಮಾಡುತ್ತವೆ. ಅದ್ರೆ ಸ್ಮಾರ್ಟ್‌ಪೋನ್‌ ವಲಯದಲ್ಲಿ ಪೋನ್‌ ಫೀಚರ್ಸ್‌ ಹೇಗೆ ಮುಖ್ಯವೋ ಪವರ್‌ ಬ್ಯಾಂಕ್‌ ಕೂಡ ಅಷ್ಟೇ ಮುಖ್ಯ. ಪ್ರತಿ ವರ್ಷ ಸ್ಮಾರ್ಟ್‌ಫೋನ್‌ ತಯಾರಕರು ಹೊಸ ಫೀಚರ್‌ಗಳ ಜೊತೆಗೆ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನು ನೀಡೋದಕ್ಕೆ ಪ್ರಯತ್ನಿಸುತ್ತಲೇ ಇದ್ದಾರೆ.

ಪವರ್‌ ಬ್ಯಾಂಕ್‌

ಹೌದು ಸ್ಮಾರ್ಟ್‌ಫೋನ್‌ ಜೊತೆಗೆ ಪವರ್‌ ಬ್ಯಾಂಕ್‌ ಅನ್ನು ಕೂಡ ಹೊಂದಲು ಪೋನ್‌ ಪ್ರಿಯರು ಬಯಸುತ್ತಾರೆ. ಇನ್ನು ಹೆಚ್ಚಿನ ಸ್ಮಾರ್ಟ್‌ಪೋನ್‌ ಬಳಕೆದಾರರು ತಮ್ಮ ಹಳೆಯ ಬ್ಯಾರಿ ಬದಲಿಸುವ ಬದಲು ತಮ್ಮ ಸ್ಮಾರ್ಟ್‌ಪೋನ್‌ನ ವಿದ್ಯುತ್‌ ದಾಹ ನೀಗಿಸೋಕೆ ಪವರ್‌ ಬ್ಯಾಂಕ್‌ ಖರೀದಿಸಲು ಆಸಕ್ತಿ ತೊರುತ್ತಾರೆ. ಸಧ್ಯ ನಿಮ್ಮ ಸ್ಮಾರ್ಟ್‌ಫೋನ್‌ಗೆ ವಿದ್ಯುತ್‌ ಶಕ್ತಿ ತುಂಬಲು ನೀವು ಪವರ್ ಬ್ಯಾಂಕ್ ಅನ್ನು ಹುಡುಕುತ್ತಿದ್ದರೆ, ಈ ಕೆಳಗಿನ ಐದು ಪವರ್‌ ಬ್ಯಾಂಕ್‌ಗಳು ಉತ್ತಮ ಆಯ್ಕೆ ಯಾಗಿರುತ್ತವೆ.

ಶಿಯೋಮಿ  ಪವರ್ ಬ್ಯಾಂಕ್ 2i

ಶಿಯೋಮಿ ಪವರ್ ಬ್ಯಾಂಕ್ 2i

ಶಿಯೋಮಿ ತನ್ನ ಪವರ್‌ ಬ್ಯಾಂಕ್‌ಗಳಲ್ಲಿ ಬಳಕೆದಾರರ ಅವಶ್ಯಕತೆಗಳಿಗೆ ಅನುಗುಣವಾಗಿ 10,000mAh ಮತ್ತು 20,000mAh ಸಾಮರ್ಥ್ಯದ ಪವರ್‌ ಬ್ಯಾಂಕ್‌ಗಳನ್ನ ಎರಡು ವಿಭಿನ್ನ ರೀತಿಯಲ್ಲಿ ಪರಿಚಯಿಸಿದೆ. 10,000 ಎಮ್ಎಹೆಚ್ ಮಾದರಿಯ ಪವರ್‌ ಬ್ಯಾಂಕ್‌ ಮೂರು ಬಗೆಯ ಬಣ್ಣಗಳಲ್ಲಿ ದೊರೆಯಲಿದೆ. ಇದರ ನಿಜವಾದ ಬೆಲೆ 1,199 ರೂ ಆಗಿದ್ದು ಶೇಖಡ 25 ರಷ್ಟು ರಿಯಾಯಿತಿ ದರದೊಂದಿಗೆ 899 ರೂಗಳಿಗೆ ಲಭ್ಯವಿದೆ. ಇನ್ನು 20,000 ಎಂಎಹೆಚ್ ಬ್ಯಾಟರಿ ಪ್ಯಾಕ್ 1,999 ರೂಗಳ ಬದಲು 1,499 ರೂಗಳಿಗೆ ರಿಯಾಯಿತಿ ದರದಲ್ಲಿ ಲಭ್ಯವಿದೆ.

ರಿಯಲ್‌ ಮಿ

ರಿಯಲ್‌ ಮಿ

ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಆಗಿರೋ ರಿಯಲ್ಮಿ ಕೂಡ ಪವರ್‌ ಬ್ಯಾಂಕ್‌ಗಳನ್ನ ಮಾರುಕಟ್ಟೆಗೆ ಬಿಟ್ಟಿದೆ. ಯುಎಸ್‌ಬಿ ಟೈಪ್-ಸಿ ಯೊಂದಿಗೆ ಎರಡು ರೀತಿಯಲ್ಲಿ ಚಾರ್ಜಿಂಗ್‌ಮಾಡುವ ಅವಕಾಶ ಕಲ್ಪಿಸಿದೆ. ಸಧ್ಯ ರಿಯಲ್ಮಿ ಕಂಪೆನಿಯ ಪವರ್‌ ಬ್ಯಾಂಕ್‌ಗಳು ಕೆಂಪು, ಹಳದಿ ಮತ್ತು ಬೂದು ಬಣ್ಣಗಳಲ್ಲಿ ಲಭ್ಯವಿದ್ದು 10,000mAh ಬ್ಯಾಟರಿ ಪ್ಯಾಕ್ ಅನ್ನು 999 ರೂಗಳಿಗೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದೆ.

ಸಿಸ್ಕಾ

ಸಿಸ್ಕಾ

ಸಿಸ್ಕಾ ಸಹ ಕಳೆದ ಎರಡು ವರ್ಷಗಳಿಂದ ಹಲವಾರು ಪವರ್‌ ಬ್ಯಾಂಕುಗಳನ್ನು ಮಾರುಕಟ್ಟೆಗೆ ಪರಚಯಿಸಿದೆ. ವಿಭಿನ್ನ ವಿನ್ಯಾಸಗಳು ಮತ್ತು ಚಾರ್ಜ್ ಸಾಮರ್ಥ್ಯಗಳೊಂದಿಗೆ ಅನೇಕ ಮಾದರಿಯ ಪವರ್‌ ಬ್ಯಾಂಕ್‌ಗಳನ್ನ ಬಿಡುಗಡೆ ಮಾಡಿದೆ. ಸಿಸ್ಕಾ ಕಂಪನಿಯ ಪವರ್‌ ಬ್ಯಾಂಕ್‌ನ ಬ್ಯಾಟರಿ ಸಾಮರ್ಥ್ಯವು 1,000mAh ನಿಂದ 20,000mAh ವರೆಗೆ ಇರುತ್ತದೆ. ಸಿಸ್ಕಾ ಪವರ್‌ ಬ್ಯಾಂಕ್‌ನ ಬೆಲೆ 599 ರೂಗಳಿಂದ 2,599 ರೂ.ಗೆ ಪ್ರಾರಂಭವಾಗುತ್ತದೆ.

ಒಪ್ಪೊ 20w vooc

ಒಪ್ಪೊ 20w vooc

ಒಪ್ಪೊ ಕಂಪೆನಿ ತನ್ನ ಬ್ರಾಂಡ್ ಪವರ್‌ಬ್ಯಾಂಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು. ಒಪ್ಪೊ 20w vooc ಪವರ್‌ ಬ್ಯಾಂಕ್‌ 10,000mAh ಸಾಮರ್ಥ್ಯವನ್ನ ಹೊಂದಿದೆ. ಆದಾಗ್ಯೂ, ಒಪ್ಪೊ ಪವರ್‌ ಬ್ಯಾಂಕ್‌ನ ಪ್ರಮುಖ ಅಂಶವೆಂದರೆ ಅದರ 20W VOOC ವೇಗದ ಚಾರ್ಜಿಂಗ್ ತಂತ್ರಜ್ಞಾನ. ಇದು 2W ಯಿಂದ ಶಿಯೋಮಿ ಮತ್ತು ರಿಯಲ್ಮೆ ಪವರ್‌ಬ್ಯಾಂಕ್‌ಗಳಿಗಿಂತ ವೇಗವಾಗಿರುತ್ತದೆ. ಅಮೆಜಾನ್ ಇಂಡಿಯನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಇದರ ಬೆಲೆ ಕೇವಲ 1,499 ರೂಗಳು ಮಾತ್ರ.

ಆಂಕರ್ ಪವರ್ ಬ್ಯಾಂಕುಗಳು

ಆಂಕರ್ ಪವರ್ ಬ್ಯಾಂಕುಗಳು

ಆಂಕರ್ (anker) ಇದೊಂದು ಚೀನಾದ ಸ್ಮಾರ್ಟ್‌ಪೋನ್‌ ತಯಾರಕ ಕಂಪೆನಿ. ಸಧ್ಯ ಅಂಕರ್ ಕಂಪೆನಿ ಕೂಡ ತನ್ನ ಪವರ್ ಬ್ಯಾಂಕ್ ನ ಕೆಲವು ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಈ ಪವರ್‌ಬ್ಯಾಂಕ್‌ಗಳು ಉತ್ತಮ-ಗುಣಮಟ್ಟದ ಕೋಶಗಳನ್ನು ಒಳಗೊಂಡಿದ್ದು ಹೆಚ್ಚು ದುಬಾರಿಯಾಗಿವೆ. ಆಂಕರ್ ಬೇಸ್ 10,000mAh ಮತ್ತು 20,000mAh ಸಾಮರ್ಥ್ಯದೊಂದಿಗೆ ಎರಡು ಮಾದರಿಯ ಪವರ್‌ ಬ್ಯಾಂಕ್‌ಗಳನ್ನ ನೀಡುತ್ತಿದ್ದು ಇವುಗಳ ಬೆಲೆ 1,950 ರೂ.ಗಳಿಂದ 5,299 ರೂ.ಆಗಿದೆ.

Most Read Articles
Best Mobiles in India

English summary
If you are looking for a power bank to power your smartphone, here five good options to consider. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X