ಭಾರತದಲ್ಲಿ 40,000 ರೂ ಒಳಗೆ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು!
ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ಬಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿವೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳನ್ನೇ ಖರೀದಿಸುತ್ತಾರೆ. ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಿಂದ ಹಿಡಿದು ಹೈ ಎಂಡ್ ಬೆಲೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಕೂಡ ಲಭ್ಯವಿವೆ.

ಹೌದು, ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೆಲೆಯನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು, ಪ್ರೀಮಿಯಂ, ಹೈ ಎಂಡ್ ಬಜೆಟ್ ವರೆಗಿನ ಸ್ಮಾರ್ಟ್‌ಫೋನ್‌ಗಳು ಸಹ ಲಭ್ಯವಿವೆ. ಸದ್ಯ ಮಾರುಕಟ್ಟೆಯಲ್ಲಿ 40,000 ಕ್ಕಿಂತ ಕಡಿಮೆ ಬೆಲೆ ಇರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬೇಕೆಂದುಕೊಂಡಿದ್ದರೆ, ಯಾವುದನ್ನು ಖರೀದಿಸಬೇಕೆಂಬ ಗೊಂದಲದಲ್ಲಿದ್ದರೆ ಚಿಂತಿಸುವ ಅಗತ್ಯವಿಲ್ಲ. ನಿಮಗಾಗಿ ಈ ಲೇಖನದಲ್ಲಿ 40,000 ಕ್ಕಿಂತ ಕಡಿಮೆ ಬೆಲೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್ 7T
ಒನ್‌ಪ್ಲಸ್ 7T ಸ್ಮಾರ್ಟ್‌ಫೋನ್ 40,000 ರೂ ಒಳಗೆ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಿದೆ. ಇದು 8GB RAM + 128GBಗೆ 34,999 ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.55-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೇಶ್ ರೇಟ್ ಹೊಂದಿರುವ AMOLED ಡಿಸ್‌ಪ್ಲೇ ಆಗಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855+ SoC ಪ್ರೊಸೆಸರ್ ಅನ್ನು ಹೊಂದಿದ್ದ, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಪ್ರೈಮರಿ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇನ್ನು 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್
ಗ್ಯಾಲಕ್ಸಿ ನೋಟ್ 10 ಲೈಟ್ ಸ್ಮಾರ್ಟ್‌ಫೋನ್ 1440 x 3040 ಪಿಕ್ಸಲ್ ಸಾಮರ್ಥ್ಯದೊಂದಿಗೆ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಹೊಂದಿದ್ದು, ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ 6 ಒಳಗೊಂಡಿದೆ. ಗ್ಯಾಲಕ್ಸಿ ನೋಟ್ 10 ಲೈಟ್ ಸ್ಮಾರ್ಟ್‌ಫೋನ್ ಕಂಪನಿಯ Exynos 9810 ಚಿಪ್‌ಸೆಟ್ ಸಾಮರ್ಥ್ಯದ ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI 2.0 ಬೆಂಬಲಿತ ಆಂಡ್ರಾಯ್ಡ್ 10 ಓಎಸ್ ಸಪೋರ್ಟ್ ಇದೆ. ಇನ್ನು ಈ ಫೋನ್ 6GB RAM ಮತ್ತು 8GB RAM ಆಯ್ಕೆಯನ್ನು ಹೊಂದಿದ್ದು, 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಪಡೆದಿದೆ.ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಮುಖ್ಯ ಕ್ಯಾಮೆರಾ ಅಲ್ಟ್ರಾ ವೈಲ್ಡ್ ಲೆನ್ಸ್ ಬೆಂಬಲದೊಂದಿಗೆ 12ಎಂಪಿ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಸೆಲ್ಫಿಗಾಗಿ 32ಎಂಪಿಯ ಸೆನ್ಸಾರ್ ಕ್ಯಾಮೆರಾವನ್ನು ಒಳಗೊಂಡಿದೆ. ಇದರ ಬೆಲೆ 6GB RAM + 128GBಗೆ 37,999 ಮತ್ತು 8GB RAM + 128GB ಗೆ 39,999 ರೂ. ಬೆಲೆಯನ್ನು ಹೊಂದಿದೆ.

ಒಪ್ಪೋ ರೆನೊ 4 ಪ್ರೊ
ಒಪ್ಪೋ ರೆನೊ 4 ಪ್ರೊ ಸ್ಮಾರ್ಟ್‌ಫೋನ್ 6.5 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 720G SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 10 ನಲ್ಲಿ ಕಲರ್ ಓಎಸ್ 7.2 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX 586 ಸೆನ್ಸಾರ್, ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೋನಿ IMX 616 ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದು 65W ಸೂಪರ್ ವೂಕ್ 2.0 ಮೂಲಕ ವೇಗವಾಗಿ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಒಪ್ಪೊ ರೆನೋ 4 ಪ್ರೊ ಬೆಲೆ 34,990, ರೂ ಆಗಿದೆ.

ಅಸುಸ್ 6z
ಅಸುಸ್ 6z
ಸ್ಮಾರ್ಟ್‌ಫೋನ್ 6.4-ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ ಪೈ 9.0 ಆಧಾರಿತ ZEN ಯುಐ 6 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಅದು ತಿರುಗುವ ಶೈಲಿಯಲ್ಲಿದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್ ಅನ್ನು ಹೊಂದಿದೆ. ಇದು 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಕ್ವಿಕ್ ಚಾರ್ಜ್ 4.0 ಅನ್ನು ಬೆಂಬಲಿಸಲಿದೆ. ಇದರ ಬೆಲೆ 27,999 ರಿಂದ ಪ್ರಾರಂಭವಾಗಲಿದೆ.

ರೆಡ್ಮಿ K20 ಪ್ರೊ
ಶಿಯೋಮಿಯ ರೆಡ್‌ಮಿ k20 ಪ್ರೊ ಸ್ಮಾರ್ಟ್‌ಫೋನ್ ಯೋಗ್ಯವಾದ ಕ್ಯಾಮೆರಾ ಮತ್ತು ಕಾರ್ಯಕ್ಷಮತೆಯನ್ನು ನೀಡುವ ಸಮಗ್ರ ಪ್ಯಾಕೇಜ್ ಅನ್ನು ಹುಡುಕುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.39-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್, ಅನ್ನು ಹೊಂದಿದೆ. ಹಾಗೇಯೇ ಇದು 8GB RAM ಮತ್ತು 256GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದು 4,000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಪ್ರಸ್ತುತ ಈ ಸ್ಮಾರ್ಟ್‌ಫೋನ್ 22,999 ರೂ, ಆರಂಭಿಕ ಬೆಲೆಗೆ ಆನ್‌ಲೈನ್‌ನಲ್ಲಿ ಲಭ್ಯವಿದೆ.


Click it and Unblock the Notifications