ಜಿಯೋ, ಏರ್‌ಟೆಲ್ ಬಿಟ್ಟು BSNL ಸಿಮ್ ಖರೀದಿಸಿ!..ಈ ಎಲ್ಲಾ 5 ಆಫರ್‌ಗಳು ಸೂಪರ್!!
ಬಿಎಸ್‌ಎನ್‌ಎಲ್ ಬಿಡುಗಡೆ ಮಾಡುತ್ತಿರುವ ನೂತನ ಆಫರ್‌ಗಳು 2G ಮತ್ತು 3G ಗ್ರಾಹಕರಿಗೆ ವರದಾನವಾಗಿದ್ದು, ಪ್ರಸ್ತುತ 2G ಮತ್ತು 3G ಗ್ರಾಹಕರು ಸೇರಿ 4G ಗ್ರಾಹಕರಿಗೂ ಬಿಎಸ್‌ಎನ್‌ಎಲ್ ಬೆಸ್ಟ್ ಆಯ್ಕೆ ಎನ್ನಬಹುದು.!!
ಟೆಲಿಕಾಂನಲ್ಲಿ ದರಸಮರ ಹೆಚ್ಚಾದಂತೆ ಸರ್ಕಾರಿ ನಿಯಮಿತ ಟೆಲಿಕಾಂ ಬಿಎಸ್‌ಎನ್‌ಎಲ್ ಕೂಡ ಹೊಸ ಹೊಸ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿರುವುದು ನಿಮಗೆಲ್ಲಾ ಗೊತ್ತಿದೆ.! ಹೆಚ್ಚು ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ನೀಡುವ ಹಲವು ಆಫರ್‌ಗಳನ್ನು ಬಿಎಸ್‌ಎನ್‌ಎಲ್ ಬಿಡುಗಡೆ ಮಾಡಿದೆ.!!
ಬಿಎಸ್‌ಎನ್‌ಎಲ್ ಬಿಡುಗಡೆ ಮಾಡುತ್ತಿರುವ ನೂತನ ಆಫರ್‌ಗಳು 2G ಮತ್ತು 3G ಗ್ರಾಹಕರಿಗೆ ವರದಾನವಾಗಿದ್ದು, ಪ್ರಸ್ತುತ 2G ಮತ್ತು 3G ಗ್ರಾಹಕರು ಸೇರಿ 4G ಗ್ರಾಹಕರಿಗೂ ಬಿಎಸ್‌ಎನ್‌ಎಲ್ ಬೆಸ್ಟ್ ಆಯ್ಕೆ ಎನ್ನಬಹುದು.!! ಹಾಗಾದರೆ, ಬಿಎಸ್‌ಎನ್‌ಎಲ್ ಬಿಡುಗಡೆ ಮಾಡಿರುವ ಆಫರ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

BSNL 298/ರೂ.ಆಫರ್!!
ಬಿಎಸ್ಎನ್ಎಲ್‌ನ ಅತ್ಯುತ್ತಮ ಆಫರ್ ಎನ್ನಬಹುದಾದ 298/ರೂ. ರೀಚಾರ್ಜ್ ಮೂಲಕ ದೇಶದಾಧ್ಯಂತ ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿದಿನ 1 ಜಿಬಿ ವೇಗದ ಡೇಟಾವನ್ನು ಪಡೆಯಬಹುದಾಗಿದೆ .ದಿನನಿತ್ಯದ ಕೋಟಾದ ವೇಗದ ದತ್ತಾಂಶವನ್ನು ಬಳಸಿದ ನಂತರ, ವೇಗವು 80kbps ಗೆ ಕಡಿಮೆಯಾಗುತ್ತದೆ. ಈ ಆಫರ್ 56 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ.!!

BSNL STV 339/ರೂ.ಆಫರ್!!
ಪ್ರತಿದಿನ ಒಂದು ಜಿಬಿ ಡೇಟಾ ಸಾಲುತ್ತಿಲ್ಲ ಎನ್ನುವವರು BSNL 339/ರೂ.ಆಫರ್ ರೀಚಾರ್ಜ್ ಮಾಡಿಸಿಕೊಂಡೆ ಬೆಸ್ಟ್ ಎನ್ನಬಹುದು.!!BSNL 339/ರೂ. ಮಾಡಿಸಿಕೋಮಡರೆ ಪ್ರತಿದಿನ ಮೂರು ಜಿಬಿ ಡೇಟಾ ಹಾಗೂ ದೇಶಾಧ್ಯಂತ BSNL ಟು BSNL ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದು.! ಈ ಆಫರ್ 28 ದಿವಸಗಳ ವ್ಯಾಲಿಡಿಟಿ ಹೊಂದಿದೆ.!!


BSNL 395/ರೂ.ಆಫರ್!!
ಪ್ರತಿದಿನ 2 ಜಿಬಿ ಡೇಟಾ ಹಾಗೂ 71 ದಿನಗಳ ವ್ಯಾಲಿಡಿಟಿ ಹೊಂದಿರುವ BSNL 395/ರೂ.ಆಫರ್ ಲಿಮಿಟೆಡ್ ಉಚಿತ ಕರೆಗಳನ್ನು ಹೊಂದಿದೆ. BSNL ಟು BSNL 3,000 ಹಾಗೂ ಇತರೆ ನೆಟ್‌ವರ್ಕ್‌ಗಳಿಗೆ 1,800 ಕರೆಗಳನ್ನು ಈ ಆಫರ್ ಮೂಲಕ ಉಚಿತವಾಗಿ ಪಡೆಯಬಹುದಾಗಿದೆ.!!

BSNL 329/ರೂ.ಆಫರ್!!
BSNL 329/ರೂ.ಆಫರ್ ಮೂಲಕ BSNL 90 ದಿನಗಳ ವ್ಯಾಲಿಡಿಟಿ ಹೊಂದಿರುವ ಆಫರ್ ಅನ್ನು ನೀವು ಪಡೆಯಬಹುದಾಗಿದ್ದು, ಈ ಆಫರ್ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದಾಗಿದೆ. ಜಿಯೋ, ಏರ್‌ಟೆಲ್‌ಗೆ ಈ ಆಫರ್ ನೇರಾನೇರಾ ಸೆಡ್ಡು ಹೊಡೆಯುತ್ತಿದೆ.!!

BSNL 1099/ರೂ.ಆಫರ್!!
ಕೇವಲ 30 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ಅನ್‌ಲಿಮಿಟೆಡ್ ಡೇಟಾವನ್ನು ಬಳಕೆ ಮಾಡಲು ಅನುಮತಿಸಿದೆ.!! ಅಂದರೆ 1099/ರೂ.ಗೆ ಯಾವುದೇ ಮಿತಿಯಿಲ್ಲದ ಅನ್‌ಲಿಮಿಟೆಡ್ ಡೇಟಾ ನಿಮಗೆ ದೊರೆಲಿದ್ದು, ಈ ಆಫರ್ ಡೇಟಾ ಪ್ರಿಯರಿಗೆ ಬೆಸ್ಟ್ ಆಯ್ಕೆಯಾಗಿದೆ.!!


Click it and Unblock the Notifications