2015 ಕ್ಕೆ ಧೂಳೆಬ್ಬಿಸಲಿರುವ ಆಪಲ್ ಉತ್ಪನ್ನಗಳು

Posted By:

ಆಪಲ್ ಐಫೋನ್ 6 ಮತ್ತು ಐಫೋನ್ 6 ಪ್ಲಸ್‌ನ ಯಶಸ್ಸಿನ ನಂತರ, ಕ್ಯುಪರ್ಟಿನೋ ದಿಗ್ಗಜ 2015 ಕ್ಕಾಗಿ ಅದ್ಭುತ ಕೊಡುಗೆಗಳನ್ನು ಗ್ರಾಹಕರಿಗೆ ದಯಪಾಲಿಸುತ್ತಿದೆ. ಐಫೋನ್ 6 ಮಾಡೆಲ್‌ಗಳನ್ನು ಹೊರತುಪಡಿಸಿ, ಆಪಲ್ ಐಪ್ಯಾಡ್ ಏರ್ 2, ಐಪ್ಯಾಡ್ ಮಿನಿ 3, ಓಎಸ್ ಎಕ್ಸ್ ಯೋಸ್‌ಮೈಟ್ ಹಾಗೂ ಐಓಎಸ್ 8 ಅನ್ನು 2014 ರಲ್ಲಿ ಬಿಡುಗಡೆ ಮಾಡಿದೆ.

ಇಂದಿನ ಲೇಖನದಲ್ಲಿ ಹೆಚ್ಚು ಪೈಪೋಟಿಯನ್ನು ನೀಡುತ್ತಿರುವ ಆಪಲ್‌ನ ಟಾಪ್ 5 ಲಾಂಚ್‌ಗಳನ್ನು ಇಲ್ಲಿ ನೀಡುತ್ತಿದ್ದೇವೆ.

 ಆಪಲ್ ವಾಚ್

ಆಪಲ್ ವಾಚ್ ಅನ್ನು 2014 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದು ಆರು ವಿಭಿನ್ನ ಕೇಸಿಂಗ್ ಆಯ್ಕೆಗಳೊಂದಿಗೆ ಬಂದಿದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಸ್ಮಾರ್ಡ್‌ವಾಚ್ ಬ್ಯಾಂಡ್ ಅನ್ನು ಬದಲಾಯಿಸಬಹುದಾಗಿದೆ. ಇದು ಚಿನ್ನ/ವಜ್ರದ ಮಾದರಿಗಳಲ್ಲಿ ಬಂದಿದ್ದು ನಿಜಕ್ಕೂ ಆಪಲ್‌ನ ಅಭಿವೃದ್ಧಿಗೆ ಜೀವಂತ ಸಾಕ್ಷಿ ಎಂದೆನಿಸಿದೆ.

2015 ಕ್ಕೆ ಧೂಳೆಬ್ಬಿಸಲಿರುವ ಆಪಲ್ ಉತ್ಪನ್ನಗಳು

ಆಪಲ್ ಐಪ್ಯಾಡ್ ಪ್ರೊ
ಟ್ಯಾಬ್ಲೆಟ್ ಶ್ರೇಣಿಯ ಐಪ್ಯಾಡ್ ಸಾಲಿಗಾಗಿ ಆಪಲ್ ಹೊಸದೊಂದು ಆಕರ್ಷ ವಿನ್ಯಾಸವನ್ನೇ ಹೊರತಂದಿದೆ. 2015 ರಲ್ಲಿ, 12.2 ಇಂಚಿನಿಂದ ಹಿಡಿದು 12.9 ಇಂಚಿನ ಟ್ಯಾಬ್ಲೆಟ್ ಅನ್ನು ಐಪ್ಯಾಡ್ ಪ್ರೊ ಆಗಿ ಮಾರ್ಪಡಿಸಲಾಗಿದೆ. ಇದು 7 ಎಮ್‌ಎಮ್ ದಪ್ಪವಾಗಿದ್ದು, 2ಜಿಬಿ RAM ಅನ್ನು ಹೊಂದಿದೆ. ಟಚ್ ಐಡಿ ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು 802 ವನ್ನು ಡಿವೈಸ್ ಹೊಂದಿದೆ. ಹೆಚ್ಚು ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಪಡೆದುಕೊಂಡಿರುವ ಡಿವೈಸ್ ಇದಾಗಿದ್ದು ವೈಫೈ ಬೆಂಬಲವನ್ನು ಇದರಲ್ಲಿ ನಮಗೆ ಕಾಣಬಹುದಾಗಿದೆ.

2015 ಕ್ಕೆ ಧೂಳೆಬ್ಬಿಸಲಿರುವ ಆಪಲ್ ಉತ್ಪನ್ನಗಳು

ಆಪಲ್ ಐಪ್ಯಾಡ್ ಏರ್ 3 ಮತ್ತು ಐಪ್ಯಾಡ್ ಮಿನಿ 4
ಹೊಸ ಐಪ್ಯಾಡ್ ಪ್ರೊ ತನ್ನ ಕೊಡುಗೆಯನ್ನು 2015 ಕ್ಕಾಗಿ ಮಾಡುತ್ತಿದ್ದು ಐಪ್ಯಾಡ್ ಏರ್ ಮತ್ತು ಐಪ್ಯಾಡ್ ಮಿನಿಯ ಮುಂದಿನ ಜನರೇಶನ್ ಅನ್ನು ಬಿಡುಗಡೆ ಮಾಡಲಿದೆ.

2015 ಕ್ಕೆ ಧೂಳೆಬ್ಬಿಸಲಿರುವ ಆಪಲ್ ಉತ್ಪನ್ನಗಳು

ಆಪಲ್ ಐಫೋನ್ 7 ಅಥವಾ ಐಫೋನ್ 6 ಎಸ್
ಆಪಲ್‌ನ ಹೆಚ್ಚು ನಿರೀಕ್ಷಿತ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಸಕ್ಸೆಸರ್ ಅನ್ನು 2015 ಕ್ಕೆ ಪಡೆದುಕೊಳ್ಳಲಿದೆ. ಆಪಲ್ ಐಫೋನ್ 7 2015 ರ ಸಪ್ಟೆಂಬರ್‌ನಲ್ಲಿ ಲಾಂಚ್ ಆಗಲಿದ್ದು ಇದನ್ನು ಐಫೋನ್ 7 ಅಥವಾ ಐಫೋನ್ 6 ಎಸ್ ಕರೆಯಬಹುದು. ಇದು ಇನ್ನಷ್ಟು ಸುಧಾರಿತ ಕ್ಯಾಮೆರಾ ಅಭಿವೃದ್ಧಿಯನ್ನು ಪಡೆದುಕೊಳ್ಳಲಿದ್ದು ಡ್ಯುಯಲ್ ಲೆನ್ಸ್ ಕ್ಯಾಮೆರಾ ಯೂನಿಟ್‌ಗಾಗಿ ಆಪಲ್ ಕಾರ್ಯನಿರ್ವಹಿಸುತ್ತಿದೆ.

2015 ಕ್ಕೆ ಧೂಳೆಬ್ಬಿಸಲಿರುವ ಆಪಲ್ ಉತ್ಪನ್ನಗಳು
English summary
After a brilliant run with Apple iPhone 6 and iPhone 6 Plus, the Cupertino headquartered tech giant is gearing up to a massive 2015.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot