ಭಾರತದಲ್ಲಿ 50,000 ರೂ. ಒಳಗೆ ಖರೀದಿಸಬಹುದಾದ ಲ್ಯಾಪ್‌ಟಾಪ್‌ಗಳು!
ಪ್ರಸ್ತುತ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳ ಬಳಕೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತ್ಮ ವೈವಿಧ್ಯಮಯ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿವೆ. ಇನ್ನು ಮಾರುಕಟ್ಟೆಯಲ್ಲಿ ವಿವಿಧ ಬೆಲೆಯನ್ನು ಹೊಂದಿರುವ ಲ್ಯಾಪ್‌ಟಾಪ್‌ಗಳು ಗ್ರಾಹಕರ ಗಮನ ಸೆಳೆದಿವೆ. ಆದರೂ ಹೆಚ್ಚಿನ ಜನರು ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ಬಯಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಕಾರ್ಯದಕ್ಷತೆಯುಳ್ಳ ಹಾಗೂ ಶೇಖರಣಾ ಆಯ್ಕೆಯನ್ನು ಹೊಂದಿರುವ ಅನೇಕ ಲ್ಯಾಪ್‌ಟಾಪ್‌ಗಳು ಲಬ್ಯವಿದೆ.

ಹೌದು, ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಅನೇಕ ಆಕರ್ಷಕ ಲ್ಯಾಪ್‌ಟಾಪ್‌ಗಳು ಲಭ್ಯವಿದೆ. ವಿದ್ಯಾರ್ಥಿಗಳು, ನೌಕರರು ಮತ್ತು ಸಾಮಾನ್ಯವಾಗಿ, ಲ್ಯಾಪ್‌ಟಾಪ್‌ಗಳ ಮೂಲಕ ವಿಭಿನ್ನ ಕಾರ್ಯಗಳನ್ನು ನಿರ್ವಹಿಸಲು ಬಯಸುವ ಅನೇಕರು ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಖರೀದಿಸಲು ಯೋಚಿಸುತ್ತಾರೆ. ನಾವು ಈ ಲೇಖನದಲ್ಲಿ ಭಾರತದಲ್ಲಿ 50,000 ರೂ. ಒಳಗೆ ಖರೀದಿಸಬಹುದಾದ ಲ್ಯಾಪ್‌ಟಾಪ್‌ಗಳ ಬಗ್ಗೆ ಮಾಹಿತಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಹೆಚ್‌ಪಿ 15s
ಹೆಚ್‌ಪಿ 15s ಲ್ಯಾಪ್‌ಟಾಪ್ ಕೂಡ 50,000 ರೂ.ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್ 1920 x 1080 ರೆಸಲ್ಯೂಶನ್ ಸಾಮರ್ಥ್ಯದ 15.6 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಡ್-ಕೋರ್ ಎಎಮ್‌ಡಿ ರೈಜೆನ್ 3 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಈ ಡಿವೈಸ್ ಎಎಮ್‌ಡಿ ರೇಡಿಯನ್ ವೆಗಾ 3 ಗ್ರಾಫಿಕ್ಸ್ ಹೊಂದಿದ್ದು, 8GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದು ವಿಂಡೋಸ್ 10 ಹೋಮ್ 64 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರ ಬೆಲೆ 38,999 ರೂ ಆಗಿದೆ.

ಆಸುಸ್ ವಿವೋಬುಕ್ 14
ಆಸುಸ್ ವಿವೋಬುಕ್ 14 ಸರಣಿಯ ಲ್ಯಾಪ್‌ಟಾಪ್‌ಗಳು ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 1920x1080 ರೆಸಲ್ಯೂಶನ್ ಸಾಮರ್ಥ್ಯದ 14 ಇಂಚಿನ ಫುಲ್ ಹೆಚ್‌ಡಿ ಎಲ್ಇಡಿ ಬ್ಯಾಕ್‌ಲಿಟ್ ಆಂಟಿ-ಗ್ಲೇರ್ ಡಿಸ್ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 200 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಇದು ಎಎಮ್‌ಡಿ ರೈಜೆನ್ 5 3500 ಯು ಪ್ರೊಸೆಸರ್ ಹೊಂದಿದೆ. ಇದಲ್ಲದೆ, ಇದು 8GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಈ ಲ್ಯಾಪ್ಟಾಪ್ ಫಿಂಗರ್‌ಪ್ರಿಂಟ್ ಸೆನ್ಸಾರ್, ವಿಂಡೋಸ್ 10 ಹೋಮ್ ಮತ್ತು ಮೈಕ್ರೋಸಾಫ್ಟ್ ಆಫೀಸ್ 365ಗೆ ಚಂದಾದಾರಿಕೆಯನ್ನು ಹೊಂದಿದೆ. ಇದರ ಬೆಲೆ 49,990 ರೂ.ಆಗಿದ್ದು, ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದೆ.

ಲೆನೊವೊ ಐಡಿಯಾಪ್ಯಾಡ್ ಫ್ಲೆಕ್ಸ್
ಲೆನೊವೊ ಸಂಸ್ಥೆ ಅನೇಕ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಲೆನೊವೊ ಐಡಿಯಾಪ್ಯಾಡ್ ಫ್ಲೆಕ್ಸ್ 2 ಇನ್ 1 ಲ್ಯಾಪ್‌ಟಾಪ್ ಆಗಿದೆ. ಇದನ್ನು ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್ ಆಗಿ ಬಳಸಬಹುದಾಗಿದೆ. ಇದು ಇಂಟೆಲ್ ಕೋರ್ ಐ 3 11 ನೇ ಜನ್ ಪ್ರೊಸೆಸರ್ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್ 8 GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಹೊಂದಿದ. ಜೊತೆಗೆ ವಿಂಡೋಸ್ 10 ಹೋಮ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರ ಬೆಲೆ 49,990 ರೂ.ಆಗಿದ್ದು, ಫ್ಲಿಪ್ಕಾರ್ಟ್ನಲ್ಲಿ ಖರೀದಿಸಬಹುದಾಗಿದೆ.

ಆಸುಸ್ ವಿವೋಬುಕ್ ಫ್ಲಿಪ್ 14
ಆಸುಸ್ ಸಂಸ್ಥೆಯ ವಿವೋಬುಕ್ ಫ್ಲಿಪ್ 14 ಲ್ಯಾಪ್‌ಟಾಪ್ ಕೂಡ 2 ಇನ್ 1 ಲ್ಯಾಪ್‌ಟಾಪ್ ಆಗಿದೆ. ಇದು 10 ನೇ ಜನ್ ಇಂಟೆಲ್ ಕೋರ್ ಐ 3 ಪ್ರೊಸೆಸರ್ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್ 4GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದು ವಿಂಡೋಸ್ 10 ಹೋಮ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರ ಬೆಲೆ 46,990 ರೂ. ಆಗಿದ್ದು, ಫ್ಲಿಪ್ಕಾರ್ಟ್ನಲ್ಲಿ ಖರೀದಿಸಬಹುದಾಗಿದೆ.

ಮಿ ನೋಟ್‌ಬುಕ್ 14
ಶಿಯೋಮಿ ಕಂಪೆನಿ ಲ್ಯಾಪ್‌ಟಾಪ್ ವಲಯದಲ್ಲೂ ಸೈ ಎನಿಸಿಕೊಂಡಿದೆ. ಇದರಲ್ಲಿ ಮಿ ನೋಟ್‌ಬುಕ್ 14 ಕೂಡ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಈ ಲ್ಯಾಪ್‌ಟಾಪ್ 14 ಇಂಚಿನ ಪೂರ್ಣ ಎಚ್ಡಿ ಆಂಟಿ-ಗ್ಲೇರ್ ಡಿಸ್ಪ್ಲೇ ಹೊಂದಿದೆ. ಇದು 10 ನೇ ಜನರೇಷನ್ ಇಂಟೆಲ್ ಕೋರ್ ಐ 5 ಪ್ರೊಸೆಸರ್ ಅನ್ನು ಒಳಗೊಂಡಿದೆ. ಇನ್ನು ಈ ಮಿ ನೋಟ್ಬುಕ್ 14 ಎನ್ವಿಡಿಯಾದ ಜಿಫೋರ್ಸ್ ಎಮ್ಎಕ್ಸ್ 250 ಗ್ರಾಫಿಕ್ಸ್ ಕಾರ್ಡ್, 8GB RAM ಮತ್ತು 512GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದರ ಬೆಲೆ 46,999 ರೂ.ಆಗಿದ್ದು, ಫ್ಲಿಪ್ಕಾರ್ಟ್ನಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications



